ಬೆಂಗಳೂರು: ಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡದೇ ಸತಾಯಿಸುತ್ತಿರುವ ಆಸ್ಪತ್ರೆಗಳ ವಿರುದ್ಧ ಗರಂ ಆಗಿರುವ ಸರಕಾರ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗವನ್ನು 48 ಘಂಟೆ ಬಂದ್/ಸೀಲ್ ಡೌನ್ ಮಾಡುವಂತೆ ಆದೇಶಿಸಿದೆ.
ಕೊರೊನಾ ಸೋಂಕಿತರಿಗೆ ಪ್ರವೇಶ ನೀಡಿ, ಸೂಕ್ತ ಚಿಕಿತ್ಸೆ ಒದಗಿಸಬೇಕೆಂದು ಸರಕಾರ ಈಗಾಗಲೇ ಸೂಚನೆ ನೀಡಿದ್ದರೂ, ಅದನ್ನು ಉಲ್ಲಂಘಿಸಿರುವ ಜಯನಗರದ ಅಪೊಲೊ ನರ್ಸಿಂಗ್ ಹೋಮ್ ಮತ್ತು ವಿಕ್ರಮ್ ಆಸ್ಪತ್ರೆ ಸರಕಾರ ಕಳುಹಿಸಿದ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸಿದ್ದವು. ಹೀಗಾಗಿ ಶಿಕ್ಷೆ ನೀಡಿ ಸರಕಾರ ಆಸ್ಪತ್ರೆಯ ಹೊರ ರೋಗಿಗಳ ವಿಭಾಗವನ್ನು 48 ಘಂಟೆ ಬಂದ್/ಸೀಲ್ ಡೌನ್ ಮಾಡಲಾಗಿದೆ.