ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಮಾಹಿತಿಯ ಅನುಸಾರ, ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ(Gowtham Adhani) ಈಗ ಗೂಗಲ್(Google) ಸಂಸ್ಥಾಪಕರಾದ ಲ್ಯಾರಿ ಪೇಜ್(Lary Page) ಮತ್ತು ಸೆರ್ಗೆ ಬ್ರಿನ್‌ಗಿಂತ(Serge Brin) ಶ್ರೀಮಂತರಾಗಿದ್ದಾರೆ. ಭಾರತೀಯ ಬಿಲಿಯನೇರ್ ಕೈಗಾರಿಕೋದ್ಯಮಿಯು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್(Reliance Industries Limited) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ(Mukhesh Ambani) ಅವರ ಪಟ್ಟಿಯಲ್ಲಿ ಅಂತರವನ್ನು ಹೆಚ್ಚಿಸಿದ್ದಾರೆ.

ಗೌತಮ್ ಅದಾನಿ ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಅವರನ್ನು ಹಿಂದಿಕ್ಕಿ ಆರನೇ ಸ್ಥಾನಕ್ಕೆ ಏರಿದ್ದಾರೆ. ಅದಾನಿ ಒಟ್ಟು ಡಾಲರ್ 118 ಬಿಲಿಯನ್ ನಿವ್ವಳ ಸಂಪತ್ತನ್ನು ಹೊಂದಿದ್ದಾರೆ. ಸದ್ಯ ಪೇಜ್ ಮತ್ತು ಬ್ರಿನ್ ಕ್ರಮವಾಗಿ ಏಳು ಮತ್ತು ಎಂಟನೇ ಸ್ಥಾನದಲ್ಲಿದ್ದಾರೆ. ಪೇಜ್ $116 ಶತಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದರೆ, ಬ್ರಿನ್ ಅವರ ನಿವ್ವಳ ಮೌಲ್ಯವು $111 ಬಿಲಿಯನ್ ಆಗಿತ್ತು. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ ಗೌತಮ್ ಅದಾನಿ ಅವರ ಆಪ್ತ ಮುಖೇಶ್ ಅಂಬಾನಿ $ 94.9 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ 11ನೇ ಸ್ಥಾನದಲ್ಲಿದ್ದಾರೆ.
ಈ ಪಟ್ಟಿಯಲ್ಲಿ ಎಲೋನ್ ಮಸ್ಕ್ ಅವರು $259 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಜೆಫ್ ಬೆಜೋಸ್ $ 180 ಶತಕೋಟಿ ನಿವ್ವಳ ಮೌಲ್ಯದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. $ 142 ಶತಕೋಟಿ ನಿವ್ವಳ ಮೌಲ್ಯದೊಂದಿಗೆ ಬರ್ನಾರ್ಡ್ ಅರ್ನಾಲ್ಟ್ ಮೂರನೇ ಸ್ಥಾನದಲ್ಲಿದ್ದಾರೆ ಮತ್ತು $ 130 ಶತಕೋಟಿ ನಿವ್ವಳ ಮೌಲ್ಯದೊಂದಿಗೆ ಬಿಲ್ ಗೇಟ್ಸ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ವಾರೆನ್ ಬಫೆಟ್ $125 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ವಿಶ್ವದ ಶ್ರೀಮಂತ ವ್ಯಕ್ತಿಗಳ ದೈನಂದಿನ ಶ್ರೇಯಾಂಕವಾಗಿದೆ. ಪಟ್ಟಿಯಲ್ಲಿರುವ ಅಂಕಿ ಅಂಶಗಳನ್ನು ನ್ಯೂಯಾರ್ಕ್‌ನಲ್ಲಿ ಪ್ರತಿ ವ್ಯಾಪಾರದ ದಿನದ ಕೊನೆಯಲ್ಲಿ ನವೀಕರಿಸಲಾಗುತ್ತದೆ ಎಂಬುದು ವರದಿಯಲ್ಲಿ ತಿಳಿಸಲಾಗಿದೆ.