New Delhi: ಸುಪ್ರೀಂ ಕೋರ್ಟ್ (Superme Court) ಜಲ್ಲಿಕಟ್ಟುಗೆ (Jallikattu) ಅನುಮತಿ ಕೊಟ್ಟಿದ್ದಲ್ಲದೆ, ತಮಿಳುನಾಡು ಅಂಗೀಕರಿಸಿದ ತಿದ್ದುಪಡಿಯನ್ನು ಎತ್ತಿಹಿಡಿಯಲಾಯಿತು. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಕಂಬಳ ಮತ್ತು ಎತ್ತಿನಗಾಡಿ ಓಟದ ಸ್ಪರ್ಧೆಗೆ ಅನುಮತಿ ನೀಡುವ ಕಾನೂನುಗಳನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ತಿದ್ದುಪಡಿಗಳು ಹೆಚ್ಚುವರಿ ಸುರಕ್ಷತೆಗಳನ್ನು ಒದಗಿಸುವ ಮೂಲಕ ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ಕಡಿಮೆ ಮಾಡಿದೆ ಮತ್ತು 2014 ರ ನಿರ್ಧಾರ ಅಥವಾ ಸಂವಿಧಾನವನ್ನು ಉಲ್ಲಂಘಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ಅಭಿಪ್ರಾಯಪಟ್ಟಿದೆ.

ತಮಿಳುನಾಡಿನ ‘ಜಲ್ಲಿಕಟ್ಟು’ (Jallikattu) ಮತ್ತು ಕರ್ನಾಟಕದ ‘ಕಂಬಳ’ (Kambala) ಎರಡೂ ಗ್ರಾಮೀಣ ಕ್ರೀಡೆಗಳು 2017ರಲ್ಲಿ ದೇಶಾದ್ಯಂತ ಬಹಳ ಚರ್ಚೆಗೆ ಗ್ರಾಸವಾಗಿದ್ದವು. ಪ್ರಾಣಿ ಹಿಂಸಾ ಕ್ರೀಡೆಗಳಿಗೆ ಪೇಟಾದಂತಹ ಪ್ರಾಣಿ ದಯಾ ಸಂಸ್ಥೆಗಳು ವಿರೋಧ ವ್ಯಕ್ತ ಪಡಿಸಿದ್ದವು.ಆದರೆ ಜನಪದೀಯ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಮತ್ತು ಗ್ರಾಮೀಣ ಸೊಗಡನ್ನು ಕಾಪಾಡಲು ಕರ್ನಾಟಕ ರಾಜ್ಯ ಸರ್ಕಾರ ನಿರ್ಧರಿಸಿತ್ತು.
ಕಾನೂನಿನಲ್ಲಿ ನಿಗದಿಪಡಿಸಿದ ಸುರಕ್ಷತೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸುಪ್ರೀಂ ಕೋರ್ಟ್ ಪ್ರಾದೇಶಿಕ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಸುಪ್ರೀಂ ಕೋರ್ಟ್ ಪ್ರಕಾರ, ಜಲ್ಲಿಕಟ್ಟು ತಮಿಳುನಾಡಿನ (Tamil Nadu) ಸಾಂಸ್ಕೃತಿಕ ಪರಂಪರೆಯ ಭಾಗವಲ್ಲ ಎಂಬ ತೀರ್ಮಾನವು 2014 ರ ನಿರ್ಧಾರದಲ್ಲಿ ತಪ್ಪಾಗಿದೆ.
“ವಿಧಾನಸಭೆಯ ಅಭಿಪ್ರಾಯಕ್ಕೆ ನಾವು ಅಡ್ಡಿಯಾಗುವುದಿಲ್ಲ. ಈಗಾಗಲೇ ವಿಧಾನಸಭೆಯು ಜಲ್ಲಿಕಟ್ಟು ರಾಜ್ಯದ ಸಾಂಸ್ಕೃತಿಕ ಪರಂಪರೆಯ ಭಾಗವೆಂದು ಪರಿಗಣಿಸಿದೆ. ಇದು ತಮಿಳುನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಭಾಗವೆಂದು ಮುನ್ನುಡಿಯಲ್ಲಿ ಘೋಷಿಸಲಾಗಿದೆ” ಎಂದು ಬಾರ್ & ಬೆಂಚ್ (Bench) ಪೀಠವು ಸುಪ್ರೀಂ ಅನ್ನು ಉಲ್ಲೇಖಿಸಿದೆ.

ಕಂಬಳವು ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ (Udupi) ಜಿಲ್ಲೆಗಳ ಸಾಂಪ್ರದಾಯಿಕ ವಾರ್ಷಿಕ ಎಮ್ಮೆ ಓಟವಾಗಿದ್ದು,ರೈತ ಸಮುದಾಯ ಆಯೋಜಿಸುತ್ತದೆ. ಈ ಕ್ರೀಡೆಯಲ್ಲಿ ವರ್ಷವಿಡೀ ಉತ್ತಮ ಆಹಾರ ಮತ್ತು ಆರೈಕೆಯನ್ನು ಎಮ್ಮೆಗಳಿಗೆ ವರ್ಷವಿಡೀ ನೀಡಲಾಗುತ್ತದೆ.ಎಮ್ಮೆಗಳಿಗಾಗಿ ಪ್ರತ್ಯೇಕ ಈಜುಕೊಳಗಳನ್ನು ಕೆಲವು ಮಾಲೀಕರು ನಿರ್ಮಿಸುತ್ತಾರೆ.
.
ಕಳೆದ ಶತಮಾನದಿಂದಲೂ ಜಲ್ಲಿಕಟ್ಟು ಗೋವಿನ ಕ್ರೀಡೆಯಾಗಿದ್ದು,ತಮಿಳುನಾಡಿನಲ್ಲಿ ನಡೆಯುತ್ತದೆ.ಈ ಆಟದಲ್ಲಿ ಗೂಳಿಯನ್ನು ಅಖಾಡದಲ್ಲಿ ಬಿಡಲಾಗುತ್ತದೆ.ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಬೇಕು ಎಂದು ನ್ಯಾಯಮೂರ್ತಿ ಅನಿರುದ್ಧ ಬೋಸ್ Anirudha Bose) ಹೇಳಿದ್ದಾರೆ.
ರಶ್ಮಿತಾ ಅನೀಶ್