ಕೇಂದ್ರ ಸರ್ಕಾರದ (Central Govt) ಅಧೀನದಲ್ಲಿರುವ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL)ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ (Official notification for recruitment) ಬಿಡುಗಡೆಯಾಗಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಿದ್ದು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.
ಹುದ್ದೆಗಳ ವಿವರ (Details of posts)
ಆಪರೇಟರ್ – ಇಲೆಕ್ಟ್ರಿಕಲ್ 03
ಆಪರೇಟರ್ – ಫಿಟ್ಟರ್ 11
ಆಪರೇಟರ್ – ಇಲೆಕ್ಟ್ರೀಷಿಯನ್ 04
ಆಪರೇಟರ್ – ಇಲೆಕ್ಟ್ರಾನಿಕ್ಸ್ 08
ಆಪರೇಟರ್ – ಮೆಕ್ಯಾನಿಕಲ್ 31
ಅರ್ಹತೆ (Eligibility) : ಇಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ವಿಭಾಗದ ಆಪರೇಟರ್ ಹುದ್ದೆಗಳಿಗೆ ಡಿಪ್ಲೊಮ ಶಿಕ್ಷಣವನ್ನು ಪಡೆದಿರಬೇಕು. ಫಿಟ್ಟರ್ ಹಾಗೂ ಇಲೆಕ್ಟ್ರೀಷಿಯನ್ ಹುದ್ದೆಗಳಿಗೆ ITI ಶಿಕ್ಷಣವನ್ನು ಪಡೆದಿರಬೇಕು.
ಅರ್ಜಿ ಸಲ್ಲಿಸಲು ಗರಿಷ್ಠ 28 ವರ್ಷ ವಯಸ್ಸು ಮೀರಿರಬಾರದು. OBC ವರ್ಗದವರಿಗೆ 3 ವರ್ಷ, SC / ST / ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
ವೇತನ (Salary) : ಬೇಸಿಕ್ ಪೇ ರೂ.23,000 ಜತೆಗೆ ಇತರೆ ಭತ್ಯೆಗಳನ್ನು ನೀಡಲಾಗುತ್ತದೆ.
ಪ್ರಮುಖ ದಿನಾಂಕಗಳು : (Important Dates)
ಅರ್ಜಿ ಸಲ್ಲಿಕೆಗೆ ಆರಂಭಿಕ ದಿನಾಂಕ: 29-11-2024
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ: 09-12-2024
ಲಿಖಿತ ಪರೀಕ್ಷೆಯ ಸಂಭಾವ್ಯ ದಿನಾಂಕ: 22-12-2024
ಅರ್ಜಿ ಸಲ್ಲಿಸಲು ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನ ವೆಬ್ಸೈಟ್ https://optnsk.reg.org.in/ ಗೆ ಭೇಟಿ ನೀಡಿ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು : (Documents required to apply)
SSLC ಅಂಕಪಟ್ಟಿ
ITI ಅಂಕಪಟ್ಟಿ
ಡಿಪ್ಲೊಮ ಅಂಕಪಟ್ಟಿ
ಆಧಾರ್ ಕಾರ್ಡ್
ಇಮೇಲ್ ವಿಳಾಸ
ಮೊಬೈಲ್ ನಂಬರ್