Health Information: Eat this Greens, Say Goodbye to Diseases
Health News: ನಮ್ಮ ಆರೋಗ್ಯಕ್ಕೆ ಹಸಿರು ತರಕಾರಿಗಳು ಬಹಳಾನೇ ಒಳ್ಳೆಯದು ಎಲ್ಲರಿಗೂ ಗೊತ್ತಿರುವ ವಿಷಯ. ವೈದ್ಯರು ಕೂಡ ಇದನ್ನು ಪದೇ ಪದೇ ಹೇಳುತ್ತಾನೆ ಇರ್ತಾರೆ. ಇನ್ನು ಸೊಪ್ಪು, ತರಕಾರಿಗಳಲ್ಲಿ ಹಲವಾರು ವಿಧಗಳಿದ್ದು, (Health Tips) ಇದರಲ್ಲಿ ಗೊಂಗುರಾ ಅಥವಾ ಪುಂಡಿ ಸೊಪ್ಪಿನ ಬಗ್ಗೆ ನೀವು ಕೇಳಿರಬಹುದು. ಇದನ್ನು ಪುಂಟಿಕುರ ಎಂದೂ ಕೂಡ ಕರೆಯುತ್ತಾರೆ. ಇದರಿಂದ ಅನೇಕ ರೀತಿಯ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಇದು ಆಹಾರದ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು, ಪುಂಡಿ ಸೊಪ್ಪನ್ನು ನಿಯಮಿತವಾಗಿ ತಿನ್ನುವುದರಿಂದ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
ನೋವಿಗೆ ರಾಮಬಾಣ
ವೈದ್ಯರ ಪ್ರಕಾರ, ಪುಂಡಿ ಸೊಪ್ಪಿನಲ್ಲಿ ಅನೇಕ ರೀತಿಯ ಔಷಧೀಯ ಗುಣಗಳಿದ್ದು, ಇದನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಪೋಷಕಾಂಶಗಳನ್ನು ಒದಗಿಸುತ್ತವೆ ಮತ್ತು ಆರೋಗ್ಯವನ್ನು ಸುಧಾರಿಸುತ್ತವೆ. ಪುಂಡಿ ಸೊಪ್ಪಿನ (Gongura Leaves) ಎಲೆಗಳನ್ನು ತೆಗೆದುಕೊಂಡು ಅವುಗಳ ಮೇಲೆ ಸ್ವಲ್ಪ ಹರಳೆಣ್ಣೆಯನ್ನು ಹಚ್ಚಿ, ಅದನ್ನು ಬಿಸಿ ಮಾಡಿ, ಊತ ಮತ್ತು ವಿವಿಧ ರೀತಿಯ ಹಳೆ ನೋವು ಇರುವಲ್ಲಿ ಎಲೆಗಳನ್ನು ಇಡಬೇಕು. ಇದು ನೋವು ಮತ್ತು ಉರಿಯೂತವನ್ನು ತಕ್ಷಣ ಕಡಿಮೆ ಮಾಡುತ್ತದೆ.
ಕಣ್ಣುಗಳ ದೃಷ್ಟಿ ಚೆನ್ನಾಗಿರುತ್ತೆ
ಪುಂಡಿ ಸೊಪ್ಪಿನಲ್ಲಿ ಕ್ಯಾಲ್ಸಿಯಂ, ರಂಜಕ, ಪೊಟ್ಯಾಸಿಯಮ್, ಸೋಡಿಯಂ (Calcium, Phosphorus, Potassium, Sodium) ಮತ್ತು ಕಬ್ಬಿಣದಂತಹ ಇತರ ಖನಿಜಗಳಿವೆ. ಗೊಂಗುರಾದಲ್ಲಿ ವಿಟಮಿನ್ ಸಿ ಜೊತೆಗೆ ವಿಟಮಿನ್ ಎ, ಬಿ 1, ಬಿ 2, ಬಿ 9 (Vitamin A, B1, B2, B9) ಕೂಡ ಇದೆ. ಇದು ಉತ್ಕರ್ಷಣ ನಿರೋಧಕಗಳು ಮತ್ತು ಇತರ ಅನೇಕ ಪೋಷಕಾಂಶಗಳನ್ನು ಸಹ ಹೊಂದಿರುತ್ತದೆ. ನೀವು ಈ ಸೊಪ್ಪಿನ ರಸ ತೆಗೆದು ಸೋಸಿ ಅದಕ್ಕೆ ಅರ್ಧ ಕಪ್ ಹಾಲನ್ನು ಸೇರಿಸಿ ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿ ಕುಡಿಯುವುದರಿಂದ ನಿಮ್ಮ ಕಣ್ಣುಗಳ ದೃಷ್ಟಿ ಚೆನ್ನಾಗಿರುತ್ತದೆ. ಅಲ್ಲದೆ ಇದು ನಿಮ್ಮ ಆರೋಗ್ಯಕ್ಕೂ ತುಂಬಾ ಒಳ್ಳೆಯದು.
ಕೂದಲು ಉದುರುವುದನ್ನು ತಡೆಯುತ್ತದೆ
ಅನ್ನಕ್ಕೆ ಪುಂಡಿ ಸೊಪ್ಪಿನ ಉಪ್ಪಿನಕಾಯಿಯನ್ನು ಸ್ವಲ್ಪ ಬೆರೆಸಿ ಸೇವನೆ ಮಾಡುವುದರಿಂದ ಅತಿಸಾರವನ್ನು ತಡೆಯಬಹುದು. ದೇಹದಲ್ಲಿ ರೋಗನಿರೋಧಕ ಶಕ್ತಿ ಮತ್ತು ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸಲು ಈ ಸೊಪ್ಪು (Hairfall Control) ತುಂಬಾ ಸಹಾಯಕವಾಗಿದೆ. ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಇದರಿಂದ ತಯಾರಿಸಿದ ಆಹಾರಗಳನ್ನು ಹೆಚ್ಚು ಹೆಚ್ಚು ಸೇವನೆ ಮಾಡಬೇಕು.
ಅದಲ್ಲದೆ ಈ ಎಲೆಗಳ ಪೇಸ್ಟ್ ಅನ್ನು ತಲೆಗೆ ಹಚ್ಚಿ ಸ್ವಲ್ಪ ಸಮಯದ ನಂತರ ಸ್ನಾನ ಮಾಡುವುದರಿಂದ ಕೂದಲು ಉದುರುವಿಕೆ ಮತ್ತು ತಲೆಹೊಟ್ಟು ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಈ ಸೊಪ್ಪಿನಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಅವು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ (Cholesterol) ಅನ್ನು ಕಡಿಮೆ ಮಾಡುತ್ತವೆ. ಕೆಮ್ಮು, ಆಯಾಸ ಮತ್ತು ಸೀನುವಿಕೆಯಿಂದ ಬಳಲುತ್ತಿರುವವರಿಗೆ ಈ ಸೊಪ್ಪಿನಿಂದ ಮಾಡಿದ ಕಷಾಯದಿಂದ ಪರಿಹಾರ ಸಿಗುತ್ತದೆ.
Gongura Leaves Health Benefits Live Update
Everyone knows that green vegetables are very good for our health. Even doctors say this time and again. There are many types of greens and vegetables, (Health Tips) in which you may have heard about Gongura or Pundi greens. It is also known as Puntikura. Many types of dishes are prepared from it. It not only enhances the taste of food, but also has many health benefits, pundi soppu Eating regularly can provide many health benefits
A panacea for pain
According to doctors, Pundi Sopa has many medicinal properties and consuming it provides nutrients to the body and improves health. Take the leaves of Pundi Soppa (Gongura Leaves) and apply some alum oil on them, heat it, and keep the leaves on swelling and various types of old pain. It instantly reduces pain and inflammation.
Eyesight will be good
Pundi Sopi contains other minerals like Calcium, Phosphorus, Potassium, Sodium and Iron. Along with Vitamin C, Gongura also contains Vitamin A, B1, B2, B9 (Vitamin A, B1, B2, B9). It also contains antioxidants and many other nutrients. You can extract the juice of this green leaf and strain it and add half a cup of milk to it and drink it twice in the morning and in the evening to improve your eyesight. Also it is very good for your health.
Prevents hair loss
Mixing a little pundi sopa pickle with rice and consuming it can prevent diarrhoea. This herb is very helpful in boosting immunity and digestive power in the body (Hairfall Control). People suffering from anemia should consume more foods prepared from it.
Apart from this, applying a paste of these leaves on the head and taking a bath after some time reduces the problem of hair fall and dandruff. These greens are rich in antioxidants. They reduce bad cholesterol in the body. Those suffering from cough, fatigue and sneezing get relief from decoction made from this herb.