• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಜಗತ್ತಿನ ಮೊದಲ ‘ಹಸಿರು ವಿಮಾನ ನಿಲ್ದಾಣ’ ಎಂಬ ಖ್ಯಾತಿಗೆ ಪಾತ್ರವಾದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

Mohan Shetty by Mohan Shetty
in ದೇಶ-ವಿದೇಶ, ವಿಶೇಷ ಸುದ್ದಿ
ಜಗತ್ತಿನ ಮೊದಲ ‘ಹಸಿರು ವಿಮಾನ ನಿಲ್ದಾಣ’ ಎಂಬ ಖ್ಯಾತಿಗೆ ಪಾತ್ರವಾದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
0
SHARES
0
VIEWS
Share on FacebookShare on Twitter

Kochi : ಭಾರತದ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (Green Airport In India) ವಿಶ್ವದ ಮೊದಲ ಸೌರಶಕ್ತಿ ಚಾಲಿತ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಹೊಂದಿದೆ.

ಹಿಂದೂ ಮಹಾಸಾಗರ ಮತ್ತು ಬೆಟ್ಟಗುಡ್ಡದ ನಡುವಿರುವ ಕೊಚ್ಚಿ ವಿಮಾನ ನಿಲ್ದಾಣ, ಸಂಪೂರ್ಣವಾಗಿ ಸೌರಫಲಕದ ಶಕ್ತಿಯನ್ನೇ ಅವಲಂಬಿತವಾಗಿದೆ.

Green Airport In India

ಈ ನಿಲ್ದಾಣ ಇಡೀ ಕೇರಳದಲ್ಲೇ(Kerala) ಅತ್ಯಂತ ದಟ್ಟಣೆಯ ನಿಲ್ದಾಣವಾಗಿದೆ. ಇತ್ತೀಚಿನ ದಿನಗಳಲ್ಲಿ ನವೀಕರಿಸಬಹುದಾದ ಶಕ್ತಿ ಸಂಪನ್ಮೂಲವಾಗಿರುವ ಸೌರಶಕ್ತಿಯ ಬಗ್ಗೆ ಎಲ್ಲಿಲ್ಲದ ಆಸಕ್ತಿ ಸೃಷ್ಟಿಯಾಗಿದೆ.

ಸರ್ಕಾರಗಳೂ ಇದರ ಬಳಕೆಗೆ ಪ್ರೋತ್ಸಾಹ ನೀಡುತ್ತಿವೆ, ಇನ್ನು ವೈಯಕ್ತಿಕವಾಗಿಯೂ (Green Airport In India) ಕೆಲವರು ಇದರ ಬಳಕೆಗೆ ಮುಂದಾಗಿದ್ದಾರೆ.

ಕ್ರೀಡಾಂಗಣಗಳಲ್ಲಿಯೂ ದೊಡ್ಡಮಟ್ಟದ ಸೌರಫಲಕಗಳೂ ಬಂದಿವೆ. ಕಾಲುವೆಗಳ ಮೇಲೆ ಬೃಹತ್‌ ಸೌರಫಲಕಗಳನ್ನು ಅಳವಡಿಸಿಯೂ ವಿದ್ಯುತ್‌ ಉತ್ಪಾದನೆ ನಡೆಯುತ್ತಿದೆ.

ಹೀಗೆ, ಸೌರಶಕ್ತಿಯ ಬಳಕೆ ತಂತ್ರಜ್ಞಾನದ ಅಭಿವೃದ್ಧಿಗೆ ಸಾಕ್ಷಿ ಎಂಬಂತೆ, ಕೊಚ್ಚಿನ್ ನಂತರ ದಕ್ಷಿಣ ಆಫ್ರಿಕಾದ ವಿಮಾನ ನಿಲ್ದಾಣವೊಂದು ಕೂಡ ಸಂಪೂರ್ಣವಾಗಿ ಸೌರಶಕ್ತಿಯನ್ನು ಬಳಸಿ ಕಾರ್ಯನಿರ್ವಹಿಸುತ್ತಿದೆ.

ಇದನ್ನೂ ಓದಿ : https://vijayatimes.com/allu-arjun-loves-kantara/

ಜಾರ್ಜ್‌ನಲ್ಲಿರುವ ಪ್ರಾದೇಶಿಕ ವಿಮಾನ ನಿಲ್ದಾಣವೂ ಕೂಡ ಸೌರವಿಮಾನ ನಿಲ್ದಾಣವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ‘ಹಸಿರು ವಿಮಾನ ನಿಲ್ದಾಣ’ ಎಂಬ ಹೆಸರನ್ನೂ ಪಡೆದಿದೆ.

ಈ ನಿಲ್ದಾಣದಲ್ಲಿ ನಿಯಂತ್ರಣ ಗೋಪುರ, ಎಸ್ಕಲೇಟರ್‌, ಚೆಕ್‌ ಇನ್‌ ಡೆಸ್ಕ್‌, ಬ್ಯಾಗೇಜ್‌ ಕ್ಯಾರಸೋಲ್‌, ರೆಸ್ಟೋರೆಂಟ್‌ ಮತ್ತು ಎಟಿಎಂಗಳು ಸಂಪೂರ್ಣವಾಗಿ ಸೌರಶಕ್ತಿಯನ್ನೇ ಅವಲಂಬಿಸಿವೆ.

ಸೌರ ಫಲಕಗಳು ಉತ್ಪಾದಿಸುವ ವಿದ್ಯುತ್‌ ಅನ್ನು ವಿಮಾನ ನಿಲ್ದಾಣದ ಬಳಕೆಗೆ ಬಳಸಿಕೊಂಡು ಉಳಿದಿದ್ದನ್ನು ಮುನ್ಸಿಪಲ್‌ ಪವರ್ ಗ್ರಿಡ್‌ಗೆ ಪೂರೈಸಲಾಗುತ್ತದೆ.

ಇತರ ವಿದ್ಯುತ್‌ ಮೂಲಗಳಿಗೆ ಅವಲಂಬಿತವಾಗದೇ ಸೌರಶಕ್ತಿಗೆ ಮೊರೆ ಹೋಗಿರುವುದರಿಂದ ಇಡೀ ವಿಮಾನ ನಿಲ್ದಾಣ ‘ಪರಿಸರ ಸ್ನೇಹಿ’ಯಾಗಿದೆ.

Green Airport In India

ಜಾರ್ಜ್‌ ವಿಮಾನ ನಿಲ್ದಾಣವನ್ನು 1977ರಲ್ಲಿ ಅದೂ ವರ್ಣಭೇದ ನೀತಿ ವಿರುದ್ಧದ ಹೋರಾಟದ ಸಂದರ್ಭದಲ್ಲಿ ನಿರ್ಮಿಸಲಾಗಿದೆ. ಸಚಿವರಾಗಿದ್ದ ಪಿ.ಡಬ್ಲ್ಯೂ.ಬೋಥಾ ಎಂಬುವವರು ಇದನ್ನು ಆರಂಭಿಸಿದರು. ಸದ್ಯ ಈ ವಿಮಾನ ನಿಲ್ದಾಣವನ್ನು ಪ್ರತಿ ವರ್ಷ 7 ಲಕ್ಷ ಪ್ರಯಾಣಿಕರು ಬಳಸುತ್ತಾರೆ.

https://youtu.be/4qljH5KAb8o


ವಿಮಾನ ನಿಲ್ದಾಣಗಳಿಗೆ ಅಪಾರ ಪ್ರಮಾಣದ ವಿದ್ಯುತ್ ಅಗತ್ಯವಿರುತ್ತದೆ. ಹಲವು ಮೂಲಗಳಿಂದ ಇವುಗಳಿಗೆ ವಿದ್ಯುತ್‌ ಪೂರೈಕೆ ವ್ಯವಸ್ಥೆ ಮಾಡಿಕೊಂಡಿದ್ದರೂ ಕೆಲವು ಬಾರಿ ಕೈಕೊಡುವ ಸಾಧ್ಯತೆ ಇದ್ದೇ ಇದೆ.

ಆದರೆ ಜಾರ್ಜ್‌ ವಿಮಾನ ನಿಲ್ದಾಣ ಮಾತ್ರ ಇಂತಹ ಸಂಕಷ್ಟಕ್ಕೆ ಎಂದೂ ಇತ್ತೀಚೆಗೆ ತುತ್ತಾಗಿಲ್ಲ.

ಇದನ್ನೂ ಓದಿ : https://vijayatimes.com/controversy-on-rishi-sunak/

‘ವಿದ್ಯುತ್ ಸರಬರಾಜಿನ ತೊಂದರೆ ಎಂದೂ ನಮ್ಮ ಅನುಭವಕ್ಕೆ ಬಂದಿಲ್ಲ. ಇದು ಪ್ರಯಾಣಿಕರಿಗೆ ಗುಣಮಟ್ಟದ ಸೇವೆ ನೀಡಲು ನೆರವಾಗಿದೆ’ ಎಂದು ಖುಷಿ ಪಡುತ್ತಾರೆ ವಿಮಾನ ನಿಲ್ದಾಣದ ಮ್ಯಾನೇಜರ್ ಬ್ರೆಂಡಾ ವೊಸ್ಟರ್‌.

ಸೌರಶಕ್ತಿ ಪ್ಯಾನಲ್‌ಗಳನ್ನು ಅಳವಡಿಸಲು ಸರ್ಕಾರ ಕೋಟ್ಯಂತರ ವೆಚ್ಚ ಮಾಡಿರುವುದರಿಂದ 1229 ಟನ್‌ ಇಂಗಾಲದ ಡೈಆಕ್ಸೈಡ್‌ ಉತ್ಪಾದನೆಯಾಗುವುದು ತಪ್ಪಿದೆ.

ಇದು 10,3934 ಲೀಟರ್‌ ಇಂಧನ ಬಳಕೆಯನ್ನೂ ತಪ್ಪಿಸಿದೆ. ಜಾರ್ಜ್‌ ವಿಮಾನ ನಿಲ್ದಾಣದಲ್ಲಿ ಸೌರ ಶಕ್ತಿಯ ಪರಿಣಾಮಕಾರಿ ಬಳಕೆ ಇತರೆ ವಿಮಾನ ನಿಲ್ದಾಣದಲ್ಲೂ ಇದೇ ತಂತ್ರಜ್ಞಾನವನ್ನು ಬಳಸುವಂತೆ ಪ್ರೇರಣೆ ನೀಡಿದೆ.
Tags: Cochin International AirportFloating Solar PanelSolar Power

Related News

ರಾಷ್ಟ್ರಪತಿಯಿಂದ ಹೊಸ ಸಂಸತ್ ಭವನ ಉದ್ಘಾಟನೆಗೆ ಕೋರಿಕೆ: ಸುಪ್ರೀಂ ಕೋರ್ಟ್‌ನಿಂದ ಅರ್ಜಿ ವಜಾ
ದೇಶ-ವಿದೇಶ

ರಾಷ್ಟ್ರಪತಿಯಿಂದ ಹೊಸ ಸಂಸತ್ ಭವನ ಉದ್ಘಾಟನೆಗೆ ಕೋರಿಕೆ: ಸುಪ್ರೀಂ ಕೋರ್ಟ್‌ನಿಂದ ಅರ್ಜಿ ವಜಾ

May 27, 2023
ಕೇವಲ ಭಾರತೀಯರಿಗೆ ಉದ್ಯೋಗ ಅವಕಾಶ ಎಂದು ಜಾಹೀರಾತು; ಅಮೆರಿಕದ ಐಟಿ ಕಂಪನಿಗೆ ಬಿತ್ತು 21 ಲಕ್ಷ ರೂ ದಂಡ
ದೇಶ-ವಿದೇಶ

ಕೇವಲ ಭಾರತೀಯರಿಗೆ ಉದ್ಯೋಗ ಅವಕಾಶ ಎಂದು ಜಾಹೀರಾತು; ಅಮೆರಿಕದ ಐಟಿ ಕಂಪನಿಗೆ ಬಿತ್ತು 21 ಲಕ್ಷ ರೂ ದಂಡ

May 24, 2023
ಇನ್ನು ಮುಂದೆ ದೇವಸ್ಥಾನ ಆವರಣದಲ್ಲಿ ಆರ್‌ಎಸ್ಎಸ್‌ಗೆ ನಿಷೇಧ : ಕೇರಳದಲ್ಲಿ ಭುಗಿಲೆದ್ದ ಮತ್ತೊಂದು ವಿವಾದ
ದೇಶ-ವಿದೇಶ

ಇನ್ನು ಮುಂದೆ ದೇವಸ್ಥಾನ ಆವರಣದಲ್ಲಿ ಆರ್‌ಎಸ್ಎಸ್‌ಗೆ ನಿಷೇಧ : ಕೇರಳದಲ್ಲಿ ಭುಗಿಲೆದ್ದ ಮತ್ತೊಂದು ವಿವಾದ

May 24, 2023
ಫುಡ್ ಡೆಲಿವರಿ ಮಾಡುವ ಸಂದರ್ಭದಲ್ಲಿ ಶ್ವಾನ ದಾಳಿ : 3ನೇ ಮಹಡಿಯಿಂದ ಜಿಗಿದ ಡೆಲಿವರಿ ಬಾಯ್ ಸ್ಥಿತಿ ಗಂಭೀರ
ದೇಶ-ವಿದೇಶ

ಫುಡ್ ಡೆಲಿವರಿ ಮಾಡುವ ಸಂದರ್ಭದಲ್ಲಿ ಶ್ವಾನ ದಾಳಿ : 3ನೇ ಮಹಡಿಯಿಂದ ಜಿಗಿದ ಡೆಲಿವರಿ ಬಾಯ್ ಸ್ಥಿತಿ ಗಂಭೀರ

May 24, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.