ಬೆಂಗಳೂರು ಅ 19 : ಕಳೆದ ಗುರುವಾರದಿಂದ ಸಾಲು ಸಾಲು ರಜೆಗಳು ಇದ್ದ ಕಾರಣ ಬಹುತೇಕ ಸರಕಾರಿ ಕಚೇರಿಗಳು ಖಾಲಿ ಖಾಲಿಯಾಗಿ ಭಣಗುಡುತ್ತಿವೆ. ಗುರುವಾರ ಹಾಗೂ ಶುಕ್ರವಾರ ಎರಡು ದಿನಗಳ ದಸರಾ ರಜೆ ಸರಕಾರಿ ರಜೆ ಇತ್ತು ಶನಿವಾರ ಬಹುತೇಕ ಸರಕಾರಿ ನೌಕರರು ರಜೆ ಹಾಕಿದ್ದಾರೆ. ಭಾನುವಾರ ರಜೆ ಇದ್ದ ಹಿನ್ನೆಲೆ., ಇದೀಗ ಮತ್ತೆ ಸೋಮವಾರವೂ ಬಹುತೇಕ ಸರಕಾರಿ ನೌಕರರು ರಜೆ ಪಡೆದಿದ್ದು, ಮಂಗಳವಾರ ಹಾಗೂ ಬುಧವಾರ ಸರಕಾರಿ ರಜೆ ಇರುವುದರಿಂದ ಕಚೇರಿಗಳಿಗೆ ಗೈರಾಗಿದ್ದಾರೆ, ಸರಣಿ ರಜೆಗಳ ಹಿನ್ನೆಲೆ ವಿಧಾನಸೌಧ ಹಾಗೂ ಹಲವು ಸರ್ಕಾರಿ ಕಚೇರಿಗಳು ಬಣಗುಡುತ್ತಿದ್ದವು.
ಈ ತಿಂಗಳ ಮತ್ತು ಮುಂಬರುವ ಸರ್ಕಾರಿ ರಜಾದಿನಗಳ ಪಟ್ಟಿ
ಅಕ್ಟೋಬರ್ 2 – ಶನಿವಾರ – ಗಾಂಧಿ ಜಯಂತಿ
ಅಕ್ಟೋಬರ್ 6 – ಬುಧವಾರ – ಮಹಾಲಯ ಅಮವಾಸ್ಯೆ
ಅಕ್ಟೋಬರ್ 14 – ಗುರುವಾರ – ಮಹಾ ನವಮಿ, ಆಯುಧ ಪೂಜೆ
ಅಕ್ಟೋಬರ್ 15 – ಶುಕ್ರವಾರ – ವಿಜಯ ದಶಮಿ
ಅಕ್ಟೋಬರ್ 19 – ಮಂಗಳವಾರ – ಈದ್ ಮಿಲಾದ್
ಅಕ್ಟೋಬರ್ 20 – ಬುಧವಾರ – ಮಹರ್ಷಿ ವಾಲ್ಮೀಕಿ ಜಯಂತಿ,
ನವೆಂಬರ್ 1 – ಸೋಮವಾರ – ಕನ್ನಡ ರಾಜ್ಯೋತ್ಸವ
ನವೆಂಬರ್ 3 – ಬುಧವಾರ – ನರಕ ಚತುರ್ದಶಿ
ನವೆಂಬರ್ 5 – ಶುಕ್ರವಾರ – ಬಲಿ ಪಾಡ್ಯಮಿ, ದೀಪಾವಳಿ
ನವೆಂಬರ್ 22 – ಸೊಮವಾರ – ಕನಕದಾಸ ಜಯಂತಿ