- ಧರ್ಮ**ದಲ್ಲಿ ನಡೆದ ಸರಣಿ ಹ* ಕೇಸ್‌ಗೆ ಬಿಗ್ ಟ್ವಿಸ್ಟ್
- SIT ಗೆ ಆನೆಬಲ, ಮಾನವ ಹಕ್ಕುಗಳ ಆಯೋಗ ಎಂಟ್ರಿ
- GPR ತಂತ್ರಜ್ಞಾನ ಬಳಸಿ ತನಿಖೆ ಮಾಡ್ತಿರುವ SIT
- 38 ವರ್ಷದ ಹಿಂದಿನ ಪದ್ಮಲತಾ ಕೇಸ್‌ಗೆ ಮರುಜೀವ
ಧರ್ಮ**ದ ಶ* ಹೂತ ಪ್ರಕರಣದ ತನಿಖೆ ನಡೆಸುತ್ತಿರುವ SITಗೆ ಹೊಸ ಬಲ ಬಂದಿದೆ. ಯಾಕಂದ್ರೆ ಭೂಮಿಯ ಒಳಗಡೆ ಹುದುಗಿರುವ ಅಸ್ಥಿಪಂಜರವನ್ನು ಮೇಲೆತ್ತಲು SIT ತಂಡಕ್ಕೆ GPR ಅಂದ್ರೆ Ground Penetrating Radar ತಂತ್ರಜ್ಞಾನ ಎಂಟ್ರಿಯಾಗಿದೆ.
ಈ GPR ನಿನ್ನೆ ನೇತ್ರಾವತಿ ನದಿ ತೀರದಲ್ಲಿ 13ನೇ ಪಾಯಿಂಟ್ನಲ್ಲಿ ಗಿಡಗಂಟಿಗಳ ಮಧ್ಯೆ ರೌಂಡ್ಸ್ ಹಾಕಿತ್ತು. ಆದ್ರೆ ಡ್ರೋನ್ ಮೌಂಟಡ್ ರಾಡಾರ್ಗೆ ಯಾವುದೇ ಕರುಹು ಪತ್ತೆಯಾಗಿರಲಿಲ್ಲ.
GPR ನಿಂದಾದರೂ ತನಿಖೆಯ ಹಾದಿ ಬದಲಾಗುತ್ತಾ ಅನ್ನೋದು ಸದ್ಯದ ಪ್ರಶ್ನೆ.
20 ವರ್ಷಗಳ ಹಿಂದೆ ಹೂತಿರುವ ಹೆಣ, ಗುಡ್ಡ ಕುಸಿತ, ನೆರೆ ಮುಂತಾದ ಪ್ರಕೃತಿಯ ಸಹಜ ಕ್ರಿಯೆಯಿಂದ ಸ್ಥಾನ ಪಲ್ಲಟವಾಗಿರುವ ಸಾಧ್ಯತೆಯಿರುತ್ತೆ.

ಆದ್ದರಿಂದ ಮನುಷ್ಯರು ಗುರುತಿಸಿದ ಪಾಯಿಂಟ್‌ನಲ್ಲಿ ಉತ್ಖನನ ಮಾಡಿದಾಗ ಅಸ್ಥಿಪಂಜರ ಸಿಗದೇ ಇರಬಹುದು. ಆದ್ರೆ ಈ ಜಿಪಿಆರ್ ತಂತ್ರಜ್ಞಾನದಿಂದ ಭೂ ಗರ್ಭದಲ್ಲಿ ಅಡಗಿರುವ ಎಲ್ಲಾ ಸಾಕ್ಷಿಗಳನ್ನ ಕ* ಹಾಕಬಹುದು.
ಈ GPR 10-15 ಆಳದಲ್ಲಿ ಏನಾದ್ರೂ ವಸ್ತು ಅಥವಾ ಅಸ್ಥಿಪಂಜರ ಇದ್ರೆ ಸಿಗ್ನಲ್ ನೀಡುತ್ತೆ. ಒಂದು ವೇಳೆ ಧರ್ಮ**ದ ನೇತ್ರಾವತಿ ತೀರದಲ್ಲಿ ಶ*, ಅಥವಾ ಅಸ್ಥಿಪಂಜರಗಳೇನಾದ್ರೂ ಇದ್ದಿದ್ದೇ ಆದ್ರೆ ಈ GPR ನಿಂದ ತಿಳಿಯಲಿದೆ.
1986 ರಲ್ಲಿ ಅಂದ್ರೆ 38 ವರ್ಷಗಳ ಹಿಂದೆ ತಂದೆಯ ಮೇಲಿನ ರಾಜಕೀಯ ದ್ವೇಷಕ್ಕಾಗಿ ಬ*ಯಾಗಿದ್ದ ವಿದ್ಯಾರ್ಥಿನಿ ಪದ್ಮಲತಾ ಕೇಸ್‌ಗೂ ಕೂಡ ಈಗ ಮರುಜೀವ ಸಿಕ್ಕಿದೆ.
ಪದ್ಮಲತಾ ಸಹೋದರಿ ಇಂದ್ರಾವತಿ ಇದೀಗ SIT ಗೆ ದೂರು ನೀಡಿದ್ದಾರೆ. ಮುಂದೊಂದು ದಿನ ತನಿಖೆಗೆ ಸಹಾಯವಾಗಲಿ ಎಂದೇ ನಾವು ಪದ್ಮಲತಾ ಶ* ಸುಟ್ಟಿಲ್ಲ,
ಹೂತಿದ್ದೇವೆ ಆ ಅಸ್ಥಿಪಂಜರ ತೆಗೆದು ತನಿಖೆ ನಡೆಸುವಂತೆ SIT ಗೆ ಮನವಿ ಮಾಡಿ, ತನ್ನ ಸಹೋದರಿಯ ಸಾ*ಗೂ ನ್ಯಾಯ ಒದಗಿಸಿ ಅಂತ ಬೇಡಿಕೊಂಡಿದ್ದಾರೆ.
ಕಳೆದ ರಾತ್ರಿಯೇ ಕಾರ್ಯಾಚರಣೆಗಿಳಿದ NHRC ಅಂದ್ರೆ ಮಾನವ ಹಕ್ಕುಗಳ ಆಯೋಗ, ಧರ್ಮ** ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಮಣ್ಣು ಸುರಿದ ಆರೋಪ ಹೊತ್ತಿರುವ 16ನೇ ಪಾಯಿಂಟ್ನಲ್ಲೂ ಪರಿಶೀಲಿಸಿದೆ. ಓರ್ವ ಐಪಿಎಸ್ ಅಧಿಕಾರಿ ಸೇರಿ ಬೆಳ್ತಂಗಡಿಯಲ್ಲಿ ಬೀಡುಬಿಟ್ಟಿರೋ ನಾಲ್ವರು ಅಧಿಕಾರಿಗಳ ತಂಡ ಇಂದು ಮತ್ತೆ ಅಖಾಡಕ್ಕೆ ಇಳಿದಿದೆ.
ಪೊಲೀಸ್ ಠಾಣೆ, ಎಸ್ಐಟಿ, ದೇವಸ್ಥಾನ ಸೇರಿ ವಿವಿಧ ಆಯಾಮಗಳಲ್ಲಿ ದಾಖಲೆ ಹಾಗೂ ಮಾಹಿತಿಗಳನ್ನ ಸಂಗ್ರಹ ಮಾಡಿದೆ. ಜೊತೆಗೆ ಧರ್ಮ** ಪಂಚಾಯತ್ನಿಂದ ದಾಖಲೆಗಳನ್ನ ಕೂಡ ಕೇಳಿದೆ.
ಗೌಪ್ಯವಾಗಿ ಸ್ವಚ್ಛತಾ ಕಾರ್ಮಿಕರಿಂದ ಹಾಗೂ ಧರ್ಮ**ದ ಕೆಲವು ವ್ಯಕ್ತಿಗಳಿಂದ ಹೇಳಿಕೆಗಳನ್ನ ಸಂಗ್ರಹಿಸಿದೆ. ಅಲ್ಲದೆ ಶ* ಹೂತಿಟ್ಟ ಪಾಯಿಂಟ್ಗಳಿಗೂ ಭೇಟಿ,
ಪರಿಶೀಲನೆ ಮಾಡಿರುವ ಮಾನವ ಹಕ್ಕುಗಳ ಆಯೋಗ ಮುಂದಿನ 4-5 ದಿನ ಧರ್ಮ**ದಲ್ಲಿ ಬೀಡು ಬಿಟ್ಟು SIT ತನಿಖೆಗೆ ಸಹಕಾರ ನೀಡಲಿದೆ.
ಇದನ್ನು ಓದಿ: ಧರ್ಮಸ್ಥಳ ಪ್ರಕರಣ: ಎಸ್‌ಐಟಿ ಕಾರ್ಯಾಚರಣೆಯಲ್ಲಿ ಹೊಸ ಬೆಳವಣಿಗೆ! 13 ನೇ ಪಾಯಿಂಟ್ನಲ್ಲಿ ಜಿಪಿಆರ್ ಬಳಸಿ ಶೋಧಕಾರ್ಯ
ಒಟ್ಟಾರೆ ಧರ್ಮ** ಶ* ಹೂತಿಟ್ಟ ಪ್ರಕರಣದ ತನಿಖೆಗೆ ಮತ್ತಷ್ಟು ಬಲ ಬಂದಿದ್ದು, ಸತ್ಯ ಯಾವುದು ಸುಳ್ಳು ಯಾವುದು ಅನ್ನೋದು ಸದ್ಯದಲ್ಲೇ ಬಯಲಾಗಲಿದೆ.
ಸೌಜನ್ಯ ವಿಜಯಟೈಮ್ಸ್