ಮುಂಬಯಿ, ನ. 25: ಗೂಗಲ್ ಪೇ ಸಂಸ್ಥೆಯು ಆಘಾತಕಾರಿ ಸುದ್ದಿಯೊಂದನ್ನು ಹೊರಹಾಕಿದೆ. ೨೦೨೧ರ ಜನವರಿಯಿಂದ ಗೂಗಲ್ ಪೇ ತನ್ನ ಪೇ ವೆಬ್ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ ತಿಳಿಸಿದೆ.
ಗೂಗಲ್ ಪೇನಿಂದ ತ್ವರಿತ ಹಣ ವರ್ಗಾವಣೆ ಸೇವೆ ಪಡೆಯಲು ಇನ್ನು ಸಾಧ್ಯವಿಲ್ಲ ಈ ಸೇವೆಗೆ ಶುಲ್ಕ ವಿಧಿಸಲು ಗೂಗಲ್ ಪೇ ನಿರ್ಧರಿಸಿದೆ. ಇನ್ನು ಮುಂದೆ ಪೆ.ಗೂಗಲ್.ಕಾಮ್ ಬಳಕೆಯಲ್ಲಿರುವುದಿಲ್ಲ. ಹಾಗಾಗಿ ಹೊಸ ಗೂಗಲ್ ಪೇ ಅಪ್ಲಿಕೇಷನ್ ಅನ್ನು ಬಳಸಿ ಕಾರ್ಯ ನಿರ್ವಹಿಸಲು ಸಂಸ್ಥೆ ಸೂಚಿಸಿದೆ.