Visit Channel

`ಸಾಲ್ಟ್’ ರುಚಿ ನೋಡಲು ಸಿದ್ಧರಾಗಿ!

WhatsApp Image 2021-02-22 at 1.21.19 PM

`ಸಾಲ್ಟ್’ ಎನ್ನುವುದು ಹೊಸಬರ ತಂಡದ ಹೊಸ ಸಿನಿಮಾ. ಇತ್ತೀಚೆಗೆ ಸಿನಿಮಾದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಚಿತ್ರ ನೋಡಿದ ನಾದಬ್ರಹ್ಮ ಹಂಸಲೇಖಾ ಅವರು ಚಿತ್ರವನ್ನು ಅಪಾರವಾಗಿ ಮೆಚ್ಚಿದ್ದು ಇದು ಪೈಸಾ ವಸೂಲ್ ಆಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಚಿತ್ರದ ನಿರ್ದೇಶಕ ಭರತ್ ನಂದ ಮಾಧ್ಯಮದವರ ಜೊತೆಗೆ ಮಾತನಾಡಿ, ಚಿತ್ರ ತಂಡದ ಪ್ರತಿಯೊಬ್ಬರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಚಿತ್ರದಲ್ಲಿ ಬಲ ರಾಜ್ ವಾಡಿಯವರು ಒಂದು ಪ್ರಧಾನ ಪಾತ್ರ ಮಾಡುತ್ತಿದ್ದು ಅವರು ತಮ್ಮದು ಹೊಸಬರ ತಮಡವಾದರೂ ನಿಗದಿತ ಸಮಯಕ್ಕಿಂತ ಮೊದಲೇ ಬಂದು ಚಿತ್ರೀಕರಣದ ಸೆಟ್‌ನಲ್ಲಿ ಇರುತ್ತಿದ್ದರು ಎಂದು ಪ್ರಶಂಸಿಸಿದರು. ಬಳಿಕ ಮಾತನಾಡಿದ ಬಲ ರಾಜ್ ವಾಡಿಯವರು “ಸಿನಿಮಾ ಅಚ್ಚುಕಟ್ಟಾಗಿ ಮಾಡಿದ್ದಾರೆ. ಸ್ವೀಟಿ ಎನ್ನುವ ಚಿತ್ರದ ನಾಯಕಿಯ ಪಾತ್ರಕ್ಕೆ ನಾನು ತಂದೆಯಾಗಿ ನಟಿಸಿದ್ದೇನೆ” ಎಂದರು. ಚಿತ್ರದ ನಾಲ್ಕು ಪ್ರಧಾನ ಪಾತ್ರಗಳಲ್ಲಿ ಒಂದನ್ನು ಸ್ವತಃ ನಿರ್ದೇಶಕ ಭರತ್ ನಂದ ಅಭಿನಯಿಸಿದ್ದಾರೆ. ಅಕುಲ್ ಶೆಟ್ಟಿ ಎನ್ನುವ ಮತ್ತೊಂದು ಪಾತ್ರವನ್ನು ನವನಟ ಚಂದು ಛತ್ರಪತಿ ನಿಭಾಯಿಸಿದ್ದಾರೆ. ಬಾಣಸವಾಡಿ ಚೇತನ್, ಸಹನಿರ್ದೇಶಕ ರವೀಂದ್ರ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಮಾತನಾಡಿದರು.

ಸದ್ಯದಲ್ಲೇ ತೆರೆಗೆ ಬರಲಿರುವ ಈ ಚಿತ್ರದ ತಾರಾಗಣದಲ್ಲಿ ಸಂದೀಪ್, ವಿಜಯಶ್ರೀ ಕಲಬುರ್ಗಿ, ಯಶಸ್ವಿನಿ ಶೆಟ್ಟಿ, ರಶ್ಮಿತಾ ಗೌಡ, ಚಕ್ರವರ್ತಿ ದಾವಣಗೆರೆ, ಹರ್ಷ ಮೊದಲಾದವರು ಬಣ್ಣ ಹಚ್ಚಿದ್ದಾರೆ. ರಾಘವೇಂದ್ರ ಕಾಮತ್ ಸಾಹಿತ್ಯದ ನಾಲ್ಕು ಹಾಡುಗಳಿಗೆ ಎಲ್‌ಸ್ಟಿನ್-ಯದುನಂದನ್ ಜಂಟಿಯಾಗಿ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಸಂತೋಷ್‌ದಯಾಳನ್, ಸಂಕಲನ ವಿನಯ್‌ ಕುಮಾರ, ನೃತ್ಯ ಮಧುಸೂದನ್, ಸಂಭಾಷಣೆ ಸತೀಶ್‌ ಮಳವಳ್ಳಿ ಅವರದ್ದಾಗಿದೆ. ಬೆಂಗಳೂರು ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ಶಾಲಿನಿ ಎಂ ಅವರು ರಾಜರತ್ನ ಸ್ಟುಡಿಯೋ ಮೂಲಕ `ಸಾಲ್ಟ್’ ನಿರ್ಮಿಸಿದ್ದಾರೆ.

Latest News

bsy
ರಾಜಕೀಯ

ಬಿಜೆಪಿಯ ಸಂಸದೀಯ ಮಂಡಳಿಗೆ ಯಡಿಯೂರಪ್ಪ ; ರಾಜಕೀಯವಾಗಿ ಮತ್ತಷ್ಟು ಬಲಗೊಂಡ ಬಿಎಸ್‌ವೈ

ಇನ್ನು ಸಂಸದೀಯ ಮಂಡಳಿಯಲ್ಲಿ ಉತ್ತರಪ್ರದೇಶ(UttarPradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌(Yogi Adityanath) ಅವರಿಗೆ ಸ್ಥಾನ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಅವರಿಗೆ ಸ್ಥಾನ ಲಭಿಸಿಲ್ಲ.

bjp
ರಾಜಕೀಯ

ಡಿಕೆಶಿ ಸ್ವಾತಂತ್ರ್ಯದ ನಡಿಗೆಯ ಉದ್ದೇಶ, ಸಿದ್ದರಾಮಯ್ಯ ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ? : ಬಿಜೆಪಿ

ಸಿದ್ದರಾಮಯ್ಯ(Siddaramaiah) ಕಿರುಕುಳದಿಂದ ಸ್ವಾತಂತ್ರ್ಯ ಪಡೆಯುವುದೋ ಅಥವಾ ಕಾಂಗ್ರೆಸ್(Congress) ಹಿರಿಯ ನಾಯಕರು ಡಿಕೆಶಿ(DKS) ಸುತ್ತ ಹೆಣೆದಿರುವ ಜಾಲದಿಂದ ಸ್ವಾತಂತ್ರ್ಯ ಪಡೆಯುವುದೋ?

Ghee
ಆರೋಗ್ಯ

ತುಪ್ಪದ ಬಗ್ಗೆ ತಪ್ಪು ಕಲ್ಪನೆ ಬೇಡ! ; ತಪ್ಪದೇ ತುಪ್ಪ ಸೇವಿಸಿ, ಈ ಆರು ಪ್ರಯೋಜನಗಳನ್ನು ಪಡೆದುಕೊಳ್ಳಿ

ತುಪ್ಪವು ರೋಗನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ, ಮೂಳೆಯ ಆರೋಗ್ಯವನ್ನು ಉತ್ತೇಜಿಸುತ್ತದೆ, ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.

Assam
ದೇಶ-ವಿದೇಶ

500 ರೂ. ಬೆಟ್ಟಿಂಗ್ ಸೋಲಿಗೆ ಸ್ನೇಹಿತನ ಶಿರಚ್ಛೇದ ; 25 ಕಿ.ಮೀ ದೂರದ ಪೊಲೀಸ್ ಠಾಣೆಗೆ ಹೋಗಿ ಶರಣು!

ಆತನ ತಲೆಯನ್ನು ಹಿಡಿದುಕೊಂಡು ರಾತ್ರಿಯ ವೇಳೆ 25 ಕಿ.ಮೀ ದೂರವಿರುವ ಪೊಲೀಸ್ ಠಾಣೆಗೆ(Police Station) ನಡೆದು ಶರಣಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.