ಇತ್ತೀಚೆಗಷ್ಟೇ ಜೀ ಕನ್ನಡದಲ್ಲಿ ಆರಂಭವಾಗಿರುವ ಗೋಲ್ಡನ್ ಗ್ಯಾಂಗ್ ಸಾಕಷ್ಟು ಅಭಿಮಾನಿಗಳ ಮನ ಗೆದ್ದಿದೆ ಆದರೆ ಇದು ಎಲ್ಲೋ ಒಂದು ಕಡೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಪರ್ಯಾಯ ಕಾರ್ಯಕ್ರಮವಾಗಿದೆಯೇ ಎಂಬ ಗೊಂದಲ ಕೆಲವರಲ್ಲಿ ಮೂಡಿದೆ. ಗೋಲ್ಡನ್ ಸ್ಟಾರ್ ಗಣೇಶ್ ರಿಯಾಲಿಟಿ ಶೋನಲ್ಲಿ ಸ್ನೇಹಿತರ ಗ್ಯಾಂಗ್ ಕರೆದು ಅವರ ಹಿಂದಿನ ಕಷ್ಟದ ದಿನಗಳು ಹಾಗೂ ನೆನಪಿನಲ್ಲಿ ಉಳಿದಿರುವ ದಿನಗಳ ಬಗ್ಗೆ ಮಾತನಾಡುವುದೇ ಈ ಕಾರ್ಯಕ್ರಮದ ಉದ್ದೇಶ.

ಆದರೆ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮ ರಮೇಶ್ ಅರವಿಂದ್ ನಡೆಸಿಕೊಡುತ್ತಿದ್ದ ವೀಕೆಂಡ್ ವಿತ್ ರಮೇಶ್ ರೀತಿಯಲ್ಲಿ ಬರುತ್ತಿದೆ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಆರಂಭದಲ್ಲಿ ಸ್ನೇಹಿತರನ್ನು ಕರೆಸಿ ನಂತರ ಅವರ ಮನೆಯವರು, ಸಿನಿಮಾದವರು, ತಂತ್ರಜ್ಞರು, ಹೆಂಡತಿ ಹೀಗೆ ಸಾಕಷ್ಟು ಜನರನ್ನು ಕರೆಸಿ. ಮಾತುಕತೆ ನಡೆಸುತ್ತಿರುವುದು ಹಾಗೂ ಅವರ ಶಾಲೆಯ ಗುರುಗಳನ್ನು ಕರೆಸಿ ಮಾತನಾಡುತ್ತಿರುವುದು ಎಲ್ಲೋ ಒಂದು ಕಡೆ ಇದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಪ್ರತಿರೂಪ ಎಂಬುವುದಕ್ಕೆ ಕಾರಣವಾಗಿದೆ.
ಒಟ್ಟಾರೆ ಅದೇನೇ ಇರಲಿ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮ ವಾರಾಂತ್ಯದಲ್ಲಿ ನೋಡಲು ಮಜವಾಗಿದೆ.ಈ ಕಾರ್ಯಕ್ರಮದಲ್ಲಿ ನಮ್ಮ ಸ್ಯಾಂಡಲ್ವುಡ್ನ ತಾರೆಯರ ಜೊತೆಗೆ ಕಿರುತೆರೆಯಲ್ಲಿ ಮೋಡಿ ಮಾಡಿದ ಹಿಂದಿನ ಧಾರವಾಹಿ ಗ್ಯಾಂಗ್, ಹಾಸ್ಯಕ್ಕೆ ಮೆರುಗು ತಂದಂತಹ ಹರಟೆ ಗ್ಯಾಂಗ್, ಟ್ರೆಂಡ್ ಸೆಟ್ ಮಾಡಿದಂತಹ ಸಿನಿಮಾಗಳು, ಜೊತೆಗೆ ಕರ್ನಾಟಕದ ವಿವಿಧ ಕ್ಷೇತ್ರಗಳಾದ ರಾಜಕೀಯ ದಿಗ್ಗಜರು, ಕ್ರೀಡಾ ತಾರೆಗಳು, ಪತ್ರಿಕೋದ್ಯಮದ ಪ್ರವರ್ತಕರು ಕೂಡ ಭಾಗವಹಿಸುವ ಎಲ್ಲಾ ನಿರೀಕ್ಷೆಗಳಿವೆ.

ಪೂರ್ವ ಸ್ನೇಹಿತರ ಅನನ್ಯ ಸ್ನೇಹವನ್ನು ಸಂಭ್ರಮಿಸಲೆಂದೇ ಸಿದ್ಧಗೊಂಡಿರುವ ಈ ಶೋ ವೀಕ್ಷಕರ ಮನದಲ್ಲಿ ಹೊಸ ಸಂಚಲನವನ್ನು ಸೃಷ್ಠಿಸುತ್ತದೆ ಎಂದು ಹೇಳಲು ಸಂತೋಷವಾಗುತ್ತದೆ ಎಂದು ಮತ್ತಷ್ಟು ಪ್ರೇಕ್ಷಕರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈಗಾಗಲೇ 3- 4 ಎಪಿಸೋಡ್ಗಳು ಪ್ರದರ್ಶನವಾಗಿರುವ ಗೋಲ್ಡನ್ ಗ್ಯಾಂಗ್ ಈಗ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಪ್ರತಿರೂಪವಾಗಿದೆ ಎಂಬುವುದು ಕೆಲವರ ಅಭಿಪ್ರಾಯವಾಗಿದೆ.