- ಪ್ರಾಥಮಿಕ ಶಾಲೆಗಳಲ್ಲಿ ನಲಿ-ಕಲಿ (government end of Nali Kali in primaryschools) ಅಂತ್ಯ: ದ್ವಿಭಾಷಾ ಶಿಕ್ಷಣಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್
- 1ರಿಂದ 3ನೇ ತರಗತಿಗಳಿಗೆ ಮೋನೋಗ್ರೇಡಿಂಗ್ ವ್ಯವಸ್ಥೆ ಜಾರಿ; ಕನ್ನಡ-ಇಂಗ್ಲಿಷ್ ಸಂಯೋಜಿತ ಪಠ್ಯಕ್ರಮ ಆರಂಭ
- ರಾಜ್ಯದ 15 ಜಿಲ್ಲೆಗಳಲ್ಲಿ ದ್ವಿಭಾಷಾ ಪಠ್ಯಕ್ರಮ ಜಾರಿ; ಗುಣಮಟ್ಟದ ಶಿಕ್ಷಣದತ್ತ ಸರ್ಕಾರದ ಹೆಜ್ಜೆ
Bengaluru: ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳ ಶಿಕ್ಷಣ ವ್ಯವಸ್ಥೆಯಲ್ಲಿ (government end of Nali Kali in primaryschools) ಮಹತ್ವದ ಬದಲಾವಣೆ ಮಾಡಲು ಸರ್ಕಾರ ಮುಂದಾಗಿದೆ.
ಇತ್ತೀಚಿನ ನಿರ್ಧಾರ ಪ್ರಕಾರ, 15 ಜಿಲ್ಲೆಗಳಲ್ಲಿ ಜಾರಿಯಲ್ಲಿದ್ದ ‘ನಲಿ-ಕಲಿ’ (Nali Kali) ಕಾರ್ಯಕ್ರಮವನ್ನು ಕೈಬಿಡಲಾಗುತ್ತಿದೆ. ಈ ನಿರ್ಧಾರವನ್ನು ಶಾಲಾ ಶಿಕ್ಷಣ ಮತ್ತು
ಸಾಕ್ಷರತಾ ಇಲಾಖೆ ದೃಢಪಡಿಸಿದ್ದು, 1ನೇ ತರಗತಿಯಿಂದಲೇ ಕನ್ನಡ ಮತ್ತು ಇಂಗ್ಲಿಷ್ ದ್ವಿಭಾಷಾ ಪಾಠಕ್ರಮ ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ (Madhu Bangarappa) ಈ ಕುರಿತು ಸ್ಪಷ್ಟನೆ ನೀಡಿದ್ದು, ಹಿಂದಿನಂತೆ ಕೇವಲ ಕನ್ನಡ ಮಾಧ್ಯಮವಲ್ಲದೆ, ದ್ವಿಭಾಷಾ ಮಾದರಿಯ ಹೊಸ ಬೋಧನಾ ವಿಧಾನವನ್ನು ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ.
‘ನಲಿ-ಕಲಿ’ ಯೋಜನೆ ಮೂಲತಃ ಶಿಕ್ಷಕರ ಕೊರತೆಯಿರುವ ಶಾಲೆಗಳಲ್ಲಿ ಬಹು ತರಗತಿಗಳ ವಿದ್ಯಾರ್ಥಿಗಳಿಗೆ (government end of Nali Kali in primaryschools) ಒಂದೇ ತರಗತಿಯಲ್ಲಿ ಚಟುವಟಿಕೆ ಆಧಾರಿತ ಕಲಿಕೆಯನ್ನು ಒದಗಿಸಲು ಆರಂಭಿಸಲಾಗಿತ್ತು.
ಮಕ್ಕಳಿಗೆ ಆಟ-ಪಾಠದ ಮೂಲಕ ಕಲಿಕೆ ನೀಡುವ ಈ ವಿಧಾನವು ಕೆಲವೆಡೆ ಉತ್ತಮ ಪ್ರತಿಕ್ರಿಯೆ ಪಡೆದಿದ್ದರೂ, ಓದು-ಬರಹದ ಮೂಲ ಕೌಶಲ್ಯಗಳ ಅಭಿವೃದ್ಧಿ ಕುರಿತು ಪ್ರಶ್ನೆಗಳು ಉದ್ಭವಿಸಿವೆ.
ಮುಂದಿನ ಶೈಕ್ಷಣಿಕ ವರ್ಷದಿಂದ 1ರಿಂದ 3ನೇ ತರಗತಿಗಳಲ್ಲಿ ‘ಮೋನೋಗ್ರೇಡಿಂಗ್’ (Monograding) ವ್ಯವಸ್ಥೆ ಜಾರಿಯಾಗಲಿದ್ದು, ಪ್ರತಿ ತರಗತಿಗೆ ಪ್ರತ್ಯೇಕ ಶಿಕ್ಷಕರನ್ನು ನೇಮಕ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ಶಾಲಾ ಶಿಕ್ಷಣ ಆಯುಕ್ತ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದ್ದಾರೆ.
ಶಿಕ್ಷಣ ವಲಯದಲ್ಲಿ ಈ ನಿರ್ಧಾರ ಚರ್ಚೆಗೆ ಗ್ರಾಸವಾಗಿದೆ. ಕೆಲವು ಶಿಕ್ಷಕರು ನಲಿ-ಕಲಿ ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಮೂಡಿಸುವ ಪರಿಣಾಮಕಾರಿ ವಿಧಾನ ಎಂದು
ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು ಇದು ಮಕ್ಕಳ ಬರವಣಿಗೆ ಮತ್ತು ಓದುವ ಸಾಮರ್ಥ್ಯವನ್ನು ಬಲಪಡಿಸುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.
ರಾಯಚೂರು ಜಿಲ್ಲೆಯೊಬ್ಬ ಶಿಕ್ಷಕರ ಪ್ರಕಾರ, 1ರಿಂದ 3ನೇ ತರಗತಿಗಳಲ್ಲಿ ಈಗಾಗಲೇ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು, ಹೊಸ ದಾಖಲಾತಿಗಳು ಪ್ರಾರಂಭವಾಗುತ್ತಿರುವ ಸಂದರ್ಭದಲ್ಲಿ ಸ್ಪಷ್ಟ ಮಾರ್ಗಸೂಚಿಗಳ ಕೊರತೆ ಗೊಂದಲಕ್ಕೆ ಕಾರಣವಾಗಿದೆ.
ನಲಿ-ಕಲಿ ಮುಂದುವರಿಯುತ್ತದೆಯೇ ಅಥವಾ ಹೊಸ ಪಠ್ಯಕ್ರಮ ಸಂಪೂರ್ಣ ಜಾರಿಯಾಗುತ್ತದೆಯೇ ಎಂಬ ಪ್ರಶ್ನೆಗಳು ಶಿಕ್ಷಕರಲ್ಲಿ ಮೂಡಿವೆ.
ಇದರ ನಡುವೆ, ಶಿಕ್ಷಣ ತಜ್ಞ ರವಿಕುಮಾರ್ ನೀಹಾ ಅವರು ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಮಹತ್ವದ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಅವರ ಪ್ರಕಾರ, ನಲಿ-ಕಲಿ ಚಟುವಟಿಕೆ ಆಧಾರಿತ ಕಲಿಕೆಗೆ ಒಳ್ಳೆಯ ವೇದಿಕೆ ನೀಡಿದರೂ, 4ನೇ ತರಗತಿಗೆ ಬರುವ ವೇಳೆಗೆ ಬಹುತೇಕ ವಿದ್ಯಾರ್ಥಿಗಳಿಗೆ ಸರಿಯಾದ ಓದು-ಬರಹ ಕೌಶಲ್ಯ ಬೆಳೆದಿಲ್ಲ.
ಶೇ.90ರಷ್ಟು ವಿದ್ಯಾರ್ಥಿಗಳು ತಮ್ಮ ಹೆಸರನ್ನು ಬರೆದರೆ ಸಾಕೆನ್ನುವ ಮಟ್ಟದಲ್ಲೇ ಉಳಿಯುತ್ತಿರುವುದು ಆತಂಕಕಾರಿ ಎಂದು ಅವರು ಹೇಳಿದ್ದಾರೆ.
ಪ್ರತಿಯೊಂದು ತರಗತಿಯಲ್ಲಿ ಕಡಿಮೆ ವಿದ್ಯಾರ್ಥಿಗಳಿದ್ದರೆ ಮತ್ತು ಶಿಕ್ಷಕರಿಗೆ ನಿರಂತರ ತರಬೇತಿ ನೀಡಿದರೆ ಮಾತ್ರ ನಲಿ-ಕಲಿ ಮಾದರಿ ಹೆಚ್ಚು ಪರಿಣಾಮಕಾರಿ ಆಗಬಹುದು ಎಂದು ಅವರು ಶಿಫಾರಸು ಮಾಡಿದ್ದಾರೆ.
ಒಟ್ಟಿನಲ್ಲಿ, ರಾಜ್ಯ ಸರ್ಕಾರದ ಈ ತೀರ್ಮಾನವು ಪ್ರಾಥಮಿಕ ಶಿಕ್ಷಣದ ದಿಕ್ಕಿನಲ್ಲಿ ಹೊಸ ಅಧ್ಯಾಯಕ್ಕೆ ಚಾಲನೆ ನೀಡಲಿದೆ ಎನ್ನಬಹುದು. ದ್ವಿಭಾಷಾ ಪಠ್ಯಕ್ರಮ ಜಾರಿಯಿಂದ ಮಕ್ಕಳಿಗೆ ಕನ್ನಡದೊಂದಿಗೆ ಇಂಗ್ಲಿಷ್‌ನಲ್ಲೂ ಪಾರಂಗತತೆ ಬೆಳೆಸುವ ಉದ್ದೇಶ ಹೊಂದಲಾಗಿದೆ.
ಆದರೆ, ಈ ಬದಲಾವಣೆಯ ಯಶಸ್ಸು ಶಿಕ್ಷಕರ ನೇಮಕಾತಿ, ಸಮರ್ಪಕ ತರಬೇತಿ ಮತ್ತು ಪಠ್ಯಕ್ರಮದ ಸಮರ್ಪಕ ಅನುಷ್ಠಾನ ಮೇಲೆ ಅವಲಂಬಿತವಾಗಿರುತ್ತದೆ.
ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಈ ಹೆಜ್ಜೆ ಮುಂದಿನ ದಿನಗಳಲ್ಲಿ ಹೇಗೆ ಫಲಿತಾಂಶ ನೀಡಲಿದೆ ಎಂಬುದು ಕಾದು ನೋಡಬೇಕಾಗಿದೆ.
ಇದನ್ನು ಓದಿ : https://vijayatimes.com/indian-label-for-chinese-robodog/