Karnataka: ಇಂದಿನಿಂದ (ನ.3) ನವೆಂಬರ್ 20ನೇ ತಾರೀಖಿನವರೆಗೂ ಬಾಕಿ ಉಳಿದಿದ್ದ ಪಡಿತರ ಕಾರ್ಡ್ಗಳನ್ನು(Green Signal for New BPL Card) ವಿತರಿಸಲಾಗುತ್ತದೆ.
ಪಡಿತರ ಪಡೆಯದವರ ಬಿಪಿಎಲ್ ಕಾರ್ಡ್ (BPL Card) ಅನ್ನು ರದ್ದುಪಡಿಸುವುದಿಲ್ಲ, ಬದಲಾಗಿ ಆರೋಗ್ಯ ಯೋಜನೆಗಳಿಗೆ (Health Scheme) ಕಾರ್ಡ್ಗಳನ್ನು ಬಳಸಲು ಅವಕಾಶವಿದ್ದು,
ಸದ್ಯ 2 ಲಕ್ಷದ 28 ಸಾವಿರ ಕಾರ್ಡ್ಗಳಿಗೆ ಮಾತ್ರ ಅನುಮತಿ ನೀಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ (K H Muniyappa) ಸ್ಪಷ್ಟಪಡಿಸಿದ್ದಾರೆ.

ಪಡಿತರ ಪಡೆಯದವರ ಬಿಪಿಎಲ್ ಕಾರ್ಡ್ ರದ್ದುಪಡಿಸುವುದಿಲ್ಲ: ಮುನಿಯಪ್ಪ
ಪಡಿತರ ಪಡೆಯದವರ ಬಿಪಿಎಲ್ ಕಾರ್ಡ್ ಅನ್ನು ರದ್ದುಪಡಿಸುವುದಿಲ್ಲ, ಬದಲಾಗಿ ಆರೋಗ್ಯ ಯೋಜನೆಗಳಿಗೆ ಕಾರ್ಡ್ಗಳನ್ನು ಬಳಸಲು ಅವಕಾಶವಿದೆ ಎಂದು ಆಹಾರ ಮತ್ತು ನಾಗರಿಕ
ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ (Green Signal for New BPL Card) ಸ್ಪಷ್ಟಪಡಿಸಿದರು.
ಕಾರ್ಡ್ ಪಡೆಯುವುದು ಹೇಗೆ?
ಆಹಾರ ಇಲಾಖೆಯಿಂದ ಸಂದೇಶ ಪಡಿತರ ಕಾರ್ಡ್ದಾರರಿಗೆ ರವಾನಿಸಲಾಗಿದ್ದು, ಒಟಿಪಿ ನಂಬರ್ (OTP Number) ಪಡೆದು ತಾವೇ ಗೂಗಲ್ನಲ್ಲಿ ಕಾರ್ಡ್ಗಳನ್ನು ಡೌನ್ ಲೋಡ್ (Download)
ಮಾಡಿಕೊಳ್ಳಬಹುದಾಗಿದೆ. ಬೆಳ್ಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಅಪ್ರುವಲ್ಗೆ ಅವಕಾಶ ನೀಡಲಾಗಿದೆ ಎಂದು ಆಹಾರ ಇಲಾಖೆ ಪ್ರಕಟಣೆ ಹೊರಡಿಸಿದೆ.
ಇದೀಗ ಹೊಸದಾಗಿ ಸುಮಾರು 2.95 ಲಕ್ಷ ಕಾರ್ಡ್ಗಳನ್ನು ನೀಡಲು ತೀರ್ಮಾನಿಸಲಾಗಿದ್ದು, ಇವುಗಳಲ್ಲಿ ಹೆಚ್ಚಿನವು ಬಿಪಿಎಲ್ ಕಾರ್ಡ್ಗಳಿವೆ. ಕಳೆದ ಒಂದು ವರ್ಷದಿಂದ ಹೊಸ ಕಾರ್ಡ್ಗಳನ್ನು ವಿತರಿಸಿಲ್ಲ.
ಸರಿಯಾದ ಪರಿಶೀಲನೆಯೊಂದಿಗೆ, ಕಾರ್ಡ್‌ಗಳ ವಿತರಣೆಗೆ ಇಂದಿನಿಂದ (ಶುಕ್ರವಾರ) ಅನುಮೋದನೆಯನ್ನು ನೀಡಲಾಗುತ್ತಿದೆ. ಪಡಿತರ ಪಡೆಯದವರೂ ಕೂಡ ಆರೋಗ್ಯ ಯೋಜನೆಗಳಿಗೆ ಕಾರ್ಡ್ ಅನ್ನು
ಬಳಸಿಕೊಳ್ಳಲು ಅನುಮತಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ 1.08 ಕೋಟಿ ಬಿಪಿಎಲ್ ಕಾರ್ಡ್‌ಗಳಿದ್ದು, 1.03 ಕೋಟಿ ಬಿಪಿಎಲ್ ಕಾರ್ಡ್ದಾರರು 170 ರೂಪಾಯಿ ಪಡೆಯುತ್ತಿದ್ದಾರೆ. ಶೇಕಡಾ 95 ಕ್ಕಿಂತ ಹೆಚ್ಚು ಬಿಪಿಎಲ್ ಕಾರ್ಡ್ ಹೊಂದಿರುವವರು 5 ಕೆಜಿ ಅಕ್ಕಿಗೆ
ಬದಲಾಗಿ ಹಣವನ್ನು ಪಡೆಯುತ್ತಿದ್ದಾರೆ. ಮತ್ತು ಒಂದು ಕುಟುಂಬ ಒಂದಕ್ಕಿಂತ ಹೆಚ್ಚು ಬಿಪಿಎಲ್ ಕಾರ್ಡ್ ಹೊಂದಿರುವಂತಹ ಅಕ್ರಮವನ್ನು ಪತ್ತೆ ಹಚ್ಚಲಾಗುತ್ತಿದೆ ಎಂದರು.
ಬಿಪಿಎಲ್ ಕುಟುಂಬಗಳಿಗೆ ತಿಂಗಳಿಗೆ ತಲಾ 10 ಕೆಜಿ ಅಕ್ಕಿ ನೀಡುವ ‘ಅನ್ನ ಭಾಗ್ಯ (Anna Bhagya)’ ಯೋಜನೆಗೆ ಅಗತ್ಯವಿರುವ ಹೆಚ್ಚುವರಿ ಅಕ್ಕಿಯನ್ನು ನೀಡಲು ನಿರಾಕರಿಸುವ ಮೂಲಕ ಕೇಂದ್ರ ಸರ್ಕಾರ
ರಾಜಕೀಯ ಮಾಡುತ್ತಿದೆ. ಆಂಧ್ರಪ್ರದೇಶ (Andra Pradesh), ಛತ್ತೀಸ್‌ಗಢ ಮತ್ತು ಇತರ ರಾಜ್ಯಗಳಿಂದ ಅಕ್ಕಿ ಕೊಂಡುಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಫಲಾನುಭವಿಗಳಿಗೆ ನೇರವಾಗಿ ಹಣ ನೀಡುತ್ತಿರುವುದರಿಂದ ನ್ಯಾಯಬೆಲೆ ಅಂಗಡಿ ನಿರ್ವಾಹಕರ ಕಮಿಷನ್ಗೆ (Commission) ಕತ್ತರಿ ಬಿದ್ದಿದೆ ಎಂಬ ವಿಚಾರವಾಗಿ ಮಾತನಾಡಿದ ಅವರು ನಾವು ಹೆಚ್ಚುವರಿ
ಅಕ್ಕಿ ನೀಡಲು ಪ್ರಾರಂಭಿಸಿದಾಗ ಕಮಿಷನ್ ಸಿಗುತ್ತದೆ. ಅರ್ಹರಿಗೆ ಅಕ್ಕಿ ಸಿಗಲಿದ್ದು, ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದನ್ನು ಓದಿ: ಬರ ಪರಿಹಾರ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ: ಯಾವ ಜಿಲ್ಲೆಗೆ ಎಷ್ಟು ಪರಿಹಾರ.? ಇಲ್ಲಿದೆ ವಿವರ
- ಭವ್ಯಶ್ರೀ ಆರ್.ಜೆ