Bengaluru : ಕಳೆದೊಂದು ವಾರದಿಂದ ಚಿನ್ನದ ಬೆಲೆ ಇಳಿಕೆಯ ಹಾದಿ ಹಿಡಿದಿದೆ. ಅನೇಕ ವಿದೇಶಿ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ (Gold and silver prices decrease) ಇಳಿದಿದೆ. ಅದೇ ರೀತಿ ಬೆಳ್ಳಿ ಬೆಲೆ ಇಳಿಕೆಯಾಗುತ್ತಲೇ ಇದೆ.
ಭಾರತದಲ್ಲಿ ಪ್ರಸ್ತುತ 10 ಗ್ರಾಂ 22 ಕ್ಯಾರೆಟ್ ಚಿನ್ನದ (22 carat gold) ಬೆಲೆ 55,800 ರೂಪಾಯಿಗಳಾಗಿದ್ದರೆ, 24 ಕ್ಯಾರೆಟ್ ((24 carat gold) ) ಅಪರಂಜಿ ಚಿನ್ನದ ಬೆಲೆ 60,870 ರೂಪಾಯಿಗಳಾಗಿವೆ.

ಇದೇ ವೇಳೆ 100 ಗ್ರಾಂ ಬೆಳ್ಳಿ 7,305 ರೂ. ಬೆಂಗಳೂರಿನಲ್ಲಿ ನಿರ್ದಿಷ್ಟವಾಗಿ, ಚಿನ್ನದ ಬೆಲೆ 10 ಗ್ರಾಂಗೆ 55,850 ರೂಪಾಯಿಗಳು ಮತ್ತು ಬೆಳ್ಳಿಯ ಬೆಲೆ 100 ಗ್ರಾಂಗೆ 7,650 ರೂಪಾಯಿಗಳು.
ಪ್ರಸ್ತುತ ಜಾಗತಿಕ ಆರ್ಥಿಕ ಅಸ್ಥಿರತೆಯನ್ನು ಗಮನಿಸಿದರೆ, ಹೂಡಿಕೆದಾರರು ಅನಿಶ್ಚಿತರಾಗಿದ್ದಾರೆ. ಹೀಗಾಗಿ ಚಿನ್ನದ ಹೂಡಿಕೆಯನ್ನು ತಜ್ಞರು ಸುರಕ್ಷಿತ ಮತ್ತು ವಿಶ್ವಾಸಾರ್ಹ ಆಯ್ಕೆ ಎಂದು ಅಂದಾಜಿಸಿದ್ದಾರೆ.
ಆರ್ಥಿಕ ಬಿಕ್ಕಟ್ಟು ಮುಂದುವರಿದಿರುವುದರಿಂದ ಚಿನ್ನಕ್ಕೆ ಬೇಡಿಕೆ ಕಡಿಮೆಯಾಗುವ ಸಾಧ್ಯತೆ (Gold and silver prices decrease) ಇಲ್ಲ.
ಚಿನ್ನದ ಬೆಲೆ ಏರಿಳಿತಕ್ಕೆ ಕಾರಣವೇನು?
ಈ ಸಮಯದಲ್ಲಿ ಫೆಡರಲ್ ಬ್ಯಾಂಕ್ ಆಫ್ ಅಮೇರಿಕಾ (Federal Bank of America) ಬಡ್ಡಿದರಗಳನ್ನು ಹೆಚ್ಚಿಸುವ ಸಾಧ್ಯತೆಯಿಲ್ಲದಿರುವುದರಿಂದ ಚಿನ್ನದ ಹೂಡಿಕೆಯು ಹೆಚ್ಚಾಗುವ ನಿರೀಕ್ಷೆಯಿದೆ.
ಇದರ ಹೊರತಾಗಿಯೂ, ಉದ್ಯೋಗದಲ್ಲಿ ಹೆಚ್ಚಳದ ವರದಿಗಳಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನಷ್ಟು ಕಡಿಮೆಯಾಗಬಹುದು.
ಇದನ್ನೂ ಓದಿ : https://vijayatimes.com/25-crore-instagram-followers/
ಈಗ ಚಿನ್ನದ ಬೆಲೆ ಇಳಿಕೆಯಾಗುತ್ತಾ ಇದ್ದರೂ ಮುಂದಿನ ದಿನಗಳಲ್ಲಿ ಮತ್ತೆ ಏರಿಕೆಯಾಗುವ ನಿರೀಕ್ಷೆ ಇದೆ. ಚಿನ್ನದ ಬೆಲೆ ಮುಂದಿನ ವರ್ಷದಲ್ಲಿ ಬರೋಬ್ಬರಿ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.
ಮೇ 26ಕ್ಕೆ ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ :
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 55,800 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60,870 ರೂ
10 ಗ್ರಾಂ ಬೆಳ್ಳಿ ಬೆಲೆ : 730.50 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ :
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 55,850 ರೂ
24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ: 60,920 ರೂ
10 ಗ್ರಾಂ ಬೆಳ್ಳಿ ಬೆಲೆ : 765 ರೂ

ಬೇರೆ ಬೇರೆ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 55,850 ರೂ
ಚೆನ್ನೈ: 56,250 ರೂ
ಮುಂಬೈ: 55,800 ರೂ
ದೆಹಲಿ: 55,950 ರೂ
ಕೋಲ್ಕತಾ: 55,800 ರೂ
ಕೇರಳ: 55,800 ರೂ
ಅಹ್ಮದಾಬಾದ್: 55,850 ರೂ
ಜೈಪುರ್: 55,950 ರೂ
ಲಕ್ನೋ: 55,950 ರೂ
ಭುವನೇಶ್ವರ್: 55,800 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) :
ಮಲೇಷ್ಯಾ: 2,850 ರಿಂಗಿಟ್ (51,018 ರುಪಾಯಿ)
ದುಬೈ: 2200 ಡಿರಾಮ್ (49,593 ರುಪಾಯಿ)
ಅಮೆರಿಕ: 605 ಡಾಲರ್ (50,065 ರುಪಾಯಿ)
ಸಿಂಗಾಪುರ: 823 ಸಿಂಗಾಪುರ್ ಡಾಲರ್ (50,335 ರುಪಾಯಿ)
ಕತಾರ್: 2,260 ಕತಾರಿ ರಿಯಾಲ್ (51,409 ರೂ)
ಓಮನ್: 239 ಒಮಾನಿ ರಿಯಾಲ್ (51,472 ರುಪಾಯಿ)
ಕುವೇತ್: 189 ಕುವೇತಿ ದಿನಾರ್ (50,889 ರುಪಾಯಿ)
ಇದನ್ನೂ ಓದಿ : https://vijayatimes.com/free-bus-scheme/
ರಾಜ್ಯದ ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ)
ಬೆಂಗಳೂರು: 7,650 ರೂ
ಚೆನ್ನೈ: 7,650 ರೂ
ಮುಂಬೈ: 7,305 ರೂ
ದೆಹಲಿ: 7,305 ರೂ
ಕೋಲ್ಕತಾ: 7,305 ರೂ
ಕೇರಳ: 7,650 ರೂ
ಅಹ್ಮದಾಬಾದ್: 7,305 ರೂ
ಜೈಪುರ್: 7,350 ರೂ
ಲಕ್ನೋ: 7,350 ರೂ
ಭುವನೇಶ್ವರ್: 7,650 ರೂ
(ಗಮನಿಸಿ: ಇಲ್ಲಿ ತಿಳಿಸಲಾಗಿರುವ ಬೆಲೆ ನಿಖರ ಎಂದು ನಾವು ಖಾತ್ರಿಪಡಿಸಲು ಸಾಧ್ಯವಿಲ್ಲ. ರಾಜ್ಯದ ಪ್ರಮುಖ ಅಭರಣದಂಗಡಿಗಳಿಂದ ಈ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ.
ಅಷ್ಟೇ ಅಲ್ಲದೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಈ ದರದ ಮೇಲೆ ಶುಲ್ಕಗಳು ಕೂಡ ಬೀಳಬಹುದು.)
- ರಶ್ಮಿತಾ ಅನೀಶ್