Bengaluru: ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ (Micro Finance)ಸಂಸ್ಥೆಗಳ ದಾದಾಗಿರಿ ಮುಂದುವರಿದಿದೆ. ಆಗಿರುವ ಅನಾಹುತಗಳಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ (State Govt) ಹೊಸ ಕಾನೂನು ತರಲು ಮುಂದಾಗಿದೆ. ಕರ್ನಾಟಕ ಮೈಕ್ರೋ ಫೈನಾನ್ಸ್ ಇನ್ಸ್ಟಿಟ್ಯೂಷನ್ ಆಫ್ ರೆಗುಲೇಷನ್ ಆಫ್ ಮನಿ ಲೆಂಡಿಂಗ್ (Micro Finance Institution of Regulation of Money Lending) ಬಿಲ್ ತರಲು ಮುಂದಾಗಿದೆ. ಹೊಸ ಕಾಯ್ದೆಯಲ್ಲಿ ಮೂರು ಪ್ರಮುಖ ಅಂಶಗಳನ್ನು ಉಲ್ಲೇಖ ಮಾಡಲಾಗಿದೆ.

ರಾಜ್ಯ ಸರ್ಕಾರದ ಮೂರು ಪ್ರಮುಖ ವಿಚಾರಗಳು ಹೀಗಿವೆ:
1.ಮೈಕ್ರೋ ಫೈನಾನ್ಸ್ ಕಿರುಕುಳ ಕಾಗ್ನಿಜೆಬಲ್ ಅಫೆನ್ಸ್ (cognizable offence) ಎಂದು ಪರಿಗಣಿಸುವುದು
2.ಹೊಸ ಕಾನೂನಿನ ಅಡಿ (Under the new law) ಕೇಸ್ ದಾಖಲಿಸಿದರೆ ಅದು ಜಾಮೀನು ರಹಿತ
3.ಹೊಸ ಕಾಯ್ದೆಯ ಪ್ರಕಾರ ಮೂರು ವರ್ಷ ಕಠಿಣ ಶಿಕ್ಷೆ ವಿಧಿಸುವುದು.
ಇನ್ನು ಕಾಗ್ನಿಜಬಲ್ ಅಪರಾಧ (cognizable offence) ಎಂದರೆ ಪೊಲೀಸ್ ಅಧಿಕಾರಿಯು ವಾರೆಂಟ್ ಇಲ್ಲದೆಯೇ ಅಪರಾಧಿಯನ್ನು ಬಂಧಿಸಬಹುದು. ನ್ಯಾಯಾಲಯದ ಅನುಮತಿಯಿಲ್ಲದೇ ತನಿಖೆಯನ್ನು ಪ್ರಾರಂಭಿಸಬಹುದು. ಕಾನೂನಿನ ಪ್ರಕಾರ, ಒಬ್ಬ ಪೊಲೀಸ್ ಅಧಿಕಾರಿಯು ವಾರೆಂಟ್ ಅಥವಾ ನ್ಯಾಯಾಲಯದ ಅನುಮತಿಯಿಲ್ಲದೆ ಅಪರಾಧಿಯನ್ನು ಬಂಧಿಸಬಹುದಾಗಿದೆ.ಅಪರಾಧಿಗಳ ಕುರಿತಾಗಿ ಎಲ್ಲಿಯಾದರೂ ದೂರು ದಾಖಲಾದರೆ ಪೋಲೀಸರು ತಕ್ಷಣವೇ ಬಂಧಿಸಬಹುದು. ಕಿರುಕುಳ ನೀಡುವ ಮೈಕ್ರೋ ಫೈನಾನ್ಸ್ ವಿರುದ್ಧ ಜಾಮೀನು ರಹಿತ ಸೆಕ್ಷನ್ ಅಡಿ ಕೇಸ್ (Case under non-bailable section) ದಾಖಲಿಸಲು ಅವಕಾಶ ಇದೆ. ಮೂರು ಪ್ರಮುಖ ಅಂಶಗಳೊಂದಿಗೆ ಕಾಯ್ದೆಯನ್ನು ಕಾನೂನು ಇಲಾಖೆ ಸಿದ್ಧಪಡಿಸಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಸಭೆ ಬಳಿಕ ಸುಗ್ರಿವಾಜ್ಞೆ ತಂದು ಜಾರಿಗೆ ತರಲು ನಿರ್ಧರಿಸಿದೆ ಎಂದು ಹೇಳಲಾಗುತ್ತದೆ.