- ವಾಟ್ಸ್ಯಾಪ್, ಇನ್ಸ್ಟಾಗ್ರಾಮ್, ಫೇಸ್ಬುಕ್ (WhatsApp, Instagram, Facebook) ಎಲ್ಲಿ ನೋಡಿದ್ರೂ ಘಿಬ್ಲಿ ಆರ್ಟ್
- ಘಿಬ್ಲಿ ಆರ್ಟ್ ವೈರಲ್ ಆಗುತ್ತಿದ್ದಂತೆ ಖಾಕಿ ಅಲರ್ಟ್ (Khaki Alert)
- ಘಿಬ್ಲಿ ಜನರೇಟರ್ನಲ್ಲಿ ಡಿಜಿಟಲ್ ಗೌಪ್ಯತೆಯ (Digital privacy) ಬಗ್ಗೆ ಗೋವಾ ಪೊಲೀಸರ ಕಳವಳ (Ghibli AI photo trend)
Bengaluru: ಎಲ್ಲಿ ನೋಡಿದ್ರೂ ಇದೀಗ ಕಾರ್ಟೂನ್ ಇಮೇಜ್ಗಳೇ (Cartoon images) ಕಾಣುತ್ತಿದೆ. ಸೋಷಿಯಲ್ ಮೀಡಿಯಾ ಓಪನ್ (Media Open) ಮಾಡಿದ್ರೆ ಸಾಕು ಘಿಬ್ಲಿ ದೊಡ್ಡ ಗಲಿಬಿಲಿಯನ್ನೇ ಮಾಡಿಬಿಟ್ಟಿದೆ. ವಾಟ್ಸ್ಯಾಪ್, ಇನ್ಸ್ಟಾಗ್ರಾಮ್, ಫೇಸ್ಬುಕ್ (WhatsApp, Instagram, Facebook) ಎಲ್ಲಿ ನೋಡಿದ್ರೂ ಘಿಬ್ಲಿ ಆರ್ಟ್ಗಳೇ ಕಣ್ಣಿಗೆ ಬೀಳುತ್ತದೆ. ಇದೀಗ ಘಿಬ್ಲಿ ಆರ್ಟ್ ವೈರಲ್ (Ghibli art goes viral) ಆಗುತ್ತಿದ್ದಂತೆ ಖಾಕಿ ಅಲರ್ಟ್ ಆಗಿದೆ.
ಎಐ ಬಳಸಿಕೊಂಡು ಘಿಬ್ಲಿ ಆರ್ಟ್ ಮಾಡೋರಿಗೆ ಪೊಲೀಸರು ಇದೀಗ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.ಕೆಲ ದಿನಗಳ ಹಿಂದಷ್ಟೇ ಸೈಬರ್ ತಜ್ಞರು ಈ ಬಗ್ಗೆ ಎಚ್ಚರಿಕೆ ನೀಡಿದ್ದರು. ಇದೀಗ ಈ ಬೆನ್ನಲ್ಲೇ ಪೊಲೀಸರೂ ಕೂಡಾ ಸಾರ್ವಜನಿಕರಿಗೆ ಎಚ್ಚರಿಗೆ ನೀಡಿದ್ದಾರೆ. AI ನಲ್ಲಿ ರಚಿಸಿದ ಘಿಬ್ಲಿ ಟ್ರೆಂಡ್ ನೋಡಲು ಚಂದ ಆದ್ರೇ ಎಲ್ಲಾ AI ಆ್ಯಪ್ ಗಳು ಗೌಪ್ಯತೆಯನ್ನು (AI apps protect privacy) ರಕ್ಷಿಸಲ್ಲ.
ವೈಯಕ್ತಿಕ ಫೋಟೋಗಳನ್ನು ಅಪ್ಲೋಡ್ ಮಾಡುವ ಮೊದಲು ಯೋಚಿಸಿ (Think first) ಅಂತಾ ಪೊಲೀಸರು ಬಳಕೆದಾರರಿಗೆ ಸಂದೇಶ ನೀಡಿದ್ದಾರೆ. ವಿಶ್ವಾಸಾರ್ಹ AI ಅಪ್ಲಿಕೇಶನ್ (Trusted AI app) ಮಾತ್ರ ಬಳಸಿ ಅಂತಾ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.
OpenAIನ ಘಿಬ್ಲಿಯ AI ಆರ್ಟ್ ಜನರೇಟರ್ ವಿಚಾರವಾಗಿ ಜನರು ಡಿಜಿಟಲ್ ಗೌಪ್ಯತೆಯ (Digital privacy) ಬಗ್ಗೆ ಕಳವಳ ವ್ಯಕ್ತಪಡಿಸಲು ಪ್ರಾರಂಭಿಸಿದ್ದಾರೆ. ನೀವು ChatGPT ನಲ್ಲಿ ನಿಮ್ಮ ವೈಯಕ್ತಿಕ ಫೋಟೋಗಳನ್ನು (Personal photos) ಅಪ್ಲೋಡ್ ಮಾಡುವ ಮೂಲಕ ಘಿಬ್ಲಿ ಫೋಟೋ ಸಹ ರಚಿಸುತ್ತಿದ್ದರೆ, ಮೊದಲು ಅದು ಎಷ್ಟು ಸುರಕ್ಷಿತ ಎಂದು ತಿಳಿದುಕೊಳ್ಳಿ.

ವಾಸ್ತವವಾಗಿ, ಇದರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು (Questions about safety) ಎತ್ತುತ್ತಿರುವವರು, ಇದು AI ತರಬೇತಿಗಾಗಿ ಸಾವಿರಾರು ವೈಯಕ್ತಿಕ ಫೋಟೋಗಳನ್ನು (Thousands of personal photos) ಸಂಗ್ರಹಿಸಲು ಮಾಡುತ್ತಿರುವ ಒಂದು ತಂತ್ರವಾಗಿರಬಹುದು ಎಂದು ಹೇಳುತ್ತಿದ್ದಾರೆ.ಬಳಕೆದಾರರು ತಮ್ಮ ಫೋಟೋಗಳನ್ನು ಸಲ್ಲಿಸಿದ (Submitted photos) ನಂತರ, ಆ ಫೋಟೋಗಳ ಬಳಕೆಯ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತಾರೆ ಎಂದು ಪೊಲೀಸರು ಎಚ್ಚರಿಸಿದ್ದಾರೆ (Police warned) .
ಅಷ್ಟಕ್ಕೂ ಈಗಾಗಲೇ ಈ ಘಿಬ್ಲಿ- ಸ್ಟುಡಿಯೋ ಸ್ಟೈಲ್ ಡಿಸೈನ್ ವೈರಲ್ (Ghibli-Studio style design goes viral) ಆಗಿದೆ, ಹೀಗಾಗಿ ಎಲ್ಲರೂ ಟ್ರೆಂಡ್ ಸೆಟ್ ಮಾಡಲು ತಮ್ಮ ತಮ್ಮ ವೈಯಕ್ತಿಕ ಫೋಟೋಗಳನ್ನು (Personal photos) ಹಾಕಿ ಜನರೇಟ್ ಮಾಡಿಕೊಳ್ಳುತ್ತಿದ್ದಾರೆ. ಆದರೆ ಬಳಕೆದಾರರು ತಿಳಿಯದೆಯೇ OpenAI ಗೆ ಫೇಸ್ ಡೇಟಾವನ್ನು ನೀಡುತ್ತಿದ್ದಾರೆ ಎಂದು ವಿಮರ್ಶಕರು ಹೇಳಿದ್ದಾರೆ
(Critics said) . ಇದು ಅವರ ಗೌಪ್ಯತೆಯನ್ನು ಅಪಾಯಕ್ಕೆ ಸಿಲುಕಿಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿ : http://17 ವರ್ಷಗಳ ಬಳಿಕ ಚೆಪಾಕ್ ಅಂಗಳದಲ್ಲಿ ಗೆದ್ದು ಬೀಗಿದ ಆರ್ಸಿಬಿ : ತವರಲ್ಲಿ ಮಂಡಿಯೂರಿದ ಸಿಎಸ್ಕೆ
ಅಲ್ಲದೇ ಗೋವಾ ಪೊಲೀಸರು ಸಹ ಹೊಸದೆಂದು ಮಾರುಹೋಗಬೇಡಿ ಏನೇ ತೊಂದರೆಯಾದರೂ 1930 ಸಂಖ್ಯೆಗೆ ಕರೆ ಮಾಡಲು ಮನವಿ ಮಾಡಿದ್ದಾರೆ. ಒಂದು ವೇಳೆ ಬಳಕೆದಾರರ ಫೋಟೋಗಳನ್ನು ಅವರ ಅನುಮತಿಯಿಲ್ಲದೆ ವಿವಿಧ ಉದ್ದೇಶಗಳಿಗಾಗಿ (various purposes) ಬಳಸಬಹುದು. ಇಲ್ಲವೇ ಫೋಟೋಗಳನ್ನು ದುರುಪಯೋಗಪಡಿಸಿಕೊಳ್ಳುವ (Misusing photos) ಮೂಲಕ ಯಾರೊಬ್ಬರ ಗುರುತನ್ನು ಕದಿಯಬಹುದು. ಅಥವಾ ಬಳಕೆದಾರರ ಮಾಹಿತಿಯು ಸುರಕ್ಷಿತವಾಗಿರದೇ ಇರಬಹುದು (May be safe) ಮತ್ತು ಹ್ಯಾಕಿಂಗ್ಗೆ ಬಲಿಯಾಗಬಹುದು. ಹಾಗಾಗಿ ಟ್ರೆಂಡ್ ಎಂದು ಕಣ್ಣು ಮುಚ್ಚಿ (Close your eyes as a trend) ಅನುಸರಿಸುವ ಮುನ್ನ (Ghibli AI photo trend) ಎಚ್ಚರವಿರಲಿ ಎಂದಿದ್ದಾರೆ.