ಕಾಮನ್ವೆಲ್ತ್ ಗೇಮ್ಸ್ 2022 ರಲ್ಲಿ(CommonWealth Games 2022) ಭಾರತೀಯ ಬ್ಯಾಡ್ಮಿಂಟನ್(Badminton) ಇತಿಹಾಸದಲ್ಲಿ ಎಂದಿಗೂ ನೆನಪಿನಲ್ಲಿ ಉಳಿಯುವಂತೆ ಮಾಡಿದೆ ಪಿ.ವಿ ಸಿಂಧೂ(P.V Sindhu) ಅವರ ಸಾಧನೆ.
ಕಾಮನ್ವೆಲ್ತ್ ಗೇಮ್ಸ್ನಲ್ಲಿ ತಮ್ಮ ಎದುರಾಳಿಗಳ ಮೇಲೆ ಸಂಪೂರ್ಣ ಪ್ರಾಬಲ್ಯ ಮೆರೆದ ಭಾರತದ ಶಟ್ಲರ್ಗಳು ಕಾಮನ್ವೆಲ್ತ್ ಗೇಮ್ಸ್ 2022ರ ಕೊನೆಯ ದಿನ ಸತತ ಮೂರು ಚಿನ್ನದ ಪದಕಗಳನ್ನು ಗೆಲ್ಲುವ ಮುಖೇನ ಅಂತ್ಯಗೊಳಿಸಿದರು.

ಕಾಮನ್ವೆಲ್ತ್ ಗೇಮ್ಸ್ 2022 ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್ನಲ್ಲಿ ಪಿ.ವಿ ಸಿಂಧು, ಸಿಂಗಾಪುರದ ಯೆಯೊ ಜಿಯಾ ಮಿನ್ ವಿರುದ್ಧ 2-0 ಮುನ್ನಡೆ ಸಾಧಿಸಿದ್ದರು. ಈ ಮೂಲಕ ಸಿಂಧು ಫೈನಲ್ಗೆ ಲಗ್ಗೆ ಇಟ್ಟಿದ್ದರು. ಇದೀಗ ಚಿನ್ನ ಪಡೆದುಕೊಂಡಿದ್ದು, ಭಾರತಕ್ಕೆ ಮತ್ತೆ ಬಂಗಾರದ ಸಿಂಧೂರವನ್ನಿಟ್ಟಿದ್ದಾರೆ.
ಫೈನಲ್ನಲ್ಲಿ ಆರಂಭದಿಂದಲೂ ಎದುರಾಳಿ ಮಿಚೆಲಿ ಮೇಲೆ ಪ್ರಾಬಲ್ಯ ಮೆರೆದ ಸಿಂಧೂ, ಯಾವುದೇ ಸಂದರ್ಭದಲ್ಲೂ ಮುನ್ನಡೆಯನ್ನು ಬಿಟ್ಟುಕೊಡಲಿಲ್ಲ. ಸಿಂಧು 21-15 ರಿಂದ ಮೊದಲ ಪ್ರದರ್ಶನ ಗೆದ್ದುಕೊಂಡರು, ಎರಡನೇ ಪ್ರದರ್ಶನದಲ್ಲೂ ಸಿಂಧು ಆರಂಭದಿಂದಲೇ ಮುನ್ನಡೆ ಮುಂದುವರಿಸಿದರು.
ಪಂದ್ಯ ಮಧ್ಯಂತರದಲ್ಲಿ 11-6 ರಲ್ಲಿ ಮುನ್ನಡೆಯಿತು. ವಿರಾಮದ ನಂತರ ಎದುರಾಳಿ ಲೀ ಆಕ್ರಮಣಕಾರಿ ಆಟವಾಡಿ ಅಂಕಕ್ಕಾಗಿ ಶ್ರಮಿಸಿದರು. ಒಂದೇ ರ್ಯಾಲಿಯಲ್ಲಿ 57 ಶಾಟ್ಗಳನ್ನು ಏಕಕಾಲದಲ್ಲಿ ಆಡಲಾಯಿತು, ಆ ಬಳಿಕ ಪಾಯಿಂಟ್ ಸಿಂಧು ಪಾಲಾಯಿತು.
https://vijayatimes.com/india-to-boost-up-indian-smartphones/
ಸಿಂಧು ಕಾಮನ್ವೆಲ್ತ್ ಗೇಮ್ಸ್ ಸಿಂಗಲ್ಸ್ನಲ್ಲಿ ಚಿನ್ನ ಗೆದ್ದಿದ್ದು, ಇದೇ ಮೊದಲು. ಹಿಂದಿನ ಪಂದ್ಯಗಳಲ್ಲಿ ಮಿಶ್ರ ತಂಡ ಚಿನ್ನ ಗೆದ್ದು ಸಿಂಗಲ್ಸ್ನಲ್ಲಿ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿತ್ತು. ಎರಡು ಬಾರಿ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದಿರುವ ಸಿಂಧು, ಈ ಬಾರಿಯ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.

- ಮಿಶ್ರ ತಂಡ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಸಿಂಗಲ್ಸ್ನಲ್ಲಿ ಚಿನ್ನ ಗೆಲ್ಲುವುದು ಖಚಿತ ಎಂದು ಹೇಳಿದ್ದರು. ಮೊದಲಿನಿಂದಲೂ ಎದುರಾಳಿಗಳನ್ನು ಸಮರ್ಥವಾಗಿ ಮಣಿಸಿ ಫೈನಲ್ ನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದರು.
ಈ ಗೆಲುವಿನೊಂದಿಗೆ ಸಿಂಧು ಕಾಮನ್ವೆಲ್ತ್ ಗೇಮ್ಸ್ನಲ್ಲಿ ಹ್ಯಾಟ್ರಿಕ್ ಪದಕಗಳನ್ನು ಪೂರ್ಣಗೊಳಿಸಿದರು. 2014 ರಲ್ಲಿ ಕಂಚಿನ ಪದಕ, 2018 ರಲ್ಲಿ ಬೆಳ್ಳಿ ಹಾಗೂ ಈಗ 2022 ರಲ್ಲಿ ಚಿನ್ನದ ಪದಕ ಗೆದ್ದಿರುವುದು ವಿಶೇಷ.- ಈಗಾಗಲೇ ಒಲಿಂಪಿಕ್ಸ್ ನಲ್ಲಿ ಕಂಚು ಹಾಗೂ ಬೆಳ್ಳಿ ಪದಕ ಗೆದ್ದಿರುವ ಸಿಂಧು, ಕಾಮನ್ ವೆಲ್ತ್ ಗೇಮ್ಸ್ ಚಿನ್ನದ ಪದಕದೊಂದಿಗೆ ಮತ್ತೊಂದು ಹಂತಕ್ಕೆ ತಲುಪಿದ್ದಾರೆ.
ಸಿಂಧು ಅವರ ಸಾಧನೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu), ಪ್ರಧಾನಿ ನರೇಂದ್ರ ಮೋದಿ(Narendra Modi) ಶ್ಲಾಘಿಸಿದ್ದಾರೆ. “ಪಿವಿ ಸಿಂಧು ಚಾಂಪಿಯನ್ಗಳ ಚಾಂಪಿಯನ್ ಆಗಿದ್ದಾರೆ.
ಶ್ರೇಷ್ಠತೆ ಏನೆಂದು ಈಕೆ ಪದೇ ಪದೇ ತೋರಿಸುತ್ತಾಳೆ. ಆಕೆಯ ಸಮರ್ಪಣೆ ಮತ್ತು ಬದ್ಧತೆ ವಿಸ್ಮಯಕಾರಿಯಾಗಿದೆ. CWG 2022 ರಲ್ಲಿ ಚಿನ್ನದ ಪದಕ ಗೆದ್ದಿದ್ದಕ್ಕಾಗಿ ಆಕೆಗೆ ಅಭಿನಂದನೆಗಳು. ಆಕೆಯ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ” ಎಂದು ಪ್ರಧಾನಿ ಮೋದಿ ಟ್ವೀಟ್(Tweet) ಮಾಡಿದ್ದಾರೆ.

“ಪಿವಿ ಸಿಂಧು ಕಾಮನ್ವೆಲ್ತ್ ಗೇಮ್ಸ್ನಲ್ಲಿ ಐತಿಹಾಸಿಕ ಚಿನ್ನ ಗೆಲ್ಲುವ ಮೂಲಕ ದೇಶದ ಹೃದಯ ಗೆದ್ದಿದ್ದಾರೆ. ನೀವು ಬ್ಯಾಡ್ಮಿಂಟನ್ ಕೋರ್ಟಿನಲ್ಲಿ ಜಾದೂ ಸೃಷ್ಟಿಸಿ, ಲಕ್ಷಾಂತರ ಜನರನ್ನು ಆಕರ್ಷಿಸಿದ್ದೀರಿ. ನಿಮ್ಮ ಪಾಂಡಿತ್ಯಪೂರ್ಣ ಗೆಲುವು ಬರ್ಮಿಂಗ್ ಹ್ಯಾಮ್ ನಲ್ಲಿ ನಮ್ಮ ತಿರಂಗಾವನ್ನು ಎತ್ತರಕ್ಕೆ ಹಾರುವಂತೆ ಮಾಡುವ ಮೂಲಕ ನಮ್ಮ ರಾಷ್ಟ್ರಗೀತೆಯನ್ನು ಮೊಳಗಿಸಿದ್ದೀರಿ.
ನಿಮಗೆ ಹೃತ್ಪೂರ್ವಕ ಅಭಿನಂದನೆಗಳು” ಎಂದು ಮುರ್ಮು ಟ್ವೀಟ್ ಮಾಡಿದ್ದಾರೆ. ಇನ್ನು, ಪುರುಷರ ಡಬಲ್ಸ್ನಲ್ಲಿ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಚಿನ್ನದ ಪದಕ ಗೆದ್ದರು.
ಸೋಮವಾರ ನಡೆದ ಫೈನಲ್ನಲ್ಲಿ ಇಂಗ್ಲೆಂಡ್ನ ಬೆನ್ ಲೇನ್ ಮತ್ತು ಸೀನ್ ವೆಂಡಿ ಅವರ ವಿರುದ್ಧ 21-15, 21-13 ಅಂತರದಲ್ಲಿ ಸತತ ಗೇಮ್ಗಳಲ್ಲಿ ಗೆದ್ದರು. ಪುರುಷರ ಸಿಂಗಲ್ಸ್ನಲ್ಲಿ ಲಕ್ಷ್ಯ ಸೇನ್ ಚಿನ್ನದ ಪದಕ ಜಯಿಸಿದ್ದರು. ಈ ಗೆಲುವಿನೊಂದಿಗೆ ಭಾರತ ಬ್ಯಾಡ್ಮಿಂಟನ್ನಲ್ಲಿ ಹ್ಯಾಟ್ರಿಕ್ ಚಿನ್ನದ ಪದಕ ಗೆದ್ದುಕೊಂಡಿತು.
ಪುರುಷರ ಡಬಲ್ಸ್ ವಿಭಾಗದ ಫೈನಲ್ ನಲ್ಲಿ ಭಾರತದ ಜೋಡಿ ಎದುರು, ಎದುರಾಳಿಗಳಿಗೆ ನಿಲ್ಲಲು ಸಾಧ್ಯವಾಗಲಿಲ್ಲ. ಪಂದ್ಯದ ಆರಂಭದಿಂದಲೂ ಮುನ್ನಡೆ ಸಾಧಿಸಿದ ಭಾರತದ ಜೋಡಿ ಕೊನೆಯವರೆಗೂ ಪ್ರಾಬಲ್ಯ ಮೆರೆಯಿತು.
- ಪವಿತ್ರ