- ಐತಿಹಾಸಿಕ ರಸೆಲ್ ಮಾರುಕಟ್ಟೆ (gba gives smart look to market) ಪುನರ್ ಅಭಿವೃದ್ಧಿ
- ಪರಂಪರೆ ಉಳಿಸಿಕೊಂಡೇ ಆಧುನಿಕ ಪುನರ್ ಅಭಿವೃದ್ಧಿಗೆ ಜಿಬಿಎ ಚಾಲನೆ
- ಒಳಚರಂಡಿ, ಪಾರ್ಕಿಂಗ್, ಅಗ್ನಿ ಸುರಕ್ಷತೆ ಸೇರಿದಂತೆ ಮೂಲಸೌಕರ್ಯ ಬಲಪಡಿಸಲು ಡಿಪಿಆರ್ ಸಿದ್ಧ
Bengaluru: ಬೆಂಗಳೂರು ನಗರದ ಹೃದಯಭಾಗವಾದ ಶಿವಾಜಿನಗರ ವಿಧಾನಸಭಾ ಕ್ಷೇತ್ರದ (gba gives smart look to market) ವ್ಯಾಪ್ತಿಯಲ್ಲಿ ಇರುವ ರಸೆಲ್ ಮಾರುಕಟ್ಟೆ, ಇತಿಹಾಸ ಮತ್ತು ವ್ಯಾಪಾರದ ಸಂಗಮವಾಗಿರುವ ಪ್ರಮುಖ ಕೇಂದ್ರವಾಗಿದೆ.
ಈ ಶತಮಾನಗಳ ಹಳೆಯ ಮಾರುಕಟ್ಟೆಯನ್ನು ಪರಂಪರೆಯ ಸೊಗಡನ್ನು ಕಾಪಾಡಿಕೊಂಡೇ ಆಧುನಿಕ ಸೌಲಭ್ಯಗಳೊಂದಿಗೆ ಪುನರ್ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಮಹತ್ವದ ಹೆಜ್ಜೆ ಇಟ್ಟಿದೆ.
ನಗರದಲ್ಲಿ ಜನಸ್ನೇಹಿ, ದೀರ್ಘಕಾಲಿಕ ಮತ್ತು ಸುಸಜ್ಜಿತ ಮಾರುಕಟ್ಟೆಯಾಗಿ ರೂಪಿಸುವ ಗುರಿಯೊಂದಿಗೆ ಯೋಜನೆ ರೂಪಿಸಲಾಗಿದೆ.

ಈ ಪುನರ್ ಅಭಿವೃದ್ಧಿಯಿಂದ ವ್ಯಾಪಾರಿಗಳು, ಗ್ರಾಹಕರು ಹಾಗೂ ಸ್ಥಳೀಯ ನಿವಾಸಿಗಳಿಗೆ ಹೆಚ್ಚಿನ ಅನುಕೂಲ ದೊರಕಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಇತ್ತೀಚೆಗೆ ಶಿವಾಜಿನಗರ ಕ್ಷೇತ್ರದ ವಿವಿಧ ಪ್ರದೇಶಗಳಲ್ಲಿ ಸ್ಥಳ ಪರಿಶೀಲನೆ (gba gives smart look to market) ನಡೆಸಿದ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ (Maheshwar Rao) ಅವರು, ರಸೆಲ್ ಮಾರುಕಟ್ಟೆ ಪುನರ್ ಅಭಿವೃದ್ಧಿಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.
ಈಗಾಗಲೇ ಮಾರುಕಟ್ಟೆ ಅಭಿವೃದ್ಧಿಗೆ ಸಂಬಂಧಿಸಿದ ವಿವರವಾದ ಯೋಜನಾ ವರದಿ (DPR) ಸಿದ್ಧಗೊಂಡಿದ್ದು, ಅದರ ಆಧಾರದಲ್ಲಿ ಕೂಡಲೇ ಟೆಂಡರ್ (Tender) ಪ್ರಕ್ರಿಯೆ ಆರಂಭಿಸಬೇಕೆಂದು ಅವರು ನಿರ್ದೇಶಿಸಿದರು.
ಯೋಜನೆಯ ಅನುಷ್ಠಾನ ವಿಳಂಬವಾಗದಂತೆ ಎಲ್ಲಾ ಹಂತಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಈ ಯೋಜನೆಯು ಬೆಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತೊಂದು ಪ್ರಮುಖ ಮೈಲಿಗಲ್ಲಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ರಸೆಲ್ ಮಾರುಕಟ್ಟೆ ಕೇವಲ ವ್ಯಾಪಾರ ಕೇಂದ್ರವಲ್ಲ, ಅದು ಬೆಂಗಳೂರಿನ ಐತಿಹಾಸಿಕ ಗುರುತುಗಳಲ್ಲಿ ಒಂದಾಗಿದೆ.
ಹೀಗಾಗಿ ಪುನರ್ ಅಭಿವೃದ್ಧಿ ಕಾರ್ಯದಲ್ಲಿ ಮಾರುಕಟ್ಟೆಯ ಮೂಲ ವಾಸ್ತುಶಿಲ್ಪ, ಪರಂಪರೆಯ ವಿನ್ಯಾಸ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಹಾನಿಗೊಳಿಸದಂತೆ ವಿಶೇಷ ಗಮನ ಹರಿಸುವಂತೆ ಸೂಚಿಸಲಾಗಿದೆ.
ಹಳೆಯ ಕಟ್ಟಡದ ವೈಶಿಷ್ಟ್ಯತೆ ಉಳಿಸಿಕೊಂಡೇ, ಹೊಸ ತಂತ್ರಜ್ಞಾನ ಮತ್ತು ಆಧುನಿಕ ಸೌಲಭ್ಯಗಳನ್ನು ಅಳವಡಿಸುವ ಮೂಲಕ ಮಾರುಕಟ್ಟೆಗೆ ಹೊಸ ರೂಪ ನೀಡುವ ಯೋಜನೆ ರೂಪಿಸಲಾಗಿದೆ.
ಇದರಿಂದ ಹಳೆಯ ಸೊಗಡಿನೊಂದಿಗೆ ಹೊಸ ತಲೆಮಾರಿಗೂ ಆಕರ್ಷಕವಾಗುವ ಮಾರುಕಟ್ಟೆ ಸೃಷ್ಟಿಯಾಗಲಿದೆ.
ಪುನರ್ ಅಭಿವೃದ್ಧಿ ಕಾಮಗಾರಿಯ ವೇಳೆ ವ್ಯಾಪಾರಿಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗಬಾರದು ಎಂಬುದು ಜಿಬಿಎಯ ಪ್ರಮುಖ ಆದ್ಯತೆಯಾಗಿದೆ. ಕಾಮಗಾರಿ ಆರಂಭಿಸುವ ಮುನ್ನವೇ ವ್ಯಾಪಾರಿಗಳಿಗೆ ತಾತ್ಕಾಲಿಕ ವ್ಯವಸ್ಥೆಗಳನ್ನು ಕಲ್ಪಿಸಿ, ಅವರ ವ್ಯಾಪಾರ ಚಟುವಟಿಕೆ ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಜೊತೆಗೆ ಮಾರುಕಟ್ಟೆಯೊಳಗಿನ ಒಳಚರಂಡಿ ವ್ಯವಸ್ಥೆ, ಮಳೆ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ, ವಾಹನ ನಿಲುಗಡೆ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಸೂಕ್ತ ತಾಂತ್ರಿಕ ಪರಿಹಾರಗಳನ್ನು ಅಳವಡಿಸುವಂತೆ ಸೂಚನೆ ನೀಡಲಾಗಿದೆ.
ಅಗ್ನಿ ಸುರಕ್ಷತಾ ವ್ಯವಸ್ಥೆ, ಸ್ವಚ್ಛ ಶೌಚಾಲಯಗಳು, ಪಾದಚಾರಿಗಳಿಗೆ ಅನುಕೂಲಕರವಾದ ಗ್ರಾನೈಟ್ ನೆಲಹಾಸು ಸೇರಿದಂತೆ ಎಲ್ಲಾ ಮೂಲಸೌಕರ್ಯ ಕಾಮಗಾರಿಗಳನ್ನು ಉನ್ನತ ಗುಣಮಟ್ಟದಲ್ಲಿ ನಿರ್ವಹಿಸಬೇಕೆಂದು ತಿಳಿಸಲಾಗಿದೆ.
ಇದೇ ವೇಳೆ, ಮಾರುಕಟ್ಟೆಯನ್ನು ಸದಾ ಸ್ವಚ್ಛವಾಗಿರಿಸಲು ಕಸ ವಿಂಗಡಣೆ ಮತ್ತು ಕಾಂಪೋಸ್ಟಿಂಗ್ ವ್ಯವಸ್ಥೆಯನ್ನು ಸಮಗ್ರವಾಗಿ ಅಳವಡಿಸುವ ಯೋಜನೆಯೂ ಸೇರಿದೆ.
ಗಡಿಯಾರ ಗೋಪುರದ ವಿನ್ಯಾಸ ಸೇರಿದಂತೆ ಮಾರುಕಟ್ಟೆಯ ಸೌಂದರ್ಯವರ್ಧನೆಗೆ ವಿಶೇಷ ಒತ್ತು ನೀಡಲಾಗುತ್ತಿದೆ. ರಸೆಲ್ ಮಾರುಕಟ್ಟೆ ಸುತ್ತಮುತ್ತಲ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಅಲ್ಲದೆ, ಮಾರುಕಟ್ಟೆ ಮತ್ತು ಅದರ ಸುತ್ತಲಿನ ಆಸ್ತಿ ತೆರಿಗೆ ಮರುಪರಿಶೀಲನೆ ನಡೆಸಿ, ತೆರಿಗೆ ಸಂಗ್ರಹ ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಈ ಪರಿಶೀಲನಾ ಸಂದರ್ಭದಲ್ಲಿ ಜಿಬಿಎಯ ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್‌ಗಳು ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು, ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ತಮ್ಮ ಸಹಕಾರ ನೀಡಿದರು.
ಇದನ್ನು ಓದಿ : https://vijayatimes.com/trade-agreement-between-india-oman/