Visit Channel

5 ವರ್ಷದ ಪ್ರೀತಿಗೆ ಉಂಗುರ ತೊಡಿಸಿದ RCB ಪ್ಲೇಯರ್ ಗ್ಲೆನ್ ಮ್ಯಾಕ್ಸ್‌ವೆಲ್!

glen maxwell

ಆಸ್ಟ್ರೇಲಿಯಾ(Australia) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ತಂಡದ ಸ್ಟಾರ್ ಆಲ್‌ರೌಂಡರ್(All-rounder) ಗ್ಲೆನ್ ಮ್ಯಾಕ್ಸ್‌ವೆಲ್(Glen Maxwell), ಭಾರತೀಯ ಮೂಲದ ವಿನಿ ರಾಮನ್(Vini Raman) ಅವರನ್ನು ಖಾಸಗಿ ಸಮಾರಂಭದಲ್ಲಿ ಮದುವೆಯಾಗಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ತಮ್ಮ ಪತ್ನಿ ವಿನಿ ರಾಮನ್ ಅವರ ಜೊತೆಗಿನ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಗಳಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

married

ದಂಪತಿಗಳು ತಮ್ಮ ಉಂಗುರಗಳೊಂದಿಗೆ ಕೈಯನ್ನು ಹಿಡಿದಿರುವುದು ಫೋಟದಲ್ಲಿ ಕಾಣಬಹುದು. ವಿನಿ ರಾಮನ್ ಅವರು ಪೋಸ್ಟ್‌ ನಲ್ಲಿ “ಪ್ರೀತಿಯು ಪೂರ್ಣಗೊಳ್ಳುವ ಹುಡುಕಾಟವಾಗಿದೆ ಮತ್ತು ನಿಮ್ಮೊಂದಿಗೆ ನಾನು ಸಂಪೂರ್ಣತೆಯನ್ನು ಅನುಭವಿಸುತ್ತೇನೆ” ಎಂದು ಬರೆದುಕೊಳ್ಳುವ ಮೂಲಕ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ. 18.3.2022 ರಂದು ತಮ್ಮ ಸಂಬಂಧದ ಬಗ್ಗೆ ಖಚಿತ ಪಡಿಸಲು ಪರೋಕ್ಷವಾಗಿ ಹೃದಯ, ನಗುವಿನ, ಮುತ್ತುಕೊಡುತ್ತಿರುವ ಎಮೋಜಿಗಳನ್ನು ಹಾಕುವ ಮೂಲಕ ಸುಳಿವು ನೀಡಿದ್ದರು.

glen maxwell


ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ವಿನಿ ರಾಮನ್ ಕಳೆದ 2 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ಫೆಬ್ರವರಿ 2020 ರಲ್ಲಿ ಇನ್ಸ್ಟಾಗ್ರಾಂ ಪೋಸ್ಟ್‌ಗಳ ಮೂಲಕ ದಂಪತಿಗಳು ತಮ್ಮ ನಿಶ್ಚಿತಾರ್ಥವನ್ನು ಘೋಷಿಸಿದ್ದರು. ದಂಪತಿಗಳ ಫೋಟೋಗಳು ಮೊದಲು 2017 ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಾಗಿ ಹರಿದಾಡಿ ಸುದ್ದಿಯಾಗಿತ್ತು. ಮ್ಯಾಕ್ಸ್‌ವೆಲ್ 2019 ರಲ್ಲಿ ಆಸ್ಟ್ರೇಲಿಯನ್ ಕ್ರಿಕೆಟ್ ಅವಾರ್ಡ್ಸ್‌ನಲ್ಲಿ ತಮ್ಮ ಪ್ರೇಯಸಿ ರಾಮನ್‌ ಅವರೊಂದಿಗೆ ಕಾಣಿಸಿಕೊಂಡರು.

royal challengers bengaluru

ವಿನಿ ರಾಮನ್ ಅವರು ಮೆಲ್ಬೋರ್ನ್ಗೆ ಸಂಬಂಧಿಸಿದ ಕಂಪನಿಗೆ ಫಾರ್ಮಸಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ತಮಿಳು ಕುಟುಂಬ ಮೂಲದವರಾಗಿದ್ದು, ಆಸ್ಟ್ರೇಲಿಯಾದ ನಗರದಲ್ಲಿ ನೆಲೆಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ೧೫ನೇ ಆವೃತ್ತಿ ಇನ್ನೇನು ಆರಂಭಗೊಳುತ್ತಿದ್ದು, ಗ್ಲೆನ್ ಮ್ಯಾಕ್ಸ್‌ವೆಲ್ RCB ಪರ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ ಆರ್.ಸಿ.ಬಿ ಅಭಿಮಾನಿಗಳು. RCB ಪಂಜಾಬ್ ಕಿಂಗ್ಸ್ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಇದೇ 27ರ ಭಾನುವಾರದಂದು ಮುಂಬೈನ ಪಾಟೀಲ್ ಕ್ರೀಡಾಂಗಣದಲ್ಲಿ ಆಡಲಿದೆ.

Latest News

China Ship
ದೇಶ-ವಿದೇಶ

ಶ್ರೀಲಂಕಾ ಬಂದರಿನಲ್ಲಿ ಚೀನಾದ ಹಡಗು ; ಭಾರತದ ಕಳವಳಕ್ಕೆ 5 ಕಾರಣಗಳು ಇಲ್ಲಿವೆ!

ಮೊದಲಿನಿಂದಲೂ ಈ ಹಡಗು ಶ್ರೀಲಂಕಾ ಬಂದರಿಗೆ ಬರುವುದನ್ನು ಭಾರತ ತೀವ್ರವಾಗಿ ವಿರೋಧಿಸಿತ್ತು. ಭಾರತದ ಕಳವಳಕ್ಕೆ ಪ್ರಮುಖ 5 ಕಾರಣಗಳೆಂದರೆ,

bjp
ರಾಜಕೀಯ

ಕಾಂಗ್ರೆಸ್ಸಿಗರಿಗೇಕೆ ಜಿಹಾದಿಗಳ ಮೇಲೆ ಇಷ್ಟೊಂದು ಪ್ರೀತಿ? : ಬಿಜೆಪಿ ಪ್ರಶ್ನೆ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಕ್ಕೆ ಮಸಿ ಬಳಿಯಲು ಯತ್ನಿಸಿದ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಲಾಗಿದೆ ಎಂದು ಬಿಜೆಪಿ ತಿಳಿಸಿದೆ.

Pingali
ಮಾಹಿತಿ

ನಮ್ಮ ರಾಷ್ಟ್ರಧ್ವಜವನ್ನು ನಿರ್ಮಿಸಿದ ಪಿಂಗಳಿ ವೆಂಕಯ್ಯ, ಮೊದಲು ಬ್ರಿಟಿಷ್ ಸೈನ್ಯದಲ್ಲಿದ್ದರು ; ಇಲ್ಲಿದೆ ಓದಿ ಅಚ್ಚರಿಯ ಮಾಹಿತಿ

ದೇಶಕ್ಕೊಂದು ಧ್ವಜಕೊಟ್ಟು 100 ವರ್ಷ ಕಳೆದರೂ ಪಿಂಗಳಿ ಅವರ ನೆನಪು ಅಜರಾಮರವಾಗಿದೆ. ಪಿಂಗಳಿ ವೆಂಕಯ್ಯ ಅವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಮುಂದೆ ಓದಿ.