- ಇನ್ಮುಂದೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ (National highways) ರಸ್ತೆ ಪ್ರಯಾಣ ಇನ್ನಷ್ಟು ಸುಗಮ
- ಫಾಸ್ಟ್ ಟ್ಯಾಗ್ (Fast tag) ಗಳ ಬದಲು ಹೊಸ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ (GPS toll collection from may 1st)
- ಹೊಸ ವ್ಯವಸ್ಥೆಯಿಂದ ಭೌತಿಕ ಟೋಲ್ ಬೂತ್‌ಗಳನ್ನು ಸ್ಥಾಪಿಸುವ ಅಗತ್ಯವೂ ಇಲ್ಲ.
New delhi: ಮೇ 1 ರಿಂದ ದೇಶದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ಪ್ರಯಾಣವು (NHAI) ಹೆಚ್ಚು ಸುಗಮವಾಗಲಿದೆ, ಫಾಸ್ಟ್ ಟ್ಯಾಗ್ ಗಳ ಬದಲು ಹೊಸ ಜಿಪಿಎಸ್ ಆಧಾರಿತ (GPS based) ಟೋಲ್ ಸಂಗ್ರಹ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ.
ಜಾಗತಿಕ ಸಂಚರಣೆ ಉಪಗ್ರಹ ವ್ಯವಸ್ಥೆ (GNSS) ಏಪ್ರಿಲ್ 1 ರಿಂದ ಜಾರಿಗೆ ಬರುವ ನಿರೀಕ್ಷೆಯಿತ್ತು, ವಿಳಂಬವಾಗಿ ಈಗ ಮೇ 1ರಿಂದ ಜಾರಿಗೆ ಬರುವ ಸಾಧ್ಯತೆಯಿದೆ.
ಈ ಬಗ್ಗೆ ಮಾತನಾಡಿರುವ ಕೇಂದ್ರ ರಸ್ತೆ ಮತ್ತು ಸಾರಿಗೆ (Road and Transport) ಸಚಿವ ನಿತಿನ್ ಗಡ್ಕರಿ,
ಮುಂದಿನ 15 ದಿನಗಳಲ್ಲಿ ನಾವು ಹೊಸ ಟೋಲ್ ನೀತಿಯನ್ನು ತರುತ್ತಿದ್ದೇವೆ. ಟೋಲ್ ಪ್ಲಾಜಾಗಳಿಗಾಗಿ (For toll plazas) ನಿಲ್ಲಬೇಕಾಗಿಲ್ಲದ ಕಾರಣ ನಾವು ಸ್ಯಾಟಲೈಟ್ ಟೋಲ್ ವ್ಯವಸ್ಥೆಯನ್ನು ಪ್ರಾರಂಭಿಸುತ್ತಿದ್ದೇವೆ ಎಂದಿದ್ದಾರೆ.
ಇನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಅವರ ಪ್ರಕಾರ, ಹೊಸ ವ್ಯವಸ್ಥೆಯು ಸಮಯ ಮತ್ತು ವೆಚ್ಚ-ಪರಿಣಾಮಕಾರಿ ಮತ್ತು ವೇಗವಾಗಿರುತ್ತದೆ.ಹೊಸ ಟೋಲ್ ವ್ಯವಸ್ಥೆ ಅಂದರೆ ಗ್ಲೋಬಲ್ ನ್ಯಾವಿಗೇಶನ್ ಸ್ಯಾಟಲೈಟ್ ಸಿಸ್ಟಮ್ (GNSS) ಹೆಚ್ಚು ಪಾರದರ್ಶಕತೆಯಿಂದ ಕೂಡಿದೆ. ಈ ವ್ಯವಸ್ಥೆಯಲ್ಲಿ ವಾಹನ ಟೋಲ್ ರಸ್ತೆಗೆ ಎಂಟ್ರಿ (Entry) ಹಾಗೂ ಎಕ್ಸಿಟ್ (Exit) ಆಧರಿಸಿ ಟೋಲ್ ಶುಲ್ಕ ವಿಧಿಸಲಿದೆ.

GNSS ಟೋಲ್ ವ್ಯವಸ್ಥೆ ಅಡಿಯಲ್ಲಿ ಪ್ರತಿ ದಿನ ಟೋಲ್ ರಸ್ತೆಯಲ್ಲಿ 20 ಕಿಲೋಮೀಟರ್ ಉಚಿತ ಪ್ರಯಾಣ ಸಿಗಲಿದೆ. ಅಂದರೆ 20 ಕಿಲೋಮೀಟರ್ ಬಳಿಕ ಶುಲ್ಕ ಅನ್ವಯವಾಗುತ್ತದೆ. ಆರಂಭಿಕ 20 ಕಿಲೋಮೀಟರ್ ಉಚಿತವಾಗರಲಿದೆ ಎಂದು ಗಡ್ಕರಿ ಹೇಳಿದ್ದಾರೆ.ಇದು ರಾಷ್ಟ್ರೀಯ ಹೆದ್ದಾರಿ (National Highway) ಹಾಗೂ ಎಕ್ಸ್‌ಪ್ರೆಸ್‌ವೇಗಳಲ್ಲಿ ಮಾತ್ರ ಈ ಸೌಲಭ್ಯ ಲಭ್ಯವಾಗಲಿದೆ.
ಈಗಾಗಲೆ ಬಳಸುತ್ತಿರುವ FASTag ವ್ಯವಸ್ಥೆಯು ಸಾಂಪ್ರದಾಯಿಕ ನಗದು ಸಂಗ್ರಹ ವಿಧಾನಕ್ಕಿಂತ ವೇಗವಾಗಿದ್ದರೂ, ವಾಹನಗಳು ಟೋಲ್ (Vehicles toll) ಬೂತ್‌ನಲ್ಲಿ ಹಲವೊಮ್ಮೆ ಕಾದು ನಿಲ್ಲಬೇಕಾಗುತ್ತದೆ. ಹಲವು ಬಾರಿ ವಿಶೇಷವಾಗಿ ಪೀಕ್ ಅವರ್ ಗಳಲ್ಲಿ ಇದು ದೀರ್ಘ ಸರತಿ ಸಾಲುಗಳಿಗೆ ಕಾರಣವಾಗುತ್ತದೆ.
ಆದಾಗ್ಯೂ, ಜಿಎನ್ ಎಸ್ ಎಸ್ (GNSS) ವ್ಯವಸ್ಥೆಯು ವಾಹನಗಳ ಸ್ಥಳಗಳನ್ನು ಪತ್ತೆಹಚ್ಚಲು ಉಪಗ್ರಹಗಳೊಂದಿಗೆ ಸಂವಹನ ನಡೆಸುವ ವರ್ಚುವಲ್ ಟೋಲ್ (Virtual toll) ಬೂತ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತದೆ. ಟ್ರ್ಯಾಕ್ ಮಾಡಲಾದ ಸ್ಥಳದ ಪ್ರಕಾರ, ವಾಹನವು ಪ್ರಯಾಣಿಸಿದ ದೂರವನ್ನು ವಿಶ್ಲೇಷಣೆ ಮಾಡಿ ಟೋಲ್ ನ್ನು ಲೆಕ್ಕಹಾಕಲಾಗುತ್ತದೆ.
ಇದನ್ನೂ ಓದಿ: http://ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವಿರುದ್ಧ ED ಚಾರ್ಜ್ಶೀಟ್ ಸಲ್ಲಿಕೆ
ಹೊಸ ವ್ಯವಸ್ಥೆಯು ಭೌತಿಕ ಟೋಲ್ (Physical toll) ಬೂತ್‌ಗಳನ್ನು ಸ್ಥಾಪಿಸುವ ಅಗತ್ಯವನ್ನು ನಿವಾರಿಸುವುದಲ್ಲದೆ, (GPS toll collection from may 1st) ಬಳಕೆದಾರರಿಗೆ ಹೊಂದಿಕೊಳ್ಳುವ ಪಾವತಿ ಆಯ್ಕೆಗಳನ್ನು ಒದಗಿಸುತ್ತದೆ.