ನೆಲ ಕಚ್ಚುತ್ತಿದೆ ನರೇಗಾ ! ನಾಲಾಯಕ್‌ ಕಾಮಗಾರಿ ಮಾಡಿ ಚಿಕ್ಕಬಳ್ಳಾಪುರದ ಹೊಸಪೇಟೆಯಲ್ಲಿ ಭರ್ಜರಿ ಲೂಟಿ !

ಇದು ನರೇಗಾ ಯೋಜನೆಯಡಿ ಲಕ್ಷಾಂತರ ರೂಪಾಯಿ ಖರ್ಚುಮಾಡಿ ನಿರ್ಮಿಸುತ್ತಿರೋ ಚರಂಡಿ. ಆದ್ರೆ ಈ ಕಾಮಗಾರಿಯ ಗುಣಮಟ್ಟ ನೋಡಿದ್ರೆ, ಮಾಡಿದ ಗುತ್ತಿದಾರ ಹಾಗೂ ಇದರ ಮೇಲ್ವಚಾರಣೆ ಹೊತ್ತಿರುವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ಸನ್ಮಾನ ಮಾಡಬೇಕು ಅನ್ನಿಸುತ್ತೆ. ಅಷ್ಟೊಂದು ಕಳಪೆ ಗುಣಮಟ್ಟದ ಕಾಮಗಾರಿ ಮಾಡಿದ್ದಾರೆ.

ಚರಂಡಿ ಕಾಮಗಾರಿ ನಡೆದ ಮೂರೇ ದಿನಕ್ಕೆ ಗೋಡೆಗಳೆಲ್ಲಾ ಕುಸಿದು ಬಿದ್ದಿವೆ. ಈ ಕಾಮಗಾರಿಗೆ ಸಿಮೆಂಟ್‌ ಸರಿಯಾಗಿ ಬಳಕೆ ಮಾಡದೇ ಇದ್ದಿದ್ದರಿಂದ ಗೋಡೆ ಎಲ್ಲಾ ಬಿರುಕು ಬಿದ್ದಿದೆ. ಒಂದು ಮಳೆಗೆ ಈ ಚರಂಡಿ ಗೋಡೆ ನೆಲಸಮ ಆಗೋದ್ರಲ್ಲಿ ಅನುಮಾನವೇ ಇಲ್ಲ.

ಇನ್ನು ಇಲ್ಲಿ ನರೇಗಾ ಯೋಜನೆಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಸ್ಥಳೀಯ ಜನರಿಂದಲೇ ಕೆಲಸ ಮಾಡಿಸಬೇಕು. ಆದ್ರೆ ಇಲ್ಲಿ ಜನ ಬಿಡಿ ಎಲ್ಲಾ ಕೆಲಸ ಜೆಸಿಬಿಯಿಂದಲೇ ನಡೆಸಲಾಗುತ್ತಿದೆ.

ಇನ್ನು ಎರಡು ಅಡಿ ಅಗಲ ಇರಬೇಕಾದ ಗೋಡೆಯನ್ನು ಬರೀ ಮುಕ್ಕಾಲು ಅಡಿ ಮಾಡಿ ಭರ್ಜರಿ ಲೂಟಿ ಹೊಡೆದಿದ್ದಾರೆ. ಸಿಮೆಂಟು ಹಾಕಲೇ ಇಲ್ಲ. ಕಣ್ಕಟ್ಟಿಗೆ ಕೆಲಸ ಮಾಡಿ ಮುಲಾಜಿಲ್ಲದೆ ಹಣ ಲೂಟಿ ಮಾಡ್ತಿದ್ದಾರೆ ಭ್ರಷ್ಟ ಅಧಿಕಾರಿಗಳು.

ನರೇಗಾ ಕಾಮಗಾರಿಯಲ್ಲಿ ಭಾರೀ ಮೋಸ, ಕಮಿಷನ್‌ ದಂಧೆ, ಭ್ರಷ್ಟ ಅಧಿಕಾರಿಗಳು ಎಗ್ಗಿಲ್ಲದೆ ಹಗರಣ ನಡೆಸುತ್ತಿದ್ದಾರೆ ಅನ್ನೋ ಆರೋಪ ರಾಜ್ಯಾದ್ಯಂತ ಕೇಳಿ ಬರುತ್ತಿದೆ. ಆದ್ರೆ ಕಳಪೆ ಕಾಮಗಾರಿ ಹಾಗೂ ಅಧಿಕಾರಿಗಳ ಮೋಸದಾಟಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಹೊಸಪೇಟೆ ಗ್ರಾಮಪಂಚಾಯತಿಯ ಹಿರೇಬಲ್ಲ ಗ್ರಾಮದಲ್ಲಿ ಪಕ್ಕಾ ಸಾಕ್ಷಿ ವಿಜಯಟೈಮ್ಸ್‌ಗೆ ಸಿಕ್ಕಿದೆ.

ಆರೋಗ್ಯ ಸಚಿವ ಡಾ.ಸುಧಾಕರ್‌ ಅವರ ಜಿಲ್ಲೆಯಲ್ಲಿ ಅವ್ಯಾಹತವಾಗಿ ನರೇಗ ಹಗರಣ ನಡೀತಿದೆ ಅನ್ನೋ ದೂರು ಇದೆ. ಇದಕ್ಕೆ ಪಕ್ಕಾ ದಾಖಲೆ ಹೊಸಪೇಟೆ ಗ್ರಾಮಪಂಚಾಯತ್‌ನಲ್ಲಿ ಸಿಕ್ಕಿದೆ.

ಅತ್ಯಂತ ಕಳಪೆ ಕಾಮಗಾರಿ, ಗುತ್ತಿಗೆದಾರನ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರು ಈಗಾಗಲೇ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ಕೊಟ್ರೂ ಅವರು ದೂರುದಾರರನ್ನು ದೂರ ಇಟ್ಟು ಕಾಮಗಾರಿಯ ವೀಕ್ಷಣೆ ಮಾಡಿ ಗುತ್ತಿಗೆದಾರ ಗಂಗಾರೆಡ್ಡಿ ಪರವಾಗಿಯೇ ಸರ್ಟಿಫಿಕೇಟ್‌ ಕೊಡ್ತಿದ್ದಾರೆ. ಇದು ಸಾರ್ವಜನಿಕರಲ್ಲಿ ಭಾರೀ ಅನುಮಾನ ಮೂಡಿಸಿದೆ.

ಈ ಕಾಮಗಾರಿಗೆ ಈ ಹಿಂದಿನ ಪಿಡಿಓ ಮಧು ಅವರು ಅನುಮತಿ ನೀಡಿದ್ರು. ಗುತ್ತಿಗೆದಾರರ ಕಳಪೆ ಕಾಮಗಾರಿ ಬಗ್ಗೆ ಈಗಿನ ಪಿಡಿಓ ಹರೀಶ್‌ ಕುಮಾರ್‌ ಅಸಮಧಾನ ವ್ಯಕ್ತಪಡಿಸಿದ್ರೂ ಈಓ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ.  ಹಾಗಾಗಿ ಇಲ್ಲಿ ಭರ್ಜರಿ ಕಮಿಷನ್ ದಂಧೆ ನಡೆದಿದೆಯಾ ಅನ್ನೋ ಶಂಕೆ ಸಾರ್ವಜನಿಕರದ್ದು.

ನರೇಗಾ ಒಂದು ಉತ್ತಮ ಯೋಜನೆ. ಅದೂ ಕೊರೋನಾ ಸಂಕಷ್ಟ ಕಾಲದಲ್ಲಿ ಅನೇಕರಿಗೆ ಅನ್ನ ನೀಡಬಹುದಾಗಿದ್ದಾ ಯೋಜನೆ. ಆದ್ರೆ ಕಮಿಷನ್ ಬಾಕ ಅಧಿಕಾರಿಗಳು ಹಾಗೂ ಭ್ರಷ್ಟ ಗುತ್ತಿಗೆದಾರರಿಂದ ನರೇಗಾ ನೆಲ ಕಚ್ಚುತ್ತಿದೆ. ಬಡವರ ಹೆಸರಲ್ಲಿ ಬಿಂದಾಸಾಗಿ ಲೂಟಿ ನಡೀತಿದೆ. ಆದ್ರೆ ಮೇಲಾಧಿಕಾರಿಗಳ ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಭ್ರಷ್ಟರಿಗೆ ಬೆಂಬಲಕೊಡುತ್ತಿರೋದು ನಿಜವಾಗ್ಲೂ ನಾಚಿಕೆಯ ವಿಚಾರ.

ಹೊಸಪೇಟೆಯಿಂದ ವಸಂತ್‌ ಸಿಟಿಜನ್‌ ಜರ್ನಲಿಸ್ಟ್‌, ವಿಜಯಟೈಮ್ಸ್‌

Latest News

ಆರೋಗ್ಯ

ಸಕ್ಕರೆ ಖಾಯಿಲೆ ಇರುವವರು ಈ ಹಣ್ಣುಗಳನ್ನು ಸೇವಿಸಬಹುದು ; ತಪ್ಪದೇ ಈ ಮಾಹಿತಿ ಓದಿ

ತಜ್ಞರ ಪ್ರಕಾರ, ಸಕ್ಕರೆ ಕಾಯಿಲೆ ಇರುವವರು ಈ 5 ವಿಧದ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅಂತಹ ಹಣ್ಣುಗಳ ವಿವರ ಇಲ್ಲಿದೆ ನೋಡಿ.

ದೇಶ-ವಿದೇಶ

ದೇಶದ ಹೆಮ್ಮೆ ತ್ರಿವರ್ಣ ಧ್ವಜವೂ ಕೂಡ ಬಿಜೆಪಿಗೆ ವ್ಯಾಪಾರದ ಸರಕಾಗಿದೆ : ಬಿ.ಕೆ.ಹರಿಪ್ರಸಾದ್

38×11,80,000=4.484 ಕೋಟಿ, ಹೇಗಿದೆ ಮೋದಿ ಸರ್ಕಾರದ ಲೂಟಿ? ಕೇಂದ್ರದ ಮೋದಿ ಸರ್ಕಾರ ವಸೂಲಿ ಬಾಜಿತನಕ್ಕೆ ರಾಷ್ಟ್ರಧ್ವಜವನ್ನ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ

ಕ್ರೀಡೆ

ಕಾಮನ್‌ವೆಲ್ತ್ ಗೇಮ್ಸ್‌ 2022 ; ಕಂಚಿನ ಪದಕ ಗೆದ್ದ ಪತ್ನಿಯನ್ನು ಅಭಿನಂದಿಸಿದ ದಿನೇಶ್ ಕಾರ್ತಿಕ್

ಭಾರತದ ಸ್ಕ್ವ್ಯಾಶ್ ಆಟಗಾರ್ತಿ ದೀಪಿಕಾ ಪಲ್ಲಿಕ್ಕಲ್(Deepika Pallikal) ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ(Bronze Medal) ಗೆದ್ದುಕೊಂಡಿದ್ದಾರೆ.

ಆರೋಗ್ಯ

ದೇಹ ನೀಡುವ `ಈ’ ಸೂಚನೆಗಳು ಕಿಡ್ನಿ ವೈಪಲ್ಯವನ್ನು ಸೂಚಿಸುತ್ತವೆ ; ಇಲ್ಲಿದೆ ಮಾಹಿತಿ ಓದಿ

ಕಿಡ್ನಿ(Kidney) ನಮ್ಮ ದೇಹದ ಪ್ರಮುಖ ಅಂಗವಾಗಿದೆ. ದೇಹದಲ್ಲಿ ಶುದ್ಧ ರಕ್ತವನ್ನು ಪರಿಚಲನೆ ಮಾಡುವಲ್ಲಿ ಮೂತ್ರಪಿಂಡಗಳು ಮುಖ್ಯ ಪಾತ್ರವಹಿಸುತ್ತವೆ.