• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಗ್ಯಾಸ್‌ ಗೀಸರ್‌ ಸೋರಿಕೆಗೆ ಮತ್ತಿಬ್ಬರು ಬಲಿ: ತಾಯಿ-ಮಗು ದುರಂತ ಅಂತ್ಯ

Teju Srinivas by Teju Srinivas
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಗ್ಯಾಸ್‌ ಗೀಸರ್‌ ಸೋರಿಕೆಗೆ ಮತ್ತಿಬ್ಬರು ಬಲಿ: ತಾಯಿ-ಮಗು ದುರಂತ ಅಂತ್ಯ
0
SHARES
28
VIEWS
Share on FacebookShare on Twitter
  • ಗೋವಿಂದರಾಜ ನಗರದಲ್ಲಿ ಸಂಭವಿಸಿದ (geyser leak tragedy bangalore) ದಾರುಣ ಘಟನೆ
  • ಬಾತ್ರೂಮ್‌ನಲ್ಲಿ ಗಾಳಿಯ ಸಂಚಲನ ಕೊರತೆ ಶಂಕೆ
  • ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವು

Bengaluru: ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಗ್ಯಾಸ್ ಗೀಸರ್‌ (Gas Geyser) ಸೋರಿಕೆಯಿಂದ ಸಾವನ್ನಪ್ಪುತ್ತಿರುವ (geyser leak tragedy bangalore) ಪ್ರಕರಣಗಳು ಹೆಚ್ಚಾಗುತ್ತಿವೆ.

ಕಳೆದ ಎರಡು ದಿನಗಳ ಹಿಂದಷ್ಟೇ ಬೆಂಗಳೂರು ಉತ್ತರ ತಾಲೂಕಿನ ತೋಟದ ಗುಡ್ಡದಹಳ್ಳಿಯಲ್ಲಿ (Tothada Guddadahalli) ನವವಿವಾಹಿತೆ ಭೂಮಿಕಾ (Bhoomika) ಎಂಬುವರು ಗ್ಯಾಸ್ ಗೀಸರ್ ಸೋರಿಕೆಯಿಂದ ಸಾವನ್ನಪ್ಪಿದ್ದರು.

ಅದರ ಬೆನ್ನಲ್ಲೇ ಇದೀಗ ಬೆಂಗಳೂರಿನ ಗೋವಿಂದರಾಜ ನಗರದಲ್ಲಿ ನಡೆದ ಗ್ಯಾಸ್ ಗೀಸರ್ ಸೋರಿಕೆಯ ದುರ್ಘಟನೆ ತಾಯಿ ಮತ್ತು ಮಗುವಿನ ಪ್ರಾಣತೆಗೆದಿದೆ.

geyser leak tragedy bangalore

ಮೃತರಾದವರನ್ನು ಚಾಂದಿನಿ (26) ಮತ್ತು ಅವಳ ನಾಲ್ಕು ವರ್ಷದ ಮಗು ಯುವಿ ಎಂದು ಗುರುತಿಸಲಾಗಿದೆ.

ಸ್ನಾನಕ್ಕಾಗಿ ಬಾತ್ರೂಮ್‌ಗೆ ತೆರಳಿದ್ದ ತಾಯಿ–ಮಗು ಗ್ಯಾಸಿನ ಸೋರಿಕೆಯಿಂದ (geyser leak tragedy bangalore) ಅಸ್ವಸ್ಥಗೊಂಡು, ಪ್ರಜ್ಞೆ ಕಳೆದುಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಕುಟುಂಬದವರು ತಕ್ಷಣವೇ ಅವರನ್ನು ವಿಕ್ಟೋರಿಯಾ (Victoria) ಆಸ್ಪತ್ರೆಗೆ ಸಾಗಿಸಿದರೂ, ವೈದ್ಯರು ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ಈ ಹೃದಯವಿದ್ರಾವಕ ಘಟನೆ ನಗರದಲ್ಲಿ ಗ್ಯಾಸ್ ಗೀಸರ್ ಬಳಕೆಯ ಸುರಕ್ಷತೆ ಬಗ್ಗೆ ಮತ್ತೊಮ್ಮೆ ಗಂಭೀರ ಚರ್ಚೆಗೆ ಕಾರಣವಾಗಿದೆ.

ಇನ್ನು ತಾಯಿ–ಮಗು ಸ್ನಾನಗೃಹಕ್ಕೆ ತೆರಳಿದ ಬಳಿಕ ಕೆಲವು ಗಂಟೆಗಳವರೆಗೆ ಪ್ರತಿಕ್ರಿಯೆ ಇಲ್ಲದಿರುವುದು ಕುಟುಂಬದವರಿಗೆ ಅನುಮಾನ ಮೂಡಿಸಿತು.

ಸಾಮಾನ್ಯವಾಗಿ ಚಾಂದಿನಿ ಪ್ರತಿದಿನ ಸಂಜೆ ನಾಲ್ಕು ಗಂಟೆಗೆ ದೊಡ್ಡ ಮಗಳನ್ನ ಶಾಲೆಯಿಂದ ಕರೆದುಕೊಂಡು ಬರಲು ತೆರಳುತ್ತಿದ್ದಳು.

ಆದರೆ ಸೋಮವಾರ ಆಕೆಯು ಶಾಲೆಗೆ ಹಾಜರಾಗದ ಕಾರಣ ಶಾಲೆಯಿಂದಲೇ ಪತಿ ಕಿರಣ್‌ಗೆ ಮಾಹಿತಿ ನೀಡಲಾಯಿತು.

ತಕ್ಷಣವೇ ಕಿರಣ್ ಚಾಂದಿನಿಗೆ ಕರೆ ಮಾಡಿದರೂ ಫೋನ್ ಸ್ವೀಕರಿಸಲಿಲ್ಲ.

ಆತಂಕಗೊಂಡ ಅವರು ತಮ್ಮ ತಮ್ಮನಾದ ಪ್ರವೀಣ್‌ಗೆ ಮನೆಯನ್ನು ಪರಿಶೀಲಿಸುವಂತೆ ತಿಳಿಸಿದರು.

ಮನೆಗೆ ಬಂದು ನೋಡಿದ ಪ್ರವೀಣ್, ಬಾತ್ರೂಮ್ ಬಾಗಿಲು ತೆರೆದುಕೊಂಡಾಗ ಅಲ್ಲಿ ತಾಯಿ–ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ಬೆಚ್ಚಿಬಿದ್ದು.

ತಕ್ಷಣವೇ ನೆರವಿಗೆ ಕೂಗಿ ಅವರು ಆಸ್ಪತ್ರೆಗೆ ಕರೆದೊಯ್ದರೂ, ಘಟನೆ ನಡೆದ ಕೆಲ ಗಂಟೆಗಳೊಳಗೆ ಇಬ್ಬರೂ ಜೀವಬಿಟ್ಟಿದ್ದಾರೆ.

ಪೊಲೀಸರ ಪ್ರಾಥಮಿಕ ಶಂಕೆಯ ಪ್ರಕಾರ ಗ್ಯಾಸ್ ಗೀಸರ್‌ನ್ನು ಬಂದ ಕೋಣೆಯಲ್ಲಿ ಗಾಳಿಯ ಸಂಚಲನ ಇಲ್ಲದಿರುವುದು

ಕಾರ್ಬನ್ ಮೋನಾಕ್ಸೈಡ್ (Carbon Monoxide) ವಿಷದ ಅತಿಯಾಗಿ ಉಸಿರಾಡಲು ಕಾರಣವಾಗಿರಬಹುದು ಎನ್ನಲಾಗುತ್ತಿದೆ.

ಇನ್ನು ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

ಕುಟುಂಬದವರ ಹೇಳಿಕೆ, ತಾಂತ್ರಿಕ ತಜ್ಞರ ಪರಿಶೀಲನೆ ಹಾಗೂ ಪೋಸ್ಟ್‌ಮಾರ್ಟಂ (Postmortem) ವರದಿ ಆಧಾರವಾಗಿ ಘಟನೆಯ

ನಿಖರ ಕಾರಣಗಳನ್ನು ಪೊಲೀಸರು ಪತ್ತೆಹಚ್ಚಲಿದ್ದಾರೆ.

ಈ ನಡುವೆ, ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಗ್ಯಾಸ್ ಗೀಸರ್ ಬಳಸುವ ಮನೆಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಮುಚ್ಚಿದ ಬಾತ್ರೂಮ್‌ಗಳಲ್ಲಿ ಗ್ಯಾಸ್ ಗೀಸರ್‌ನ್ನು ಕಾರ್ಯನಿರ್ವಹಿಸುವುದು ಅತ್ಯಂತ ಅಪಾಯಕಾರಿ ಎಂದು ತಜ್ಞರು ಅನೇಕ

ಬಾರಿ ಎಚ್ಚರಿಕೆ ನೀಡಿದರೂ, ಜನರಲ್ಲಿ ಇನ್ನೂ ಅರಿವು ಕಡಿಮೆ ಇದೆ.

ವಿಶೇಷವಾಗಿ ಚಳಿ ಕಾಲದಲ್ಲಿ ಜನರು ಬಾತ್ರೂಮ್ ಬಾಗಿಲು–ಕಿಟಕಿಗಳನ್ನು ಸಂಪೂರ್ಣ ಮುಚ್ಚಿ ಇಡುವುದು ಅಪಘಾತದ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಕಾರ್ಬನ್ ಮೋನಾಕ್ಸೈಡ್ ಎಂಬ ಬಣ್ಣವಿಲ್ಲದ, ವಾಸನೆಯಿಲ್ಲದ ಈ ವಿಷಗ್ಯಾಸಿನ ಪ್ರಭಾವ ಕೆಲವೇ ಕ್ಷಣಗಳಲ್ಲಿ ಪ್ರಾಣಾಪಾಯಕ್ಕೆ ಕಾರಣವಾಗಬಹುದು.

ಈ ಘಟನೆಗೆ ಸಂಬಂಧಿಸಿದಂತೆ ನೆರೆಹೊರೆಯವರು ಹಾಗೂ ಸಂಬಂಧಿಕರು ದುಃಖ ವ್ಯಕ್ತಪಡಿಸಿದ್ದು, ಕುಟುಂಬದ ದುಸ್ಥಿತಿ ಬೇಸರ ತರಿಸಿದೆ.

ಈ ಹಿನ್ನಲೆಯಲ್ಲಿ ಗ್ಯಾಸ್ ಗೀಸರ್‌ಗಳ ಸುರಕ್ಷತಾ ನಿಯಮಗಳು, ಅವುಗಳ ಸರಿಯಾದ ನಿರ್ವಹಣೆ ಹಾಗೂ ಗಾಳಿಯ ಸಂಚಲನದ ಅಗತ್ಯತೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅತ್ಯಂತ ಪ್ರಾಮುಖ್ಯವಾಗಿದೆ.

ನಗರದಲ್ಲಿನ ಬಹುತೇಕ ಅಪಾರ್ಟ್ಮೆಂಟ್‌ಗಳು ಮತ್ತು ಮನೆಗಳಲ್ಲಿ ಗ್ಯಾಸ್ ಗೀಸರ್ ಬಳಕೆಯಾಗುತ್ತಿರುವುದರಿಂದ, ಈ ಘಟನೆಯು ಎಲ್ಲರಿಗೂ ಎಚ್ಚರಿಕೆಯ ಗಂಟೆ ಹೊಡೆದಂತಾಗಿದೆ.

ತಜ್ಞರ ಸಲಹೆಯಂತೆ, ಗ್ಯಾಸ್ ಗೀಸರ್ ಬಳಸುವಾಗ ಕಿಟಕಿಗಳು ಅಥವಾ ಎಗ್ಜಾಸ್ಟ್ ಫ್ಯಾನ್‌ನ್ನು (Exhaust Fan) ಸದಾ ಕಾರ್ಯನಿರ್ವಹಿಸುವಂತಿರಬೇಕು.

ಅತಿಯಾದ ಉರಿ ಅಥವಾ ಅನಿಯಂತ್ರಿತ ಹೊಗೆ ನಿರ್ಮಾಣ ಕಂಡರೆ ಗ್ಯಾಸನ್ನು ತಕ್ಷಣ ನಿಲ್ಲಿಸಬೇಕು. ಸಾಮಾನ್ಯವಾಗಿ ಬಾತ್ರೂಮ್ ಒಳಗೆ ಗ್ಯಾಸ್ ಗೀಸರ್ ಅಳವಡಿಸುವುದೇ ತಪ್ಪು ಎಂದು ತಜ್ಞರು ಹೇಳಿದ್ದಾರೆ.

ಈ ದುರಂತದಿಂದ ಕುಟುಂಬ ಕಳೆದುಕೊಂಡ ದಾರುಣ ನೋವು ಮರೆಯಲಾಗದದ್ದು; ಆದರೆ ಈ ಘಟನೆ ಮುಂದಿನ ದಿನಗಳಲ್ಲಿ ಇಂತಹ ಅಪಘಾತಗಳು ಮರುಕಳಿಸದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾದ ಅವಶ್ಯಕತೆಯನ್ನು ಸ್ಪಷ್ಟವಾಗಿ ತೋರಿಸಿದೆ.

ಜೀವ ಉಳಿಸುವ ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಒಂದು ಕ್ಷಣದ ಅಜಾಗರೂಕತೆ ಸಂಪೂರ್ಣ ಕುಟುಂಬದ ನಲಿವನ್ನೇ ಕಿತ್ತುಕೊಳ್ಳಬಹುದು.

ಇದನ್ನು ಓದಿ : ಭಾರತದ ಅಕ್ಕಿ ಆಮದಿನ ಮೇಲೆ ಟ್ರಂಪ್ ವಕ್ರದೃಷ್ಟಿ : ಹೊಸ ಸುಂಕದ ಬೆದರಿಕೆ ಹಾಕಿದ ಅಮೆರಿಕಾ ಅಧ್ಯಕ್ಷ
Tags: bengalurublastgas geyser

Related News

ಇನ್ಮುಂದೆ ದಿನದ 24 ಗಂಟೆಯೂ ಅಂಚೆ ಕಚೇರಿ ಸೇವೆ: ಕೆಲ ಆಯ್ದ ಶಾಖೆಗಳಲ್ಲಿ ಮಾತ್ರವೇ ಈ ಸೇವೆ ಲಭ್ಯ
ದೇಶ-ವಿದೇಶ

ಇನ್ಮುಂದೆ ದಿನದ 24 ಗಂಟೆಯೂ ಅಂಚೆ ಕಚೇರಿ ಸೇವೆ: ಕೆಲ ಆಯ್ದ ಶಾಖೆಗಳಲ್ಲಿ ಮಾತ್ರವೇ ಈ ಸೇವೆ ಲಭ್ಯ

January 24, 2026
ಇನ್ಮುಂದೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಲ್ಯಾಪ್‌ಟಾಪ್‌ ಬದಲು ನಗದು ಬಹುಮಾನ
ಪ್ರಮುಖ ಸುದ್ದಿ

ಇನ್ಮುಂದೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಲ್ಯಾಪ್‌ಟಾಪ್‌ ಬದಲು ನಗದು ಬಹುಮಾನ

January 24, 2026
ಬಳ್ಳಾರಿ ಮಾಡೆಲ್ ಹೌಸ್ ಬೆಂಕಿ ಪ್ರಕರಣ: ಎಂಟು ಮಂದಿಯ ವಶ, ತನಿಖೆ ತೀವ್ರ
ಪ್ರಮುಖ ಸುದ್ದಿ

ಬಳ್ಳಾರಿ ಮಾಡೆಲ್ ಹೌಸ್ ಬೆಂಕಿ ಪ್ರಕರಣ: ಎಂಟು ಮಂದಿಯ ವಶ, ತನಿಖೆ ತೀವ್ರ

January 24, 2026
ಜ.24ರಿಂದ ನಾಲ್ಕು ದಿನ ಬ್ಯಾಂಕ್ ಶಾಖೆಗಳು ಬಂದ್: ಡಿಜಿಟಲ್ ಸೇವೆಗಳು ಮಾತ್ರ ಲಭ್ಯ
ದೇಶ-ವಿದೇಶ

ಜ.24ರಿಂದ ನಾಲ್ಕು ದಿನ ಬ್ಯಾಂಕ್ ಶಾಖೆಗಳು ಬಂದ್: ಡಿಜಿಟಲ್ ಸೇವೆಗಳು ಮಾತ್ರ ಲಭ್ಯ

January 23, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.