• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜ್ಯ

ಕುದುರೆಗಳಲ್ಲಿ ಗ್ಲಾಂಡರ್ಸ್ ರೋಗದ ಭೀತಿ: ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ರೇಸ್‌ಗಳಿಗೆ ತಾತ್ಕಾಲಿಕ ವಿರಾಮ

Teju Srinivas by Teju Srinivas
in ರಾಜ್ಯ, ವಿಜಯ ಟೈಮ್ಸ್‌
ಕುದುರೆಗಳಲ್ಲಿ ಗ್ಲಾಂಡರ್ಸ್ ರೋಗದ ಭೀತಿ: ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ರೇಸ್‌ಗಳಿಗೆ ತಾತ್ಕಾಲಿಕ ವಿರಾಮ
0
SHARES
13
VIEWS
Share on FacebookShare on Twitter
  • ಕುದುರೆಗಳಲ್ಲಿ ಮಾರಣಾಂತಿಕ ಸೋಂಕಿನ (glanders disease in horses) ಭೀತಿ: ಬಿಟಿಸಿ ರೇಸಿಂಗ್ ಚಟುವಟಿಕೆಗಳು ಸ್ಥಗಿತ
  • ಹೈದರಾಬಾದ್‌ನಲ್ಲಿ ರೋಗ ಪತ್ತೆಯಾದ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮ 700ಕ್ಕೂ ಹೆಚ್ಚು ಕುದುರೆಗಳ ವೈದ್ಯಕೀಯ ತಪಾಸಣೆ
  • ಈಗಾಗಲೇ ಒಂದು ಕುದುರೆಯಲ್ಲಿ ಗ್ಲಾಂಡರ್ಸ್ ದೃಢ; ಮೂರು ಹಂತದ ಪರೀಕ್ಷೆಯ ಬಳಿಕವೇ ರೇಸ್ ಪುನರಾರಂಭ

Bengaluru: ಹೈದರಾಬಾದ್‌ನಲ್ಲಿ ಕುದುರೆಗಳಿಗೆ ಮಾರಣಾಂತಿಕವಾದ (glanders disease in horses) ಗ್ಲಾಂಡರ್ಸ್ (Glanders) ರೋಗ ಪತ್ತೆಯಾಗಿರುವ ಹಿನ್ನೆಲೆ, ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು ಟರ್ಫ್ ಕ್ಲಬ್ (Turf Club) (BTC) ತನ್ನ ಎಲ್ಲಾ ಕುದುರೆ ರೇಸ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಈ ನಿರ್ಧಾರವನ್ನು ಕಳೆದ ಎರಡು ವಾರಗಳ ಹಿಂದೆಯೇ ತೆಗೆದುಕೊಳ್ಳಲಾಗಿದ್ದು, ಕುದುರೆಗಳ ಜೊತೆಗೆ ಮಾನವ ಆರೋಗ್ಯಕ್ಕೂ ಈ

ರೋಗದಿಂದ ಅಪಾಯ ಇರುವ ಕಾರಣ ಕ್ಲಬ್ ಆಡಳಿತ ಮಂಡಳಿ ಯಾವುದೇ ಅಜಾಗರೂಕತೆಗೆ ಅವಕಾಶ ನೀಡದೆ ಕಠಿಣ ಕ್ರಮ ಕೈಗೊಂಡಿದೆ.

glanders disease in horses

ರಾಜ್ಯದಲ್ಲಿನ ಅತ್ಯಂತ ಪ್ರತಿಷ್ಠಿತ ಕುದುರೆ ರೇಸಿಂಗ್ (glanders disease in horses) ಕೇಂದ್ರವಾಗಿರುವ ಬಿಟಿಸಿ, ಸಾರ್ವಜನಿಕ ಸುರಕ್ಷತೆ

ಮತ್ತು ಪ್ರಾಣಿಗಳ ಆರೋಗ್ಯವೇ ತನ್ನ ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಿದೆ.

ಅಷ್ಟಕ್ಕೂ ಗ್ಲಾಂಡರ್ಸ್ ಎಂಬುದು ಕುದುರೆ, ಕತ್ತೆ ಹಾಗೂ ಇತರ ಜಾನುವಾರುಗಳಲ್ಲಿ ಕಾಣಿಸಿಕೊಳ್ಳುವ ಗಂಭೀರ ಸೋಂಕು ರೋಗವಾಗಿದ್ದು, ಅಪರೂಪದ ಸಂದರ್ಭಗಳಲ್ಲಿ ಮನುಷ್ಯರಿಗೂ ಹರಡುವ ಸಾಧ್ಯತೆ ಇದೆ.

ಹೈದರಾಬಾದ್‌ನಲ್ಲಿ ಈ ರೋಗದ ಪ್ರಕರಣಗಳು ಬೆಳಕಿಗೆ ಬಂದ ಕೂಡಲೇ ಎಚ್ಚೆತ್ತುಕೊಂಡ ಬಿಟಿಸಿ ಆಡಳಿತ, ತನ್ನ

ಆವರಣದಲ್ಲಿರುವ ಎಲ್ಲಾ ಕುದುರೆಗಳನ್ನು ಸಂಪೂರ್ಣ ವೈದ್ಯಕೀಯ ತಪಾಸಣೆಗೆ ಒಳಪಡಿಸಿದೆ.

ಯಾವುದೇ ಸಂಶಯಾಸ್ಪದ ಪರಿಸ್ಥಿತಿ ಉಂಟಾಗದಂತೆ ನೋಡಿಕೊಳ್ಳಲು, ರೇಸ್‌ಗಳನ್ನು ಮುಂದುವರಿಸುವ ಬದಲು ತಾತ್ಕಾಲಿಕ

ವಿರಾಮ ನೀಡುವುದು ಉತ್ತಮ ಎಂಬ ತೀರ್ಮಾನಕ್ಕೆ ಬರಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ಇರುವ 700ಕ್ಕೂ ಹೆಚ್ಚು ಕುದುರೆಗಳ ಮೇಲೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ.

ಕುದುರೆಗಳ ಸಲೈವಾ ಹಾಗೂ ಇತರ ಅಗತ್ಯ ಮಾದರಿಗಳನ್ನು ಸಂಗ್ರಹಿಸಿ ಹರಿಯಾಣದ ಮಾನ್ಯತೆ ಪಡೆದ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

ವರದಿ ಪ್ರಕಾರ, ಪರೀಕ್ಷಿಸಲಾದ ಎಲ್ಲಾ ಕುದುರೆಗಳಲ್ಲಿ ಕೇವಲ ಒಂದು ಕುದುರೆಯಲ್ಲಿ ಮಾತ್ರ ಗ್ಲಾಂಡರ್ಸ್ ಸೋಂಕು ದೃಢಪಟ್ಟಿದೆ.

ಸೋಂಕು ಪತ್ತೆಯಾದ ಕೂಡಲೇ ಆ ಕುದುರೆಯನ್ನು ಸಂಪೂರ್ಣವಾಗಿ ಬೇರ್ಪಡಿಸಿ, ಚಿಕಿತ್ಸೆ ಹಾಗೂ ವಿಶೇಷ ಆರೈಕೆಗೆ ಒಳಪಡಿಸಲಾಗಿದೆ.

ಉಳಿದ ಎಲ್ಲಾ ಕುದುರೆಗಳು ಆರೋಗ್ಯವಾಗಿದ್ದು, ಅವುಗಳ ಮೇಲೆ ನಿರಂತರ ನಿಗಾವಹಿಸಲಾಗುತ್ತಿದೆ ಎಂದು ಬಿಟಿಸಿ ಸ್ಪಷ್ಟಪಡಿಸಿದೆ.

ಇದರ ಜೊತೆಗೆ, ಜಿಬಿಎ (ಜಿಲ್ಲಾ ಪಶುವೈದ್ಯಕೀಯ ಇಲಾಖೆ) ಅಧಿಕಾರಿಗಳು ಹಾಗೂ ತಜ್ಞ ವೈದ್ಯರು ನಿಯಮಿತವಾಗಿ ಟರ್ಫ್ ಕ್ಲಬ್‌ಗೆ

ಭೇಟಿ ನೀಡಿ ನೈರ್ಮಲ್ಯ, ಸುರಕ್ಷತಾ ಕ್ರಮಗಳು ಹಾಗೂ ಚಿಕಿತ್ಸಾ ಪ್ರಕ್ರಿಯೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಕುದುರೆಗಳ ವಾಸಸ್ಥಳ, ಆಹಾರ, ನೀರು ಹಾಗೂ ಸಿಬ್ಬಂದಿಯ ಚಲನವಲನಗಳಲ್ಲಿಯೂ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ.

ಯಾವುದೇ ರೀತಿಯ ವದಂತಿಗಳು ಅಥವಾ ಆತಂಕಕ್ಕೆ ಆಸ್ಪದ ನೀಡಬಾರದು ಎಂದು ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ಮುನ್ನೆಚ್ಚರಿಕೆ ಕ್ರಮಗಳ ಭಾಗವಾಗಿ ಮಾತ್ರ ರೇಸ್‌ಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಕರ್ನಾಟಕ ಕುದುರೆಗಳ ಟ್ರೈನರ್ಸ್ ಅಸೋಸಿಯೇಷನ್ ಅಧ್ಯಕ್ಷ ಪ್ರದೀಪ್ ಅಣ್ಣಯ್ಯ, “ಗ್ಲಾಂಡರ್ಸ್ ಕುರಿತು ಅನಾವಶ್ಯಕ ಭಯ ಪಡುವ ಅಗತ್ಯವಿಲ್ಲ. ಎಲ್ಲಾ ವರದಿಗಳು ನಮ್ಮ ಬಳಿ ಸ್ಪಷ್ಟವಾಗಿವೆ.

ಪ್ರತಿಯೊಂದು ಕುದುರೆಯನ್ನು ನಿಗದಿತ ಅವಧಿಯಲ್ಲಿ ಮೂರು ಬಾರಿ ಪರೀಕ್ಷಿಸಲಾಗುತ್ತದೆ.

ಯಾವುದೇ ಸೋಂಕಿನ ಲಕ್ಷಣಗಳು ಇಲ್ಲ ಎಂಬ ದೃಢೀಕರಣ ಬಂದ ನಂತರವೇ ರೇಸ್‌ಗಳನ್ನು ಪುನರಾರಂಭಿಸಲಾಗುವುದು” ಎಂದು ಹೇಳಿದರು.

ಬೆಂಗಳೂರು ಟರ್ಫ್ ಕ್ಲಬ್ ಕೂಡ ಇದೇ ಮಾತನ್ನು ಪುನರುಚ್ಚರಿಸಿದ್ದು, ಸಂಪೂರ್ಣ ಸುರಕ್ಷತೆ ಖಚಿತವಾದ ಬಳಿಕ ಮಾತ್ರ ಕುದುರೆ ರೇಸಿಂಗ್ ಚಟುವಟಿಕೆಗಳು ಮತ್ತೆ ಆರಂಭವಾಗಲಿವೆ ಎಂದು ತಿಳಿಸಿದೆ.

ಇದನ್ನು ಓದಿ : https://vijayatimes.com/ed-raid-on-illegal-betting-apps/

Tags: bengalurudieseaseglandershorserace

Related News

ಪ್ರಪಂಚದಲ್ಲಿ ಸೆಕೆಂಡ್‌, ದೇಶದಲ್ಲಿ ಮೊದಲು: ಅತೀ ಹೆಚ್ಚು ಟ್ರಾಫಿಕ್ ಹೊಂದಿರುವ ನಗರ ಎಂದು ಕುಖ್ಯಾತಿಗೆ ಪಾತ್ರವಾದ ಬೆಂಗಳೂರು
ಪ್ರಮುಖ ಸುದ್ದಿ

ಪ್ರಪಂಚದಲ್ಲಿ ಸೆಕೆಂಡ್‌, ದೇಶದಲ್ಲಿ ಮೊದಲು: ಅತೀ ಹೆಚ್ಚು ಟ್ರಾಫಿಕ್ ಹೊಂದಿರುವ ನಗರ ಎಂದು ಕುಖ್ಯಾತಿಗೆ ಪಾತ್ರವಾದ ಬೆಂಗಳೂರು

January 22, 2026
SBIನಲ್ಲಿ ಉಚಿತ ಸೇವೆ ಬಂದ್: ಫೆಬ್ರವರಿ 15 ರಿಂದ ಹಣ ವರ್ಗಾವಣೆಗೆ ಶುಲ್ಕ ಮತ್ತು ಜಿಎಸ್‌ಟಿ ಅನ್ವಯ
ಪ್ರಮುಖ ಸುದ್ದಿ

SBIನಲ್ಲಿ ಉಚಿತ ಸೇವೆ ಬಂದ್: ಫೆಬ್ರವರಿ 15 ರಿಂದ ಹಣ ವರ್ಗಾವಣೆಗೆ ಶುಲ್ಕ ಮತ್ತು ಜಿಎಸ್‌ಟಿ ಅನ್ವಯ

January 22, 2026
ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಯು – ಟರ್ನ್ ಹೊಡೆದ ಟ್ರಂಪ್: ಯುರೋಪಿನ 8 ರಾಷ್ಟ್ರಗಳ ಮೇಲೆ ಶೇ.10ರಷ್ಟು ಸುಂಕ ಹೇರಿಕೆ ಹಿಂಪಡೆಯಲು ನಿರ್ಧಾರ
ದೇಶ-ವಿದೇಶ

ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಯು – ಟರ್ನ್ ಹೊಡೆದ ಟ್ರಂಪ್: ಯುರೋಪಿನ 8 ರಾಷ್ಟ್ರಗಳ ಮೇಲೆ ಶೇ.10ರಷ್ಟು ಸುಂಕ ಹೇರಿಕೆ ಹಿಂಪಡೆಯಲು ನಿರ್ಧಾರ

January 22, 2026
ನಮ್ಮ ಮೆಟ್ರೋ ಹಂತ 3A ಯೋಜನೆಯ ಡಿಪಿಆರ್ ಸಿದ್ಧ, ಕೇಂದ್ರದ ಗ್ರೀನ್ ಸಿಗ್ನಲ್ ಗೆ ನಿರೀಕ್ಷೆ
ಪ್ರಮುಖ ಸುದ್ದಿ

ನಮ್ಮ ಮೆಟ್ರೋ ಹಂತ 3A ಯೋಜನೆಯ ಡಿಪಿಆರ್ ಸಿದ್ಧ, ಕೇಂದ್ರದ ಗ್ರೀನ್ ಸಿಗ್ನಲ್ ಗೆ ನಿರೀಕ್ಷೆ

January 22, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.