Mandya : ಮಂಗಳವಾರ ಸಂಜೆ ಕರ್ನಾಟಕ(Karnataka) ರಾಜ್ಯದ ಮಂಡ್ಯ(Mandya) ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ನೀರಿನ ಸಂಪ್‌ನಲ್ಲಿ(Water Sump) 10 ವರ್ಷದ ಬಾಲಕಿಯ ಶವ ಪತ್ತೆಯಾಗಿದೆ(Girl Dead Body in water sump). ಪೊಲೀಸ್ ಅಧಿಕಾರಿಗಳು ಮೃತದೇಹವನ್ನು(Dead Body) ಮರಣೋತ್ತರ(Autopsy Report) ಪರೀಕ್ಷೆಗೆ ಕಳುಹಿಸಿದ್ದು, ಈ ಬಗ್ಗೆ ಚುರುಕು ತನಿಖೆ ಆರಂಭಿಸಿದ್ದಾರೆ.

ಮಂಡ್ಯ ಜಿಲ್ಲೆಯ, ಮಳವಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಈ ಬಗ್ಗೆ ಪೊಲೀಸರು(Police) ಶೋಧ ನಡೆಸುತ್ತಿದ್ದಾರೆ.
ಮೃತ 10 ವರ್ಷದ ಬಾಲಕಿ ಮಂಗಳವಾರ ಸಂಜೆ ಟ್ಯೂಷನ್ ತರಗತಿಗೆ ತೆರಳಲು(Girl Dead Body in water sump) ಮನೆಯಿಂದ ಹೊರಟಿದ್ದಳು ಎನ್ನಲಾಗಿದೆ. ಆದರೆ ಮೂಲಗಳ ಪ್ರಕಾರ ಆಕೆ ತರಗತಿಗೆ ತಲುಪಿರಲಿಲ್ಲ ಎಂಬುದು ಮಾಹಿತಿ.
ಅಕ್ಟೋಬರ್ 11 ರಂದು ಸಂಜೆ ನಂತರ ನಿರ್ಮಾಣ ಹಂತದಲ್ಲಿರುವ ಕಟ್ಟಡದ ನೀರಿನ ಸಂಪ್‌ನಲ್ಲಿ ಆಕೆಯ ಶವವನ್ನು ಎಸೆದಿರುವುದು ಪತ್ತೆಯಾಗಿದೆ.
ಶವ ಪತ್ತೆಯಾದ ನಂತರ, ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಎಫ್‌ಐಆರ್(FIR) ಕೂಡ ದಾಖಲಿಸಲಾಗಿದೆ.
ಇದನ್ನೂ ಓದಿ : https://vijayatimes.com/congress-slams-bs-yedurappa/
ಬಾಲಕಿ ಪ್ರತಿದಿನ ಹೋಗುತ್ತಿದ್ದ ಟ್ಯೂಷನ್‌ನ ಶಿಕ್ಷಕ 45 ವರ್ಷದ ಕಾಂತರಾಜು ಎಂದು ಗುರುತಿಸಲಾಗಿದ್ದು, ಅವರನ್ನು ಕೂಡ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಡಿಸಿಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಂಡ್ಯ ಅಧೀಕ್ಷಕ ಪಿ. ವೇಣುಗೋಪಾಲ್ ಅವರು ಮಾತನಾಡಿ, ಮೃತದೇಹ ಇದೀಗ ಪತ್ತೆಯಾಗಿದ್ದು,

ಯಾವುದೇ ರೀತಿಯ ದಿಢೀರ್ ಪ್ರತಿಕ್ರಿಯೆ ನೀಡಲು ಇದು ಸರಿಯಾದ ಸಮಯವಲ್ಲ, ಸದ್ಯ ಮೃತದೇಹ ಪೋಸ್ಟ್ ಮಾರ್ಟಮ್ಗೆ ತಲುಪಿದೆ. ಅಲ್ಲಿಂದ ನಮಗೆ ವರದಿ ದೊರೆಯುತ್ತಿದ್ದಂತೆ ನಾವು ಮುಂದಿನ ಕ್ರಮವನ್ನು ಶೀಘ್ರವೇ ಕೈಗೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.