ರಾಜ್ಯದಲ್ಲಿ ಆತಂಕಕಾರಿ ಬೆಳವಣಿಗೆಯೊಂದು ನಡೆಯುತ್ತಿದೆ. ಒಂದೆಡೆ ಮಳೆ ಕಡಿಮೆಯಾಗುತ್ತಿದೆ. ಬರದ ಛಾಯೆ (ground water decreased in kar) ಗಾಢವಾಗಿ ಆವರಿಸುತ್ತಿದೆ.
ಈ ಮಧ್ಯೆ ನಮ್ಮ ನಾಡಿನ ಅಂತರ್ಜಲ ಮಟ್ಟವು ಅಪಾಯದ ಮಟ್ಟಕ್ಕೆ ಕುಸಿದಿದೆ. ಅದ್ರಲ್ಲೂ ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಲ್ಲಂತು ಅಂತರ್ಜಲದ ಮಟ್ಟ ಅಚ್ಚರಿಕರ ಮಟ್ಟಕ್ಕೆ ಕುಸಿದಿದೆ.
ಇದಕ್ಕೆ ಜ್ವಲಂತ ಸಾಕ್ಷಿ (ground water decreased in kar) ರಾಮನಗರ ಜಿಲ್ಲೆ.

ರಾಮನಗರ (Ramanagara) ಜಿಲ್ಲೆಯಲ್ಲಿ ಈ ಬಾರಿ ಅಂದುಕೊಂಡಷ್ಟು ಮಳೆಯಾಗದ ಕಾರಣ. ನೀರಿನ ಅಭಾವ ಹೆಚ್ಚಾಗಿದೆ. ಹಾಗಾಗಿ ಕೃಷಿಕರು ಬೋರ್ ವೆಲ್ (Borewell) ಕೊರೆಯಲು ಮುಂದಾಗುತ್ತಿದ್ದಾರೆ.
ಪರಿಣಾಮ, ಜಿಲ್ಲೆಯಲ್ಲಿ ಅಂತರ್ಜಲದ ಮಟ್ಟ ಗಣನೀಯವಾಗಿ ಕುಸಿಯುತ್ತಿದೆ. ಇಲ್ಲಿ ಅತರ್ಜಲ ಬಳಕೆ ವಿಪರೀತ ಹೆಚ್ಚಾಗಿ ಸರಾಸರಿ 8.76ರಷ್ಟಿದ್ದ ಅಂತರ್ಜಲ, ಈಗ 15.74ರಷ್ಟು ಆಳಕ್ಕೆ ಕುಸಿದಿದೆ.
ಅದ್ರಲ್ಲೂ ಮಾಗಡಿ ಮತ್ತು ಹಾರೋಹಳ್ಳಿ (Harohalli) ತಾಲೂಕುಗಳನ್ನು ಅತೀ ಹೆಚ್ಚು ಅಂತರ್ಜಲ ಬಳಕೆ ತಾಲೂಕು ಎಂದು ಘೋಷಿಸಲಾಗಿದೆ.
ಕಳೆದ ಆಗಸ್ಟ್ ತಿಂಗಳಿನಲ್ಲಿ ಶೇ.69ರಷ್ಟು ಮಳೆ ಕೊರತೆ ಉಂಟಾಗಿದ್ದು. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಅಂತರ್ಜಲ 50 ಅಡಿ ಆಳಕ್ಕೆ ಹೋಗುವ ಸಂಭವವಿದೆ. ಇದರ ಪರಿಣಾಮವಾಗಿ ಜಿಲ್ಲೆಯ ಐದು
ತಾಲೂಕುಗಳ ಪೈಕಿ ಮೂರು ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸಲಾಗಿದೆ. ಸರಿಯಾದ ಸಮಯಕ್ಕೆ ಮಳೆಯಾಗದೆ ಇರುವ ಕಾರಣ, ಜಿಲ್ಲೆಯಲ್ಲಿಅಂತರ್ಜಲದ ಬಳಕೆಯು ಹೆಚ್ಚಾಗುತ್ತಿದೆ.
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ , ಈ ಬಾರಿ ಅಂತರ್ಜಲದ ಬಳಕೆ ಮತ್ತು ಅವಲಂಬನೆಯು ಹೆಚ್ಚಾಗುತ್ತಿದ್ದು . ಕಳೆದ ವರ್ಷ ಇದೇ ಸಮಯದಲ್ಲಿ ಸರಾಸರಿ 8.76ರಷ್ಟು ಅಂತರ್ಜಲ ಮಟ್ಟವು ಇದ್ದಿದ್ದು,
ಈಗ ಅಂತರ್ಜಲದ ಬಳಕೆಯು ಈ ವರ್ಷದಲ್ಲಿ ದುಪ್ಪಟ್ಟು ಹೆಚ್ಚಾಗಿದೆ. 15.74ರಷ್ಟು ಆಳಕ್ಕೆ ಕುಸಿದಿದೆ. 3ರಿಂದ 4 ಮೀಟರ್ ಅಂತರ್ಜಲ ಕುಸಿತ ಕಂಡುಬಂದಿದೆ. ಮಳೆಯಾಗಿ ನೀರಿನ ಪ್ರಮಾಣ ಹೆಚ್ಚಾಗದೆ
ಹೋದರೆ ಅಂತರ್ಜಲದ ಸ್ಥಿರ ಮಟ್ಟವೂ ಇನ್ನಷ್ಟು ಕುಸಿಯಲಿದೆ.
ಅಧಿಕಾರಿಗಳು 2022ರ ಮಾರ್ಚ್ ಅಂತ್ಯದಲ್ಲಿ ಅಧ್ಯಯನ ನಡೆಸಿ ಜಿಲ್ಲೆಯ ಮಾಗಡಿ (Magadi) ಹಾಗೂ ಹಾರೋಹಳ್ಳಿ ತಾಲೂಕುಗಳನ್ನು ಅತೀ ಹೆಚ್ಚಾಗಿ ಅಂತರ್ಜಲ ಬಳಕೆಯ ತಾಲೂಕುಗಳು
ಎಂದು ಘೋಷಿಸಿದ್ದಾರೆ . ಕಳೆದ ವರ್ಷದಲ್ಲಿ ರಾಮನಗರ ಮತ್ತು ಕನಕಪುರ (Kanakapura) ತಾಲೂಕುಗಳನ್ನು ಅತೀ ಹೆಚ್ಚು ಅಂತರ್ಜಲ ಬಳಕೆಯಾಗಿರುವ ತಾಲೂಕು ಎಂದು ಘೋಷಣೆ ಮಾಡಿದ್ದರು .
ಈ ಬಾರಿ ಈ ಎರಡು ತಾಲೂಕುಗಳನ್ನು ಘೋಷಿಸಿದ್ದು ಜೊತೆಗೆ ಚನ್ನಪಟ್ಟಣ ತಾಲೂಕನ್ನು ಸಹ ಸೇರಿಸಲಾಗಿದೆ. ಶೇ.100ರಕ್ಕಿಂತ ಹೆಚ್ಚು ಅಂತರ್ಜಲ ಬಳಕೆ ಮಾಡಿದೆಯಾದರೆ ಅವುಗಳನ್ನು ಅತೀ
ಹೆಚ್ಚಾದ ಬಳಕೆ, 90 ರಿಂದ 100ರಷ್ಟು ಬಳಕೆ ಮಾಡಿದರೆ ಕ್ಲಿಷ್ಟಕರ ಮತ್ತು 70ರಿಂದ 90ರಷ್ಟು ಅಂತರ್ಜಲವನ್ನು ಬಳಕೆ ಮಾಡಿದರೆ ಅರೆ ಕ್ಲಿಷ್ಟಕರ ಹಾಗೂ 60ರಿಂದ ಕಡಿಮೆ ಅಂತರ್ಜಲ ಬಳಕೆ
ಮಾಡಿದರೆ ಅವುಗಳನ್ನು ಸಾಮಾನ್ಯವಾದ ಬಳಕೆ ಎಂದು ಘೋಷಿಸುತ್ತಾರೆ.

ಇನ್ನು ಅಂತರ್ಜಲ ನಿರ್ದೇಶನಾಲಯದ ಮಾಹಿತಿ ಪ್ರಕಾರ ಚನ್ನಪಟ್ಟಣದಲ್ಲಿ (Channapattana) ಏತ ನೀರಾವರಿ ಇರುವುದರಿಂದ , ಕಳೆದ ವರ್ಷಕ್ಕೂ ಈ ವರ್ಷಕ್ಕೂ ಅಂತಹ ಯಾವುದೇ ರೀತಿಯಾದ
ವ್ಯತ್ಯಾಸಗಳು ತಿಳಿದುಬಂದಿಲ್ಲ .ಇನ್ನು ಹಾರೋಹಳ್ಳಿಯಲ್ಲಿ ತೋಡು ಬಾವಿ ಇರುವ ಕಾರಣ ಅಂಕಿ ಅಂಶದಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ . ಜಿಲ್ಲೆಯ ಮಟ್ಟದಲ್ಲಿಈ ಎರಡು ತಾಲೂಕುಗಳಲ್ಲಿ ಅಂತರ್ಜಲದ
ಅವಲಂಬನೆಯೂ ಸಹ ತುಂಬಾ ಕಡಿಮೆ ಇದೆ. ರಾಜ್ಯದಲ್ಲಿ ಪ್ರತಿ ವರ್ಷ ಮಾರ್ಚ್ (March) ತಿಂಗಳಿನಲ್ಲಿ ಕೇಂದ್ರೀಯ ಅಂತರ್ಜಲ ಮಂಡಳಿ ಹಾಗೂ ರಾಜ್ಯ ಅಂತರ್ಜಲ ನಿರ್ದೇಶನಾಲಯ ಸಹಯೋಗದಲ್ಲಿ
ಅಂತರ್ಜಲ ಮೌಲ್ವೀಕರಣ ಮಾಡಲಾಗುತ್ತಿದು. ಈ ವೇಳೆ ಆಯಾ ಜಿಲ್ಲೆಯ ತಾಲೂಕುಗಳಲ್ಲಿ ಅಂತರ್ಜಲ ಬಳಕೆ ಕುರಿತು ಅಧ್ಯಯನ ಮಾಡಿ ಘೋಷಿಸಲಾಗುತ್ತದೆ.
ಇನ್ನು ಕಳೆದ ಸಾಲಿನ ಆಗಸ್ಟ್ (August) ತಿಂಗಳಲ್ಲಿನಲ್ಲಿ ಜಿಲ್ಲೆಯಾದ್ಯಂತ ಅತೀ ಹೆಚ್ಚು ಮಳೆಯಾಗಿದ್ದು. ಬಯಲು ಸೀಮೆಯಾದರೂ, ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ಮಳೆ ಸುರಿದ ಕಾರಣ, ನೀರಿಲ್ಲದ ಸೊರಗಿದ್ದ
ಕೊಳವೆ ಬಾವಿಯಲ್ಲಿ ನೀರು ತುಂಬಿತ್ತು .ಈಗಾಗಿ ಅಂತರ್ಜಲ ಮಟ್ಟವೂ ಗಣನೀಯವಾಗಿ ಹೆಚ್ಚಾಗಿದೆ . ಆದರೆ ಈ ಬಾರಿ ಮನ್ಸೂನ್ ಕೈ ಕೊಟ್ಟಿರುವುದರಿಂದ ಅಂತರ್ಜಲದ ಬಳಕೆಯೂ ಹೆಚ್ಚುತ್ತಿದೆ.
ಜಿಲ್ಲೆಯಲ್ಲಿ ನೂತನ ಕೊಳವೆ ಬಾವಿ ಕೋರೆಸಲು, ಕೆಲವೊಂದು ಷರತ್ತು ಬದ್ಧ ಅನುಮತಿ ನೀಡಲಾಗುತ್ತದೆ. ಅಂತರ್ಜಲ ಮರುಪೂರಣ, ಮಳೆ ನೀರುಕೊಯ್ಲುಅಳವಡಿಕೆ ಇದರಲ್ಲಿ ಸೇರಿರುತ್ತದೆ.
ಜಿಲ್ಲಾಧಿಕಾರಿ ಅಧ್ಯಕ್ಷರಾಗಿ ಜಿಪಂ ಸಿಇಒ ಉಪಾಧ್ಯಕ್ಷರಾಗಿರುತ್ತಾರೆ.ಪೊಲೀಸ್ ಇಲಾಖೆ, ಕೆಇಬಿ (KEB), ಅಂತರ್ಜಲ ಕಚೇರಿ, ಕೈಗಾರಿಕೆ ಇಲಾಖೆ ಸಣ್ಣ ನೀರಾವರಿ ಇಲಾಖೆ, ಗ್ರಾಮೀಣ ಕುಡಿಯುವ
ನೀರು ವಿಭಾಗದ ಅಧಿಕಾರಿಗಳು ಸದಸ್ಯರಾಗಿ ಕಾರ್ಯನಿರ್ವಯಿಸುತ್ತಾರೆ.ಜೊತೆಗೆ ನಿರ್ವಹಣೆ ಅನುಮತಿಗಾಗಿ ಪ್ರತಿ ತಿಂಗಳ ನೇತೃತ್ವದಲ್ಲಿ ಪ್ರಾಧಿಕಾರದ ಸಭೆ ಆಯೋಜಿಸಲಾಗುತ್ತದೆ.
ಕೊಳವೆ ಬಾವಿ ಕೊರೆಸುವುದಕ್ಕೂ ಮುಂಚೆ ಜಿಲ್ಲಾ ಅಂತರ್ಜಲ ನಿರ್ದೇಶನಾಲಯದಿಂದ ಅನುಮತಿ ಪಡೆಯಬೇಕು .ಇಲ್ಲದೆ ಇದ್ದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಾಲಾಗುತ್ತದೆ.
ಅಲ್ಲದೆ ಕೆಇಬಿ ಇಂದ ವಿದ್ಯುತ್ ಪೂರೈಕೆಯನ್ನು ತಡೆ ಹಿಡಿದು ಜೊತೆಗೆ 5 ಸಾವಿರ ತನಕ ದಂಡ ವಿಧಿಸುವ ಅವಕಾಶವಿರುತ್ತದೆ. ಕೆಲವು ಕಡೆ ಅನುಮತಿ ಇಲ್ಲದ ಜಿಲ್ಲೆಯಲ್ಲಿ ಕೊಳವೆ ಬಾವಿ ಕೊರೆಸಲಾಗುತ್ತಿದ್ದು.
ಇವುಗಳಿಗೆ ಅನುಮತಿ ನೀಡಿ ಐದು ಸಾವಿರದವರೆಗೂ ದಂಡ ವಿಧಿಸುವ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ 25 ಮಂದಿಗೆ ದಂಡ ವಿಧಿಸಲಾಗಿದೆ.ಈ ವರ್ಷ ಆಗಸ್ಟ್ ತಿಂಗಳಲ್ಲಿ 18 ಮಂದಿಗೆ ದಂಡ ವಿಧಿಸಲಾಗಿದೆ.
ಜಿಲ್ಲೆಯಲ್ಲಿ ಅಂತರ್ಜಲದ ಬಳಕೆಯು ಹೆಚ್ಚುತ್ತಿರುವುದರಿಂದ ಅಧಿಕಾರಿಗಳು ಈ ಸಂಬಂಧವಾಗಿ ಅಂತರ್ಜಲದ ಬಳಕೆ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಅನುಮತಿ ಪಡೆಯುವವರು ಕೆಲವು ಷರತ್ತು ವಿಧಿಸುವ ಮೂಲಕ ಪಾಲನೆ ಮಾಡುವಂತೆ ಸೂಚಿಸಲಾಗುತ್ತಿದೆ .
ಇದನ್ನು ಓದಿ: ಭಾರತ್ ಎಂದು ಹೆಸರನ್ನು ಬದಲಾಯಿಸುವುದು ಎಂದರೆ ಏಕವಚನ ಪುರಾಣದ ಸಂಪ್ರದಾಯವನ್ನು ವೈಭವೀಕರಿಸುವ ಪ್ರಯತ್ನ – ನಟ ಚೇತನ್