- ಸ್ಮಾರ್ಟ್ ವಾಟರ್ ನೆಟ್‌ವರ್ಕ್ಸ್ ಫೋರಂ (SWAN) ಸದಸ್ಯತ್ವ ಪಡೆದ ಭಾರತದ ಮೊದಲ ಜಲಮಂಡಳಿ
- ಐಎಫ್ಎಟಿ ಇಂಡಿಯಾ 2025 ವೇದಿಕೆಯಲ್ಲಿ ಘೋಷಣೆ
- ತಂತ್ರಜ್ಞಾನ ಆಧಾರಿತ ನೀರು ನಿರ್ವಹಣೆಗೆ ಹೊಸ ಆಯಾಮ.
Bangalore: ಬೆಂಗಳೂರು ಜಲಮಂಡಳಿ (BWSSB) ಯ ಸಾಧನೆಗಳ ಪಟ್ಟಿ ಇನ್ನಷ್ಟು ದೊಡ್ಡದಾಗಿದೆ. (global recognition bangalore bwssb)
ನಗರಕ್ಕೆ ಶುದ್ಧ ಮತ್ತು ನಿರಂತರ ನೀರು ಸರಬರಾಜು ಮಾಡಲು ತಂತ್ರಜ್ಞಾನ ಆಧಾರಿತ ಕ್ರಮಗಳನ್ನು ಅಳವಡಿಸಿಕೊಂಡಿರುವ ಈ ಸಂಸ್ಥೆ ಈಗ ವಿಶ್ವಮಟ್ಟದ “ಸ್ಮಾರ್ಟ್ ವಾಟರ್ ನೆಟ್‌ವರ್ಕ್ಸ್ ಫೋರಂ” (SWAN) ಸದಸ್ಯತ್ವ ಪಡೆದ ಭಾರತದ ಮೊದಲ ನೀರು ಸರಬರಾಜು ಸಂಸ್ಥೆ ಆಗಿ ಹೊರಹೊಮ್ಮಿದೆ.

ಈ ಸದಸ್ಯತ್ವ ಘೋಷಣೆ ಐಎಫ್ಎಟಿ ಇಂಡಿಯಾ 2025 (IFAT India 2025) ಎಂಬ ದಕ್ಷಿಣ ಏಷ್ಯಾದ ಅತ್ಯಂತ ಪ್ರಮುಖ ಪರಿಸರ ತಂತ್ರಜ್ಞಾನ ವೇದಿಕೆಯ ಸಂದರ್ಭದಲ್ಲಿ ನಡೆಯಿತು.
ಈ ವೇದಿಕೆ ಪರಿಸರ, ನೀರು, ತ್ಯಾಜ್ಯ ನಿರ್ವಹಣೆ ಮತ್ತು ಶಾಶ್ವತ ಅಭಿವೃದ್ಧಿಯ ಕುರಿತು ನೂತನ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಪ್ರದರ್ಶನದ ಪ್ರಮುಖ ವೇದಿಕೆ ಆಗಿದೆ. (global recognition bangalore bwssb)
ಮುಂಬೈನಲ್ಲಿ ನಡೆದ ಈ ಪ್ರಮುಖ ಕಾರ್ಯಕ್ರಮದಲ್ಲಿ ಹಲವು ರಾಷ್ಟ್ರಗಳಿಂದ ತಜ್ಞರು, ನೀರಿನ ಕ್ಷೇತ್ರದ ಅಧಿಕಾರಿಗಳು ಹಾಗೂ ಪರಿಸರ ತಜ್ಞರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಬೆಂಗಳೂರು ಜಲಮಂಡಳಿಯ ಅಧ್ಯಕ್ಷ ಡಾ. ವಿ. ರಾಮ ಪ್ರಸಾದ್ ಮನೋಹರ್ (Dr. V. Ram Prasad Manohar) , ಕೇಂದ್ರ ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ರೂಪಾ ಮಿಶ್ರಾ, ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ ಅಭಿಯಾನದ ಮಹಾನಿರ್ದೇಶಕ ರಾಜೀವ್ ಕುಮಾರ್ ಮಿತಲ್ ಹಾಗೂ ಆಸ್ಟ್ರೇಲಿಯಾ, ಸ್ವೀಡನ್, ನಾರ್ವೆ ಮತ್ತು ನೆದರ್‌ಲ್ಯಾಂಡ್ಸ್‌ನ ಜಾಗತಿಕ ನೀರು ರಾಯಭಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ SWAN ಸದಸ್ಯತ್ವ ಘೋಷಣೆ ನಡೆಯಿತು ಮತ್ತು ಅದರೊಂದಿಗೆ ಬೆಂಗಳೂರು ಜಲಮಂಡಳಿ ಅಧಿಕೃತವಾಗಿ ಈ ಅಂತರರಾಷ್ಟ್ರೀಯ ಜಾಲದ ಭಾಗವಾಯಿತು.
ಈ ಹೊಸ ಸದಸ್ಯತ್ವದೊಂದಿಗೆ, ಬೆಂಗಳೂರು ಜಲಮಂಡಳಿಗೆ ವಿಶ್ವದ ಶ್ರೇಷ್ಠ ನೀರು ನಿರ್ವಹಣಾ ಸಂಸ್ಥೆಗಳಿಂದ ನವೀನ ತಂತ್ರಜ್ಞಾನಗಳು, ನವೀನ ನೀತಿಗಳು ಹಾಗೂ ಅನುಭವಗಳ ಹಂಚಿಕೆ ಪಡೆಯುವ ಅವಕಾಶ ದೊರೆಯಲಿದೆ.
SWAN ಸದಸ್ಯತ್ವದಿಂದ ಜಲಮಂಡಳಿ ತನ್ನ ಸ್ಮಾರ್ಟ್ ವಾಟರ್ ಮ್ಯಾನೇಜ್ಮೆಂಟ್ (Smartwater Management) ವ್ಯವಸ್ಥೆ, ಲೀಕ್ ಪತ್ತೆ ತಂತ್ರಜ್ಞಾನ, ಸ್ಮಾರ್ಟ್ ಮೀಟರಿಂಗ್, ಮತ್ತು ರಿಯಲ್ ಟೈಮ್ ನೀರು ವಿತರಣಾ ನಿಯಂತ್ರಣ ವ್ಯವಸ್ಥೆಗಳಂತಹ ನವೀಕರಣಗಳನ್ನು ವೇಗವಾಗಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ.
ಬ್ರ್ಯಾಂಡ್ ಬೆಂಗಳೂರು ಅಭಿಯಾನದ ಭಾಗವಾಗಿ ಜಾಗತಿಕ ಮಟ್ಟದ ಪಾಲುದಾರಿಕೆಯನ್ನು ಸಾಧಿಸುವುದು ಹಾಗೂ ಗುಣಮಟ್ಟದ ಸೇವೆಯನ್ನು ಅಳವಡಿಸಿಕೊಳ್ಳುವುದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K.Shivakumar) ಅವರ ಮುಖ್ಯ ಗುರಿಯಾಗಿದೆ.
SWAN ಸದಸ್ಯತ್ವವು ಅದೇ ದೃಷ್ಟಿಕೋಣದ ಸಾರ್ಥಕತೆ. ಇದು ಬೆಂಗಳೂರಿನ ನೀರು ಸರಬರಾಜು ವ್ಯವಸ್ಥೆಗೆ ಹೊಸ ಯುಗದ ಆರಂಭ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮ ಪ್ರಸಾದ್ ಮನೋಹರ್ ಹೇಳಿದ್ದಾರೆ.