• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ರಾಜ್ಯದ ಸಿನಿಪ್ರಿಯರಿಗೆ ಸಿಹಿ ಸುದ್ದಿ: ಇನ್ಮುಂದೆ ಸಿನಿಮಾ ಟಿಕೆಟ್ ದರ 200 ರೂಪಾಯಿ ಮಾತ್ರ

Shwetha Mohan by Shwetha Mohan
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌, ಸಿನಿಮಾ
ರಾಜ್ಯದ ಸಿನಿಪ್ರಿಯರಿಗೆ ಸಿಹಿ ಸುದ್ದಿ: ಇನ್ಮುಂದೆ ಸಿನಿಮಾ ಟಿಕೆಟ್ ದರ 200 ರೂಪಾಯಿ ಮಾತ್ರ
0
SHARES
9
VIEWS
Share on FacebookShare on Twitter
  • ಇನ್ಮುಂದೆ 200 ರೂಪಾಯಿ ಇದ್ದರೆ ಸಾಕು ಥಿಯೇಟರ್ ಅಲ್ಲಿ ಸಿನಿಮಾ ನೋಡ್ಬೋದು
  • ಈಗಾಗಲೇ ರಾಜ್ಯ ಸರ್ಕಾರದಿಂದ ಆದೇಶ ಪ್ರಕಟ, ಗೆಜೆಟ್ ನೋಟೀಫಿಕೇಷನ್ ಬಾಕಿ
  • ಎಲ್ಲ ಮಲ್ಟಿಪ್ಲೆಕ್ಸ್, ಸಿಂಗಲ್ ಸ್ಕ್ರೀನ್, ಥಿಯೇಟರ್ ನಲ್ಲಿ ಕೇವಲ 200 ರೂ. ಟಿಕೆಟ್ ದರ ನಿಗದಿ

Bengaluru: ಕರ್ನಾಟಕದ ಸಿನಿಪ್ರಿಯರಿಗೆ ಶುಕ್ರವಾರದಂದು ರಾಜ್ಯ ಸರ್ಕಾರ(State Govt) ದೊಡ್ಡ ಗಿಫ್ಟ್ ನೀಡಿದೆ. ಇನ್ನು ಮುಂದೆ ಮಲ್ಟಿಪ್ಲೆಕ್ಸ್,

ಸಿಂಗಲ್ ಸ್ಕ್ರೀನ್ ಸೇರಿದಂತೆ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ(cinemas) ಸಿನಿಮಾ ಟಿಕೆಟ್ ದರವನ್ನು(Movie ticket price) ಗರಿಷ್ಠ ₹200ಕ್ಕೆ ಮಿತಿ ಇಡಲಾಗಿದೆ.

ಇದಕ್ಕಾಗಿ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದ್ದು, ಅಂತಿಮ ಗ್ಯಾಜೆಟ್ ಅಧಿಸೂಚನೆ(Gadget notification) ಹೊರಬಿದ್ದ ಕೂಡಲೇ ಹೊಸ ನಿಯಮ ಜಾರಿಗೆ ಬರಲಿದೆ.

ಈ ನಿರ್ಧಾರದಿಂದ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾವನ್ನು ನೋಡುವುದು ಸಾಮಾನ್ಯ ಜನತೆಗೆ ಇನ್ನಷ್ಟು ಸುಲಭವಾಗಲಿದೆ. ಈ ವರ್ಷದ ರಾಜ್ಯ ಬಜೆಟ್ ಮಂಡನೆಯ ವೇಳೆ

ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ಅವರು, “ಸಿನಿಮಾ ಟಿಕೆಟ್ ದರವನ್ನು ಗರಿಷ್ಠ ₹200ಕ್ಕೆ ನಿಗದಿಪಡಿಸಲಾಗುವುದು” ಎಂದು ಭರವಸೆ ನೀಡಿದ್ದರು.

ಆಗಿನಿಂದಲೇ ಸಿನಿಪ್ರಿಯರು ಈ ನಿರ್ಧಾರದ ಜಾರಿಯನ್ನು ಕಾತರದಿಂದ ಕಾಯುತ್ತಿದ್ದರು. ಈಗ ಆ ಘೋಷಣೆ ಅಧಿಕೃತವಾಗಿ ಜಾರಿಯಾಗಲಿದೆ.

Good news for movie lovers
CM Siddaramaiah
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಹೊಸ ಸಿನಿಮಾಗಳು ಬಿಡುಗಡೆಯಾದಾಗ ಟಿಕೆಟ್ ದರವು 500 ರೂ.ರಿಂದ 1,000 ರೂ., ಕೆಲವೊಮ್ಮೆ 2,000 ರೂ.ವರೆಗೂ ಏರಿಕೆಯಾಗುತ್ತಿತ್ತು.

ದೊಡ್ಡ ಬಜೆಟ್ ಸಿನಿಮಾಗಳ ಅಭಿಮಾನಿ ಹುಚ್ಚು, ಫಸ್ಟ್-ಡೇ-ಫಸ್ಟ್-ಶೋ ಕ್ರೇಜ್ ಇತ್ಯಾದಿ ಕಾರಣಗಳಿಂದ ಚಿತ್ರಮಂದಿರಗಳು ಬೇಕಾಬಿಟ್ಟಿಯಾಗಿ ದರ ಏರಿಸುತ್ತಿದ್ದವು.

ಈ ಪರಿಸ್ಥಿತಿಯಿಂದ ಸಾಮಾನ್ಯ ಪ್ರೇಕ್ಷಕರು ಸಿನಿಮಾವನ್ನು ನೋಡುವುದು ಕಷ್ಟವಾಗುತ್ತಿತ್ತು.ಈ ದುರುಪಯೋಗವನ್ನು ತಡೆಯಲು ಸರ್ಕಾರವೇ ಹಸ್ತಕ್ಷೇಪಿಸಿ ₹200 ಗರಿಷ್ಠ ಮಿತಿಯನ್ನು ನಿಗದಿಪಡಿಸಿದೆ.

ಇದರ ಮೂಲಕ “ಸಿನಿಮಾ ಎಲ್ಲರಿಗೂ ಲಭ್ಯವಾಗಬೇಕು” ಎಂಬ ಧೋರಣೆಯನ್ನು ಸರ್ಕಾರ ಅನುಸರಿಸಿದೆ ಎಂದು ಹೇಳಬಹುದು.

ಇನ್ನು ಈ ನಿರ್ಧಾರ ಹಠಾತ್ ಆಗಿ ಬಂದದ್ದಲ್ಲ. ಸರ್ಕಾರ ಜುಲೈ ತಿಂಗಳಲ್ಲೇ ಪ್ರಾಥಮಿಕ ಅಧಿಸೂಚನೆ ಹೊರಡಿಸಿ, 15 ದಿನಗಳೊಳಗೆ ಸಾರ್ವಜನಿಕರಿಂದ ಮತ್ತು ಚಿತ್ರಮಂದಿರ ಮಾಲೀಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು.

ಆ ಅವಧಿಯಲ್ಲಿ ಹಲವು ಅಭಿಪ್ರಾಯಗಳು ಬಂದಿದ್ದು, ಅವುಗಳನ್ನು ಪರಿಶೀಲಿಸಿದ ನಂತರವೇ ಈಗ ಅಂತಿಮ ಆದೇಶ ಹೊರಡಿಸಲಾಗಿದೆ. ಇನ್ನು ಗ್ಯಾಜೆಟ್ ಪ್ರಕಟಣೆಯ ನಂತರ ನಿಯಮ ಕಡ್ಡಾಯವಾಗಲಿದೆ.

ಹೊಸ ನಿಯಮ ರಾಜ್ಯದ ಎಲ್ಲಾ ಚಿತ್ರಮಂದಿರಗಳಿಗೆ ಅನ್ವಯಿಸದಿರಬಹುದು. 75 ಸೀಟುಗಳು ಅಥವಾ ಅದಕ್ಕಿಂತ ಕಡಿಮೆ ಆಸನ ಸಾಮರ್ಥ್ಯ ಹೊಂದಿರುವ ಮಿನಿ ಥಿಯೇಟರ್‌ಗಳನ್ನು ಮಾತ್ರ ಈ ನಿಯಮದಿಂದ ಹೊರಗಿಡಲಾಗಿದೆ.

ಅಂದರೆ ಇಂತಹ ಸಣ್ಣ ಚಿತ್ರಮಂದಿರಗಳು ತಮ್ಮದೇ ಆದ ದರವನ್ನು ನಿಗದಿಪಡಿಸಬಹುದು. ದೊಡ್ಡ ನಗರಗಳ ಮಲ್ಟಿಪ್ಲೆಕ್ಸ್‌ಗಳು(Multiplexes) ಹಾಗೂ ಸಾವಿರಾರು ಆಸನಗಳನ್ನು ಹೊಂದಿರುವ ಚಿತ್ರಮಂದಿರಗಳಿಗೆ ಮಾತ್ರ ಈ ನಿಯಮಕ್ಕೆ ಒಳಪಡುತ್ತದೆ.

ಇನ್ನು ಚಿತ್ರಮಂದಿರ ಮಾಲೀಕರು ಮತ್ತು ಮಲ್ಟಿಪ್ಲೆಕ್ಸ್ ನಿರ್ವಹಕರಲ್ಲಿ ಈ ನಿರ್ಧಾರ ಮಿಶ್ರ ಪ್ರತಿಕ್ರಿಯೆ ಮೂಡಿಸಿದೆ. ಕೆಲವರು ಇದರಿಂದ ವ್ಯವಹಾರಕ್ಕೆ ನಷ್ಟವಾಗಬಹುದೆಂದು ಭಾವಿಸುತ್ತಿದ್ದಾರೆ.

ವಿಶೇಷವಾಗಿ ದೊಡ್ಡ ಬಜೆಟ್ ಸಿನಿಮಾಗಳಿಗೆ ಹೂಡಿಕೆಯಾದ ಹಣವನ್ನು ಮರುಪಡೆಯಲು ಈ ಮಿತಿ ಅಡ್ಡಿಯಾಗಬಹುದೆಂಬ ಆತಂಕ ಅವರಲ್ಲಿ ವ್ಯಕ್ತವಾಗಿದೆ. ಆದರೆ ಮತ್ತೊಂದೆಡೆ,

ಸಾಮಾನ್ಯ ಜನರಿಗೆ ಅನುಕೂಲವಾಗುವುದರಿಂದ ಸಿನಿಮಾ ಹಾಲ್ಗಳಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ.ಅಭಿಮಾನಿಗಳ ದೃಷ್ಟಿಯಿಂದ ಇದು ಒಳ್ಳೆಯ ಹೆಜ್ಜೆ.

ಇದನ್ನು ಓದಿ :  ಮೊಬೈಲ್ ಬಳಕೆದಾರರೇ ಎಚ್ಚರ, ಹೆಚ್ಚಾಗುತ್ತಿದೆ e-SIM ವಂಚನೆ ಪ್ರಕರಣಗಳು

ಹೆಚ್ಚು ಜನರು ಸಿನಿಮಾಗೆ ಬರಲು ಪ್ರೇರಣೆಯಾಗುತ್ತದೆ. ಟಿಕೆಟ್ ದರ ನಿಯಂತ್ರಣದಿಂದಾಗಿ ಪ್ರೇಕ್ಷಕರ ಹಿತ ಕಾಪಾಡಿದಂತಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Tags: bengaluruCinemasCM siddaramaiahMovie ticket priceMultiplexesState Govt

Related News

ಸ್ಕ್ವಾಷ್ ವಿಶ್ವಕಪ್; ಹಾಂಗ್‌ಕಾಂಗ್‌ ವಿರುದ್ಧ ಗೆದ್ದು ಬೀಗಿದ ಭಾರತ
Sports

ಸ್ಕ್ವಾಷ್ ವಿಶ್ವಕಪ್; ಹಾಂಗ್‌ಕಾಂಗ್‌ ವಿರುದ್ಧ ಗೆದ್ದು ಬೀಗಿದ ಭಾರತ

December 15, 2025
ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ
ಪ್ರಮುಖ ಸುದ್ದಿ

ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ

December 15, 2025
ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ
ದೇಶ-ವಿದೇಶ

ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ

December 13, 2025
ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ
ಪ್ರಮುಖ ಸುದ್ದಿ

ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ

December 13, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.