- ಆಸ್ತಿಯಲ್ಲಿ ಪಾಲು ಕೇಳುವವರಿಗೆ ಶಾಕ್ (Government issues notice)
- ಪೋಷಕರ ಆರೈಕೆ ಮಾಡದಿದ್ದರೆ ಆಸ್ತಿ ದಕ್ಕದು
- ಆಸ್ತಿ ಬೇಕು ಅಪ್ಪ ಅಮ್ಮ ಬೇಡ ಎನ್ನುವವರ ವಿರುದ್ಧ ಕ್ರಮ
Bengaluru: ಹಲವಾರು ಕಡೆಗಳಲ್ಲಿ ಆಸ್ತಿ ವರ್ಗಾವಣೆ (Transfer of property) ಮಾಡಿಕೊಂಡು ಪೋಷಕರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಬಿಟ್ಟು ಹೋಗುತ್ತಿರುವ ಮಕ್ಕಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ (Voluntary case) ದಾಖಲಿಸಲು ಕ್ರಮ ಕೈಗೊಳ್ಳುವಂತೆ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಸುತ್ತೋಲೆ ಹೊರಡಿಸಿದೆ.
ಇತ್ತೀಚೆಗೆ ರಾಜ್ಯದಲ್ಲಿ ವೃದ್ಧ ಪೋಷಕರನ್ನು (Elderly parents) ಚಿಕಿತ್ಸೆಯ ನೆಪದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು (Govt Medical College) ಆಸ್ಪತ್ರೆಗಳಿಗೆ ದಾಖಲಿಸಿ, ನಂತರ ಮನೆಗೆ ಕರೆದುಕೊಂಡು ಹೋಗದೆ ಆಸ್ಪತ್ರೆಯಲ್ಲೇ ಬಿಟ್ಟು ಹೋಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.
ಆಸ್ತಿಯನ್ನು ಮಕ್ಕಳು ತಮ್ಮ ಹೆಸರುಗಳಿಗೆ ಬರೆಸಿಕೊಂಡ ಬಳಿಕ ಪೋಷಕರನ್ನು ನೋಡಿಕೊಳ್ಳದೆ, ಆರ್ಥಿಕ ಸಂಕಷ್ಟಗಳ ನೆಪ ಹೇಳಿ ಸರ್ಕಾರಿ ಆಸ್ಪತ್ರೆಗಳಲ್ಲಿ ಊಟ ಮತ್ತು ವಸತಿ ಉಚಿತವಾಗಿ ಸಿಗುತ್ತದೆ ಎಂದು ಅಲ್ಲೇ ಬಿಟ್ಟು ಹೋಗುತ್ತಿರುವುದು ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ ಹೊಸ ಕಾನೂನನ್ನು (New law) ಜಾರಿಗೆ ತರಲಾಗಿದೆ.
ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ (Senior Citizens Maintenance Act)-2007ರ ಸೆಕ್ಷನ್ 23ರ ಪ್ರಕಾರ, ಮಕ್ಕಳು ಆಸ್ತಿಯನ್ನು ಆನುವಂಶಿಕವಾಗಿ ಪಡೆದ ನಂತರ ಹೆತ್ತವರನ್ನು ನಿರ್ಲಕ್ಷಿಸಿದರೆ ಅಥವಾ ತ್ಯಜಿಸಿದರೆ, ವಿಲ್ ಅಥವಾ ಆಸ್ತಿ ವರ್ಗಾವಣೆಯನ್ನು ರದ್ದುಗೊಳಿಸಲು ಮತ್ತು ವಯಸ್ಸಾದ ಪೋಷಕರಿಗೆ ಮಾಲೀಕತ್ವವನ್ನು ಪುನಃ ಪಡೆಯಲು ಪ್ರಕರಣ ದಾಖಲಿಸಬಹುದು.

ಇಲ್ಲವೇ ಯಾವುದೇ ಪೋಷಕರು/ಹಿರಿಯ ನಾಗರಿಕರು ದಾವೆ ಹೂಡಲು ಅಸಮರ್ಥನಾಗಿದ್ದರೆ, ಸಂಘಗಳ ನೋಂದಣಿ ಕಾಯ್ದೆ-1860ರ ಅಡಿಯಲ್ಲಿ ನೋಂದಾಯಿಸಲಾದ ಯಾವುದೇ ಸ್ವಯಂಸೇವಾ ಸಂಘ/ಸಂಸ್ಥೆಯು ಅವರ ಪರವಾಗಿ ಪ್ರಕರಣ ದಾಖಲಿಸಲು ಕ್ರಮ ತೆಗೆದುಕೊಳ್ಳಬಹುದು.
ಆದ್ದರಿಂದ ಈ ಕುರಿತಾಗಿ ಎಷ್ಟು ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿಯನ್ನು ಕೂಡಲೇ ನಿರ್ದೇಶನಾಲಯಕ್ಕೆ ಸಲ್ಲಿಸಲು ಮತ್ತು ಇಂತಹ ಪ್ರಕರಣಗಳಲ್ಲಿ ಸಂಸ್ಥೆಯ ನಿರ್ದೇಶಕರು ನಿಯಮಾನುಸಾರ ಸುಮೋಟೋ ಕೇಸ್ (Sumoto Case) ದಾಖಲಿಸುವ ಕುರಿತು ಅಗತ್ಯ ಕ್ರಮ ವಹಿಸಲು ಸೂಚಿಸಲಾಗಿದೆ.
ಇದನ್ನೂ ಓದಿ: ಬಿಬಿಎಂಪಿಯ ನಿಯಮ ಉಲ್ಲಂಘನೆ: 58 ಶಾಲಾ -ಕಾಲೇಜು ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಚಿಂತನೆ
ರಾಜ್ಯದ ಎಲ್ಲಾ ಸ್ವಾಯತ್ತ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಹಾಗೂ ರಾಜ್ಯದ ಎಲ್ಲಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ದೇಶಕರಿಗೆ ಈ ಸೂಚನೆ ನೀಡಲಾಗಿದೆ.ಹಿರಿಯ ನಾಗರಿಕರ ರಕ್ಷಣೆಗಾಗಿ ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ-2007 ಇದೆ.
ಈ ಕಾನೂನು ಬಗ್ಗೆ ಜನರಿಗೆ ಅರಿವಿಲ್ಲ. ಮಕ್ಕಳು ಅಥವಾ ಸಂಬಂಧಿಕರು ಹಿರಿಯ ನಾಗರಿಕರಿಗೆ ಆರ್ಥಿಕ ಮತ್ತು ವೈದ್ಯಕೀಯ ಬೆಂಬಲ ಒದಗಿಸಬೇಕು ಎಂಬ ನಿಯಮವಿದೆ. ಅವರು ಹಾಗೆ ಮಾಡಲು ವಿಫಲವಾದರೆ, ಪೋಷಕರು ತಮ್ಮ ಮಕ್ಕಳ ಪರವಾಗಿ ಮಾಡಿದ ಆಸ್ತಿ ವರ್ಗಾವಣೆಯನ್ನು ರದ್ದುಗೊಳಿಸುವ ಕಾನೂನುಬದ್ಧ ಹಕ್ಕು ಹೊಂದಿರುತ್ತಾರೆ.
ಜೊತೆಗೆ, ಮಾಲೀಕತ್ವವನ್ನು ಪುನಃ ಪಡೆಯಲು ಹಿರಿಯ ನಾಗರಿಕರಿಗೆ ಕಾಯ್ದೆಯಲ್ಲಿ ಅವಕಾಶ ಇದೆ. (Government issues notice) ಆದ್ದರಿಂದ ಪೋಷಕರನ್ನು ಬಿಟ್ಟು ಹೋಗುವ ಮಕ್ಕಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಇತ್ತೀಚೆಗೆ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ (Sharan Prakash Patil) ಹೇಳಿದ್ದಾರೆ.