• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜ್ಯ

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಹೊಸ ಪಾರ್ಕಿಂಗ್ ಪ್ಲಾನ್ : ರಸ್ತೆ ಬದಿ ಪಾರ್ಕಿಂಗ್‌ಗೆ ಶುಲ್ಕ ಜಾರಿ, ವಾಹನ ಸವಾರರಲ್ಲಿ ಆತಂಕ

Teju Srinivas by Teju Srinivas
in ರಾಜ್ಯ, ವಿಜಯ ಟೈಮ್ಸ್‌
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಹೊಸ ಪಾರ್ಕಿಂಗ್ ಪ್ಲಾನ್ : ರಸ್ತೆ ಬದಿ ಪಾರ್ಕಿಂಗ್‌ಗೆ ಶುಲ್ಕ ಜಾರಿ, ವಾಹನ ಸವಾರರಲ್ಲಿ ಆತಂಕ
0
SHARES
3
VIEWS
Share on FacebookShare on Twitter
  • ಸಿಬಿಡಿ, ಹೆಬ್ಬಾಳ, ಯಲಹಂಕ ಸೇರಿದಂತೆ ಆಯ್ದ ಪ್ರದೇಶಗಳಲ್ಲಿ (gba new parking scheme) ದ್ವಿಚಕ್ರ–ನಾಲ್ಕು ಚಕ್ರ ವಾಹನಗಳಿಗೆ ಗಂಟೆ, ದಿನ ಮತ್ತು ಮಾಸಿಕ ಪಾರ್ಕಿಂಗ್ ಶುಲ್ಕ ಜಾರಿ
  • ಇನ್ಮುಂದೆ ಸಿಕ್ಕಸಿಕ್ಕ ಕಡೆ ಪಾರ್ಕಿಂಗ್‌ಗೆ ಬ್ರೇಕ್: ಬೆಂಗಳೂರಲ್ಲಿ ಹೊಸ ಶುಲ್ಕ ವ್ಯವಸ್ಥೆ
  • ಅಕ್ರಮ ವಾಹನ ನಿಲುಗಡೆ ತಡೆಯಲು ರಸ್ತೆ ಬದಿ ಪಾರ್ಕಿಂಗ್‌ಗೆ ಶುಲ್ಕ ವಿಧಿಸುವ ನಿರ್ಧಾರ, ಜನರಲ್ಲಿ ಮಿಶ್ರ ಪ್ರತಿಕ್ರಿಯೆ

Bengaluru: ಈಗಾಗಲೇ ಟ್ರಾಫಿಕ್ ಸಮಸ್ಯೆ, ಇಂಧನ ಬೆಲೆ ಏರಿಕೆ, ತೆರಿಗೆಗಳ ಭಾರದಿಂದ (gba new parking scheme) ನಲುಗಿರುವ ಬೆಂಗಳೂರಿಗರಿಗೆ ಮತ್ತೊಂದು ಶಾಕ್ ಎದುರಾಗಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ನಗರದಲ್ಲಿ ಅನಿಯಮಿತವಾಗಿ ನಡೆಯುತ್ತಿರುವ ರಸ್ತೆ ಬದಿ ವಾಹನ ನಿಲುಗಡೆಗೆ ಕಡಿವಾಣ ಹಾಕಲು ಹೊಸ ಪಾರ್ಕಿಂಗ್ ಶುಲ್ಕ ವ್ಯವಸ್ಥೆಯನ್ನು ಜಾರಿಗೊಳಿಸಲು ಮುಂದಾಗಿದೆ.

ಈ ಹೊಸ ನಿಯಮದಂತೆ, ಇನ್ಮುಂದೆ ಸಿಬಿಡಿ (Central Business District), ಹೆಬ್ಬಾಳ ಹಾಗೂ ಯಲಹಂಕ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ರಸ್ತೆ ಬದಿ ವಾಹನ ಪಾರ್ಕಿಂಗ್ ಮಾಡಲು ಹಣ ಪಾವತಿಸುವುದು ಕಡ್ಡಾಯವಾಗಲಿದೆ.

ಸಂಚಾರ ಸುಗಮಗೊಳಿಸುವುದು ಹಾಗೂ ಅಕ್ರಮ ಪಾರ್ಕಿಂಗ್ (Parking) ನಿಯಂತ್ರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪ್ರಕಟಿಸಿರುವ ನಿಯಮಗಳ ಪ್ರಕಾರ, ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳಿಗೆ (gba new parking scheme) ವಿಭಿನ್ನವಾಗಿ ಪಾರ್ಕಿಂಗ್ ಶುಲ್ಕವನ್ನು ನಿಗದಿಪಡಿಸಲಾಗಿದೆ.

ನಾಲ್ಕು ಚಕ್ರಗಳ ವಾಹನಗಳಿಗೆ ಪ್ರತಿ ಗಂಟೆಗೆ 30 ರೂ. ಮತ್ತು ದ್ವಿಚಕ್ರ ವಾಹನಗಳಿಗೆ ಪ್ರತಿ ಗಂಟೆಗೆ 15 ರೂ. ಪಾವತಿಸಬೇಕಾಗುತ್ತದೆ. ಇನ್ನು ದಿನಪೂರ್ತಿ ವಾಹನ ನಿಲುಗಡೆ ಮಾಡಲು ಬಯಸುವವರಿಗೆ ದೈನಂದಿನ ಪಾಸ್ ವ್ಯವಸ್ಥೆಯನ್ನೂ ಪರಿಚಯಿಸಲಾಗಿದೆ.

ನಾಲ್ಕು ಚಕ್ರ ವಾಹನಗಳಿಗೆ ದಿನಪಾಸ್ ದರ 150 ರೂ. ಆಗಿದ್ದು, ದ್ವಿಚಕ್ರ ವಾಹನಗಳಿಗೆ 75 ರೂ. ಎಂದು ನಿಗದಿಯಾಗಿದೆ.

ಇದಲ್ಲದೆ, ನಿರಂತರವಾಗಿ ಪಾರ್ಕಿಂಗ್ ಬಳಸುವವರಿಗೆ ಅನುಕೂಲವಾಗುವಂತೆ ಮಾಸಿಕ ಪಾಸ್ ವ್ಯವಸ್ಥೆಯನ್ನೂ ಜಾರಿಗೆ ತರಲಾಗಿದ್ದು, ನಾಲ್ಕು ಚಕ್ರ ವಾಹನಗಳಿಗೆ 3,000 ರೂ. ಹಾಗೂ ದ್ವಿಚಕ್ರ ವಾಹನಗಳಿಗೆ 1,500 ರೂ. ಶುಲ್ಕ ವಿಧಿಸಲಾಗಿದೆ.

ಈ ಹೊಸ ಪಾರ್ಕಿಂಗ್ ಶುಲ್ಕ ವ್ಯವಸ್ಥೆಯನ್ನು ಮೊದಲ ಹಂತದಲ್ಲಿ ಆಯ್ದ ಪ್ರದೇಶಗಳಲ್ಲಿ ಜಾರಿಗೆ ತರಲಾಗುತ್ತಿದೆ.

ಹೆಬ್ಬಾಳ ವಿಭಾಗದಲ್ಲಿ ಟ್ಯಾಂಕ್ ಬಂಡ್ ರಸ್ತೆ, ತರಳಬಾಳು ರಸ್ತೆ, ಭೂಪಸಂದ್ರ ಮುಖ್ಯ ರಸ್ತೆ ಸೇರಿದಂತೆ ಪ್ರಮುಖ ಮಾರ್ಗಗಳನ್ನು ಗುರುತಿಸಲಾಗಿದೆ.

ಯಲಹಂಕ ಹೊಸ ಪಟ್ಟಣದ ವಾರ್ಡ್ ಸಂಖ್ಯೆ 05ರ ವ್ಯಾಪ್ತಿಯಲ್ಲಿ 1ನೇ ಎ, 13ನೇ ಎ ಮುಖ್ಯ ರಸ್ತೆಗಳು ಹಾಗೂ 3ನೇ ಬಿ, 16ನೇ ಬಿ, 15ನೇ ಎ ಅಡ್ಡ ರಸ್ತೆಗಳು, ಸಂದೀಪ್ ಉನ್ನಿಕೃಷ್ಣ ರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿ ಪಾರ್ಕಿಂಗ್ ಶುಲ್ಕ ಸಂಗ್ರಹಿಸಲಾಗುತ್ತದೆ.

ಮುಂದಿನ ದಿನಗಳಲ್ಲಿ ಈ ವ್ಯವಸ್ಥೆಯನ್ನು ಇತರ ಪ್ರದೇಶಗಳಿಗೂ ವಿಸ್ತರಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಗರದಲ್ಲಿ ಎಲ್ಲೆಂದರಲ್ಲಿ ಬೇಕಾಬಿಟ್ಟಿ ವಾಹನ ನಿಲುಗಡೆ ಮಾಡುವ ಪ್ರವೃತ್ತಿಯಿಂದಾಗಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ.

ವಿಶೇಷವಾಗಿ ವಾಣಿಜ್ಯ ಪ್ರದೇಶಗಳು ಹಾಗೂ ಕಚೇರಿ ವಲಯಗಳಲ್ಲಿ ರಸ್ತೆ ಬದಿ ಪಾರ್ಕಿಂಗ್ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಇದರಿಂದ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು, ಅಪಘಾತಗಳಿಗೂ ಕಾರಣವಾಗುತ್ತಿದೆ.

ಈ ಹಿನ್ನೆಲೆ ಪಾರ್ಕಿಂಗ್ ಶುಲ್ಕ ವಿಧಿಸುವ ಮೂಲಕ ಜನರಲ್ಲಿ ನಿಯಮ ಪಾಲನೆಯ ಮನಸ್ಥಿತಿ ಬೆಳೆಸುವುದು ಹಾಗೂ ಸಂಚಾರ ವ್ಯವಸ್ಥೆಯನ್ನು ಸುಧಾರಿಸುವುದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಉದ್ದೇಶವಾಗಿದೆ.

ಆದರೆ, ಈಗಾಗಲೇ ವಿವಿಧ ತೆರಿಗೆಗಳಿಂದ ಬೇಸತ್ತಿರುವ ನಾಗರಿಕರು ಈ ಹೊಸ ನಿರ್ಧಾರವನ್ನು ಮತ್ತೊಂದು ಆರ್ಥಿಕ ಹೊರೆ ಎಂದು ನೋಡುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲೂ ಈ ವಿಷಯಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಕ್ಸ್ (ಟ್ವಿಟರ್)ನಲ್ಲಿ ಈ ಕುರಿತು ಪೋಸ್ಟ್ ವೈರಲ್ ಆಗಿದ್ದು, ಕೆಲವರು ಈ ನಿರ್ಧಾರವನ್ನು ಸ್ವಾಗತಿಸಿದರೆ, ಇನ್ನೂ ಕೆಲವರು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಲಪಡಿಸದೇ ಪಾರ್ಕಿಂಗ್ ಶುಲ್ಕ ವಿಧಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಪಾರ್ಕಿಂಗ್ ಶುಲ್ಕದಿಂದ ಸಂಚಾರ ಸುಧಾರಣೆಯಾಗಬಹುದು, ಆದರೆ ಅದರ ಹಣವನ್ನು ಪಾರದರ್ಶಕವಾಗಿ ಬಳಸಬೇಕು” ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.

ಒಟ್ಟಾರೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಈ ಹೊಸ ಪಾರ್ಕಿಂಗ್ ನಿಯಮ ನಗರ ಜೀವನದ ಮೇಲೆ ಯಾವ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಇದನ್ನು ಓದಿ : https://vijayatimes.com/gst-fake-bill-scam/

Tags: bengaluruGBAgreaterbengaluruauthorityparkingparkingcharges

Related News

ಇನ್ಮುಂದೆ ದಿನದ 24 ಗಂಟೆಯೂ ಅಂಚೆ ಕಚೇರಿ ಸೇವೆ: ಕೆಲ ಆಯ್ದ ಶಾಖೆಗಳಲ್ಲಿ ಮಾತ್ರವೇ ಈ ಸೇವೆ ಲಭ್ಯ
ದೇಶ-ವಿದೇಶ

ಇನ್ಮುಂದೆ ದಿನದ 24 ಗಂಟೆಯೂ ಅಂಚೆ ಕಚೇರಿ ಸೇವೆ: ಕೆಲ ಆಯ್ದ ಶಾಖೆಗಳಲ್ಲಿ ಮಾತ್ರವೇ ಈ ಸೇವೆ ಲಭ್ಯ

January 24, 2026
ಇನ್ಮುಂದೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಲ್ಯಾಪ್‌ಟಾಪ್‌ ಬದಲು ನಗದು ಬಹುಮಾನ
ಪ್ರಮುಖ ಸುದ್ದಿ

ಇನ್ಮುಂದೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಲ್ಯಾಪ್‌ಟಾಪ್‌ ಬದಲು ನಗದು ಬಹುಮಾನ

January 24, 2026
ಬಳ್ಳಾರಿ ಮಾಡೆಲ್ ಹೌಸ್ ಬೆಂಕಿ ಪ್ರಕರಣ: ಎಂಟು ಮಂದಿಯ ವಶ, ತನಿಖೆ ತೀವ್ರ
ಪ್ರಮುಖ ಸುದ್ದಿ

ಬಳ್ಳಾರಿ ಮಾಡೆಲ್ ಹೌಸ್ ಬೆಂಕಿ ಪ್ರಕರಣ: ಎಂಟು ಮಂದಿಯ ವಶ, ತನಿಖೆ ತೀವ್ರ

January 24, 2026
Census 2026-27: ಏಪ್ರಿಲ್ನಿಂದಲೇ ಜನಗಣತಿ ಮೊದಲ ಹಂತ ಆರಂಭ : ಮನೆ, ಆಹಾರ ಪದ್ಧತಿ, ಇಂಧನ ಬಳಕೆ, ಮೊಬೈಲ್ ಸಂಖ್ಯೆ ಸೇರಿ ಇಂಚಿಂಚು ಮಾಹಿತಿ ಸಂಗ್ರಹ
ದೇಶ-ವಿದೇಶ

Census 2026-27: ಏಪ್ರಿಲ್ನಿಂದಲೇ ಜನಗಣತಿ ಮೊದಲ ಹಂತ ಆರಂಭ : ಮನೆ, ಆಹಾರ ಪದ್ಧತಿ, ಇಂಧನ ಬಳಕೆ, ಮೊಬೈಲ್ ಸಂಖ್ಯೆ ಸೇರಿ ಇಂಚಿಂಚು ಮಾಹಿತಿ ಸಂಗ್ರಹ

January 23, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.