Beware of Gas Bomb: Go Gas Bunks are Running without License in the State.
Tumakuru: ನಮ್ಮ ರಾಜ್ಯದಲ್ಲಿ 50ಕ್ಕೂ ಹೆಚ್ಚು ಗ್ಯಾಸ್ ಬಂಕ್ಗಳು (Gas Bunk) ಲೈಸೆನ್ಸ್ ಇಲ್ಲದೆಯೇ ಕಾರ್ಯ ನಿರ್ವಹಿಸುತ್ತಿದ್ದು, ಲೈಸೆನ್ಸ್ ಇಲ್ಲದೆ ಒಂದು ಕ್ಷಣವೂ ಗ್ಯಾಸ್ ಬಂಕ್ಗಳನ್ನು ನಡೆಸುವ ಹಾಗಿಲ್ಲ. ಯಾಕಂದ್ರೆ ಅದು ಅಷ್ಟು ಅಪಾಯಕಾರಿ, ಅದೊಂದು ಜೀವಂತ ಬಾಂಬ್ ಇದ್ದ ಹಾಗೆ. ಆದರೆ ಭ್ರಷ್ಟ ಅಧಿಕಾರಿಗಳು ಕಂಪೆನಿಯವರಿಂದ ಲಂಚ ತಿಂದು ಜನರ ಪ್ರಾಣಕ್ಕೆ ಕುತ್ತು ತರುತ್ತಿದ್ದಾರೆ. ಈ ಕಂಪೆನಿಗಳ ಕಳ್ಳಾಟ ಹಾಗೂ ಭ್ರಷ್ಟ ಅಧಿಕಾರಿಗಳ ನಿರ್ಲಜ್ಜ ನಿರ್ಲಕ್ಷ್ಯವನ್ನು ಜನರಿಗೆ ತೋರಿಸಬೇಕು ಮತ್ತು ಸರ್ಕಾರಕ್ಕೆ ಈ ಹಗರಣದ ಕರಾಳತೆಯನ್ನು ತೋರಿಸಬೇಕು ಎನ್ನುವ ಕಾರಣಕ್ಕೆ ವಿಜಯಟೈಮ್ಸ್ (Vijayatimes) ಲೈಸೆನ್ಸ್ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಗ್ಯಾಸ್ ಬಂಕ್ಗಳ ರಿಯಾಲಿಟಿ ಚೆಕ್ಗೆ ಇಳಿಯಿತು.
ಮೊದಲಿಗೆ ನಮ್ಮ ತಂಡ ಹೊರಟಿದ್ದು, ತುಮಕೂರು (Tumkur) ಜಿಲ್ಲೆಗೆ. ಈ ಜಿಲ್ಲೆಯ ಕೆಲ ಗ್ಯಾಸ್ ಬಂಕ್ಗಳ ಕಳ್ಳಾಟ ಕೇಳಲೇ ಬೇಡಿ. ಇವರ ಅಹಂಕಾರ, ಕಾನೂನಿನ ಬಗ್ಗೆ ಉಡಾಫೆ ಉತ್ತರ. ಇದು ಎಲ್ಲಾ ಗೋ ಗ್ಯಾಸ್ ಬಂಕ್ಗಳ ಮ್ಯಾನೇಜರ್ಗಳ ನಾಟಕ. ಲೈಸೆನ್ಸ್ ಇಲ್ಲದೆಯೇ ಬಂಕ್ ನಡೆಸುತ್ತಿದ್ದೇವೆ ಅಂತ ಗೊತ್ತಿದ್ರೂ ಯಾರಾದರೂ ಬಂದು ಕೇಳಿದರೆ, ನಮ್ಮಲ್ಲಿ ಲೈಸೆನ್ಸ್ (License) ಇದೆ ಅಂತ ಸುಳ್ಳು ಹೇಳೋದು, ಸ್ವಲ್ಪ ಲಾಜಿಕ್ ಪ್ರಶ್ನೆ ಕೇಳಿದ್ರೆ ಲೈಸೆನ್ಸ್ ಬೆಂಗಳೂರಿನ ಹೆಡ್ ಆಫೀಸ್ನಲ್ಲಿದೆ ಅಂತ ಸುಳ್ಳು ಹೇಳುತ್ತಿದ್ದರು. ಇವರ ಅಸಲಿಯತ್ತು ಚೆಕ್ ಮಾಡಿದ್ರೆ ಹಣೆಬರಹವೆಲ್ಲಾ ಹೊರಗೆ ಬರುತ್ತೆ.
ಯಾವಾಗ ಈ ತಿಪಟೂರು ಗೋಗ್ಯಾಸ್ ಬಂಕ್ (Go gas Bunk) ಮ್ಯಾನೇಜರ್ ನಾಗೇಶನ ತಲೆಹರಟೆ ಮಿತಿ ಮೀರಿತೋ ನಾವು ಆಗ ಸೀದಾ ತಿಪಟೂರು ತಹಶೀಲ್ದಾರ್ ಕಚೇರಿಗೆ ತೆರಳಿದೆವು. ಅಲ್ಲಿ ತಹಶೀಲ್ದಾರ್ ಅವರನ್ನು ಭೇಟಿಯಾಗಿ ಈ ಗೋಗ್ಯಾಸ್ ಬಂಕ್ನ ಸತ್ಯಾಸತ್ಯತೆ ಬಿಚ್ಚಿಟ್ಟೆವು. ನಮ್ಮ ದೂರನ್ನು ಅತ್ಯಂತ ಪ್ರಾಮಾಣಿಕವಾಗಿ ಆಲಿಸಿದ ತಿಪಟೂರು (Tipatur) ತಹಶೀಲ್ದಾರ್ ಅವರು ತಕ್ಷಣ ಕಾರ್ಯಪ್ರವೃತ್ತರಾದರು. ಈ ಗೋಗ್ಯಾಸ್ ಬಂಕ್ನ ಬಗ್ಗೆ ತನಿಖೆ ಮಾಡಲು ಆದೇಶ ನೀಡಿ, ತಮ್ಮ ಅಧಿಕಾರಿಗಳ ತಂಡವನ್ನು ಫೀಲ್ಡ್ಗೆ ಕಳುಹಿಸಿ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸೂಚನೆ ನೀಡಿದರು. ಅಧಿಕಾರಿಗಳ ತಂಡ ಗೋಗ್ಯಾಸ್ ಬಂಕ್ಗೆ ಭೇಟಿ ಕೊಟ್ಟು ದಾಖಲೆ ಪರಿಶೀಲನೆ ಮಾಡಿದರು. ಆಗ ಬಯಲಾಯ್ತು ನೋಡಿ ಈ ಬಂಕ್ನ ಅಸಲಿ ಮುಖ.
Go Gas Bunks Running without License in State
Tumakuru: More than 50 gas bunks are functioning without license in our state, gas bunks should not be operated even for a moment without a license. Because it is so dangerous, it is like a live bomb. But the corrupt officers are taking bribes from the company and killing people’s lives. Vijayatimes took a reality check on the gas banks operating without a license to show the people the scams of these companies and the blatant negligence of the corrupt officials and show the government the darkness of this scam.
First, our team left for Tumkur district. Don’t listen to the scam of some gas banks in this district. His ego, the law is the answer. This is the drama of managers of all go gas bunks. If someone comes and asks if they know that they are running a bunk without a license, They lied that we have a license, and if I asked them a logical question, they lied that the license is at the head office in Bangalore. If their authenticity is checked, all the destiny will come out.
When this Tipatur Gogas Bunk (Go gas Bunk) manager Nagesh’s talk was beyond the limit, we went to Seeda Tipatur Tahsildar office. We met the Tehsildar there and revealed the truth of this Gogas bank. Tipatur Tahsildar listened to our complaint very sincerely He immediately went into action. He ordered to investigate this Gogas bunk and sent a team of his officers to the field to verify the authenticity. A team of officials visited the Gogas bank and checked the records. Then the real face of this bunk was revealed.