Visit Channel

ಗ್ರಾಮ ಒನ್‌ ಕೇಂದ್ರಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನ

gram one

ಸಾರ್ವಜನಿಕರಿಗೆ ಗ್ರಾಮ ಪಂಚಾಯತ್‌ ಮಟ್ಟದಲ್ಲೇ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಗ್ರಾಮಒನ್ ಎಂಬುದನ್ನು ಗ್ರಾಮೀಣ ಮಟ್ಟದಲ್ಲಿ ತೆರೆಯಲಾಗಿದೆ. ಇದರಲ್ಲಿ ಜಿ2ಸಿ ಸೇವೆಗಳು, ಬ್ಯಾಂಕಿಂಗ್ ಸೇವೆಗಳು, ಆರ್.ಟಿ.ಐ. ಪ್ರಶ್ನೆಗಳು ಇತ್ಯಾದಿಗಳು ಒಳಗೊಂಡಿರುತ್ತವೆ. 2020-21 ರ ಹಣಕಾಸು ವರ್ಷದ ಆಯವ್ಯಯ ಪತ್ರದಲ್ಲಿ ಗೌರವಾನ್ವಿತ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಇದನ್ನು ಘೋಷಿಸಿರುತ್ತಾರೆ. ವಾರದ ಎಲ್ಲಾ ಏಳು (7) ದಿನಗಳಲ್ಲೂ ಬೆಳಿಗ್ಗೆ 8.00 ರಿಂದ ರಾತ್ರಿ 8.00 ಗಂಟೆಯವರೆಗೆ ಗ್ರಾಮಒನ್ ಕೇಂದ್ರಗಳು ಕಾರ್ಯನಿರ್ವಹಿಸುತ್ತವೆ.

ಗ್ರಾಮಒನ್ ಕೇಂದ್ರಗಳ ಸೇವೆ ಮತ್ತು ಸೌಲಭ್ಯಗಳು :

 • ನಾಗರಿಕರು ಸರ್ಕಾರಿ ಸೇವೆಗಳನ್ನು ಪಡೆಯಲು ಜಿಲ್ಲೆ, ತಾಲ್ಲೂಕು ಮತ್ತು ಹೊಬ್ಲಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ.
 • ಗ್ರಾಮಒನ್’ ಕೇಂದ್ರಗಳ ಮೂಲಕ ಸೇವೆಗಳನ್ನು ಪಡೆಯುವ ಮೂಲಕ ನಾಗರೀಕರು ಸಮಯ ಮತ್ತು ಹಣವನ್ನು ಉಳಿಸಬಹುದಾಗಿದೆ.
 • ಮಧ್ಯವರ್ತಿಗಳ ಹಾವಳಿ-ಭೀತಿ ಇರುವುದಿಲ್ಲ.
 • ಗ್ರಾಮಒನ್ ಕೇಂದ್ರಗಳು ಬೆಳಿಗ್ಗೆ 8.00 ಗಂಟೆಯಿಂದ ರಾತ್ರಿ 8.00 ಗಂಟೆವರೆಗೆ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ನಾಗರೀಕರು, ಸೇವೆಗಳನ್ನು ಅವರಿಗೆ ಅನುಕೂಲವಾಗುವ ಸಮಯದಲ್ಲಿ ಪಡೆಯಬಹುದಾಗಿದೆ.

10 ಜಿಲ್ಲೆಗಳಲ್ಲಿ ಸ್ಥಾಪನೆ

ಇಡಿಸಿಎಸ್ ನಿರ್ದೇಶನಾಲಯ, ಡಿಪಿಎಆರ್ (ಇ-ಆಡಳಿತ), ಕರ್ನಾಟಕ ಸರ್ಕಾರವು ಒಂದೇ ಸೂರಿನಡಿ ವಿವಿಧ ಸರ್ಕಾರಿ ಖಾತೆಗಳ ಮತ್ತು ಖಾಸಗಿ ಸಂಸ್ಥೆಗಳ ಸೇವೆಗಳನ್ನು ನಾಗರೀಕರಿಗೆ ಸ್ನೇಹತ್ವ ರೀತಿಯಲ್ಲಿ ಒದಗಿಸಲು ಗ್ರಾಮಒನ್ ಕೇಂದ್ರಗಳನ್ನು ತೆರೆದಿದೆ.

ಸಿಎಮ್ಎಸ್ ಕಂಪ್ಯೂಟರ್ಸ್ ಲಿಮಿಟೆಡ್ (ಗ್ರಾಮಒನ್‌ನ ಕಾರ್ಯಾಚರಣೆಯ ಪಾಲುದಾರ) ಮೂಲಕ ಇಡಿಸಿಎಸ್ ನಿರ್ದೇಶನಾಲಯವು ಪ್ರಾಯೋಗಿಕ ಯೋಜನೆಯಡಲ್ಲಿ ಫ್ರ್ಯಾಂಚೈಸಿ ಮಾದರಿಯಲ್ಲಿ ಗ್ರಾಮಒನ್ ಕೇಂದ್ರಗಳನ್ನು ಕರ್ನಾಟಕದ ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬೆಂಗಳೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಗದಗ, ಧಾರವಾಡ, ಕಾರವಾರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಸ್ಥಾಪಿಸಲು ಪ್ರಸ್ತಾಪಿಸಿದೆ.

10 ಜಿಲ್ಲೆಗಳಲ್ಲಿ ಮಾತ್ರ ಗ್ರಾಮಒನ್ ಕೇಂದ್ರಗಳನ್ನು ಸ್ಥಾಪಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಗಮನಿಸಬಹುದು.

ಗ್ರಾಮ ಒನ್‌ ತೆರೆಯಲು ಬೇಕಾಗುವ ಸೌಕರ್ಯಗಳು

 • ಪ್ರಾಂಚೈನ್ ಮೂಲಕ ಸ್ಥಾಪಿಸಲಾಗುವ ಗ್ರಾಮ ಒನ್ ಕೇಂದ್ರವು ಒಂದು ವಿಶೇಷ (ಪ್ರತ್ಯೇಕ) ಪ್ರವೇಶವುಳ್ಳ ವಿಶೇಷ ವಿಭಜನೆ (ಪಾರ್ಟಿಷನ್) ಹೊಂದಿರಬೇಕು.
 • ಒಂದು ಕೌಂಟರ್‍ವುಳ್ಳ ಗ್ರಾಮಒನ್ ಕೇಂದ್ರಗಳು ಕನಿಷ್ಟ 100 ಚ.ಅಡಿಗಳ ಅಳತೆ ಹೊಂದಿರಬೇಕು. ಗ್ರಾಹಕರು ಕುಳಿತುಕೊಳ್ಳಲು ನಾಲ್ಕು ಕುರ್ಚಿಗಳು ಇರಬೇಕು.
 • ಬ್ರಾಂಡಿಂಗ್ (ಮುದ್ರೆಗಳು)ಗಳು ಗ್ರಾಮಒನ್ ಯೋಜನೆಯ ಬ್ರಾಂಡಿಂಗ್ ಗುಣಮಟ್ಟದ ರೀತಿಯಲ್ಲಿರಬೇಕು (ಹೆಸರಿನ ಫಲಕ/ದರಪಟ್ಟಿ/ ಕಟ್ಟಡದ ಬಣ್ಣ/ ಗ್ರಾಮಒನ್ ದ ಮನೋಗ್ರಾಂ).
 • ಫ್ರಾಂಚೈಸಿಗಳು ತಮ್ಮ ಸಮುಚ್ಛಯವನ್ನು ಸ್ವಚ್ಛ ಮತ್ತು ಅಚ್ಚುಕಟ್ಟಾಗಿ ಇರಿಸಿರಬೇಕು.
 • ಕೊಠಡಿಯ ನೆಲಹಾಸು ಟೈಲ್ಸ್/ಗ್ರಾನೈಟ್‍ನಿಂದ ಕೂಡಿರಬೇಕು, ಆರ್.ಸಿ.ಸಿ. ಮೇಲ್ಛಾವಣಿ ಇರಬೇಕು ಮತ್ತು ಸೀಮೆಂಟ್ ಇಟ್ಟಿಗೆ/ ಸೀಮೆಂಟ್ ಕಲ್ಲಿನಿಂದ ಗೋಡೆಗಳು ನಿರ್ಮಾನವಾಗಿರಬೇಕು. ಯಾವುದೇ ಭಾಗದಲ್ಲೂ ನೀರು ಸೋರಿಕೆ ಕಂಡುಬರಬಾರದು.
 • ಕೊಠಡಿಯಲ್ಲಿ ಉತ್ತಮ ಗಾಳಿ ಬೆಳಕಿನ ವ್ಯವಸ್ಥೆ ಇರಬೇಕು ಹೊರಗಡೆ ವಾಹನ ನಿಲುಗಡೆಗೆ ಬೋರ್ಡ್‍ಗಳನ್ನು ಪ್ರದರ್ಶಿಸುವುದು ಇತ್ಯಾದಿಗಳಿಗಾಗಿ ಸಾಕಷ್ಟು ಸ್ಥಳಾವಕಾಶ ಇರಬೇಕು.
 • ಪೀಠೋಪಕರಣಗಳು ಗ್ರಾಮಒನ್‍ನಲ್ಲಿ ನಿರ್ಧಿಷ್ಟಗೊಳಿಸಿರದ ರೀತಿಯಲ್ಲಿರಬೇಕು (ಕೌಂಟರ್‍ಟೇಬಲ್/ ಆಪರೇಟರ್‍ರ ಕುರ್ಚಿ/ ಪ್ರಿಂಟರ್‍ಟೇಬಲ್/ ಗ್ರಾಹಕರು ಕಾಯುವ ಕುರ್ಚಿ).
 • ಪ್ರಾಂಚೈಸಿಗಳು ಸಿ.ಸಿ.ಟಿ.ವಿ. ಕಣ್ಗಾವಲು ಮತ್ತು ಎಲ್.ಸಿ.ಡಿ.ಟಿ.ವಿ. ಯನ್ನು ಹೊಂದಿರಬೇಕು.
 • ಡೆಸ್ಕ್‍ಟಾಪ್ / ಲ್ಯಾಪ್‍ಟಾಪ್ (ಐ3 ಸಂರಚನೆಗಿಂತ ಹೆಚ್ಚಿನವುಗಳದ್ದು)
 • ವಿವಿಧ ಕಾರ್ಯಕಾರಿ ಪ್ರಿಂಟರ್ (ಪ್ರೀಂಟ್/ಸ್ಕ್ಯಾನ್)
 • ಬಯೋಮೆಟ್ರಿಕ್ ಸ್ಕ್ಯಾನರ್ (ಸೆಕ್ಯೂಜೆನ್ ಹ್ಯಾಮಸ್ಟರ್ ಪ್ರೋ20)
 • ವೆಬ್ ಕ್ಯಾಮರಾ
 • ವೈ-ಪೈ ರಿಸೀವರ್
 • ಇಬ್ಬರು ಅಂತರ್ಜಾಲ ಸೇವೆ ಒದಗಿಸುವವರಿಂದ ಅಂತರ್ಜಾಲ ಸಂಪರ್ಕ ಹೊಂದಿರಬೇಕು (ಐಎಸ್‍ಪಿಎಸ್) ಕಾರಣ ಅಂತರ್ಜಾಲ ಸಂಪರ್ಕ ವ್ಯವಸ್ಥೆಯ ವೃತಿರಕ್ತತೆಯಿಂದ ಸೇವೆಗಳಿಗೆ ಅಡ್ಡಿ ಉಂಟಾಗಬಹುದು ಎಂಬ ಕಾರಣಕ್ಕಾಗಿ ಆ ವ್ಯವಸ್ಥೆ ಇರಬೇಕು.

ಅರ್ಹತಾ ಮಾನದಂಡಗಳು

 • ಕಂಪ್ಯೂಟರ್ ಜ್ಞಾನ ಹೊಂದಿರುವ ಯಾವುದೇ ವಿಭಾಗದಲ್ಲೂ ಪದವಿದರನಾಗಿರಬೇಕಾದುದು ಕನಿಷ್ಟ ಅರ್ಹತೆ ಹೊಂದಿರುತ್ತದೆ.
 • ರೂ. 1 ರಿಂದ 2 ಲಕ್ಷ ಬಂಡವಾಳ ಹೂಡಿಕೆ ಮಾಡುವ ಸಾಮಾರ್ಥ್ಯವಿರಬೇಕು.
 • ಗ್ರಾಮಒನ್ ಪೊಲೀಸ್ ತಪಾಸಣಾ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
 • ಸಮುಚ್ಛಯವು ಕೇಂದ್ರ ಸ್ಥಾನದಲ್ಲಿರಬೇಕು ಮತ್ತು ಸಾರ್ವಜನಿಕರು ಸುಲಭವಾಗಿ ಸಂಪರ್ಕಿಸುವಂತಿರಬೇಕು (ದೊರೆಯುವಂತಿರಬೇಕು).

ಷರತ್ತು ಮತ್ತು ನಿಬಂಧನೆಗಳು

 • ನಾನು ಅರ್ಥಮಾಡಿಕೊಂಡಂತೆ, ಇದು ಪ್ರಾಯೋಗಿಕ ಯೋಜನೆಯಾಗಿದೆ ಮತ್ತು ಎಲ್ಲಾ ಫ್ರಾಂಚೈಸಿಗಳು ಪ್ರಾಯೋಗಿಕ ಯೋಜನೆಯಡಿವೆ ಮತ್ತು ಕರ್ನಾಟಕ ಸರ್ಕಾರದ ಸೂಚನೆಯಂತೆ ಯೋಜನೆಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಲಾಗುವುದು.
 • ಗ್ರಾಮಒನ್ ಫ್ರ್ಯಾಂಚೈಸ್ ಪ್ರಾಯೋಗಿಕ ಯೋಜನೆಗೆ ಅರ್ಜಿ ಶುಲ್ಕಕ್ಕೆ ರೂ. 100 /- ಪಾವತಿಸಲು ನಾನು ಒಪ್ಪುತ್ತೇನೆ ಮತ್ತು ಅದನ್ನು ಮರುಪಾವತಿಸಲಾಗುವುದಿಲ್ಲ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ.

ಫ್ರ್ಯಾಂಚೈಸ್ ಮಾದರಿಯಲ್ಲಿ ಗ್ರಾಮಒನ್ ಕೇಂದ್ರವನ್ನು ಸ್ಥಾಪಿಸಲು ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನಾನು ಓದಿದ್ದೇನೆ ಮತ್ತು ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ನಾನು ಒಪ್ಪುತ್ತೇನೆ. ಎಂದು ನಿಬಂಧನೆಗೆ ಸಹಿ ಹಾಕಬೇಕು

Latest News

China Ship
ದೇಶ-ವಿದೇಶ

ಶ್ರೀಲಂಕಾ ಬಂದರಿನಲ್ಲಿ ಚೀನಾದ ಹಡಗು ; ಭಾರತದ ಕಳವಳಕ್ಕೆ 5 ಕಾರಣಗಳು ಇಲ್ಲಿವೆ!

ಮೊದಲಿನಿಂದಲೂ ಈ ಹಡಗು ಶ್ರೀಲಂಕಾ ಬಂದರಿಗೆ ಬರುವುದನ್ನು ಭಾರತ ತೀವ್ರವಾಗಿ ವಿರೋಧಿಸಿತ್ತು. ಭಾರತದ ಕಳವಳಕ್ಕೆ ಪ್ರಮುಖ 5 ಕಾರಣಗಳೆಂದರೆ,

bjp
ರಾಜಕೀಯ

ಕಾಂಗ್ರೆಸ್ಸಿಗರಿಗೇಕೆ ಜಿಹಾದಿಗಳ ಮೇಲೆ ಇಷ್ಟೊಂದು ಪ್ರೀತಿ? : ಬಿಜೆಪಿ ಪ್ರಶ್ನೆ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಕ್ಕೆ ಮಸಿ ಬಳಿಯಲು ಯತ್ನಿಸಿದ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಲಾಗಿದೆ ಎಂದು ಬಿಜೆಪಿ ತಿಳಿಸಿದೆ.

Pingali
ಮಾಹಿತಿ

ನಮ್ಮ ರಾಷ್ಟ್ರಧ್ವಜವನ್ನು ನಿರ್ಮಿಸಿದ ಪಿಂಗಳಿ ವೆಂಕಯ್ಯ, ಮೊದಲು ಬ್ರಿಟಿಷ್ ಸೈನ್ಯದಲ್ಲಿದ್ದರು ; ಇಲ್ಲಿದೆ ಓದಿ ಅಚ್ಚರಿಯ ಮಾಹಿತಿ

ದೇಶಕ್ಕೊಂದು ಧ್ವಜಕೊಟ್ಟು 100 ವರ್ಷ ಕಳೆದರೂ ಪಿಂಗಳಿ ಅವರ ನೆನಪು ಅಜರಾಮರವಾಗಿದೆ. ಪಿಂಗಳಿ ವೆಂಕಯ್ಯ ಅವರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ ಮುಂದೆ ಓದಿ.