• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಭೂ ದಾಖಲೆ ಗೊಂದಲಕ್ಕೆ ಫುಲ್ ಸ್ಟಾಪ್:ಯುಎಲ್‌ಎಂಎಸ್‌ ಯೋಜನೆ ಜಾರಿಗೆ ತರಲು ಮುಂದಾದ ಸರ್ಕಾರ

Teju Srinivas by Teju Srinivas
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಭೂ ದಾಖಲೆ ಗೊಂದಲಕ್ಕೆ ಫುಲ್ ಸ್ಟಾಪ್:ಯುಎಲ್‌ಎಂಎಸ್‌ ಯೋಜನೆ ಜಾರಿಗೆ ತರಲು ಮುಂದಾದ ಸರ್ಕಾರ
0
SHARES
22
VIEWS
Share on FacebookShare on Twitter
  • ಭೂ ವ್ಯಾಜ್ಯಗಳಿಗೆ ಬ್ರೇಕ್ ಹಾಕಲಿದೆ (Government implement ULMS scheme) ಡಿಜಿಟಲ್ ಕ್ರಾಂತಿ
  • ಸರ್ವೆದಿಂದ ಇ-ಖಾತಾವರೆಗೆ ಎಲ್ಲಾ ಸೇವೆಗಳು ಒಂದೇ ಪೋರ್ಟಲ್‌ನಲ್ಲಿ
  • ನಕಲಿ ದಾಖಲೆ, ವಿಳಂಬ, ಕಚೇರಿ ಸುತ್ತಾಟಕ್ಕೆ ಕಡಿವಾಣ; ಪಾರದರ್ಶಕತೆ ಕಾಯ್ದುಕೊಳ್ಳಲು ಮಹತ್ವದ ಹೆಜ್ಜೆ

Bengaluru: ಭೂಮಿಗೆ ಸಂಬಂಧಿಸಿದ ಎಲ್ಲಾ ಸರ್ಕಾರಿ ಸೇವೆಗಳನ್ನು ಒಂದೇ ವೇದಿಕೆಯಲ್ಲಿ (Government implement ULMS scheme) ಒದಗಿಸುವ ಮಹತ್ವಾಕಾಂಕ್ಷಿ ಏಕೀಕೃತ ಭೂ ನಿರ್ವಹಣಾ ವ್ಯವಸ್ಥೆ (ULMS) ಜಾರಿಗೆ ರಾಜ್ಯ ಸರ್ಕಾರ ಗಂಭೀರ ಹೆಜ್ಜೆ ಇಟ್ಟಿದೆ.

ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕಂದಾಯ, ನಗರಾಭಿವೃದ್ಧಿ, ನೋಂದಣಿ, ಲೋಕೋಪಯೋಗಿ, ನೀರಾವರಿ, ವಸತಿ ಹಾಗೂ ಕೈಗಾರಿಕಾ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದರು.

ಪ್ರಸ್ತುತ ಭೂ ಸೇವೆಗಳು ವಿವಿಧ ಇಲಾಖೆಗಳ ಮೂಲಕ ಪ್ರತ್ಯೇಕವಾಗಿ ನಡೆಯುತ್ತಿರುವುದರಿಂದ ನಾಗರಿಕರು ಅನೇಕ ಕಚೇರಿಗಳ ಸುತ್ತಾಟ ನಡೆಸಬೇಕಾಗುತ್ತಿದೆ.

ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಉದ್ದೇಶದಿಂದ ಯುಎಲ್‌ಎಂಎಸ್‌ ರೂಪುಗೊಳ್ಳುತ್ತಿದೆ. ಆಡಳಿತ ವ್ಯವಸ್ಥೆಯನ್ನು (Government implement ULMS scheme) ಸರಳ, ಪಾರದರ್ಶಕ ಮತ್ತು ಜವಾಬ್ದಾರಿಯುತಗೊಳಿಸುವ ದಿಕ್ಕಿನಲ್ಲಿ ಇದು ಮಹತ್ವದ ಸುಧಾರಣೆಯಾಗಿದೆ.

ಯುಎಲ್‌ಎಂಎಸ್‌ ಎನ್ನುವುದು ಗಣಕೀಕೃತ ಏಕೀಕೃತ ಆನ್‌ಲೈನ್‌ (Online) ವ್ಯವಸ್ಥೆಯಾಗಿದ್ದು, ಭೂಮಿಗೆ ಸಂಬಂಧಿಸಿದ ಸರ್ವೆ, ಭೂ ಪರಿವರ್ತನೆ, ಬಡಾವಣೆ ಯೋಜನೆ ಮಂಜೂರಾತಿ, ಮನೆ ನಕ್ಷೆ ಅನುಮೋದನೆ, ನಿವೇಶನ ಮಾರಾಟ, ಇ-ಖಾತಾ (E-Khatha) ಸೃಜನೆ, ಆಸ್ತಿ ತೆರಿಗೆ ಸಂಗ್ರಹ ಹಾಗೂ ಭೂಸ್ವಾಧೀನ ಪ್ರಕ್ರಿಯೆ ಸೇರಿದಂತೆ ಅನೇಕ ಸೇವೆಗಳನ್ನು ಒಂದೇ ಪೋರ್ಟಲ್‌ ಮೂಲಕ ಲಭ್ಯವಾಗುವಂತೆ ಮಾಡಲಿದೆ. ಈಗಿನ ವ್ಯವಸ್ಥೆಯಲ್ಲಿ ಪ್ರತ್ಯೇಕ ಅರ್ಜಿಗಳನ್ನು ಪ್ರತ್ಯೇಕ ಕಚೇರಿಗಳಿಗೆ ಸಲ್ಲಿಸುವ ಅನಿವಾರ್ಯತೆ ಇದೆ.

ಆದರೆ ಹೊಸ ವ್ಯವಸ್ಥೆಯಲ್ಲಿ ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಕಡತಗಳು ಸ್ವಯಂಚಾಲಿತವಾಗಿ ಸಾಗಲಿವೆ. ನಿಗದಿತ ಕಾಲಮಿತಿಯೊಳಗೆ ನಿರ್ಧಾರ ಕೈಗೊಳ್ಳುವ ವ್ಯವಸ್ಥೆ ಅಳವಡಿಸಲಾಗುವುದರಿಂದ ಅನಾವಶ್ಯಕ ವಿಳಂಬಕ್ಕೆ ಕಡಿವಾಣ ಬೀಳಲಿದೆ. ಇದರಿಂದ ಜನಸಾಮಾನ್ಯರಿಗೆ ಸಮಯ, ಹಣ ಹಾಗೂ ಶ್ರಮ ಉಳಿಯಲಿದೆ.

ಯುಎಲ್‌ಎಂಎಸ್‌ ಅಡಿಯಲ್ಲಿ ಭೂ ಮಾಲೀಕತ್ವದ ಮೂಲ ದಾಖಲೆಗಳ ಡಿಜಿಟಲ್‌ (Digital) ದೃಢೀಕರಣ ವ್ಯವಸ್ಥೆ ರೂಪುಗೊಳ್ಳಲಿದೆ. ಸರ್ವೆ ನಕ್ಷೆಗಳು, ಮಾಲೀಕತ್ವ ದಾಖಲಾತಿಗಳು ಹಾಗೂ ಸಂಬಂಧಿತ ಮಾಹಿತಿಯನ್ನು ನೇರವಾಗಿ ಅಧಿಕೃತ ಮೂಲಗಳಿಂದ ಪಡೆಯಲಾಗುತ್ತದೆ.

ಕಾಗದ ಆಧಾರಿತ ದಾಖಲೆಗಳ ಮೇಲೆ ಅವಲಂಬನೆ ಕಡಿಮೆಯಾಗುವುದರಿಂದ ನಕಲಿ ದಾಖಲೆಗಳ ಸೃಷ್ಟಿ ಮತ್ತು ಅಕ್ರಮ ಭೂ ವ್ಯವಹಾರಗಳಿಗೆ ತಡೆ ಬೀಳುವ ನಿರೀಕ್ಷೆಯಿದೆ.

ಭೂ ಮಾಲೀಕತ್ವದ ಗೊಂದಲಗಳು ಹಾಗೂ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ವ್ಯಾಜ್ಯಗಳು ಕಡಿಮೆಯಾಗುವ ಸಾಧ್ಯತೆಯೂ ಇದೆ.

ಅಂದಾಜು ಪ್ರಕಾರ ದೇಶದ ನ್ಯಾಯಾಲಯಗಳಲ್ಲಿ ಇರುವ ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚು ಭೂ ಸಂಬಂಧಿತವಾಗಿವೆ. ದಾಖಲೆಗಳ ಖಚಿತತೆ ಹೆಚ್ಚಿದರೆ ಇಂತಹ ಪ್ರಕರಣಗಳನ್ನು ತಡೆಯಲು ಸಾಧ್ಯವೆಂದು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.

ಈ ಯೋಜನೆಯ ಪ್ರಮುಖ ಅಂಶವೆಂದರೆ ಪ್ರತಿ ಭೂ ಆಸ್ತಿಗೆ ಏಕಮಾತ್ರ ಗುರುತಿನ ಸಂಖ್ಯೆ (ULPIN) ನೀಡುವ ವ್ಯವಸ್ಥೆ. ಭೂ ಆಧಾರ್‌ ಮಾದರಿಯಲ್ಲಿ ರೂಪುಗೊಳ್ಳುವ ಈ ಕ್ರಮದಿಂದ ಪಾರದರ್ಶಕತೆ ಮತ್ತು ಖಚಿತತೆ ಹೆಚ್ಚಲಿದೆ. ಮಾಲೀಕತ್ವದ ಸ್ಪಷ್ಟ ದಾಖಲೆ ಲಭ್ಯವಾಗುವುದರಿಂದ ಭೂಸ್ವಾಧೀನ ಪ್ರಕ್ರಿಯೆ ವೇಗಗೊಳ್ಳಲಿದೆ.

ಜೊತೆಗೆ ಆಸ್ತಿ ತೆರಿಗೆ ವ್ಯವಸ್ಥೆಯಲ್ಲಿರುವ ತಾರತಮ್ಯ, ಕಡಿಮೆ ಪಾವತಿ ಹಾಗೂ ವಂಚನೆ ಪ್ರಕರಣಗಳಿಗೆ ತಡೆ ಬೀಳಲಿದೆ. ಗ್ರಾಮ ಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳು ಆರ್ಥಿಕವಾಗಿ ಬಲವಾಗುವ ಸಾಧ್ಯತೆಯಿದೆ. ಭೂಮಿಯ ನೈಜ ಆರ್ಥಿಕ ಮೌಲ್ಯವನ್ನು ಪ್ರತಿಬಿಂಬಿಸುವ ವ್ಯವಸ್ಥೆ ರೂಪುಗೊಂಡರೆ ಹೂಡಿಕೆ, ನಗರಾಭಿವೃದ್ಧಿ ಹಾಗೂ ಕೈಗಾರಿಕಾ ವಿಸ್ತರಣೆಗೆ ಉತ್ತೇಜನ ಸಿಗಲಿದೆ.

ಸಭೆಯಲ್ಲಿ ಯುಎಲ್‌ಎಂಎಸ್‌ ಅನ್ನು ಮುಂದಿನ ಆರು ತಿಂಗಳೊಳಗೆ ಜಾರಿಗೆ ತರಲು ಎಲ್ಲಾ ಸಂಬಂಧಿತ ಇಲಾಖೆಗಳು ಸಂಯೋಜಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಲಾಗಿದೆ. ತಂತ್ರಜ್ಞಾನ ಆಧಾರಿತ, ಜನಕೇಂದ್ರಿತ ಆಡಳಿತ ವ್ಯವಸ್ಥೆ ರೂಪಿಸುವ ದಿಕ್ಕಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ.

ಭೂ ಮಾಲಿಕತ್ವದಲ್ಲಿ ಖಚಿತತೆ ಮತ್ತು ನೆಮ್ಮದಿ ತಂದುಕೊಡುವುದರ ಜೊತೆಗೆ ಸರ್ಕಾರದ ಸೇವೆಗಳ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಹೆಚ್ಚಿಸುವ ಉದ್ದೇಶವೂ ಇದಾಗಿದೆ.

ಸರಳ, ಪಾರದರ್ಶಕ ಹಾಗೂ ಸಮಯಪಾಲನೆಯ ಆಡಳಿತ ವ್ಯವಸ್ಥೆ ರೂಪುಗೊಂಡರೆ ನಾಗರಿಕರಿಗೆ ಅನುಭವವಾಗುವ ತೊಂದರೆಗಳು ಗಣನೀಯವಾಗಿ ಕಡಿಮೆಯಾಗಲಿವೆ.

ಯುಎಲ್‌ಎಂಎಸ್‌ ಜಾರಿಗೆ ಬಂದ ಬಳಿಕ ಭೂ ಸೇವೆಗಳ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಕಂಡುಬರುವ ನಿರೀಕ್ಷೆ ವ್ಯಕ್ತವಾಗಿದೆ.

Tags: bengaluruGovernmentlandulms

Related News

CRZ ನಿಯಮ ಉಲ್ಲಂಘನೆ: ಗೋಕರ್ಣದಲ್ಲಿ ಅನಧಿಕೃತ ರೆಸಾರ್ಟ್ ತೆರವು ಪ್ರಕ್ರಿಯೆ ಆರಂಭ
ಪ್ರಮುಖ ಸುದ್ದಿ

CRZ ನಿಯಮ ಉಲ್ಲಂಘನೆ: ಗೋಕರ್ಣದಲ್ಲಿ ಅನಧಿಕೃತ ರೆಸಾರ್ಟ್ ತೆರವು ಪ್ರಕ್ರಿಯೆ ಆರಂಭ

March 9, 2026
ಈಗ ಖರೀದಿ–ನಂತರ ಪಾವತಿ: ಯುವಜನರಲ್ಲಿ ಹೆಚ್ಚುತ್ತಿರುವ BNPL ಕ್ರೇಜ್
ದೇಶ-ವಿದೇಶ

ಈಗ ಖರೀದಿ–ನಂತರ ಪಾವತಿ: ಯುವಜನರಲ್ಲಿ ಹೆಚ್ಚುತ್ತಿರುವ BNPL ಕ್ರೇಜ್

March 9, 2026
ಇರಾನ್ ಸುಪ್ರೀಂ ಲೀಡರ್ ಆಗಿ ಅಯತೊಲ್ಲಾ ಅಲಿ ಮೊಜ್ತಬಾ ಆಯ್ಕೆ: “ಅನುಮೋದನೆ ಇಲ್ಲದ ನಾಯಕ ಉಳಿಯಲ್ಲ” ಎಂದು ಟ್ರಂಪ್ ಎಚ್ಚರಿಕೆ
ದೇಶ-ವಿದೇಶ

ಇರಾನ್ ಸುಪ್ರೀಂ ಲೀಡರ್ ಆಗಿ ಅಯತೊಲ್ಲಾ ಅಲಿ ಮೊಜ್ತಬಾ ಆಯ್ಕೆ: “ಅನುಮೋದನೆ ಇಲ್ಲದ ನಾಯಕ ಉಳಿಯಲ್ಲ” ಎಂದು ಟ್ರಂಪ್ ಎಚ್ಚರಿಕೆ

March 9, 2026
ನಕಲಿ ನಂದಿನಿ ತುಪ್ಪಕ್ಕೆ ಕಡಿವಾಣ: ಗ್ರಾಹಕರ ರಕ್ಷಣೆಗಾಗಿ ಕೆಎಂಎಫ್ ಹೊಸ ಕ್ಯೂಆರ್ ಕೋಡ್ ತಂತ್ರಜ್ಞಾನ ಜಾರಿ
ಪ್ರಮುಖ ಸುದ್ದಿ

ನಕಲಿ ನಂದಿನಿ ತುಪ್ಪಕ್ಕೆ ಕಡಿವಾಣ: ಗ್ರಾಹಕರ ರಕ್ಷಣೆಗಾಗಿ ಕೆಎಂಎಫ್ ಹೊಸ ಕ್ಯೂಆರ್ ಕೋಡ್ ತಂತ್ರಜ್ಞಾನ ಜಾರಿ

March 9, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.