Bengaluru: ನಾವೀನ್ಯತೆ, ಆವಿಷ್ಕಾರ ಹಾಗೂ ಉದ್ಯಮಶೀಲತೆಯಲ್ಲಿ ಬೆಂಗಳೂರು (Bangalore) ಮುಂಚೂಣಿಯಲ್ಲಿದೆ. ಆಟೋಮೊಬೈಲ್ (Automobile) ಕ್ಷೇತ್ರದ ಹಬ್ ಆಗಿಯೂ ಬೆಳೆಯುತ್ತಿದೆ. ಹೀಗಾಗಿ, ಬೆಂಗಳೂರಿನಲ್ಲಿ (Bengaluru) ಅಂತಾರಾಷ್ಟ್ರೀಯ ಆಟೋಮೋಟಿವ್ ಟೆಕ್ನಾಲಜಿ ಕೇಂದ್ರ-ಐಕ್ಯಾಟ್ (Establishment of ICAT center in Bangolore) ಮೂರನೇ ಕೇಂದ್ರ ಸ್ಥಾಪನೆಯಾಗಲಿದೆ ಎಂದು ಕೇಂದ್ರ ಕೈಗಾರಿಕಾ ಸಚಿವ ಹೆಚ್ಡಿ ಕುಮಾರಸ್ವಾಮಿ (HD Kumarasawmy) ತಿಳಿಸಿದರು.

ಕೆಲವು ಕಡೆಗಳಲ್ಲಿ ನಿರೋದ್ಯೋಗ ಸಮಸ್ಯೆಯಿದೆ. ಒಳ್ಳೆಯ ಶಿಕ್ಷಣ ಪಡೆದ ನವ ಯುವಕರಿಗೆ ಕೆಲಸವಿರದ ಹಾಗಾಗಿದೆ. ಇವೆಲ್ಲವುಗಳಿಗೆ ಉತ್ತಮ ಪರಿಹಾರವೆಂದರೆ ಹೊಸ ಹೊಸ ಕಂಪನಿಗಳು ಕರ್ನಾಟಕದಲ್ಲಿ ಸ್ಥಾಪನೆ ಆಗುವುದು.ಬೆಂಗಳೂರಿನಲ್ಲಿ ಐಕ್ಯಾಟ್ (Icat) ಸ್ಥಾಪನೆ ಮಾಡುವುದರಿಂದ ಎಲೆಕ್ಟ್ರಿಕ್ ವಾಹನ ತಂತ್ರಜ್ಞಾನ (Electric vehicle technology), ಸಾಫ್ಟ್ವೇರ್ ನಿಯಂತ್ರಿತ ವಾಹನಗಳು (Software controlled vehicles), ಸ್ವಯತ್ತ ವ್ಯವಸ್ಥೆಗಳು ಮತ್ತು ದತ್ತಾಂಶ ಸುರಕ್ಷತೆಯ ದೃಷ್ಟಿಯಲ್ಲಿ ಐಕ್ಯಾಟ್ ಕೇಂದ್ರವು ನಿರ್ಣಾಯಕವಾಗಿ ಕೆಲಸ ಮಾಡುತ್ತದೆ.
ಇನ್ನು ಬೆಂಗಳೂರಿನಲ್ಲಿ ಐಕ್ಯಾಟ್ ಕೇಂದ್ರ ಸ್ಥಾಪನೆ ಮಾಡುವುದರಿಂದ ಅಕ್ಕಪಕ್ಕದ ರಾಜ್ಯಗಳಿಗೂ ಅನುಕೂಲವಾಗಿದೆ. ಆಟೋಮೊಬೈಲ್ (Automobile) ಆವಿಷ್ಕಾರಕ್ಕೆ ಉತ್ತೇಜನ ದೊರೆಯಲಿದೆ ಮತ್ತು ಐಕ್ಯಾಟ್ ಸ್ಥಾಪನೆಯಿಂದ ಮುಂದಿನ ಪೀಳಿಗೆಗೆ ಆಟೋಮೊಬೈಲ್ ಕ್ಷೇತ್ರದಲ್ಲಿ ಹೊಸ ಅವಿಷ್ಕಾರಕ್ಕೆ ಹೆಚ್ಚು ಉತ್ತೇಜನ ದೊರೆಯಲಿದೆ.ಇದಕ್ಕೂ ಮುನ್ನ ಗುರುಗ್ರಾಮ್ ಬಳಿಯ ಮನೇಸರ್‌ನಲ್ಲಿರುವ ಐಸಿಎಟಿಯ (ICAT) ಎರಡು ಕೇಂದ್ರಗಳಿಗೆ ಭೇಟಿ ನೀಡಿದ ಹೆಚ್ಡಿ ಕುಮಾರಸ್ವಾಮಿ, ಅವುಗಳ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.