Bengaluru: ನಿತ್ಯ ಲಕ್ಷಾಂತರ ಜನ ಕೆಎಸ್ಆರ್ಟಿಸಿ (KSRTC) ಬಸ್ಗಳಲ್ಲಿ ವಿವಿಧ ಸ್ಥಳಗಳಿಗೆ ಪ್ರಯಾಣ ಮಾಡುತ್ತಾರೆ. ಕೆಲ ಬಾರಿ ಟಿಕೆಟ್ ಪಡೆಯಲು ಕ್ಯಾಶ್ ನೀಡಿದಾಗ ಚಿಲ್ಲರೆಗಾಗಿ ಕಂಡಕ್ಟರ್ ಹಾಗೂ ಪ್ರಯಾಣಿಕರ ನಡುವೆ ಜಗಳಗಳು ಆಗಿರುವುದಿದೆ. ಚಿಲ್ಲರೆ ಇಲ್ಲದೆ ಪ್ರಯಾಣಿಕರು ಬಸ್ ಇಳಿಯುವಂತಹ ಪರಿಸ್ಥಿತಿಯನ್ನೂ ಎದುರಿಸಿದ್ದಾರೆ.ಇದನ್ನು ತಪ್ಪಿಸಲು ಈಗ ಕೆಎಸ್ಆರ್ಟಿಸಿ ಮುಂದಾಗಿದೆ. ಪ್ರಯಾಣಿಕರಿಗೆ ಅನುಕೂಲವಾಗಲೆಂದು ಗೂಗಲ್ ಪೇ, ಫೋನ್ ಪೇ (Google Pay, Phone Pay) ಮೂಲಕ ಟಿಕೆಟ್ ಹಣ ಪಾವತಿಸುವ ವ್ಯವಸ್ಥೆಯನ್ನು ಕೆಎಸ್ಆರ್ಟಿಸಿ ಜಾರಿಗೆ ತರಲು ನಿರ್ಧರಿಸಿದೆ.

ಹೀಗಾಗಿ ಪ್ರಯಾಣಿಕರ ಹಾಗೂ ಕಂಡಕ್ಟರ್ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಕೆಎಸ್ಆರ್ಟಿಸಿ ಗೂಗಲ್ ಪೇ, ಫೋನ್ ಪೇ ಮೂಲಕ ಹಣ ಪಾವತಿಸುವ ವ್ಯವಸ್ಥೆ ಜಾರಿಗೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ವ್ಯವಸ್ಥೆ ಜಾರಿಗೆಯಾದರೆ ಕ್ಯಾಶ್ ಬದಲು ಪ್ರಯಾಣಿಕರು ಸಲೀಸಾಗಿ ಗೂಗಲ್ ಪೇ, ಫೋನ್ ಪೇ ಮೂಲಕ ಹಣ ಪಾವತಿಸಬಹುದು. ಕೆಎಸ್ಆರ್ಟಿಸಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರ ಬಳಿ ಗೂಗಲ್ ಪೇ, ಫೋನ್ ಪೇ ಇದ್ದರೆ ಆನ್ಲೈನ್ ಪೇಮೆಂಟ್ (Online Payment) ಆರಾಮವಾಗಿ ಮಾಡಬಹುದು.
ಇತ್ತೀಚಿಗೆ ಹಲವೆಡೆ ಕ್ಯಾಶ್ ಲೆಸ್ ವ್ಯವಹಾರ ಜಾರಿಯಲ್ಲಿದೆ.
ಹಾಗಾಗಿ ಆನ್ಲೈನ್ ಪೇಮೆಂಟ್ ಅನ್ನು ಜನ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಕೈಯಲ್ಲಿ ದುಡ್ಡು ಇಲ್ಲ ಅಂದರೆ ಮೊಬೈಲ್ ಫೋನ್ ಇದ್ದರೆ ಸಾಕು ಹಣ ಪಾವತಿ ಮಾಡುವ ಮೂಲಕ ಎಲ್ಲಿಗೆ ಬೇಕಾದರೂ ಪ್ರಯಾಣ ಮಾಡಬಹುದು. ಕೆಲ ಬಾರಿ ಹಣ ಕೈಯಲ್ಲಿ ಇಲ್ಲದೇ ಇದ್ದಾಗ, ಕಳೆದುಕೊಂಡಾಗ ಅಥವಾ ಕಡಿಮೆ ಬಿದ್ದಾಗ ಸಹ ಆನ್ಲೈನ್ ಮೂಲಕ ಹಣ ಪೇ ಮಾಡಿ ಪ್ರಯಾಣ ಮಾಡಬಹುದು.
ಹಾಗಾಗಿ ಕೆಎಸ್ಆರ್ಟಿಸಿ ಖಾಸಗಿ ಕಂಪನಿಯೊಂದರಿಂದ 10245 ಸಾವಿರ ಇಟಿಎಂ ಟಿಕೆಟ್ ಮಷೀನ್ (ETM Ticket Machine)ಗಳನ್ನು ಖರೀದಿಸಲು ಮುಂದಾಗಿದೆ. ಒಂದು ಮಷೀನ್ಗೆ ಪ್ರತಿ ತಿಂಗಳು 645 ರೂಪಾಯಿ ಬಾಡಿಗೆ ಆಧಾರದ ಮೇಲೆ ಖರೀದಿಸಲಾಗುತ್ತದೆ. ಈ ಮಷಿನ್ಗಳಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ (Credit Card, Debit Card) ಬಳಸಿ ಪ್ರಯಾಣಿಕರು ಟಿಕೆಟ್ ಪಡೆಯಬಹುದಾಗಿದೆ.