Washington: ಈಗಾಗಲೇ ಕಠಿಣ ವಲಸೆ ನೀತಿ (Immigration policy) ಜಾರಿಗೆ ತರುವ ಮೂಲಕ, ದೇಶದಲ್ಲಿರುವ ಅಕ್ರಮ ವಲಸಿಗರನ್ನು (Illegal immigrants) ಹೊರಹಾಕುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump), ಇದೀಗ ಶ್ರೀಮಂತ ವಲಸಿಗರ ಮನವೋಲಿಕೆಗೆ ಹೊಸ ಯೋಜನೆಯೊಂದನ್ನು ಜಾರಿಗೆ ತರಲು ಮುಂದಾಗಿದ್ದಾರೆ.ಅಮೆರಿಕದಲ್ಲಿಯೇ ಇರ ಬಯಸುವ ಶ್ರೀಮಂತ ವಲಸಿಗರಿಗೆ ಗೋಲ್ಡ್ ಕಾರ್ಡ್‌ಗಳ ಮೂಲಕ, ಅಮೆರಿಕನ್ ಪೌರತ್ವವನ್ನು (American citizenship) ಪಡೆಯುವುದನ್ನು ಸುಲಭಗೊಳಿಸಲು ಯೋಜಿಸುತ್ತಿದ್ದಾರೆ. ಈ ಕಾರ್ಡ್‌ಗಳನ್ನು ಶ್ರೀಮಂತ ವಲಸಿಗರು 5 ಮಿಲಿಯನ್ ಅಮೆರಿಕನ್ ಡಾಲರ್ (American Dollar) ಪಾವತಿಸಿ ಖರೀದಿಸಬಹುದಾಗಿದೆ.

ಅಷ್ಟಕ್ಕೂ ಈ ಗೋಲ್ಡ್ ಕಾರ್ಡ್‌ಗಳು (Gold cards) ಈಗಾಗಲೇ ಅಸ್ತಿತ್ವದಲ್ಲಿರುವ ಗ್ರೀನ್ ಕಾರ್ಡ್ ನಿವಾಸಿಗಳು ಮತ್ತು ಹೊಸ ವಿದೇಶಿಯರಿಗೆ ಅಮೆರಿಕನ್ ಪೌರತ್ವದ ಮಾರ್ಗವನ್ನು ಮತ್ತಷ್ಟು ಸುಲಭಗೊಳಿಸಲಿದೆ. ಸುಮಾರು ಒಂದು ಮಿಲಿಯನ್ ಗೋಲ್ಡ್ ಕಾರ್ಡ್‌ಗಳನ್ನು ಮಾರಾಟ ಮಾಡುವ ಉದ್ದೇಶವಿದ್ದು, ಈ ಉಪಕ್ರಮವು ರಾಷ್ಟ್ರೀಯ ಸಾಲವನ್ನು (National Debt) ತ್ವರಿತವಾಗಿ ತೀರಿಸಲು ಸಹಾಯ ಮಾಡಲಿದೆ. ಎಂದು ಡೊನಾಲ್ಡ್ ಟ್ರಂಪ್ (Donald Trump) ಭರವಸೆ ವ್ಯಕ್ತಪಡಿಸಿದ್ದಾರೆ.
ಇನ್ನು ಅಮೆರಿಕದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ಅಥವಾ ಸಂರಕ್ಷಿಸುವ ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡುವ ವಿದೇಶಿ ಹೂಡಿಕೆದಾರರಿಗೆ (Foreign investors), ಅಮೆರಿಕದ ಶಾಶ್ವತ ನಿವಾಸಿಗಳಾಗಲು ಅನುವು ಮಾಡಿಕೊಡುವ EB-5 ವಲಸೆ ಹೂಡಿಕೆದಾರ ವೀಸಾ ಕಾರ್ಯಕ್ರಮವನ್ನು ಗೋಲ್ಡ್ ಕಾರ್ಡ್‌ನೊಂದಿಗೆ ಬದಲಾಯಿಸಲಾಗುವುದು.ಎಂದು ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.ಗೋಲ್ಡ್ ಕಾರ್ಡ್ ವೀಸಾ (Gold Card Visa) ಅಮೆರಿಕದಲ್ಲಿ ಹೂಡಿಕೆ ಮಾಡಬಯಸಿರುವ ಭಾರತೀಯರಿಗೂ (Indians) ಅನುಕೂಲತೆ ಕಲ್ಪಿಸಲಿದ್ದು, 5 ಮಿಲಿಯನ್ ಅಮೆರಿಕನ್ ಡಾಲರ್ ಕೊಡಲು ಶಕ್ತರಾಗಿರುವ ಶ್ರೀಮಂತ ಭಾರತೀಯರು ಇದರಿಂದ ಭಾರೀ ಲಾಭ ಪಡೆಯುವ ನಿರೀಕ್ಷೆಯಿದೆ.