Bangalore : ರಾಜ್ಯದಲ್ಲಿ ನಕ್ಸಲ ಸಂಘಟನೆಯನ್ನು (Naxal organization) ಬಲಪಡಿಸಲು ದಶಕಗಳಿಂದಲೂ ಹೋರಾಡುತ್ತಿದ್ದ ವಿಕ್ರಂಗೌಡ ಎನ್ಕೌಂಟರ್ (Vikrangowda Encounter) ನಂತರ ತಲೆ ಮರೆಸಿಕೊಂಡಿರುವ ಆರು ನಕ್ಸಲರು ಶರಣಾಗಲು ಮುಂದಾಗಿದ್ದಾರೆ (Naxals are ready to surrender) ಎನ್ನಲಾಗಿದೆ. ಮೂಲಗಳ ಪ್ರಕಾರ, ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ, ತಮಿಳುನಾಡಿನ ಕೆ ವಸಂತ ಮತ್ತು ಕೇರಳದ ಟಿಎನ್ ಜೀಶಾ (K Vasantha and TN Jeesha of Kerala) ಶಸ್ತ್ರಾಸ್ತ್ರ ಶರಣಾಗಲು ಸಿದ್ದತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ನಕ್ಸಲರ ಜೊತೆ ಶರಣಾಗತಿ ಸಮಿತಿ ಮತ್ತು ಶಾಂತಿಗಾಗಿ ನಾಗರೀಕ (Committee and Citizen for Peace) ಸಮಿತಿ ನಡೆಸಿದ ಮಾತುಕತೆ ಯಶಸ್ವಿಯಾಗಿದೆ. ಹೀಗಾಗಿ ಇಂದು ಬೆಳಗ್ಗೆ ಚಿಕ್ಕಮಗಳೂರು ಜಿಲ್ಲಾಡಳಿತದ (Chikmagalur District Administration) ಮುಂದೆ ಆರು ನಕ್ಸಲರು ಶರಣಾಗುವ ಸಾಧ್ಯತೆ ಇದೆ. ಚಿಕ್ಕಮಗಲೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ (Meena Nagaraj) ಹಾಗೂ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ (Vikram) ಅಮಟೆ ಸಮ್ಮುಖದಲ್ಲಿ ಮುಂಡುಗಾರು ಲತಾ, ವನಜಾಕ್ಷಿ, ಸುಂದರಿ, ಮಾರಪ್ಪ ಅರೋಳಿ, ವಸಂತ್ (Lata, Vanajakshi, Sundari, Marappa Aroli, Vasanth) ಹಾಗೂ ಎನ್.ಜೀಶಾ ಶರಣಾಗತಿಯಾಗಲಿದ್ದಾರೆ (N. Jisha have surrender) . ಶರಣಾದ ನಕ್ಸಲರಿಗೆ ಸರ್ಕಾರ ಭರ್ಜರಿ ಪ್ಯಾಕೇಜ್ ಘೋಷಿಸಿದೆ.

ಪ್ಯಾಕೇಜ್ ಏನು?
• A ಕೆಟಗರಿ (A category) : ನಕ್ಸಲರು ಕರ್ನಾಟಕ ರಾಜ್ಯದವರೇ ಆಗಿದ್ದು ಪ್ರಸ್ತುತ ನಕ್ಸಲ್ ಸಂಘಟನೆಯಲ್ಲಿ ಸಕ್ರಿಯರಾಗಿದ್ದರೆ ಅಂತಹವರಿಗೆ 7.50 ಲಕ್ಷ ರೂ. ಹಣವನ್ನು (7.50 lakh Rs. money) ನೀಡಲಾಗುತ್ತದೆ.
• B ಕೆಟಗರಿ (B category) : ನಕ್ಸಲರು ಹೊರರಾಜ್ಯದವರಾಗಿದ್ದು (Outside the state) , ಆತನ ಮೇಲೆ ಒಂದಕ್ಕಿಂತ ಹೆಚ್ಚು ಪ್ರಕರಣ ಇದ್ದರೆ (Case) 4 ಲಕ್ಷ ರೂ. ಹಣ ನೀಡಲಾಗುತ್ತದೆ.
• C ಕೆಟಗರಿ (C category) : ನಕ್ಸಲರ ಸಂಪರ್ಕ ಹೊಂದಿರುವ ಹಾಗೂ ಅವರಿಗೆ ಸಹಾಯ ಮಾಡಿದ ಪ್ರಕರಣಗಳು ಇದ್ದರೆ ಅಂತಹವರಿಗೆ 2 ಲಕ್ಷ ರೂ. ಹಣವನ್ನು ನೀಡಲಾಗುತ್ತದೆ.
• ಶರಣಾದ ನಕ್ಸಲರು (Surrendered Naxals) ಸಮಾಜದಲ್ಲಿ ಉತ್ತಮ ಜೀವನ (Good life) ನಡೆಸಲು ಆರ್ಥಿಕ ಸಹಾಯ ನೀಡಲಾಗುತ್ತದೆ.
• ಉತ್ತಮ ಜೀವನ ಕಟ್ಟಿಕೊಳ್ಳಲು ವರ್ಷದವರೆಗೆ 5,000 ರೂ. ಹಣ ನೀಡಲಾಗುವುದು.
• ಸರ್ಕಾರದ ಎಲ್ಲಾ ಸೌಲಭ್ಯವನ್ನು ಸರ್ಕಾರ ನೀಡುತ್ತದೆ (Facility is provided by the government) .
ನಕ್ಸಲರ ಪ್ರಮುಖ ಬೇಡಿಕೆಗಳೇನು? (What are the main demands of Naxals?)
• ಪ್ರಜಾತಾಂತ್ರಿಕ ಹೋರಾಟಕ್ಕೆ ಯಾವುದೇ ಕಡಿವಾಣ ಹಾಕಬಾರದು.
• ತಮಗೆ ಸಂಬಂಧವಿಲ್ಲದ ಪ್ರಕರಣದಿಂದ ಕೈಬಿಡಬೇಕು.
• ಜಾಮೀನಿನ ಮೇಲೆ ಹೊರಗೆ ಬರಲು ಸಹಕರಿಸಬೇಕು.
• ಮೊಕ್ಕದ್ದಮೆ ಇತ್ಯರ್ಥಕ್ಕೆ ಸಹಕರಿಸಬೇಕು.
• ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳಬೇಕು.
• ಎಲ್ಲಾ ನಕ್ಸಲರಿಗೂ ಎಲ್ಲಾ ಸೌಲಭ್ಯಗಳನ್ನ ನೀಡಬೇಕು.
• ಹೋರಾಟಗಳಲ್ಲಿ ಭಾಗಿಯಾದಾಗ ಅನುಮಾನದಿಂದ ನೋಡಬಾರದು