• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಖಜಾನೆ ಸಂಘರ್ಷ ಪದ ಬಳಕೆ ಕಠಿಣವಾಗಿದ್ದರೆ ಕ್ಷಮೆ ಇರಲಿ.

Rashmitha Anish by Rashmitha Anish
in ಪ್ರಮುಖ ಸುದ್ದಿ
ಖಜಾನೆ ಸಂಘರ್ಷ ಪದ ಬಳಕೆ ಕಠಿಣವಾಗಿದ್ದರೆ ಕ್ಷಮೆ ಇರಲಿ.
0
SHARES
37
VIEWS
Share on FacebookShare on Twitter

Karnataka: ಸರ್ಕಾರಿ ನೌಕರರ ಒಕ್ಕೂಟ ಏಳನೇ ವೇತನ ಆಯೋಗ ಹಾಗೂ ಹಳೇ ಪಿಂಚಣಿ ಜಾರಿಗೆ ಒತ್ತಾಯಿಸಿ ಸರ್ಕಾರಿ ನೌಕರರು ನಡೆಸುತ್ತಿರುವ ಮುಷ್ಕರದ ಕುರಿತು ಸಾರ್ವಜನಿಕರಲ್ಲಿ (government employees union strike) ನಾನಾ ಅಭಿಪ್ರಾಯಗಳು ವ್ಯಕ್ತವಾಗಿವೆ.

ಈ ಕುರಿತು ವಿವೇಕಾನಂದ ಎಚ್.ಕೆ (Vivekananda.H.K) ಅವರು ವಿಮರ್ಶಾತ್ಮಕವಾಗಿ ಲೇಖನವೊಂದನ್ನು ಬರೆದಿದ್ದಾರೆ. ಶಾಸಕಾಂಗ ಮತ್ತು ಕಾರ್ಯಾಂಗದ ನಡುವಿನ ಈ ಸಂಘರ್ಷವನ್ನು ಹೇಗೆ ಬಣ್ಣಿಸಿದ್ದಾರೆ ನೋಡಿ.

ಸಾರ್ವಜನಿಕ ಖಜಾನೆಯ ಹಣ ಹಂಚಿಕೆಗಾಗಿ ಶಾಸಕಾಂಗ ಮತ್ತು ಕಾರ್ಯಾಂಗದ ನಡುವಿನ ಸಂಘರ್ಷ ಎಂದು ಕರೆಯಬಹುದೇ (government employees union strike) ಇಂದಿನ ಸರ್ಕಾರಿ ನೌಕರರ ಮುಷ್ಕರವನ್ನು.

government employees union strike

ಇಲ್ಲ ಇಲ್ಲ. ನಾವು ಸುಮ್ಮನೆ ಹಣ ಪಡೆಯುತ್ತಿಲ್ಲ. ಶಾಸಕಾಂಗ ಮತ್ತು ಕಾರ್ಯಾಂಗ ಕಾರ್ಯನಿರ್ವಹಿಸುತ್ತಿರುವುದೇ ಜನರಿಗಾಗಿ. ಶಾಸಕಾಂಗ ಸಮಯದ ಮಿತಿ ಇಲ್ಲದೆ ಕೆಲಸ ಮಾಡಿದರೆ ಕಾರ್ಯಾಂಗ ದಿನದ 10 ಗಂಟೆ ಸುಮಾರು 30 ವರ್ಷಗಳಷ್ಟು ದೀರ್ಘಕಾಲ ಕೆಲಸ ಮಾಡುತ್ತದೆ.

ಈಗಲೂ ಲಕ್ಷಾಂತರ ಅವಶ್ಯಕ ಹುದ್ದೆಗಳು ಭರ್ತಿಯಾಗದೆ ಖಾಲಿ ಇದ್ದರೂ ಕೆಲಸದ ಒತ್ತಡವನ್ನು ನಿಭಾಯಿಸಿ ಕೆಲಸ ಮಾಡುತ್ತಿದ್ದೇವೆ. ನಾವು ಆರ್ಥಿಕವಾಗಿ ಸಮಾಧಾನಕರ ಪರಿಸ್ಥಿತಿಯಲ್ಲಿ ಇಲ್ಲದಿದ್ದರೆ ಸಾರ್ವಜನಿಕ ಸೇವೆಯನ್ನು ನೆಮ್ಮದಿಯಾಗಿ ಮಾಡಲು ಸಾಧ್ಯವೇ.

ಆದ್ದರಿಂದ ತಕ್ಷಣದಿಂದಲೇ ನಮ್ಮ ಕಾನೂನಾತ್ಮಕ ಮತ್ತು ನ್ಯಾಯಯುತ ಬೇಡಿಕೆ ಈಡೇರಿಸಲೇ ಬೇಕು. ಅದಕ್ಕಾಗಿ ಮುಷ್ಕರ ಮಾಡುವುದು ನಮ್ಮ ಹಕ್ಕು ಎಂದು ಮುಷ್ಕರ ನಿರತರ ಅಭಿಪ್ರಾಯ.

ತಪ್ಪು ತಪ್ಪು. ಈಗಾಗಲೇ ಸಾರ್ವಜನಿಕ ಖಜಾನೆಯ ದೊಡ್ಡ ಮೊತ್ತ ಶಾಸಕಾಂಗ ಮತ್ತು ಕಾರ್ಯಾಂಗದ ಸಂಬಳ – ಸಾರಿಗೆ ಮುಂತಾದ ನಿರ್ವಹಣೆಗಾಗಿಯೇ ಖರ್ಚಾಗುತ್ತಿದೆ. ಅವರಿಗೆ ನೀಡುವ ಸಂಬಳವೇ ತುಂಬಾ ಜಾಸ್ತಿ.

ಕೋಟ್ಯಾಂತರ ಜನ ಇದಕ್ಕಿಂತ ಕಡಿಮೆ ಸಂಬಳದಲ್ಲಿ ಯಾವುದೇ ಭದ್ರತೆಯಿಲ್ಲದೇ ಬದುಕುತ್ತಿರುವಾಗ ಇನ್ನಷ್ಟು ಸಂಬಳ ಹೆಚ್ಚು ಮಾಡುವಂತೆ ಮುಷ್ಕರ ಮಾಡುವುದು ಸರಿಯಲ್ಲ. ಜೊತೆಗೆ ಸರ್ಕಾರಿ ಅಧಿಕಾರಿಗಳು ಮತ್ತು

ರಾಜಕಾರಣಿಗಳ ಮೇಲೆ ಬಹುದೊಡ್ಡ ಭ್ರಷ್ಟಾಚಾರದ ಆರೋಪಗಳಿವೆ. ಸರ್ಕಾರದ ಖಜಾನೆಯನ್ನು ಲೂಟಿ ಮಾಡುವವರು ಇವರೇ. ಇದು ಬಹುತೇಕ ನಿಜವಲ್ಲವೇ ಎಂದು ಸಾರ್ವಜನಿಕರ ಅಭಿಪ್ರಾಯ.

ಸಾರ್ವಜನಿಕ ಹಣದಿಂದಲೇ ತಮ್ಮ ಬದುಕು ರೂಪಿಸಿಕೊಂಡಿರುವ ಶಾಸಕಾಂಗ ಮತ್ತು ಕಾರ್ಯಾಂಗದ ನಡುವಿನ ಸಂಘರ್ಷದಲ್ಲಿ ಜನರಿಗೆ ತೊಂದರೆಯಾಗುವುದು ನಿಶ್ಚಿತ.

ಅದರಲ್ಲೂ ಸುಮಾರು 10 ಲಕ್ಷ ಸರ್ಕಾರಿ ಅಧಿಕಾರಿಗಳು ಒಟ್ಟಿಗೆ ಬಂದ್ ಮಾಡಿದರೆ ಇಡೀ ಆಡಳಿತ ವ್ಯವಸ್ಥೆಯೇ ಸ್ತಬ್ಧವಾಗುತ್ತದೆ. ಅದರ ಪರಿಣಾಮ ಅನುಭವಿಸುವವರು ಸಾಮಾನ್ಯ ಜನರು.

ಖಜಾನೆಗೆ ಬರುವ ಹಣವೆಷ್ಟು, ಖರ್ಚಾಗುವ ಹಣವೆಷ್ಟು, ಉಳಿತಾಯ ಅಥವಾ ಸಾಲದ ಹಣವೆಷ್ಟು, ಯಾವುದಕ್ಕೆ ಎಷ್ಟು ಖರ್ಚು ಮಾಡಬೇಕು ಎಂದು ವಾರ್ಷಿಕ ಬಜೆಟ್ ಮಂಡಿಸಿದ ಕೆಲವೇ ದಿನಗಳಲ್ಲಿ ಇಷ್ಟೊಂದು ದೊಡ್ಡ ಮುಷ್ಕರ ನಡೆಯುವುದಾದರೆ ಆಡಳಿತ ವ್ಯವಸ್ಥೆಯ ಬಗ್ಗೆ ಮರುಕ ಉಂಟಾಗುತ್ತದೆ.

ದೊಡ್ಡ ದೊಡ್ಡ ಮಂತ್ರಿಗಳು, ಅಧಿಕಾರಿಗಳಿಗೇ ತಮ್ಮ ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿದ್ದರೆ ಇನ್ನು ಆಡಳಿತ ನಡೆಸುವುದು ಹೇಗೆ. ಕನಿಷ್ಠ ನ್ಯಾಯಾಂಗವಾದರೂ ಮಧ್ಯೆ ಪ್ರವೇಶಿಸಬೇಕಲ್ಲವೇ.

ಇಲ್ಲದಿದ್ದರೆ ಮುಷ್ಕರದಿಂದ ಆಗುವ ನಷ್ಟಕ್ಕೆ ಹೊಣೆ ಯಾರು. ಆ ನಷ್ಟವನ್ನು ಬೆಲೆ ಏರಿಸುವ ಮೂಲಕ ಸರಿದೂಗಿಸಬಹುದು ಎಂಬ ಅಹಂಕಾರ ಆಡಳಿತಗಾರರಿಗೆ ಇರಬಹುದೇ.

ಅಸಂಘಟಿತ ಕಾರ್ಮಿಕರು, ಸಣ್ಣಪುಟ್ಟ ವ್ಯಾಪಾರಿಗಳು, ಶೋಷಿತರು, ದೌರ್ಜನ್ಯಕ್ಕೆ ಒಳಗಾದವರು ಇತ್ಯಾದಿ ದುರ್ಬಲ ವರ್ಗದವರು ಮುಷ್ಕರ ಹೂಡಿದರೆ ಸಹಿಸಬಹುದು. ಅಧಿಕಾರ ಕೇಂದ್ರದಲ್ಲಿ ಕುಳಿತವರೇ ಒಬ್ಬರಿಗೊಬ್ಬರು ಜಗಳವಾಡಿದರೆ ಸಾಮಾನ್ಯರ ಗತಿ ಏನು?

ವಾಸ್ತವವಾಗಿ ಸರ್ಕಾರಿ ಅಧಿಕಾರಿಗಳ ಈ ಬೇಡಿಕೆ ದೊಡ್ಡ ವಿಷಯವೇ ಅಲ್ಲ. 7ನೇ ವೇತನ ಆಯೋಗ ರಚನೆಯಾಗಿದೆ. ಅದು ಸ್ವಲ್ಪ ತಡವಾಗಿದೆ. ವರದಿ ಇನ್ನೂ ಸಿದ್ದವಾಗಿಲ್ಲ. ಅಷ್ಟರೊಳಗೆ ಚುನಾವಣೆ ಘೋಷಣೆಯಾದರೆ ಅದು ಜಾರಿಯಾಗಲು ಕೆಲವು ತಿಂಗಳು ನಿಧಾನವಾಗಬಹುದು.

ಆದರೂ ವರದಿ ಜಾರಿಯಾಗುವಾಗ ಸಾಮಾನ್ಯವಾಗಿ ಹಿಂದಿನ ತಿಂಗಳುಗಳ ಅವಧಿಯನ್ನೂ ಪರಿಗಣಿಸಿ ಅದನ್ನು ಪರಿಷ್ಕರಿಸಿ ಹಳೆಯ ಅವಧಿಯ ಸಂಬಳವನ್ನೂ ಸೇರಿಸಿ ಕೊಡಲಾಗುತ್ತದೆ. ಅಂದರೆ ಸಮಯ ಸ್ವಲ್ಪ ಹೆಚ್ಚು ಕಡಿಮೆ ಆಗಬಹುದು. ಬರಬೇಕಾದ ಹಣ ಬಹುತೇಕ ಸೇರುತ್ತದೆ.

government employees union strike

ಆಡಳಿತ ವ್ಯವಸ್ಥೆ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದೇ ಆಗಿದ್ದರೆ ಸಮಯಕ್ಕೆ ಸರಿಯಾಗಿ ವೇತನ ಆಯೋಗ ರಚಿಸಿ ನಿಗದಿತ ಅವಧಿಯೊಳಗೆ ವರದಿ ತರಿಸಿಕೊಂಡು ಯಾವುದೇ ಗೊಂದಲಗಳಿಗೆ ಆಸ್ಪದ ಇಲ್ಲದಂತೆ ಜಾರಿ ಮಾಡಬಹುದಿತ್ತು.

ಶಾಸಕಾಂಗಕ್ಕೆ ದಕ್ಷತೆ ಇಲ್ಲ ಮತ್ತು ಬೇಜವಾಬ್ದಾರಿ. ಹಾಗೆಯೇ ಕಾರ್ಯಾಂಗಕ್ಕೆ ತಾಳ್ಮೆಯಿಲ್ಲ ಮತ್ತು ಹೊಂದಾಣಿಕೆಯ ಮನೋಭಾವ ಇಲ್ಲ. ಕಷ್ಟ ಅನುಭವಿಸುವುದು ಮಾತ್ರ ಸಾಮಾನ್ಯ ಜನ.

ಶಾಸಕರುಗಳು ತಮ್ಮ ಕೆಲಸ ಸರಿಯಾಗಿ ನಿರ್ವಹಿಸದಿದ್ದರು ಒಂದೇ ದಿನದಲ್ಲಿ ತಮ್ಮ ವೇತನವನ್ನು ಯಾವುದೇ ಚರ್ಚೆ ಪ್ರತಿರೋಧ ಇಲ್ಲದೇ ದುಪ್ಪಟ ಮಾಡಿಕೊಳ್ಳುತ್ತಾರೆ. ಅಧಿಕಾರಿಗಳು ಮುಷ್ಕರ ಮಾಡಿ ತಮ್ಮ ಸಂಬಳ ಹೆಚ್ಚು ಮಾಡಿಕೊಳ್ಳುತ್ತಾರೆ.

ಕಾರ್ಮಿಕರು, ರೈತರು, ಬೀದಿ ಬದಿಯ ವ್ಯಾಪಾರಿಗಳು ದುಡಿದು ದುಡಿದು ಊಟ ಬಟ್ಟೆ ವಸತಿ ಶಿಕ್ಷಣ ಆರೋಗ್ಯಕ್ಕಾಗಿ ಜೀವನ ಪೂರ್ತಿ ಒದ್ದಾಡುತ್ತಲೇ ಪ್ರಾಣ ಬಿಡುತ್ತಾರೆ.

ಈಗ ಮುಷ್ಕರಕ್ಕೆ ಕಾರಣರಾದವರು ಮತ್ತು ಮುಷ್ಕರ ಮಾಡುತ್ತಿರುವವರು ಇಬ್ಬರೂ ಹೊಟ್ಟೆ ತುಂಬಿದವರು ಮತ್ತು ಸರ್ಕಾರಿ ಖಜಾನೆಯಿಂದ ನಿಶ್ಚಿತ ನಿರ್ದಿಷ್ಟ ಖಚಿತ ಮತ್ತು ಯಾವುದೇ ಸಂಕಷ್ಟದಲ್ಲೂ ಮೊದಲು ಹಣ

ಪಡೆಯುವವರು. ಮುಷ್ಕರದಿಂದ ತೊಂದರೆ ಒಳಗಾಗುವವರು ಆ ಖಜಾನೆಗೆ ಹಣ ತುಂಬುವವರು.

ಆದ್ದರಿಂದ ದಯವಿಟ್ಟು ಮುಷ್ಕರ ಮಾಡುವವರು ಮತ್ತು ಅದಕ್ಕೆ ಕಾರಣರಾದವರು ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ.

ಜೊತೆಗೆ ಸರ್ಕಾರಿ ಅಧಿಕಾರಿಗಳೇ ನಿಮ್ಮ ಸಂಬಳ ಹೆಚ್ಚಾದ ಮೇಲೆ ಇಡೀ ಆಡಳಿತ ವ್ಯವಸ್ಥೆಯ ಭ್ರಷ್ಟಾಚಾರ ಕಡಿಮೆಯಾಗುವಂತೆ ನೋಡಿಕೊಳ್ಳಿ.

ನಿಮ್ಮ ಸಂಘಟನೆಯನ್ನು ಕೇವಲ ನಿಮ್ಮ ಹಕ್ಕುಗಳಿಗೆ ಮಾತ್ರ ಸೀಮಿತವಾಗದೆ ಸಾರ್ವಜನಿಕ ಸೇವೆಗಾಗಿಯೂ ಮೀಸಲಿಡಿ. ಅವರ ಋಣದಲ್ಲಿ ನೀವಿದ್ದೀರಿ ಎಂಬುದನ್ನು ನೆನಪಿಟ್ಟುಕೊಳ್ಳಿ.

ಮುಖ್ಯಮಂತ್ರಿಗಳೇ ಚುನಾವಣೆಗಿಂತ ಸಾರ್ವಜನಿಕರ ಸೇವೆಗೆ ಹೆಚ್ಚು ಸಮಯ ಮೀಸಲಿಡಿ. ಈ ಸಮಸ್ಯೆಯನ್ನು ಬೇಗ ಪರಿಹರಿಸಿ.ಅದರಲ್ಲೂ ವೈದ್ಯಕೀಯ ಸಿಬ್ಬಂದಿಯೂ ಮುಷ್ಕರ ನಿರತವಾಗಿದ್ದಾರೆ.

ಏನಾದರೂ ಜೀವಹಾನಿಯಾದರೆ ಮಾಧ್ಯಮಗಳು ಅದನ್ನು ನಿಮ್ಮ ತಲೆಗೆ ಕಟ್ಟಿ ಜನರನ್ನು ರೊಚ್ವಿಗೆಬ್ಬಿಸುವ ಸಾಧ್ಯತೆಯೂ ಇದೆ. ಎಲ್ಲವನ್ನೂ ಪರಿಗಣಿಸಿ ನಿಮ್ಮ ನಿರ್ಧಾರ ತೆಗೆದುಕೊಳ್ಳಿ ಎಂದು ಮನವಿ ಮಾಡುತ್ತಾ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್. ಕೆ.
9844013068

Tags: employeesGovernmentKarnatakastrike

Related News

10 ಗಂಟೆ ನಂತ್ರ ಫ್ಲಾಟ್‌ಗೆ ಪ್ರವೇಶ ಇಲ್ಲ, ಫೋನಲ್ಲಿ ಮಾತಾಡಬಾರದು: ನಿಯಮ ತಪ್ಪಿದ್ರೆ ಬಾಡಿಗೆದಾರರಿಗೆ 1000 ರೂ. ದಂಡ!
ಪ್ರಮುಖ ಸುದ್ದಿ

10 ಗಂಟೆ ನಂತ್ರ ಫ್ಲಾಟ್‌ಗೆ ಪ್ರವೇಶ ಇಲ್ಲ, ಫೋನಲ್ಲಿ ಮಾತಾಡಬಾರದು: ನಿಯಮ ತಪ್ಪಿದ್ರೆ ಬಾಡಿಗೆದಾರರಿಗೆ 1000 ರೂ. ದಂಡ!

March 28, 2023
ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ
ಪ್ರಮುಖ ಸುದ್ದಿ

ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ

March 28, 2023
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 14 ವಿರೋಧ ಪಕ್ಷಗಳು ; ಕಾರಣ ಏನು ಗೊತ್ತಾ
Vijaya Time

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 14 ವಿರೋಧ ಪಕ್ಷಗಳು ; ಕಾರಣ ಏನು ಗೊತ್ತಾ

March 24, 2023
ಹೆಚ್ಚಾಯ್ತು ವಿಮಾನದಲ್ಲಿ ಕುಡಕರ ಕಾಟ ; ಇಂಡಿಗೋ ವಿಮಾನದಲ್ಲಿ ಮತ್ತೆ ಇಬ್ಬರು ಕುಡುಕರ ಬಂಧನ
Vijaya Time

ಹೆಚ್ಚಾಯ್ತು ವಿಮಾನದಲ್ಲಿ ಕುಡಕರ ಕಾಟ ; ಇಂಡಿಗೋ ವಿಮಾನದಲ್ಲಿ ಮತ್ತೆ ಇಬ್ಬರು ಕುಡುಕರ ಬಂಧನ

March 23, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.