Karnataka : ಕಳೆದ ಒಂದೆರೆಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ವೀಡಿಯೊ ಒಂದು ಸದ್ಯ ಭಾರಿ ವೈರಲ್ ಆಗುತ್ತಿದೆ. ಕರ್ನಾಟಕ ರಾಜ್ಯದ ಗ್ರಾಮೀಣ ಭಾಗದ ಸರ್ಕಾರಿ ಶಾಲಾ(Govt School Student Questions) ವಿದ್ಯಾರ್ಥಿನೀಯೊಬ್ಬಳು ಸರ್ಕಾರಿ ಅಧಿಕಾರಿಯನ್ನು ಪ್ರಶ್ನಿಸಿರುವ ದಾಟಿ, ಧೈರ್ಯಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಗ್ರಾಮ ಪಂಚಾಯತ್ ಸಮುದಾಯ ಗ್ರಂಥಾಲಯಗಳ ಸಮಯವನ್ನು ವಿಸ್ತರಿಸಲು ಅಧಿಕಾರಿಗಳು ಹಾಗೂ ರಾಜ್ಯ ಸರ್ಕಾರಕ್ಕೆ ವಿದ್ಯಾರ್ಥಿನಿ ಮನವಿ ಮಾಡಿದ್ದಾರೆ.
ವೀಡಿಯೊದಲ್ಲಿ, ಸೋಮವಾರ ಲೈಬ್ರರಿಗೆ ಭೇಟಿ ನೀಡಿದ ಸರ್ಕಾರಿ ಅಧಿಕಾರಿಯನ್ನು, ಗ್ರಂಥಾಲಯಕ್ಕೆ ಈಗಿರುವ ಸಮಯವನ್ನು ವಿಸ್ತರಿಸುವ ಬಗ್ಗೆ ಅಧಿಕಾರಿಯನ್ನು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : https://vijayatimes.com/homeremedies-for-ear-pain/
ಪ್ರಸ್ತುತ ಪ್ರತಿನಿತ್ಯ ಆರು ಗಂಟೆಗಳ ಅವಧಿ ಮಾತ್ರ ಇರುವ ಗ್ರಂಥಾಲಯವನ್ನು ದಿನಕ್ಕೆ ಎಂಟು ಗಂಟೆಗಳವರೆಗೆ ವಿಸ್ತರಿಸಬೇಕು(Govt School Student Questions) ಎಂದು ವಿದ್ಯಾರ್ಥಿನಿ ಅಧಿಕಾರಿಯನ್ನು ಮನವಿ ಮಾಡುವುದಲ್ಲದೇ,
ತನ್ನ ಸಹಪಠಾಗಿಳ ಜೊತೆಗೂಡಿ ತಮಗೆ ಏನೆನೂ ಅವಶ್ಯಕತೆಗಳು ಇದೆ ಎಂಬುದನ್ನು ಪತ್ರದ ಮೂಲಕ ವಿವರಿಸಿದ್ದಾಳೆ.
ಅರ್ಜಿ ಸಲ್ಲಿಸಿದ ಅಧಿಕಾರಿಯು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ ಅತೀಕ್ ಅವರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅಧಿಕಾರಿ, “ನಾವು ಸ್ಥಾಪಿಸಿದ ಜಿಪಿ ಲೈಬ್ರರಿಗೆ ನಾನು ಭೇಟಿ ನೀಡಿದಾಗ, ಈ ವಿದ್ಯಾರ್ಥಿನಿ ತನ್ನ ಅರ್ಜಿಯೊಂದಿಗೆ ಸಿದ್ಧಳಾಗಿ ನನ್ನನ್ನು ಪ್ರಶ್ನಿಸಿದಳು.
ನಾವು ಗ್ರಂಥಾಲಯದ ಸಮಯವನ್ನು ಪ್ರಸ್ತುತ 6 ಗಂಟೆಗಳಿಂದ ದಿನಕ್ಕೆ 8 ಗಂಟೆಯವರೆಗೆ ಹೆಚ್ಚಿಸಬೇಕೆಂದು ಅವರು ಮನವಿ ಮಾಡಿದ್ದಾರೆ.” ಎಂದು ಹೇಳಿದ್ದಾರೆ.
ಹಳ್ಳಿಗಳಲ್ಲಿ ಸಮುದಾಯ ಗ್ರಂಥಾಲಯಗಳಿಗೆ ಬೇಡಿಕೆ ಹೆಚ್ಚುತ್ತಿರುವ ಬಗ್ಗೆಯೂ ಅವರು ಸಂತೋಷ ವ್ಯಕ್ತಪಡಿಸಿದರು.
https://twitter.com/lkatheeq/status/1589619019518464002?s=20&t=sAd7JSd8fAzgjh5J6JvI1Q
ಮಾರ್ಚ್ ತಿಂಗಳಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸರ್ಕಾರ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆ ಡಿಜಿಟಲ್ ಸಾಧನಗಳನ್ನು ಸೇರಿಸುವುದಾಗಿ ಹೇಳಿದರು.
ಎಲ್ಲಾ ಗ್ರಾಮ ಪಂಚಾಯತ್ ಗ್ರಂಥಾಲಯಗಳಲ್ಲಿ ಭಾರತೀಯ ಸಂವಿಧಾನದ ಪ್ರತಿಗಳನ್ನು ಮತ್ತು ಸರ್ಕಾರದ ಯೋಜನೆಗಳು ಮತ್ತು ಸೇವೆಗಳ ಪ್ರಮುಖ ಪ್ರಕಟಣೆ ಮತ್ತು ವಾರ್ಷಿಕ ವರದಿಗಳನ್ನು ಇಟ್ಟುಕೊಳ್ಳುವುದನ್ನು ಸರ್ಕಾರವು ಕಡ್ಡಾಯಗೊಳಿಸಿದೆ.