- ಕಾರ್ಮಿಕರ ಕನಿಷ್ಠ (Minimum of workers) ವೇತನ
- ರಾಜ್ಯ ಸರ್ಕಾರದಿಂದ (State Govt) ಪರಿಷ್ಕೃತ ಅಧಿಸೂಚನೆ ಪ್ರಕಟ
- ಶೇ. 5 ರಿಂದ 10 ರಷ್ಟು ದರಗಳನ್ನು ಪರಿಷ್ಕರಿಸಲು ಸೂಚನೆ (Good news for labours)
Bengaluru: ವಿವಿಧ ಕೌಶಲ ಸಹಿತ (various skills) ಮತ್ತು ಕೌಶಲ ರಹಿತ (Unskilled) ಕಾರ್ಮಿಕರ ಕನಿಷ್ಠ ವೇತನಕ್ಕೆ ಸಂಬಂಧಿಸಿದಂತೆ ಕಾರ್ಮಿಕರ ಇಲಾಖೆ ಪರಿಷ್ಕೃತ ಅಧಿಸೂಚನೆಗಳನ್ನು ಹೊರಡಿಸಿದೆ. ಪರಿಷ್ಕೃತ ಅಧಿಸೂಚನೆ ಪ್ರಕಾರ, ಶೌಚಾಲಯ (Toilet) , ಸ್ನಾನಗೃಹಗಳು (Bathrooms) , ಒಳ ಚರಂಡಿಗಳನ್ನು ಶುಚಿ ಮಾಡುವ ಕೆಲಸಗಾರರಿಗೆ ದಿನಕ್ಕೆ ರೂ. 989, ತಿಂಗಳಿಗೆ ರೂ. 21,251.30 ಆಗಿದೆ.
ಅತಿ ಕುಶಲ ಎಲೆಕ್ಟ್ರಿಷಿಯನ್ಗಳಿಗೆ (Skilled electricians) ದಿನಗೂಲಿ ದಿನಕ್ಕೆ 1,316 ಆಗಿದ್ದು, ತಿಂಗಳಿಗೆ ರೂ. 34,225. 42 ಆಗಿದೆ. ನುರಿತ ಎಲೆಕ್ಟ್ರಿಷಿಯನ್ಗಳಿಗೆ (Electricians) ದಿನಗೂಲಿ 1,196.69 ಮತ್ತು ತಿಂಗಳಿಗೆ 31,114.02 ರೂ. ಆಗಿದೆ. ಅರೆ ಕುಶಲ ಕಾರ್ಮಿಕರಿಗೆ (skilled workers) ದಿನಕ್ಕೆ ರೂ. 1,087.90 ಆಗಿದ್ದು, ತಿಂಗಳಿಗೆ 28,285 ರೂ. ಆಗಿದೆ.
ಇತರ ವಲಯಗಳಲ್ಲಿ, ಅತಿ ಕೌಶಲ ಕೆಲಸಗಾರರಿಗೆ ಕನಿಷ್ಠ ದೈನಂದಿನ ವೇತನ ರೂ 1,196.69 ರಿಂದ ರೂ. 989 ರಷ್ಟಿರುತ್ತದೆ ಆದರೆ ಕೌಶಲ ರಹಿತ ಕೆಲಸಗಾರರು ದಿನಕ್ಕೆ ರೂ 743 ರಿಂದ ರೂ 899.09 ರವರೆಗಿನ ವೇತನಕ್ಕೆ ಅರ್ಹರಾಗಿರುತ್ತಾರೆ.ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC) ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದೆ.ಕರ್ನಾಟಕ ರಾಜ್ಯದಾದ್ಯಂತ (All over the state) ಕನಿಷ್ಠ ವೇತನ ಕಾಯ್ದೆ 1984ರ ಕಲಂ 5(1) (ಎ) ಹಾಗೂ 5(1) ಬಿ ರಡಿ ಇದುವರೆಗೂ 81 ಅಧಿಸೂಚಿತ ಉದ್ದಿಮೆಗಳಿಗೆ (Notified enterprises) ಪ್ರತ್ಯೇಕವಾದ ವೇತನ ದರಗಳನ್ನು ನಿಗದಿಪಡಿಸಿ,

ಪರಿಷ್ಕರಿಸಿ ಅಧಿಸೂಚನೆ (Revise notification) ಹೊರಡಿಸಲಾಗುತಿತ್ತು. 2022-23ನೇ ಸಾಲಿನಲ್ಲಿ ವಿವಿಧ ಅನುಸೂಚಿತ (Various schedules in line) ಉದ್ದಿಮೆಗಳಿಗೆ ಸಂಬಂಧಿಸಿದ ಒಟ್ಟು 34 ಅನುಸೂಚಿತ ಉದ್ದಿಮೆಗಳಿಗೆ ಸದರಿ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಕನಿಷ್ಠ ವೇತನಕ್ಕೆ (Minimum wage) ಹೆಚ್ಚುವರಿಯಾಗಿ ಶೇ. 5 ರಿಂದ 10 ರಷ್ಟು ಏರಿಕೆ ಮಾಡಿದ ದರಗಳನ್ನು ಪರಿಷ್ಕರಿಸಿ (Revise) ಅಧಿಸೂಚನೆ ಹೊರಡಿಸಲಾಗಿದೆ.
ಸದರಿ ಅಧಿಸೂಚನೆಗಳನ್ನು ಎಐಟಿಯುಸಿ ಕಾರ್ಮಿಕ (AITUC worker) ಸಂಘದವರು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಪ್ರಶ್ನಿಸಿದ್ದರಿಂದ ಅದನ್ನು ಹೈಕೋರ್ಟ್ ರದ್ದುಗೊಳಿಸಿತ್ತು (High Court overruled) . ಸುಪ್ರೀಂಕೋರ್ಟ್ ನೀಡಿರುವ ಮಾರ್ಗಸೂಚಿಗಳ ಅನ್ವಯ ಕನಿಷ್ಠ ವೇತನ (Minimum wage) ಲೆಕ್ಕಾಚಾರ ಹಾಕಿ ಹೊಸದಾಗಿ ಅಧಿಸೂಚನೆ ಹೊರಡಿಸುವಂತೆ ನಿರ್ದೇಶಿಸಲಾಗಿತ್ತು.
ಇದನ್ನು ಓದಿ : http://ಕುಡಿಯುವ ಬಾಟಲಿ ನೀರು ಶೇಕಡ 50ರಷ್ಟು ಕಳಪೆ: ಆಹಾರ ಇಲಾಖೆ ಮಾಹಿತಿ
ವಿವಿಧ ಅನುಸೂಚಿತ ಉದ್ದಿಮೆಗಳಲ್ಲಿ ವಲಯವಾರು ಹಾಗೂ ಕುಶಲವಾರು ವೇತನ (Skilled wage) ದರದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಹಾಗೂ ಎಲ್ಲಾ ವರ್ಗದ ಕಾರ್ಮಿಕರಿಗೂ ಸಮಾನವಾದ (Equal to workers) ಕನಿಷ್ಠ ವೇತನ ದೊರೆಯಬೇಕೆಂಬ ಸದುದ್ದೇಶದಿಂದ ಈ ಹಿಂದೆ ಅನುಸೂಚಿತ ಉದ್ದಿಮೆವಾರು ಪ್ರತ್ಯೇಕವಾಗಿ ಅಧಿಸೂಚನೆಗಳನ್ನು (Separate notifications) ಹೊರಡಿಸುತ್ತಿದ್ದ ಕ್ರಮದ ಬದಲಾಗಿ ಏಕರೂಪ ಅಧಿಸೂಚನೆ ಹೊರಡಿಸಿದೆ ಎಂದು (Good news for labours) ಅಧಿಸೂಚನೆಯಲ್ಲಿ ತಿಳಿಸಲಾಗಿದೆ.