ಜಾಗತಿಕ ತಾಪಮಾನ(Global Warming) ಏರಿಕೆಯಿಂದಾಗಿ ಹಿಮಾಲಯದ ಹಿಮನದಿಗಳು ಅಸಾಧಾರಣ ಪ್ರಮಾಣದಲ್ಲಿ ಕರಗುತ್ತಿವೆ, ಏಷ್ಯಾದ ಲಕ್ಷಾಂತರ ಜನರ ನೀರಿನ ಪುರೈಕೆಗೆ ತೊಂದರೆಯಾಗಲಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ಹಿಮಾಲಯದಲ್ಲಿನ ಹಿಮನದಿಗಳು ಕಳೆದ ಕೆಲವು ದಶಕಗಳಲ್ಲಿ 400-700 ವರ್ಷಗಳ ಹಿಂದಿನ ಪ್ರಮುಖ ಹಿಮನದಿ ವಿಸ್ತರಣೆಯಿಂದ ಸರಾಸರಿಗಿಂತ 10 ಪಟ್ಟು ಹೆಚ್ಚು ವೇಗವಾಗಿ ಹಿಮವನ್ನು ಕಳೆದುಕೊಂಡಿವೆ. ಇದನ್ನು ಲಿಟಲ್ ಐಸ್ ಏಜ್ ಎಂದು ಕರೆಯಲಾಗುತ್ತದೆ ಎಂದು ನೇಚರ್ ಗ್ರೂಪ್ ಆಫ್ ಜರ್ನಲ್‌ಗಳ ವಿಮರ್ಶೆ ಮಾಡಿದ ಜರ್ನಲ್ ಅಧ್ಯಯನವು ತಿಳಿಸಿದೆ. UKಯ ಲೀಡ್ಸ್ ಸ್ಕೂಲ್ ಆಫ್ ಜಿಯಾಗ್ರಫಿಯ ಸಂಶೋಧಕರ ನೇತೃತ್ವದ ಅಧ್ಯಯನವು, 14,798 ಹಿಮಾಲಯದ ಹಿಮನದಿಗಳು ಲಿಟಲ್ ಐಸ್ ಏಜ್‌ಗೆ ಹೋಲಿಸಿದರೆ ಸುಮಾರು 40% ನಷ್ಟು ಪ್ರದೇಶವನ್ನು ಕಳೆದುಕೊಂಡಿವೆ ಎಂದು ಕಂಡುಹಿಡಿದಿದೆ.
ಕಳೆದ ಶತಮಾನಗಳ ಸರಾಸರಿ ದರಕ್ಕಿಂತ ಕನಿಷ್ಠ 10 ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಹಿಮಾಲಯದ ಹಿಮನದಿಗಳಿಂದ ಈಗ ಮಂಜುಗಡ್ಡೆ ಕಳೆದುಹೋಗುತ್ತಿದೆ ಎಂದು ನಮ್ಮ ಸಂಶೋಧನೆಗಳು ಸ್ಪಷ್ಟವಾಗಿ ತೋರಿಸುತ್ತವೆ ಎಂದು ಲೀಡ್ಸ್ ವಿಶ್ವವಿದ್ಯಾಲಯದ ಸಹ ಲೇಖಕ ಜೊನಾಥನ್ ಕ್ಯಾರಿವಿಕ್ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಪಶ್ಚಿಮ ಅಂಟಾರ್ಟಿಕಾದ ಪೈನ್ ಐಲ್ಯಾಂಡ್ ಗ್ಲೇಸಿಯರ್ (ಹಿಮನದಿ) ವೇಗವಾಗಿ ಕರಗುತ್ತಿದೆ. ಇದರಿಂದಾಗಿ ಭವಿಷ್ಯದಲ್ಲಿ ಜಾಗತಿಕವಾಗಿ ಸಮುದ್ರಮಟ್ಟ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಅಂಟಾರ್ಟಿಕಾದಲ್ಲಿ ಬೇರೆ ಬೇರೆ ಹಿಮನದಿಗಳೂ ಇದ್ದು, ಪೈನ್ ಐಲ್ಯಾಂಡ್ ಹಿಮನದಿ ಎಲ್ಲಾ ಹಿಮನದಿಗಳಿಗಿಂತ ವೇಗವಾಗಿ ಕರಗುತ್ತಿದೆ. ಇದರ ಜೊತೆಗೆ ಪಕ್ಕದಲ್ಲೇ ಇರುವ ಥ್ವೈಟ್ಸ್ ಹಿಮನದಿ ಕೂಡ ವೇಗವಾಗಿ ಕರಗುತ್ತಿದೆ. ಜಾಗತಿಕವಾಗಿ ಶೇ.10ರಷ್ಟು ಸಮುದ್ರಮಟ್ಟ ಏರಿಕೆಯಾಗಲು ಕಾರಣವಾಗಲಿದೆ. ‘ದ ಕ್ರ್ಯೂಸ್ಫಿಯರ್’ ಎಂಬ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನದಂತೆ ಸಮುದ್ರದ ತಾಪಮಾನ 1.2 ಸೆಲ್ಸಿಯಸ್ನಷ್ಟು ಹೆಚ್ಚಳವಾದ ಕಾರಣದಿಂದಲೇ ಪಶ್ಚಿಮ ಅಂಟಾರ್ಟಿಕಾದಲ್ಲಿ ಮಂಜುಗಡ್ಡೆ ಕರಗಲು ಕಾರಣ ಎನ್ನಲಾಗಿದೆ.
ಮಂಜುಗಡ್ಡೆ ಕರಗುವ ಕಾರಣದಿಂದ ಸಮುದ್ರಮಟ್ಟ ಸುಮಾರು ಮೂರು ಮೀಟರ್ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಇಂಗ್ಲೆಂಡ್ನ ನಾರ್ಥುಂಬ್ರಿಯಾ ವಿಶ್ವವಿದ್ಯಾಲಯದ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಅಮುಂಡಸೇನ್ ಸಮುದ್ರದಲ್ಲಿ ಮಾರುತದ ದಿಕ್ಕು, ತೀರಪ್ರದೇಶದಲ್ಲಿ ನಡೆಯುವ ಚಟುವಟಿಕೆಗಳು ಮತ್ತು ದೀರ್ಘಕಾಲದ ಉಷ್ಣತೆ ಪೈನ್ ಐಲ್ಯಾಂಡ್ ಗ್ಲೇಸಿಯರ್ನಲ್ಲಿ ಮಂಜುಗಡ್ಡೆ ಕರಗಲು ಕಾರಣವಾಗಿದೆ ಎಂದು ಸಂಶೋಧಕರು ಉಲ್ಲೇಖಿಸಿದ್ದಾರೆ.

ಮೂರು ಪ್ರಮುಖ ಸ್ಥಳಗಳಲ್ಲಿ ಮಂಜುಗಡ್ಡೆ ಅತಿ ಹೆಚ್ಚಾಗಿ ಕರಗುತ್ತಿದೆ. ಮೊದಲ ಎರಡು ಪ್ರದೇಶಗಳಲ್ಲಿ ಚಿಕ್ಕದಾಗಿದ್ದು, ಮತ್ತೆ ಮಂಜುಗಡ್ಡೆ ರೂಪುಗೊಳ್ಳುಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಸಂಶೋಧಕರು ಉಲ್ಲೇಖಿಸಿದ್ದಾರೆ.
- ಪವಿತ್ರ ಸಚಿನ್