Andra Pradesh : ಆಂಧ್ರಪ್ರದೇಶದಲ್ಲಿ ನಡೆಯುತ್ತಿರುವ ದಸರಾ (Dasara) ಆಚರಣೆಯ ಅಂಗವಾಗಿ,
135 ವರ್ಷಗಳಷ್ಟು ಹಳೆಯದಾದ ವಾಸವಿ ಕನ್ಯಕಾ ಪರಮೇಶ್ವರಿ ದೇವಿಯ ದೇವಸ್ಥಾನವನ್ನು ನವರಾತ್ರಿಗಾಗಿ (Navaratri) 6 ಕೋಟಿ ರೂಪಾಯಿ (6 Crore) ಮೌಲ್ಯದ ನೋಟುಗಳು ಮತ್ತು ಚಿನ್ನಾಭರಣಗಳಿಂದ ಅಲಂಕರಿಸಲಾಗಿದೆ.

ದೇವರಿಗೆ 6 ಕೆ.ಜಿ ಚಿನ್ನ, 3 ಕೆಜಿ ಬೆಳ್ಳಿ ಮತ್ತು ರೂಪಾಯಿ ನೋಟುಗಳನ್ನು (3.5 ಕೋಟಿ ಮೌಲ್ಯದ) (Gold on old hindu idol) ದೇವಾಲಯದ ಗೋಡೆಗಳು ಮತ್ತು ನೆಲದ ಮೇಲೆ ಅಂಟಿಸಲಾಗಿದೆ. ಇದು ಪಶ್ಚಿಮ ಗೋದಾವರಿ ಜಿಲ್ಲೆಯ ಪೆನುಗೊಂಡ ಪಟ್ಟಣದಲ್ಲಿದೆ.
ಸುಮಾರು ಎರಡು ದಶಕಗಳಿಂದ ದಸರಾ ಸಂದರ್ಭದಲ್ಲಿ ದೇವಿಯನ್ನು ಚಿನ್ನ ಮತ್ತು ಹಣದ ನೋಟಿನಿಂದ ಅಲಂಕರಿಸುವ ಸಂಪ್ರದಾಯವನ್ನು ದೇವಾಲಯವು ಪಾಲಿಸಿಕೊಂಡು ಬರುತ್ತಿದೆ.
https://youtu.be/cpUuk5DF_tE ಕುರುಬೂರು ಬಾಯ್ಸ್ ಕಮಾಲ್, ಹಳ್ಳಿ ಹೈದರ ಖೋ-ಖೋ ಕಮಾಲ್.
ಮಹಾಲಕ್ಷ್ಮಿ ದೇವಿಯ ಅವತಾರವನ್ನು ವೀಕ್ಷಿಸಲು ಶುಕ್ರವಾರ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಇತ್ತೀಚಿನ ದಿನಗಳಲ್ಲಿ ವಿಗ್ರಹಗಳು ಮತ್ತು ದೇವತೆಗಳು ಮತ್ತು ಕಾಣಿಕೆಗಳನ್ನು ನಗದು ಮತ್ತು ಚಿನ್ನದ ರೂಪದಲ್ಲಿ ಅಲಂಕರಿಸುವ ಪ್ರವೃತ್ತಿ ಹೆಚ್ಚಾಗಿದೆ.
ಒಂಬತ್ತು ದಿನಗಳ ಆಚರಣೆ ಮುಗಿದ ನಂತರ ಈ ಹಣವನ್ನು ಯಾವ ರೀತಿ ಬಳಸಿಕೊಳ್ಳುತ್ತೀರಾ? ಎಂದು ಪ್ರಶ್ನಿಸಿದಾಗ,

ದೇವಾಲಯದ ಸಮಿತಿಯು, ಇದು ಸಾರ್ವಜನಿಕ ಕೊಡುಗೆ ಮತ್ತು ಪೂಜೆ ಮುಗಿದ ನಂತರ ಹಿಂತಿರುಗಿಸಲಾಗುವುದು. ಇದು ದೇವಸ್ಥಾನದ ಟ್ರಸ್ಟ್‌ಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಚಿತ್ರವೊಂದರಲ್ಲಿ, ನೋಟುಗಳಿಂದ (Gold on old hindu idol) ಮಾಡಿದ ಬಂಟಿಂಗ್ಸ್ ಅನ್ನು ಮರಗಳ ಮೇಲೆ ಮತ್ತು ಸೀಲಿಂಗ್‌ನಿಂದ ನೇತುಹಾಕಲಾಗಿದ್ದು, ಅದು ಭಕ್ತರ ಕಣ್ಣುಗಳನ್ನು ಸೆಳೆಯುತ್ತದೆ.
ಇದನ್ನೂ ಓದಿ : https://vijayatimes.com/bjp-tweets-over-bharat-jodo-yatra/
‘ದೇವಿ ನವರಾತ್ರಿ ಹಬ್ಬದ’ ಸಂದರ್ಭದಲ್ಲಿ ದೇವಿಗೆ ನೀಡಿದ ನಗದು ಮತ್ತು ಬಂಗಾರದ ಕಾಣಿಕೆಗಳು ಅವರಿಗೆ ಅದೃಷ್ಟವನ್ನು ಸಾಬೀತುಪಡಿಸುತ್ತದೆ ಮತ್ತು ಅವರ ವ್ಯವಹಾರಗಳು ಮತ್ತು ಅದೃಷ್ಟದ ಸುಧಾರಣೆಗೆ ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
ಈ ಒಂದು ನಂಬಿಕೆ ಬಹಳ ಹಿಂದಿನಿಂದಲೂ ಪಾಲಿಸಿಕೊಂಡು ಬಂದಿದ್ದೇವೆ. ಇಲ್ಲಿನ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಬಂದು ನವರಾತ್ರಿ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಹೇಳಿದ್ದಾರೆ.