ಹಾಲು ಉತ್ಪಾದಕರ ಸಂಘಗಳ (Government approves hike in Nandini milk prices) ಬೇಡಿಕೆಗೆ ಮಣಿದ ರಾಜ್ಯ ಸರ್ಕಾರ
KMF ನಂದಿನಿ ಹಾಲು ದರ ಹೆಚ್ಚಳಕ್ಕೆ ಸಮ್ಮತಿ ಲೀಟರ್‌ಗೆ 5 ರೂ. ಏರಿಕೆ
ಹೆಚ್ಚುವರಿ ಮೊತ್ತವನ್ನು ರೈತರು ಮತ್ತು ಒಕ್ಕೂಟಗಳಿಗೆ 70:30ರ ಅನುಪಾತದಲ್ಲಿ ಹಂಚಿಕೆ
ಕರ್ನಾಟಕದ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಎದುರಾಗಿದೆ. ರಾಜ್ಯದ ಪ್ರಮುಖ (Government approves hike in Nandini milk prices) ಹಾಲಿನ ಬ್ರ್ಯಾಂಡ್ ಆಗಿರುವ ನಂದಿನಿ ಹಾಲಿನ ದರವನ್ನು ಲೀಟರ್‌ಗೆ ₹4ರಿಂದ ₹5ರವರೆಗೆ ಹೆಚ್ಚಿಸಲು ರಾಜ್ಯ ಸರ್ಕಾರ ಸಮ್ಮತಿಸಿದೆ ಎಂದು ವರದಿಯಾಗಿದೆ.
ಹಾಲು ಉತ್ಪಾದನಾ ವೆಚ್ಚ ಹಾಗೂ ಹಾಲಿನ ಸಂಗ್ರಹಣೆ, ಸಂಸ್ಕರಣೆ ಮತ್ತು ಸಾಗಣೆ ಸೇರಿದಂತೆ ವಿವಿಧ ನಿರ್ವಹಣಾ ವೆಚ್ಚಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳು ದರ ಪರಿಷ್ಕರಣೆಗೆ ಬೇಡಿಕೆ ಇಟ್ಟಿದ್ದವು.

ಈ ಬೇಡಿಕೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ನೂತನ ದರದ ಕುರಿತು ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ. ಪ್ರಸ್ತುತ ನಂದಿನಿ ಹಾಲಿನ
ದರ ಲೀಟರ್‌ಗೆ ₹46 ಇದ್ದು, ₹4ರಿಂದ ₹5ರಷ್ಟು ಹೆಚ್ಚಳವಾದರೆ ಗ್ರಾಹಕರು ಲೀಟರ್‌ಗೆ ₹50 ಅಥವಾ ₹51 ಪಾವತಿಸಬೇಕಾಗಬಹುದು.
ಇದರಿಂದ ಪ್ರತಿದಿನ ಹಾಲು ಖರೀದಿಸುವ ಕುಟುಂಬಗಳ (Government approves hike in Nandini milk prices) ಮಾಸಿಕ ವೆಚ್ಚದಲ್ಲಿಯೂ ಏರಿಕೆಯಾಗುವ ಸಾಧ್ಯತೆ ಇದೆ.
ಹಾಲಿನ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಪ್ರತಿನಿಧಿಗಳು ಸೆಪ್ಟೆಂಬರ್ 22ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದರು.
ಹಾಲಿನ ಮಾರಾಟ ದರವನ್ನು ಲೀಟರ್‌ಗೆ ₹8ರಿಂದ ₹10ರವರೆಗೆ ಹೆಚ್ಚಿಸಬೇಕು ಹಾಗೂ ಹೈನುಗಾರರಿಗೆ ನೀಡುವ ಪ್ರೋತ್ಸಾಹಧನವನ್ನು ₹8ಕ್ಕೆ ಹೆಚ್ಚಿಸಬೇಕು ಎಂಬ ಬೇಡಿಕೆಯನ್ನು ಅವರು ಸರ್ಕಾರದ ಮುಂದಿಟ್ಟಿದ್ದರು.
ರೈತರ ಪರವಾಗಿ ಮನವಿ ಸಲ್ಲಿಸಿದ ಬಳಿಕ ಸರ್ಕಾರವು ಗ್ರಾಹಕರ ಮೇಲಿನ ಹೆಚ್ಚುವರಿ ಹೊರೆ ಮತ್ತು ಹಾಲು ಉತ್ಪಾದಕರ ಹಿತಾಸಕ್ತಿಯನ್ನು ಪರಿಗಣಿಸಿ ಮಧ್ಯಮ ಮಾರ್ಗದ ಮೂಲಕ ದರ ಪರಿಷ್ಕರಣೆ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಾಲಿನ ದರ ಪರಿಷ್ಕರಣೆ ಕುರಿತು ಅಧಿಕೃತ ಪ್ರಸ್ತಾವನೆ ಸಲ್ಲಿಸುವಂತೆ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿಗೆ
(ಕೆಎಂಎಫ್) ಸೂಚಿಸಿದ್ದಾರೆ ಎನ್ನಲಾಗಿದೆ. ಅಂತಿಮ ದರ ಮತ್ತು ಜಾರಿಗೆ ಬರುವ ದಿನಾಂಕವನ್ನು ಸರ್ಕಾರದ ಅಧಿಕೃತ ಆದೇಶದ ಬಳಿಕವೇ ಖಚಿತವಾಗಿ ತಿಳಿಯಲಿದೆ.
ರಾಜ್ಯದಲ್ಲಿ ಹೈನುಗಾರಿಕೆಗೆ ಸಂಬಂಧಿಸಿದ ಹಲವು ವೆಚ್ಚಗಳು ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚಾಗಿವೆ. ಬರ ಪರಿಸ್ಥಿತಿಯ ನಡುವೆಯೂ ರಾಜ್ಯದಲ್ಲಿ ಪ್ರತಿದಿನ ಸುಮಾರು 1.05 ಕೋಟಿ ಲೀಟರ್ ಹಾಲು ಸಂಗ್ರಹಿಸಲಾಗುತ್ತಿದೆ.
ಹಸುಗಳಿಗೆ ಅಗತ್ಯವಿರುವ ಪಶು ಆಹಾರ, ಮೇವು, ಔಷಧೋಪಚಾರ, ಕಾರ್ಮಿಕರ ಕೂಲಿ ಸೇರಿದಂತೆ ಹಾಲು ಉತ್ಪಾದನೆಗೆ ಸಂಬಂಧಿಸಿದ ಖರ್ಚುಗಳು ಏರಿಕೆಯಾಗಿವೆ. ಇದರ ಜತೆಗೆ ಹಾಲು ಒಕ್ಕೂಟಗಳ ನಿರ್ವಹಣಾ ವೆಚ್ಚವೂ ಹೆಚ್ಚಾಗಿದೆ.
ಹಾಲಿನ ಶೀತಲೀಕರಣ, ಸಂಸ್ಕರಣೆ, ಪ್ಯಾಕಿಂಗ್, ಸಾಗಣೆ ಹಾಗೂ ಇಂಧನ ವೆಚ್ಚಗಳು ಹೆಚ್ಚಿರುವುದರಿಂದ ಒಕ್ಕೂಟಗಳ ಮೇಲೆ ಆರ್ಥಿಕ ಒತ್ತಡ ಉಂಟಾಗಿದೆ.
ಹಾಲಿನ ನಿರ್ವಹಣಾ ವೆಚ್ಚವು ಪ್ರತಿ ಲೀಟರ್‌ಗೆ ಸರಾಸರಿ ₹8.25ರಿಂದ ₹10.75ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ. ಇದರಿಂದ ಪ್ರತಿ ಲೀಟರ್ ಹಾಲಿನ ಮೇಲೆ ಒಕ್ಕೂಟಗಳಿಗೆ
ಸುಮಾರು ₹2.50ರಷ್ಟು ನಷ್ಟವಾಗುತ್ತಿದೆ ಎನ್ನಲಾಗಿದೆ. ಈ ಕಾರಣಗಳಿಂದ ದರ ಪರಿಷ್ಕರಣೆಯ ಅಗತ್ಯವಿದೆ ಎಂದು ಹಾಲು ಒಕ್ಕೂಟಗಳು ಸರ್ಕಾರದ ಗಮನಕ್ಕೆ ತಂದಿವೆ.
ನಂದಿನಿ ಹಾಲಿನ ದರವನ್ನು ಕೊನೆಯ ಬಾರಿ 2025ರ ಏಪ್ರಿಲ್‌ನಲ್ಲಿ ಲೀಟರ್‌ಗೆ ₹4ರಷ್ಟು ಹೆಚ್ಚಿಸಲಾಗಿತ್ತು. ಆ ಬಳಿಕ ದರದಲ್ಲಿ ಯಾವುದೇ ಪರಿಷ್ಕರಣೆ ಮಾಡಲಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದೇ ಅವಧಿಯಲ್ಲಿ ಹಲವು ಖಾಸಗಿ ಡೇರಿ ಸಂಸ್ಥೆಗಳು ಹಾಗೂ ಹೊರ ರಾಜ್ಯದ ಹಾಲಿನ ಬ್ರ್ಯಾಂಡ್‌ಗಳು ತಮ್ಮ ಮಾರಾಟ ದರದಲ್ಲಿ ಬದಲಾವಣೆ ಮಾಡಿವೆ.
ಈ ಹಿನ್ನೆಲೆಯಲ್ಲಿ ನಂದಿನಿಯ ಪ್ರಸ್ತುತ ದರವು ಇತರೆ ಕೆಲವು ಬ್ರ್ಯಾಂಡ್‌ಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ ಎಂದು ಕೆಎಂಎಫ್ ಮೂಲಗಳು ಹೇಳಿವೆ.
ಆದರೆ, ಹೊಸ ದರ ಜಾರಿಯಾದರೆ ಹಾಲಿನ ಜೊತೆಗೆ ನಂದಿನಿ ಮೊಸರು, ಮಜ್ಜಿಗೆ ಮತ್ತು ಇತರ ಹಾಲಿನ ಉತ್ಪನ್ನಗಳ ಬೆಲೆಯಲ್ಲಿಯೂ ಬದಲಾವಣೆ ಸಂಭವಿಸುವ ಸಾಧ್ಯತೆ ಇದೆ.
ಇದರಿಂದ ನೇರವಾಗಿ ಹಾಲು ಖರೀದಿಸುವ ಗ್ರಾಹಕರಷ್ಟೇ ಅಲ್ಲದೆ, ಹಾಲಿನ ಉತ್ಪನ್ನಗಳನ್ನು ನಿಯಮಿತವಾಗಿ ಬಳಸುವ ಕುಟುಂಬಗಳಿಗೂ ಹೆಚ್ಚುವರಿ ಖರ್ಚು ಎದುರಾಗಬಹುದು.
ದರ ಏರಿಕೆಯ ಮೂಲಕ ಸಂಗ್ರಹವಾಗುವ ಹೆಚ್ಚುವರಿ ಮೊತ್ತವನ್ನು ರೈತರು ಮತ್ತು ಹಾಲು ಒಕ್ಕೂಟಗಳ ನಡುವೆ ಹಂಚಿಕೆ ಮಾಡುವ ಪ್ರಸ್ತಾವನೆ ಇದೆ. ಪ್ರಸ್ತುತ ಜಿಲ್ಲಾ ಹಾಲು ಒಕ್ಕೂಟಗಳು ರೈತರಿಂದ ಪ್ರತಿ ಲೀಟರ್‌ಗೆ ಸುಮಾರು ₹35ರ ದರದಲ್ಲಿ ಹಾಲು ಖರೀದಿಸುತ್ತಿವೆ.
ಇದರ ಜತೆಗೆ ಹಾಲಿನ ಗುಣಮಟ್ಟ ಮತ್ತು ಘನ ಕೊಬ್ಬಿನ ಅಂಶದ ಆಧಾರದ ಮೇಲೆ ಸರ್ಕಾರದಿಂದ ಪ್ರತಿ ಲೀಟರ್‌ಗೆ ₹5 ಪ್ರೋತ್ಸಾಹಧನ ನೀಡಲಾಗುತ್ತಿದೆ. ಹೊಸ ದರದಿಂದ
ಲಭ್ಯವಾಗುವ ಹೆಚ್ಚುವರಿ ಮೊತ್ತವನ್ನು ರೈತರು ಮತ್ತು ಜಿಲ್ಲಾಹಾಲು ಒಕ್ಕೂಟಗಳಿಗೆ 70:30ರ ಅನುಪಾತದಲ್ಲಿ ಹಂಚಿಕೆ ಮಾಡುವ ಉದ್ದೇಶವಿದೆ ಎಂದು ವರದಿಯಾಗಿದೆ.
ಹೀಗಾಗಿ ದರ ಏರಿಕೆಯ ಒಂದು ಭಾಗ ರೈತರಿಗೆ ತಲುಪುವ ನಿರೀಕ್ಷೆಯಿದೆ. ಆದರೆ ಗ್ರಾಹಕರಿಗೆ ನಿಜವಾದ ದರ ಎಷ್ಟು ಆಗಲಿದೆ, ಯಾವ ದಿನದಿಂದ ಹೊಸ ದರ ಜಾರಿಗೆ ಬರಲಿದೆ
ಮತ್ತು ಹಾಲಿನ ಇತರ ಉತ್ಪನ್ನಗಳ ಬೆಲೆ ಎಷ್ಟು ಬದಲಾಗಲಿದೆ ಎಂಬುದು ಸರ್ಕಾರದ ಅಧಿಕೃತ ಆದೇಶದ ಬಳಿಕ ಸ್ಪಷ್ಟವಾಗಲಿದೆ.
ಸದ್ಯಕ್ಕೆ ₹46 ಇರುವ ನಂದಿನಿ ಹಾಲಿನ ಬೆಲೆ ₹50–₹51ಕ್ಕೆ ಏರಿಕೆಯಾಗುವ ಸಾಧ್ಯತೆ ಗ್ರಾಹಕರಲ್ಲಿ ಚರ್ಚೆಗೆ ಕಾರಣವಾಗಿದೆ.
ಇದನ್ನು ಓದಿ : https://vijayatimes.com/dk-shivakumar-letter-to-modi/