ಬೆಂಗಳೂರು ನ 8 : ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಕರ್ನಾಟಕ ಸರ್ಕಾರದ ವಿವಿಧ ಅಭಿವೃದ್ಧಿ ಇಲಾಖೆಗಳ ಸಹಕಾರದೊಂದಿಗೆ ಕೃಷಿ ಮೇಳ -2021 ವನ್ನು , ನವೆಂಬರ್ 11 ರಿಂದ 14 ವರೆಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ( ಜಿಕೆವಿಕೆ ) ಆವರಣದಲ್ಲಿ ಕೋವಿಡ್ -19 , ನಿಯಮಗಳ ಅನುಸಾರ ನಾಲ್ಕು ದಿನಗಳ ಕಾಲ ಆಯೋಜಿಸಿರುತ್ತದೆ.
ಕೃಷಿಮೇಳದ ವಿಶೇಷತೆಗಳು:
ಕೃಷಿ ಮೇಳವನ್ನು ಭೌತಿಕವಾಗಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಬಹುದು . ಕೃಷಿ ಮೇಳದಲ್ಲಿ ಕೃಷಿ ವಿಶ್ವವಿದ್ಯಾನಿಲಯ , ಬೆಂಗಳೂರು ಹೊರತಂದಿರುವ ನೂತನ 10 ತಳಿಗಳು ಮತ್ತು 28 ಕೃಷಿ ತಂತ್ರಜ್ಞಾನಗಳನ್ನು ಬಿಡುಗಡೆಗೊಳಿಸಲಾಗುತ್ತದೆ . ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ ರೈತರಿಗೆ ರಾಜ್ಯ , ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಗುವುದು.
ಕರ್ನಾಟಕ ರಾಜ್ಯದ ಯಾವುದೇ ರೈತರು ಇದರಲ್ಲಿ ಭಾಗವಹಿಸಬಹುದು, ಹಾಗೂ ಈ ಕೃಷಿಮೇಳದಲ್ಲಿ ಎಲ್ಲ ಕೃಷಿ ವಿಜ್ಞಾನಿಗಳು ಇರುವುದರಿಂದ ರೈತರು ತಮ್ಮ ಸಮಸ್ಯೆಗಳನ್ನು ಅಲ್ಲಿಯ ಪರಿಹಾರ ಮಾಡಿಕೊಳ್ಳಬಹುದು, ಹಾಗೂ ವಿವಿಧ ತಂತ್ರಜ್ಞಾನಗಳು ಅಥವಾ ಉಪಕರಣಗಳ ಬಗ್ಗೆ ಮಾಹಿತಿ ತಿಳಿದಿರುವುದಿಲ್ಲ ಅದನ್ನು ಸಹ ಇಲ್ಲಿ ನಿಖರವಾಗಿ ರೈತರಿಗೆ ತಿಳಿಯುವಂತೆ ಹೇಳಲಾಗುತ್ತದೆ.
ಕೃಷಿ ವಸ್ತು ಪ್ರದರ್ಶನದಲ್ಲಿ ಆಧುನಿಕ ಕೃಷಿ ತಂತ್ರಜ್ಞಾನಗಳು , ಕೃಷಿ ಇಂಜಿನಿಯರಿಂಗ್ ಮತ್ತು ಕೃಷಿ ಪರಿಕರಗಳ ಸುಮಾರು 250 ಮಳಿಗೆಗಳಿರುತ್ತವೆ . ರೈತರು ತಮ್ಮ ಕೃಷಿ ಸಮಸ್ಯೆಗಳಿಗೆ ತಜ್ಞರಿಂದ ಸಲಹೆಯನ್ನು ಸ್ಥಳದಲ್ಲೇ ಪಡೆದುಕೊಳ್ಳಬಹುದು . ಜಿ.ಕೆ.ವಿ.ಕೆ ಯ ಮಹಾದ್ವಾರದಿಂದ ಕೃಷಿ ಮೇಳದ ಸಭಾಂಗಣಕ್ಕೆ ತಲುಪಲು ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ . ಪ್ರವೇಶ ಉಚಿತವಾಗಿರುತ್ತದೆ . ರೈತಬಾಂಧವರು ಮತ್ತು ಸಾರ್ವಜನಿಕರು ಕೃಷಿ ಮೇಳದಲ್ಲಿ ಭಾಗವಹಿಸಬಹುದು