Karwar: ದೂದ್ ಸಾಗರ (Dudh Sagar) ಹಾಗೂ ಸೋನಾಲಿಂ ಮಾರ್ಗ ಮಧ್ಯೆ ಗೂಡ್ಸ್ ರೈಲು ಹಳಿ ತಪ್ಪಿದ್ದು, ಬೆಳಗಾವಿ-ಹುಬ್ಬಳ್ಳಿ ಮಾರ್ಗದಲ್ಲಿ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ಕಲ್ಲಿದ್ದಲು ಕೊಂಡೊಯ್ಯುತ್ತಿದ್ದ ಗೂಡ್ಸ್ ರೈಲು ಹಳಿ ತಪ್ಪಿರುವ ಬಗ್ಗೆ ನೈಋತ್ಯ ರೈಲ್ವೆ ಮಾಹಿತಿ ನೀಡಿದೆ.

ಗೋವಾ (Goa)ದ ವಾಸ್ಕೋದಿಂದ ಹೊಸಪೇಟೆಗೆ ತೆರಳುತ್ತಿದ್ದ ಗೂಡ್ಸ್ ರೈಲು ಹಳಿ ತಪ್ಪಿದ್ದರಿಂದ 11 ಬೋಗಿಗಳು ನೆಲಕ್ಕುರುಳಿ ಕಲ್ಲಿದ್ದಲು ವ್ಯರ್ಥವಾಗಿದೆ. ಗೋವಾದ ವಾಸ್ಕೋದಿಂದ ಹೊಸಪೇಟೆ ಬಳಿಯ ಜಿಂದಲ್ ಕಂಪನಿ (Jindal Company) ಗೆ ಕಲ್ಲಿದ್ದಲು ಕೊಂಡೊಯ್ಯುತಿದ್ದ ರೈಲು ಇದಾಗಿದೆ. ಅದೃಷ್ಟವಶಾತ್, ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಗೋವಾ ಮೂಲಕ ಸಂಚರಿಸುವ ಎರಡು ಟ್ರೈನ್ಗಳ ಸಂಚಾರ ಬಂದ್ (Bandh) ಆಗಿದ್ದು, ಸದ್ಯ ಬೆಳಗಾವಿ, ಹುಬ್ಬಳ್ಳಿ ಮಾರ್ಗದ ರೈಲು ಸಂಚಾರ ಸಮಯ ಬದಲಾಗಿದೆ. ರೈಲು ಸಂಖ್ಯೆ 17420/17022 ವಾಸ್ಕೋಡಗಾಮಾ-ತಿರುಪತಿ/ಹೈದರಾಬಾದ್ ವೀಕ್ಲಿ ಎಕ್ಸ್‌ಪ್ರೆಸ್ (Hyderbad Weekly Express) ಸೇರಿದಂತೆ ಮೂರು ರೈಲುಗಳ ಮಾರ್ಗ ಬದಲಾಯಿಸಲಾಗಿದೆ ಎಂದು ತಿಳಿಸಲಾಗಿದೆ.

ಈ ರೈಲುಗಳು ಮಡಗಾಂವ್, ಕಾರವಾರ, ಪಡೀಲ್, ಸುಬ್ರಹ್ಮಣ್ಯ ರಓಡ್, ಹಾಸನ, ಅರಸೀಕೆರೆ (Hassan, Araseekere), ಚಿಕ್ಕಜಾಜೂರು, ರಾಯದದುರ್ಗ, ಮಾರ್ಗವಾಗಿ ಸಂಚರಿಸಿದ್ದು, ಬಳ್ಳಾರಿಯಿಂದ (Bellary) ಈ ರೈಲುಗಳು ನಿಗದಿತ ಮಾರ್ಗದಲ್ಲಿ ಮುಂದುವರಿಯಲಿವೆ.
Goods train derails near Dudhsagar Today Kannada Live
ರೈಲು ಸಂಖ್ಯೆ 12779 ವಾಸ್ಕೋಡ ಗಾಮಾ – ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ಅನ್ನು ಮಡಗಾಂವ್, ರೋಹಾ, ಪನ್ವೆಲ್, ಕಲ್ಯಾಣ್ ಮತ್ತು ಪುಣೆ ಮೂಲಕ ಕಳುಹಿಸಲಾಗಿದೆ. ಮತ್ತೊಂದು ರೈಲು ಸಂಖ್ಯೆ 12780 ಹಜರತ್ ನಿಜಾಮುದ್ದೀನ್ – ವಾಸ್ಕೋಡ ಗಾಮಾ ಎಕ್ಸ್‌ಪ್ರೆಸ್ (Vascoda Gamma Express) ಅನ್ನು ಪುಣೆ, ಕಲ್ಯಾಣ್, ಪನ್ವೆಲ್, ರೋಹಾ ಮತ್ತು ಮಡಗಾಂವ್ ಮೂಲಕ ಕಳುಹಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
A goods train has derailed between Dudh Sagar and Sonalim route and there has been a disruption in train traffic on the Belgaum-Hubli route. South Western Railway has informed about the derailment of a goods train carrying coal.
11 coaches of Nelakkuruli coal were wasted due to derailment of a goods train going from Vasco in Goa to Hospet. This is the train that was carrying coal from Vasco in Goa to Jindal Company near Hospet. Fortunately, there was no loss of life in the incident.
The traffic of two trains traveling through Goa has been bandhed, and currently the timings of the Belgaum-Hubli route have been changed. Three trains including train number 17420/17022 Vaskodagama-Tirupati/Hyderabad Weekly Express (Hyderbad Weekly Express) have been rerouted.
These trains have traveled through Madgaon, Karwara, Padil, Subrahmanya Road, Hassan, Araseekere, Chikkajazur, Rayadadurga, and from Bellary, these trains will continue on the scheduled route.