ಈ ಹಿಂದೆ ಕರ್ನಾಟಕ ರಾಜ್ಯದಲ್ಲಿ ಚಿನ್ನದ ಗಣಿ ನಾಡು ಎಂದೇ ಖ್ಯಾತಿಗಳಿಸಿದ್ದ ಜಿಲ್ಲೆ ಎಂದರೆ ಅದು ಕೋಲಾರ ಜಿಲ್ಲೆ. ಕೋಲಾರ ಜಿಲ್ಲೆಯಲ್ಲಿ ಮಾತ್ರ ಹೆಚ್ಚಿನ ಚಿನ್ನದ ಗಣಿ ಲಭಿಸುತ್ತಿತ್ತು. ಹೀಗಾಗಿಯೇ ಕೋಲಾರ ಚಿನ್ನದ ಗಣಿ ಎಂದು ಕೋಲಾರ ಜಿಲ್ಲೆ ಮಾರ್ಪಟ್ಟಿತ್ತು. ಸದ್ಯ ಭೂ ಸರ್ವೇಕ್ಷಣಾ ಸಂಸ್ಥೆಯಿಂದ ಯಾವುದೇ ರೀತಿಯ ಸಮೀಕ್ಷೆ ನಡೆಯದೇ ಹೋದರು, ಜಿ-4 ಹಂತದ ಪರಿಶೀಲನೆಯಲ್ಲಿ ಚಿನ್ನದ ನಿಕ್ಷೇಪವಿರುವುದು ಪತ್ತೆಯಾಗಿರುವ ಮಾಹಿತಿ ಹೊರಬಿದ್ದಿದೆ. ಎಲ್ಲೆಲ್ಲಿ ಮತ್ತು ಹೇಗೆ ಹರಾಜು ಪ್ರಕ್ರಿಯೆ ಆರಂಭವಾಗಲಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿ.
ಕರ್ನಾಟಕ ರಾಜ್ಯದ ಹತ್ತು ಕಡೆ ಚಿನ್ನದ ನಿಕ್ಷೇಪಗಳನ್ನು ಗುರುತಿಸಿರುವ ಜಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ, 8 ಕಡೆ ಗಣಿ ಪ್ರಾರಂಭ ಮಾಡಲು ಖಾಸಗಿ ಕಂಪನಿಗಳಿಗೆ ಹರಾಜು ಪ್ರಕಿಯೆಗೆ ಆಹ್ವಾನ ನೀಡಿದೆ. ಕೇಂದ್ರ ಸರ್ಕಾರದಿಂದ ಈಗಾಗಲೇ ಹರಾಜು ಪ್ರಕ್ರಿಯೆಗೆ ಅಧಿಕೃತವಾಗಿ ಅನುಮತಿ ಸಿಕ್ಕಿದ್ದು, ಇದೇ ಫೆಬ್ರವರಿ 24ರೊಳಗೆ ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿರಲಿದೆ. ಇದಾದ ಬಳಿಕವಷ್ಟೇ ತಿಳಿಯಲಿದೆ ಎಷ್ಟು ಪ್ರಮಾಣದಲ್ಲಿ ಚಿನ್ನ ಲಭಿಸಲಿದೆ ಎಂಬ ಮಾಹಿತಿ.
ರಾಜ್ಯದ ಒಟ್ಟಾರೆ 8 ಸ್ಥಳಗಳಲ್ಲಿ ಸುಮಾರು 250 ಟನ್ಗೂ ಹೆಚ್ಚು ಚಿನ್ನ ಸಿಗಬಹುದು ಎಂಬ ಅಂದಾಜನ್ನು ಖಾಸಗಿ ಕಂಪನಿಗಳು ಮುಂದಿಟ್ಟಿವೆ. ಇದರಿಂದ ರಾಜ್ಯ ಸರ್ಕಾರಕ್ಕೆ ಅಥವಾ ರಾಜ್ಯಕ್ಕೆ ಯಾವ ರೀತಿ ಲಾಭವಾಗಬಹುದು ಎಂದು ನೋಡುವುದಾದರೆ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಿಗೆ ರಾಜಧನ ಸೃಷ್ಟಿಯಾಗಲು ನೆರವಾಗುತ್ತದೆ. ಇನ್ನು ಚಿನ್ನದ ನಿಕ್ಷೇಪ ಗುರುತಾಗಿರುವ ಪ್ರದೇಶಗಳಾದ ತುಮಕೂರು, ಬಳ್ಳಾರಿ, ಹಾವೇರಿ, ಧಾರವಾಡ, ಚಿತ್ರದುರ್ಗ ಮತ್ತು ಹಾಸನ ಜಿಲ್ಲೆಯ ಸುತ್ತಮುತ್ತ ಉದೋಗ ಸೃಷ್ಟಿ ಮಾಡಲಿದೆ.
ಎಲ್ಲೆಲ್ಲಿ ಎಷ್ಟೆಷ್ಟು ಚಿನ್ನ ಲಭ್ಯವಾಗಬಹುದು ಎಂಬ ಮಾಹಿತಿಯ ಅನುಸಾರ ಹೀಗಿದೆ :
ತುಮಕೂರಿನ ಅಜ್ಜಗೊಂಡನಹಳ್ಳಿ ಪ್ರದೇಶದಲ್ಲಿ 9.49(ಚ.ಕಿಮೀ),
ಚಿತ್ರದುರ್ಗದ ಬೆಳಗಟ್ಟ ಪ್ರದೇಶ 25,
ಧಾರವಾಡ ಮಾರುತಿಪುರ 28.92,
ಹಾಸನ ಮುದುಡಿ 40,
ಚಿತ್ರದುರ್ಗದ ಕಟ್ಟನಹಳ್ಳಿ 25.22,
ದಾವಣಗೆರೆ ಕಣಿವೆಹಳ್ಳಿ 30.78,
ಹಾವೇರಿ ಸೇವಾನಗರ 30.46,
ಹಾವೇರಿ ಕಾಕೋಳ್ 29.06