- ಗೋವಾ ನೈಟ್ ಕ್ಲಬ್ ಅಗ್ನಿ ದುರಂತದಲ್ಲಿ ಕನ್ನಡಿಗ (Goa nightclub fire accident) ಇಶಾಕ್ ದುರ್ಮರಣ
- ನೈಟ್ ಕ್ಲಬ್‌ನ ಜನರಲ್ ಮ್ಯಾನೇಜರ್ ಸೇರಿದಂತೆ ನಾಲ್ವರು ಸಿಬ್ಬಂದಿಯ ಬಂಧನ
- ಇನ್ಮುಂದೆ ನೈಟ್‌ಕ್ಲಬ್‌ಗಳಲ್ಲಿ ಸುರಕ್ಷತಾ ಮಾನದಂಡಗಳು ಕಡ್ಡಾಯ
Goa: ಉತ್ತರ ಗೋವಾದ ಅರ್ಪೋರಾ ಪ್ರದೇಶದಲ್ಲಿ ಸಂಭವಿಸಿದ ಭೀಕರ ಅಗ್ನಿ (Goa nightclub fire accident) ದುರಂತವು ದೇಶವನ್ನು ಬೆಚ್ಚಿ ಬೀಳಿಸಿದೆ.
ಶನಿವಾರ ತಡರಾತ್ರಿ ನಡೆದ ಈ ನೋವಿನ ಘಟನೆ ಕೇವಲ ಸಿಲಿಂಡರ್ (Cylinder) ಸ್ಫೋಟದಿಂದ ಆರಂಭವಾದರೂ, ಕೆಲವೇ
ಕ್ಷಣಗಳಲ್ಲಿ ಮಹಾ ಟ್ರ್ಯಾಜಿಡಿಯಾಗಿ ರೂಪಾಂತರಗೊಂಡಿತು.
ಜನಪ್ರಿಯ ‘ಬಿರ್ಚ್ ಬೈ ರೋಮಿಯೋ ಲೇನ್’ (Birch by Romeo Lane) ನೈಟ್‌ಕ್ಲಬ್‌ನಲ್ಲಿ ನೂರಾರು ಮಂದಿ ಪ್ರವಾಸಿಗರು
‘ಬಾಲಿವುಡ್ ಬ್ಯಾಂಗರ್ ನೈಟ್’ ಕಾರ್ಯಕ್ರಮವನ್ನು ಆನಂದಿಸುತ್ತಿದ್ದ ವೇಳೆ ಛಾವಣಿಯ ಮೇಲ್ಭಾಗದಲ್ಲಿ ಕಾಣಿಸಿಕೊಂಡ
ಸಣ್ಣ ಕಿಡಿ ವೇಗವಾಗಿ ದೊಡ್ಡ ಬೆಂಕಿಯಾಗಿತು.

ಕೇವಲ 40 ಸೆಕೆಂಡ್‌ಗಳಲ್ಲಿ ಬೆಂಕಿ ಇಡೀ ವೇದಿಕೆಯನ್ನು ಆವರಿಸಿಕೊಂಡು, ಅಲ್ಲಿ ಇದ್ದ ಹಲವರ ನರಳಾಟಕ್ಕೆ ಕಾರಣವಾಯಿತು.
ಇನ್ನು ಈ ದುರಂತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Goa nightclub fire accident) ವ್ಯಾಪಕವಾಗಿ ಹರಿದಾಡುತ್ತಿದ್ದು, ಘಟನೆ ನಡೆದ ಕ್ಷಣಗಳನ್ನು ನೋಡುವುದೇ ಅತೀವ ಭಯಾನಕವಾಗಿದೆ.
ವೇದಿಕೆಯ ಮೇಲೆ ನೃತ್ಯ ಮಾಡುತ್ತಿದ್ದ ಕಲಾವಿದೆ ‘ಮೆಹಬೂಬಾ ಓ ಮೆಹಬೂಬಾ’ ಹಾಡಿಗೆ ನೃತ್ಯಿಸುತ್ತಿದ್ದಾಗ, ಆಕೆಯ ಹಿಂದೆ ಛಾವಣಿಯಲ್ಲಿ ಬೆಂಕಿ ಹೊತ್ತಿಕೊಳ್ಳುವುದನ್ನು ಕಾಣಬಹುದು.
ಸಂಗೀತಗಾರರ ಮೇಲೂ ಕಿಡಿಗಳು ಬೀಳುತ್ತಿದ್ದಂತೆ, ಸಿಬ್ಬಂದಿ ತಕ್ಷಣ ಎಚ್ಚರಗೊಂಡು ಉಪಕರಣಗಳನ್ನು ತಪ್ಪಿಸಲು ಪ್ರಯತ್ನಿಸಿದರು.
ಆದರೆ ಬೆಂಕಿಯು ಶರವೇಗದಲ್ಲಿತ್ತು ಹಾಗಾಗಿ ಕೆಲವೇ ಕ್ಷಣದಲ್ಲಿ ಕ್ಲಬ್ ತುಂಬಾ ಹೊಗೆಯಿಂದ ಆವರಿಸಲ್ಪಟ್ಟಿತು.
ಪ್ರವೇಶ ಮತ್ತು ನಿರ್ಗಮನ ದ್ವಾರ ಅತ್ಯಂತ ಕಿರಿದಾಗಿದ್ದರಿಂದ ಜನರು ಹೊರಬರೋಕೆ ಹೋರಾಡಬೇಕಾಯಿತು.
ಕೆಲವರು ಭೀತಿಯಿಂದ ಕೆಳಮಹಡಿಯ ಅಡುಗೆಮನೆಗೆ ಓಡಿ ಅಲ್ಲಿ ಸಿಕ್ಕಿಹಾಕಿಕೊಂಡರು. ಅಗ್ನಿಶಾಮಕ ವಾಹನಗಳು ಒಳಬರುವ
ಮಾರ್ಗಗಳಲ್ಲಿ ಜಾಗ ಇಲ್ಲದ ಕಾರಣ 400 ಮೀಟರ್ ದೂರ ನಿಲ್ಲಿಸಬೇಕಾಯಿತು, ಇದರಿಂದ ರಕ್ಷಣಾ ಕಾರ್ಯಾಚರಣೆ ಹೆಚ್ಚು ಕಠಿಣವಾಯಿತು.
ಇನ್ನು ಈ ದುರ್ಘಟನೆಯಲ್ಲಿ 25 ಜನರು ಪ್ರಾಣ ಕಳೆದುಕೊಂಡಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.
ಮೃತರಲ್ಲಿ ಹಲವರು ಸಿಬ್ಬಂದಿ, ಕೆಲವರು ಪ್ರವಾಸಿಗರು, ಮತ್ತು ದುಃಖಕರ ವಿಷಯ ಎಂದರೆ ಬೆಂಗಳೂರು ಮೂಲದ
ಯುವಕ ಇಶಾಕ್ ಕೂಡಾ ಅವರಲ್ಲೊಬ್ಬರು.
ಇಶಾಕ್ ಮೊದಲಿಗೆ ಕ್ಲಬ್‌ನಿಂದ ಹೊರಬಂದಿದ್ದರೂ, ತನ್ನ ಮೊಬೈಲ್ ಒಳಗೆ ಬಿಟ್ಟಿದ್ದ ಕಾರಣ ಮರಳಿ ಹೋಗಿ, ದಟ್ಟ ಹೊಗೆಯಲ್ಲಿ ಸಿಕ್ಕಿಹಾಕಿಕೊಂಡು ಸಜೀವ ದಹನವಾಗಿದ್ದಾರೆ.
ಇನ್ನು ಜಾರ್ಖಂಡ್, ಅಸ್ಸಾಂ, ಉತ್ತರಾಖಂಡ್, ಹರಿಯಾಣ (Haryana) , ಪಶ್ಚಿಮ ಬಂಗಾಳ ಮತ್ತು ಕರ್ನಾಟಕ ಸೇರಿದಂತೆ ವಿವಿಧ
ರಾಜ್ಯಗಳ ಜನರು ಈ ದುರಂತದಲ್ಲಿ ಸಾವನ್ನಪ್ಪಿರುವುದು ತಿಳಿದುಬಂದಿದೆ.
ಮೃತದೇಹಗಳ ಗುರುತಿಸುವಿಕೆಗೆ ಪೊಲೀಸರು ಶ್ರಮಿಸುತ್ತಿದ್ದು, ಪಣಜಿಯ ಜಿಎಂಸಿಎಚ್ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಈಗಾಗಲೇ ಬಗ್ಗೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ (Pramod Sawant) ಪತ್ರಿಕಾಗೋಷ್ಠಿ ನಡೆಸಿ, ಮೃತರ ಕುಟುಂಬಗಳಿಗೆ
ಗೋವಾ ಸರ್ಕಾರದಿಂದ ₹5 ಲಕ್ಷ, ಹಾಗೂ ಪ್ರಧಾನಮಂತ್ರಿಗಳ ಪರಿಹಾರ ನಿಧಿಯಿಂದ ₹2 ಲಕ್ಷ ನೀಡುವುದಾಗಿ ಘೋಷಿಸಿದ್ದಾರೆ.
ಗಾಯಾಳುಗಳಿಗೆ ತಲಾ ₹50,000 ನೀಡಲಾಗುವುದು. ಮೃತದೇಹಗಳನ್ನು ಸಂಬಂಧಿಕರ ಮನೆಗಳಿಗೆ ಕಳುಹಿಸುವ ವೆಚ್ಚವನ್ನೂ ಸರ್ಕಾರವೇ
ಭರಿಸುವುದಾಗಿ ತಿಳಿಸಿದ್ದಾರೆ. ಈ ಘಟನೆ ನಂತರ ರಾಜ್ಯದ ಎಲ್ಲಾ ನೈಟ್‌ಕ್ಲಬ್‌ಗಳಲ್ಲಿ ಸುರಕ್ಷತಾ ಆಡೆಟ್ ನಡೆಸಲಾಗುವುದು ಎಂದು ಹೇಳಿದ್ದಾರೆ.
ಕ್ಲಬ್ ಮಾಲೀಕರಾದ ಸೌರಭ್ ಲುಥರಾ ಮತ್ತು ಗೌರವ್ ಲುಥರಾ ಸೇರಿ ನಾಲ್ವರು ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಈಗಾಗಲೇ ಕೆಲವರನ್ನು ವಶಕ್ಕೆ ಪಡೆದು ತನಿಖೆ ನಡೆಯುತ್ತಿದೆ. ಸಾರ್ವಜನಿಕರು ಸುರಕ್ಷತಾ ನಿಯಮಗಳನ್ನು ಪಾಲಿಸಬೇಕೆಂಬ ಮತ್ತು
ಕ್ಲಬ್‌ಗಳು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಅನುಸರಿಸಬೇಕೆಂಬ ಚರ್ಚೆ ಎಲ್ಲೆಡೆ ಆರಂಭವಾಗಿದೆ.
ಇದನ್ನು ಓದಿ : ಬೆಂಗಳೂರು ವಾಯು ಮಾಲಿನ್ಯ ನಿಯಂತ್ರಣಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ತುರ್ತು ಕ್ರಮ : ತಜ್ಞರ ಸಮಿತಿ ರಚನೆಗೆ ಸೂಚನೆ