ಅನಧಿಕೃತ ಪಿಜಿಗಳ ಮೇಲೆ (GBA action against unauthorized PG) GBA ಗದಾಪ್ರಹಾರ
ನಿಯಮಬಾಹಿರ PGಯ ಕರೆಂಟ್-ನೀರಿನ ಸಂಪರ್ಕ ಕಟ್ ಮಾಡಿ ಬೀಗ ಜಡಿಯಲು ನಿರ್ಧಾರ
ಬೆಂಗಳೂರು ಪೂರ್ವ ವಲಯದಲ್ಲೇ ಶೇ.50ರಷ್ಟು ಅನಧಿಕೃತ ಪಿಜಿಗಳು ಪತ್ತೆ
ಬೆಂಗಳೂರು ನಗರದಲ್ಲಿ ನಿಯಮ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ (GBA action against unauthorized PG) ಅನಧಿಕೃತ ಪೇಯಿಂಗ್ ಗೆಸ್ಟ್ (PG) ಕಟ್ಟಡಗಳ ವಿರುದ್ಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕಠಿಣ ಕ್ರಮಕ್ಕೆ ಮುಂದಾಗಿದೆ.
ಅಗತ್ಯ ಪರವಾನಗಿ, ಅನುಮೋದಿತ ಕಟ್ಟಡ ನಕ್ಷೆ ಹಾಗೂ ಅಗ್ನಿ ಸುರಕ್ಷತಾ ಪ್ರಮಾಣಪತ್ರವಿಲ್ಲದೆ ನಡೆಯುತ್ತಿರುವ ಪಿಜಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ವೇಗ ಸಿಕ್ಕಿದ್ದು, ನಿಯಮ ಪಾಲಿಸದ ಪಿಜಿಗಳ ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಡಿತಗೊಳಿಸುವುದರ ಜೊತೆಗೆ ಕಟ್ಟಡಗಳಿಗೆ ಬೀಗ ಹಾಕುವ ಪ್ರಕ್ರಿಯೆ ಕೈಗೊಳ್ಳಲು GBA ಮುಂದಾಗಿದೆ.
ನಗರದಲ್ಲಿ ಪಿಜಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ (GBA action against unauthorized PG) ಸುರಕ್ಷತೆ ಮತ್ತು ಕಾನೂನು ಪಾಲನೆ ಕುರಿತು ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.
GBA ಪರವಾಗಿ ಹೈಕೋರ್ಟ್‌ಗೆ (High Court) ನೀಡಿರುವ ಮಾಹಿತಿಯ ಪ್ರಕಾರ, ನಗರದಲ್ಲಿ ಸಾವಿರಾರು ಪಿಜಿಗಳು ಅಗತ್ಯ ನಿಯಮಗಳನ್ನು ಪಾಲಿಸದೆ
ಕಾರ್ಯನಿರ್ವಹಿಸುತ್ತಿರುವುದು ಸಮೀಕ್ಷೆಯಲ್ಲಿ ಪತ್ತೆಯಾಗಿದೆ. ಈ ಹಿಂದೆ ನಿಯಮ ಉಲ್ಲಂಘನೆಗಳನ್ನು ಸರಿಪಡಿಸುವಂತೆ ಹಲವು ಪಿಜಿ ಮಾಲೀಕರಿಗೆ ನೋಟಿಸ್ ನೀಡಲಾಗಿತ್ತು.
ಆದರೆ, ಬಹುತೇಕ ಮಾಲೀಕರು ಲೋಪಗಳನ್ನು ಸರಿಪಡಿಸಲು ಮುಂದಾಗಿಲ್ಲ ಎಂದು ಪ್ರಾಧಿಕಾರ ನ್ಯಾಯಾಲಯಕ್ಕೆ ತಿಳಿಸಿದೆ. ಹೀಗಾಗಿ ನೋಟಿಸ್ (Notice)
ನೀಡಿದ ಬಳಿಕವೂ ನಿಯಮ ಉಲ್ಲಂಘನೆ ಮುಂದುವರಿಸಿದ ಪಿಜಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.
ಈ ಪ್ರಕ್ರಿಯೆಯಲ್ಲಿ ಬೆಸ್ಕಾಂ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ನಗರ ಪೊಲೀಸ್ ಇಲಾಖೆಯ ಸಹಕಾರ ಪಡೆಯಲು GBA ಉದ್ದೇಶಿಸಿದೆ.
ಪಿಜಿಗಳಲ್ಲಿ ವಾಸಿಸುತ್ತಿರುವ ನಿವಾಸಿಗಳ ಸುರಕ್ಷತೆ ಮತ್ತು ಅವರ ಸ್ಥಳಾಂತರದ ವಿಚಾರದಲ್ಲೂ ನ್ಯಾಯಾಲಯ ಸ್ಪಷ್ಟ ಸೂಚನೆ ನೀಡಿದೆ. ಪಿಜಿ ಮಾಲೀಕರು ಹಾಗೂ ನಿವಾಸಿಗಳಿಗೆ ನೋಟಿಸ್ ನೀಡುವ ಪ್ರಕ್ರಿಯೆಗಾಗಿ GBA ಕಾನೂನು ಘಟಕ ಸಿದ್ಧತೆ ನಡೆಸುತ್ತಿದೆ.
ನೋಟಿಸ್ ಜಾರಿಗೊಳಿಸಿದ ಬಳಿಕ ಕಟ್ಟಡ ತೆರವುಗೊಳಿಸಲು ನಿವಾಸಿಗಳಿಗೆ ಸೂಕ್ತ ಸಮಯ ನೀಡಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಪಿಜಿಗಳಲ್ಲಿ
ವಾಸಿಸುವವರನ್ನು ತಾತ್ಕಾಲಿಕವಾಗಿ ಬೇರೆಡೆಗೆ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದೇ ವೇಳೆ, ಕಟ್ಟಡ ತೆರವುಗೊಳಿಸಲು 15ರಿಂದ 21 ದಿನಗಳ ಕಾಲಾವಕಾಶ ನೀಡಬೇಕೆಂದು ಹೈಕೋರ್ಟ್ ಸೂಚಿಸಿದೆ. ಹೀಗಾಗಿ ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ
ನಿವಾಸಿಗಳಿಗೆ ತಕ್ಷಣದ ತೊಂದರೆ ಉಂಟಾಗದಂತೆ ವ್ಯವಸ್ಥೆ ಮಾಡಬೇಕಾದ ಜವಾಬ್ದಾರಿಯೂ ಪ್ರಾಧಿಕಾರದ ಮೇಲಿದೆ.
ಬೆಂಗಳೂರು ಪೂರ್ವ ಭಾಗದಲ್ಲಿ ನಡೆಸಿದ ಸಮೀಕ್ಷೆಯ ಅಂಕಿ-ಅಂಶಗಳು ಪಿಜಿಗಳ ನಿಯಮ ಉಲ್ಲಂಘನೆಯ ಪ್ರಮಾಣವನ್ನು ಮತ್ತಷ್ಟು ಸ್ಪಷ್ಟಪಡಿಸಿವೆ. ಈ ಪ್ರದೇಶದಲ್ಲಿ
ಪರಿಶೀಲಿಸಿದ 5,000 ಪಿಜಿಗಳ ಪೈಕಿ ಸುಮಾರು 2,500 ಪಿಜಿಗಳು ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿದೆ ಎಂದು GBA ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.
ವೈಟ್‌ಫೀಲ್ಡ್, ಮಹದೇವಪುರ, ಕೆ.ಆರ್.ಪುರ, ಇಂದಿರಾನಗರ ಮತ್ತು ಸಿ.ವಿ.ರಾಮನ್ ನಗರ ಸೇರಿದಂತೆ ಐಟಿ ಕಂಪನಿಗಳು ಹಾಗೂ ಬಹುರಾಷ್ಟ್ರೀಯ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ
ಇರುವ ಪ್ರದೇಶಗಳಲ್ಲಿ ಪಿಜಿಗಳ ಸಂಖ್ಯೆಯೂ ಹೆಚ್ಚಾಗಿದೆ. ಕೆಲವು ಪಿಜಿಗಳು ವ್ಯಾಪಾರ ಪರವಾನಗಿ, ಅನುಮೋದಿತ ಕಟ್ಟಡ ನಕ್ಷೆ ಮತ್ತು ಅಗ್ನಿಶಾಮಕ ಇಲಾಖೆಯ ನಿರಾಕ್ಷೇಪಣಾ
ಪತ್ರವಿಲ್ಲದೆ ನಡೆಯುತ್ತಿರುವುದು ಪರಿಶೀಲನೆಯಲ್ಲಿ ಕಂಡುಬಂದಿದೆ. ಜತೆಗೆ ವಲಯ ನಿಯಮಗಳು ಮತ್ತು ಕಟ್ಟಡ ಉಪನಿಯಮಗಳ ಉಲ್ಲಂಘನೆಯೂ ಪತ್ತೆಯಾಗಿದೆ.
ಪಿಜಿಗಳ ನಿರ್ವಹಣೆಯಲ್ಲಿ ಕೇವಲ ಒಂದು ಬಾರಿ ಪರವಾನಗಿ ನೀಡುವುದಷ್ಟೇ ಸಾಕಾಗುವುದಿಲ್ಲ ಎಂಬ ನಿಲುವನ್ನು ಹೈಕೋರ್ಟ್ ವ್ಯಕ್ತಪಡಿಸಿದೆ.
ಪಿಜಿಗಳು ಕಾನೂನುಬದ್ಧ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆಯೇ, ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಿವೆಯೇ ಎಂಬುದನ್ನು ನಿರಂತರವಾಗಿ ಪರಿಶೀಲಿಸುವ ವ್ಯವಸ್ಥೆ ಇರಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಅಪಾಯದ ಪ್ರಮಾಣವನ್ನು ಆಧರಿಸಿ ಪಿಜಿಗಳನ್ನು ಗುರುತಿಸಿ ಪರಿಶೀಲಿಸುವುದು ಹಾಗೂ ನಗರದ ಎಲ್ಲ ಪಿಜಿಗಳ ಮಾಹಿತಿಯನ್ನು ಒಳಗೊಂಡ ಡಿಜಿಟಲ್ (Digital) ದತ್ತಾಂಶ ಕೋಶ ರೂಪಿಸುವ ಸಲಹೆಯನ್ನೂ ನೀಡಲಾಗಿದೆ.
ನಿಯಮ ಉಲ್ಲಂಘನೆಗಳ ಬಗ್ಗೆ ಮಾಹಿತಿ ಇದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಯಾವುದೇ ಅಹಿತಕರ ಘಟನೆ ಸಂಭವಿಸಿದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ವೈಯಕ್ತಿಕವಾಗಿ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ನ್ಯಾಯಾಲಯ ಎಚ್ಚರಿಸಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಅನಧಿಕೃತ ಪಿಜಿಗಳ ವಿರುದ್ಧದ ಮುಂದಿನ ಕ್ರಮಗಳು ನಗರ ಸುರಕ್ಷತೆ, ಕಟ್ಟಡ ನಿಯಮ ಪಾಲನೆ ಮತ್ತು ನಿವಾಸಿಗಳ ಹಿತಾಸಕ್ತಿಗೆ ಸಂಬಂಧಿಸಿದ ಪ್ರಮುಖ ಬೆಳವಣಿಗೆಯಾಗಿವೆ.
ಇದನ್ನು ಓದಿ : https://vijayatimes.com/adb-grants-loan-to-kps-scheme/
