ಭಾರತೀಯ ಅಂಚೆ ಇಲಾಖೆಯಲ್ಲಿ (Indian Post Department) ಕೆಲಸ ಮಾಡುವ ಆಸೆಯಿದ್ದರೆ ನಿಮಗಿದೆ ಉತ್ತಮ ಅವಕಾಶ . ಭಾರತದ 23 ಅಂಚೆ ಕಚೇರಿಗಳಲ್ಲಿ (post offices) ಖಾಲಿ ಇರುವ ಉದ್ಯೋಗಗಳನ್ನು (Vacancies) ತುಂಬಲಾಗುತ್ತಿದೆ. ಇದರಲ್ಲಿ ಕರ್ನಾಟಕದಲ್ಲೂ ಸಾವಿರಕ್ಕಿಂತ ಅಧಿಕ ಹುದ್ದೆಗಳು ಇವೆ. ಹೀಗಾಗಿ ಯಾರು ಪೋಸ್ಟ್ ಆಫೀಸ್ನಲ್ಲಿ (post offices) ಕೆಲಸ ಮಾಡಲು ಇಚ್ಚಿಸುವವರೋ ಅವರು ಈ ಕೇಂದ್ರ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಈ ಉದ್ಯೋಗಗಳಿಗೆ ಸಂಬಂಧಿಸಿದ ವೇತನ ಶ್ರೇಣಿ, ಅರ್ಜಿ ಶುಲ್ಕ, ಪರೀಕ್ಷೆ, ವಿದ್ಯಾರ್ಹತೆ, ಹುದ್ದೆಗಳ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಸೇರಿದಂತೆ ಇತರೆ ಮಾಹಿತಿಗಳನ್ನು ನೀಡಿದ್ದಾರೆ. ದೇಶದ್ಯಾಂತ 21,413 ಉದ್ಯೋಗಗಳು ಇವೆ. ಇದರಲ್ಲಿ ದೇಶದ ವಿವಿಧ ರಾಜ್ಯಗಳು ಸೇರಿದಂತೆ ಕರ್ನಾಟಕಕ್ಕೂ ಉದ್ಯೋಗಗಳು ಮೀಸಲಿವೆ. ಹೀಗಾಗಿ ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ (State Job Aspirants) ಈ ಕೆಲಸಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ

ಉದ್ಯೋಗಗಳ ವಿವರ
ಗ್ರಾಮೀಣ ಡಾಕ್ ಸೇವಕರು (GDS)
ಬ್ರಾಂಚ್ ಪೋಸ್ಟ್ ಮಾಸ್ಟರ್ (BPM)
ಸಹಾಯಕ ಬ್ರ್ಯಾಂಚ್ ಪೋಸ್ಟ್ಮಾಸ್ಟರ್ (ABPM)
ಕರ್ನಾಟಕದಲ್ಲಿರುವ ಹುದ್ದೆಗಳ ವರ್ಗೀಕರಣ ಹೀಗಿದೆ
ಸಾಮಾನ್ಯ ಅಭ್ಯರ್ಥಿಗಳು- 482
ಒಬಿಸಿ ಅಭ್ಯರ್ಥಿಗಳು- 260
ಎಸ್ಸಿ ಅಭ್ಯರ್ಥಿಗಳು- 175
ಎಸ್ಟಿ ಅಭ್ಯರ್ಥಿಗಳು- 78
ಇಡಬ್ಲುಎಸ್ ಅಭ್ಯರ್ಥಿಗಳು- 122
ಪಿಡಬ್ಲುಡಿ- ಎ- ಅಭ್ಯರ್ಥಿಗಳು- 03
ಪಿಡಬ್ಲುಡಿ- ಬಿ- ಅಭ್ಯರ್ಥಿಗಳು- 03
ಪಿಡಬ್ಲುಡಿ- ಸಿ- ಅಭ್ಯರ್ಥಿಗಳು- 12
ಪಿಡಬ್ಲುಡಿ- ಡಿ- ಅಭ್ಯರ್ಥಿಗಳು- ಇಲ್ಲ
ಖಾಲಿ ಇರುವ ಉದ್ಯೋಗಗಳ ಸಂಖ್ಯೆ – 1,135
ಅಭ್ಯರ್ಥಿಗಳಿಗೆ ವಿದ್ಯಾರ್ಹತೆ
10ನೇ ತರಗತಿ ಪಾಸ್ ಆಗಿರಬೇಕು
ಅರ್ಜಿ ಶುಲ್ಕ :
ಸಾಮಾನ್ಯ ಅಭ್ಯರ್ಥಿಗಳಿಗೆ- 100 ರೂಪಾಯಿ
ಎಸ್ಸ್ಸಿ, ಎಸ್ಟಿ, ಮಹಿಳೆಯರು, ವಿಶೇಷ ಚೇತನರು, ಟ್ರಾನ್ಸ್ ವುಮೆನ್- ಶುಲ್ಕ ಇಲ್ಲ
ಮಾಸಿಕ ಸಂಬಳ :
GDS ಹುದ್ದೆಗೆ- 10,000 ದಿಂದ 24,470 ರೂಪಾಯಿಗಳು
BPM ಹುದ್ದೆಗೆ- 12,000 ದಿಂದ 29,380 ರೂಪಾಯಿಗಳು
ABPM ಹುದ್ದೆಗೆ- 10,000 ದಿಂದ 24,470 ರೂಪಾಯಿಗಳು
ಅಭ್ಯರ್ಥಿಯ ವಯಸ್ಸು:
18 ರಿಂದ 40 ವರ್ಷದ ಒಳಗಿನ ಅಭ್ಯರ್ಥಿಗಳು
ಈ ಉದ್ಯೋಗದ ಮುಖ್ಯವಾದ ದಿನಾಂಕಗಳು
ಅರ್ಜಿ ಸಲ್ಲಿಕೆಯ ಪ್ರಾರಂಭದ ದಿನಾಂಕ- 10 ಫೆಬ್ರುವರಿ 2025.
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ- 03 ಮಾರ್ಚ್ 2025
ಅರ್ಜಿಯಲ್ಲಿ ತಪ್ಪಿದ್ದರೇ ತಿದ್ದಪಡಿಗೆ ಅವಕಾಶ- 06 ರಿಂದ 08 ಮಾರ್ಚ್ 2025
ಹೆಚ್ಚಿನ ಮಾಹಿತಿಗಾಗಿ- https://indiapostgdsonline.cept.gov.in/Notifications1/Model_Notification.pdf
ಹುದ್ದೆಗಳ ವರ್ಗೀಕರಣ-https://indiapostgdsonline.cept.gov.in/Notifications1/Final_Post_Consolidation.pdf
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಇಲ್ಲಿ ನೀಡಲಾಗಿರುವ ವೆಬ್ಸೈಟ್ https://indiapostgdsonline.gov.in/ ಭೇಟಿ ನೀಡಿ ಹೆಸರು ನೋಂದಾಯಿಸಿ (Register name). ಲಾಗಿನ್ ಆಗಿ ವಿವರ ನಮೂದಿಸಿ ಸೂಕ್ತ ದಾಖಲೆಗಳ (Appropriate documents) ಸಹಿತ ಅರ್ಜಿ ಭರ್ತಿ ಮಾಡಬೇಕು. ನಿಗದಿ ಅಭ್ಯರ್ಥಿಗಳು ಮಾತ್ರವೇ ಶುಲ್ಕ ಪಾವತಿಸಬೇಕು. ಹೆಚ್ಚಿನ ಮಾಹಿತಿಗೆ ಅದೇ ವೆಬ್ಸೈಟ್ನಲ್ಲಿ ಸಿಗುವ ಅಧಿಸೂಚನೆ ಓದಿಕೊಳ್ಳಬಹುದಾಗಿದೆ.