New Delhi: ಕೇಂದ್ರ ಸರಕಾರದ ಅಧೀನದ ಆಸ್ಪತ್ರೆಗಳು, ಪಾಲಿಕ್ಲಿನಿಕ್ಗಳ (Polyclinic) ವೈದ್ಯರಿಗೆ ಜೆನೆರಿಕ್ (Generic) ಔಷಧಿಗಳನ್ನು ಶಿಫಾರಸು ಮಾಡುವ ನಿಯಮಗಳನ್ನು ಪಾಲಿಸುವಂತೆ ಕೇಂದ್ರವು ಎಚ್ಚರಿಕೆ ನೀಡಿದೆ. ಈ ನಿಯಮಗಳನ್ನು ಪಾಲಿಸುವಲ್ಲಿ ವಿಫಲಗೊಂಡರೆ ಕ್ರಮವನ್ನು ಎದುರಿಸುವಂತೆ ಸೂಚಿಸಿದೆ.

ಕೇಂದ್ರ ಸರಕಾರದ ಆಸ್ಪತ್ರೆಗಳ ವೈದ್ಯರಿಗೆ ರೋಗಿಗಳಿಗೆ ಕೇವಲ ಜೆನೆರಿಕ್ ಔಷಧಿಗಳನ್ನು ಬರೆದುಕೊಡುವಂತೆ ಪದೇ ಪದೇ ಸೂಚಿಸಲಾಗಿದೆ.ಆದರೂ ಬ್ರಾಂಡೆಡ್ (Branded) ಔಷಧಿಗಳನ್ನು ವೈದ್ಯರು ಶಿಫಾರಸು ಮಾಡುವುದನ್ನು ಮುಂದುವರಿಸಿದ್ದಾರೆ. ಸಕ್ಷಮ ಪ್ರಾಧಿಕಾರವು ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಮೇ 12ರಂದು ಹೊರಡಿಸಿರುವ ಅಧಿಕೃತ ಆದೇಶದಲ್ಲಿ ಆರೋಗ್ಯ ಸೇವೆಗಳ ಮಹಾ ನಿರ್ದೇಶಕ ಡಾ.ಅತುಲ್ ಗೋಯೆಲ್ (Dr. Atul Goel) ಅವರು ಹೇಳಿದ್ದಾರೆ.
ಔಷಧಿ ಕಂಪನಿಗಳ (Company) ಪ್ರತಿನಿಧಿಗಳ ಭೇಟಿಯನ್ನು ಆಸ್ಪತ್ರೆ ಆವರಣಗಳಲ್ಲಿ ಸಂಪೂರ್ಣವಾಗಿ ನಿಲ್ಲಿಸಬೇಕು,ಹೊಸ ಔಷಧಿಯ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ ವೈದ್ಯರಿಗೆ ಅದನ್ನು ಇ-ಮೇಲ್ಮೂಲಕ ತಿಳಿಸಬಹುದು ಇದನ್ನು ಎಲ್ಲ ಸಂಸ್ಥೆಗಳ ಮುಖ್ಯಸ್ಥರು ಗಮನಿಸಬೇಕು ಮತ್ತು ಈ ನಿಯಮವನ್ನು ಪಾಲಿಸುವಂತೆ ಅಧೀನದಲ್ಲಿಯ ವೈದ್ಯರು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು ಎಂದು ಆದೇಶವು ತಿಳಿಸಿದೆ.ಒಂದು ವೇಳೆ ನಿಯಮವನ್ನು ಪಾಲಿಸದಿದ್ದರೆ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
ವೈದ್ಯರು ಬ್ರ್ಯಾಂಡ್ ಔಷಧಗಳನ್ನೇ ಬರೆಯೋದೇಕೆ?
ಇತ್ತೀಚಿನ ಕೆಲವು ದಿನಗಳಿಂದ ಜನರು ವೈದ್ಯರ ಬಗ್ಗೆ ಅವರು ಸೂಚಿಸುವ ಔಷಧಿಗಳ ಬಗ್ಗೆ ಕೆಲವೊಂದು ಆರೋಪಗಳನ್ನು ಹೋರಿಸುತ್ತಿದ್ದಾರೆ ಅದೇನೆಂದರೆ ವೈದ್ಯರು ಕಡಿಮೆ ಬೆಲೆಯ ಅಥವಾ ಜೆನೆರಿಕ್ ಔಷಧಗಳನ್ನು ಬರೆಯುವುದಿಲ್ಲ ಏಕೆಂದರೆ ಸಾಕಷ್ಟು ವೈದ್ಯರು ಔಷಧ ಕಂಪನಿಗಳಿಂದ,ಮೆಡಿಕಲ್ ರೆಪ್ರೆಸೆಂಟೇಟಿವ್ಗಳಿಂದ (Representative) ಅನೇಕ ಬಾರಿ ದುಬಾರಿ ಉಡುಗೊರೆಗಳನ್ನು ಪಡೆಯುತ್ತಾರೆ ಅಷ್ಟೇ ಅಲ್ಲದೆ ಜೆನೆರಿಕ್ ಔಷಧಗಳನ್ನು ಈಗ ಸಾಮಾನ್ಯವಾಗಿ ಸರ್ಕಾರವೇ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ (Janauṣadhi) ಕೇಂದ್ರಗಳಲ್ಲಿಯೇ ಪೂರೈಸುತ್ತಿದೆ ಆದರೂ ವೈದ್ಯರು ಕಡಿಮೆ ಬೆಲೆಯ ಅಥವಾ ಜೆನೆರಿಕ್ ಔಷಧಗಳನ್ನು ಬರೆಯುವುದಿಲ್ಲ ಎಂದು ಆರೋಪಿಸುತ್ತಿದ್ದಾರೆ.
ಜೆನೆರಿಕ್ ಔಷಧ ಎಂದರೇನು?
ಜನರಿಗೆ ಸಾಮಾನ್ಯವಾಗಿ ಜೆನೆರಿಕ್ ಔಷಧಗಳ ಕುರಿತು ಮಾಹಿತಿ ಇರುವುದಿಲ್ಲ, ಇಂತಹ ಸಂದರ್ಭಗಳಲ್ಲಿ ವೈದ್ಯರು ಒಂದು ವೇಳೆ ಅವುಗಳನ್ನು ಸೂಚಿಸಿದರೆ ಅದರ ಬಗ್ಗೆ ಅನುಮಾನ ಪಡುವ ಸಾಧ್ಯತೆಗಳಿವೆ ಉದಾಹರಣೆಗೆ ಜ್ವರ ಅಥವಾ ನೋವಿಗೆ ಸಾಮಾನ್ಯವಾಗಿ ಜನರು ಬಳಸುವ ಮತ್ತು ತಿಳಿದಿರುವ ಔಷಧಿ ಎಂದರೆ ಕ್ರೋಸಿನ್ ಎಂಬ ಬ್ರ್ಯಾಂಡ್.ಕ್ರೋಸಿನ್ (Crocin) ಬಗ್ಗೆ ತಿಳಿದಿರುವ ರೋಗಿಯ ಬಳಿ ವೈದ್ಯರು ಪ್ಯಾರಾಸಿಟಮಲ್ ಮಾತ್ರೆ ತೆಗೆದುಕೊಳ್ಳಲು ಸೂಚಿಸಿದರೆ ರೋಗಿಗೆ ನನ್ನ ಕಾಯಿಲೆಯನ್ನು ಈ ಮಾತ್ರೆ ಗುಣಪಡಿಸಬಹುದೇ ಎಂಬ ಅನುಮಾನ ಬರುತ್ತದೆ.

ಯಾಕೆಂದರೆ ಜನರಿಗೆ ಪ್ಯಾರಾಸಿಟಮಲ್ (Paracetamol) ಎನ್ನುವ ಮಾತ್ರೆಯು ಕ್ರೋಸಿನ್ ಮಾತ್ರೆಯ ಜೆನೆರಿಕ್ ಹೆಸರು ಎಂಬ ಅರಿವಿರುವುದಿಲ್ಲ. ಆದ್ದರಿಂದ ರೋಗಿಗಳಿಗೆ ಇಂತಹ ಮಾಹಿತಿ ಗೊತ್ತಿಲ್ಲದೇ ಇರುವುದರಿಂದ ವೈದ್ಯರು ಸಾಮಾನ್ಯವಾಗಿ ಬ್ರಾಂಡೆಡ್ ಔಷಧಗಳನ್ನು ಸೂಚಿಸುತ್ತಾರೆ.
ಇಲ್ಲಿ ಕಾಡುವಂತಹ ಪ್ರಶ್ನೆಯೆಂದರೆ ವೈದ್ಯರು ಜೆನೆರಿಕ್ ಔಷಧಗಳನ್ನು ಸೂಚಿಸದಿರಲು ಕಾರಣ ಏನಿರಬಹುದು?
ಮುಖ್ಯ ಕಾರಣವೆಂದರೆ ಔಷಧಗಳ ಲಭ್ಯತೆ : ಬಹುತೇಕ ಜನೌಷಧಿ ಕೇಂದ್ರಗಳಲ್ಲಿ ಜೆನೆರಿಕ್ ಔಷಧಗಳ ಬಗ್ಗೆ ಅತ್ಯಂತ ಕಡಿಮೆ ಮಾಹಿತಿಯಿರುತ್ತದೆ ಮತ್ತು ಇಲ್ಲಿ ಜೆನೆರಿಕ್ (Generic) ಔಷಧಗಳ ಸಂಗ್ರಹ ಇಟ್ಟಿರುವುದಿಲ್ಲ.ಆದ್ದರಿಂದ ರೋಗಿಗಳು ಒಂದೊಂದು ಔಷಧಗಳನ್ನು ಹುಡುಕಿಕೊಂಡು ಬೇರೆ ಬೇರೆ ಔಷಧ ಮಳಿಗೆಗಳಿಗೆ ತೆರಳುತ್ತಾರೆ.ಇದರಿಂದ ಸುಸ್ತಾಗುತ್ತದೆ ಹಾಗಾಗಿ ಇಂತಹ ಸಮಸ್ಯೆಯೇ ಬೇಡವೆಂದು ರೋಗಿಗಳು ಮುಂದಿನ ಬಾರಿ ಔಷಧ ಕೊಡುವಾಗ ಸ್ಥಳೀಯವಾಗಿ ಲಭ್ಯವಿರುವ ಔಷಧಗಳನ್ನು ಕೊಡುವಂತೆ ವೈದ್ಯರ ಬಳಿ ಕೇಳಿಬಿಡುತ್ತಾರೆ.
- ಇನ್ನು ಎಲ್ಲಾ ವೈದ್ಯರೂ ಒಂದೇ ರೀತಿಯಾಗಿರುವುದಿಲ್ಲ ಯಾಕೆಂದರೆ ಕನಿಷ್ಠ ಕೆಲವು ವೈದ್ಯರು ಜೆನೆರಿಕ್ ಔಷಧಗಳನ್ನು ಬರೆದು ಕೊಡುತ್ತಾರೆ.
3.ಇನ್ನು ಕೆಲವು ವೈದ್ಯರು ಇತರ ಔಷಧ ಕಂಪನಿಗಳೊಡನೆ ಅಥವಾ ರೆಪ್ರೆಸೆಂಟೇಟಿವ್ಗಳಿಂದ ಸಹಯೋಗ ಹೊಂದಿರುತ್ತಾರೆ.
4.ಇನ್ನು ಕೆಲವೊಂದು ಸಂದರ್ಭಗಳಲ್ಲಿ ವೈದ್ಯರ ಸಂಬಂಧಿಗಳೇ ಔಷಧ ಅಂಗಡಿಗಳನ್ನು ನಡೆಸುತ್ತಿರುತ್ತಾರೆ ಅಂತಹ ಸಂದರ್ಭಗಳಲ್ಲಿ ವೈದ್ಯರು ಅಲ್ಲಿಗೆ ಚೀಟಿ ಕೊಡುವುದು ಸಹಜವಾಗಿರುತ್ತದೆ.
ರಶ್ಮಿತಾ ಅನೀಶ್