Bengaluru: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್(Gruhajyoti Annabhagya from tomarrow) ಸರ್ಕಾರದ ಗ್ಯಾರಂಟಿ ಯೋಜನೆಗಳ ಜಾರಿಗೆ ಇದೀಗ ಕೌಂಟ್ಡೌನ್ ಶುರುವಾಗಿದೆ.
ಶಕ್ತಿ ಯೋಜನೆಯನ್ನು(Shakti Scheme) ಜೂನ್ 12 ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಚಾಲನೆ ನೀಡಿತ್ತು. ಮತ್ತೆರಡು ಗ್ಯಾರಂಟಿಗಳಾದ ಅನ್ನಭಾಗ್ಯ ಮತ್ತು ಗೃಹಜ್ಯೋತಿ
(Gruhajyoti Annabhagya from tomarrow) ಚಾಲನೆಗೂ ಇದೀಗ ಸರ್ಕಾರ ಮುಂದಾಗಿದೆ.

ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ ಎಂದು ಹೇಳಿರುವ ಸಿದ್ದರಾಮಯ್ಯ(Siddaramaiah), ಅನ್ನಭಾಗ್ಯ (Anna Bhagya) ಮತ್ತು ಗೃಹಜ್ಯೋತಿ ಗ್ಯಾರಂಟಿಗಳನ್ನ ಜುಲೈ 1 ರಂದೇ ಈಡೇಸಲಿದ್ದಾರೆ.
ಈಗಾಗಲೇ ಗೃಹಜ್ಯೋತಿಗೆ ಜೂನ್ 18ರಿಂದ ಅರ್ಜಿ ಆಹ್ವಾನಿಸಿದ್ದು ಅನೇಕ ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ. 200 ಯೂನಿಟ್ ವಿದ್ಯುತ್ ಉಚಿತವಾಗಿ ಪಡೆಯಲು ಗ್ರಾಹಕರು ಮುಗಿಬೀಳುತ್ತಿದ್ದಾರೆ
ಇದರಿಂದ ಗೃಹ ಜ್ಯೋತಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ನಾಳೆಯಿಂದ (ಜು 01ರ ರಾತ್ರಿ 12 ಗಂಟೆ) ಬಳಸುವ 200 ಯುನಿಟ್ ಒಳಗಿನ ಸರಾಸರಿ ಕರೆಂಟ್‌ಗೆ ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಬಿಲ್ ಕಟ್ಟುವಂತಿಲ್ಲ.
ಇದನ್ನೂ ಓದಿ : ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ
ಆಗಸ್ಟ್ (August)ತಿಂಗಳಲ್ಲಿ ಜುಲೈ ತಿಂಗಳ ವಿದ್ಯುತ್ ಬಿಲ್ ಬರಲಿದೆ. ಹಾಗಾಗಿ ಗೃಹಜ್ಯೋತಿಯ ಉಚಿತ ಬಿಲ್ ಎಂದು ಈ ಬಾರಿ ಬರುವ ಕರೆಂಟ್ ಬಿಲ್ ನಲ್ಲಿ ಶಕ್ತಿ ಯೋಜನೆಯಂತೆ ಹೆಸರು ಬರುವ ಸಾಧ್ಯತೆಗಳಿವೆ.
ಗೃಹಜ್ಯೋತಿಯ ವಿದ್ಯುತ್ ಉಚಿತವನ್ನು 12 ತಿಂಗಳ ಬಿಲ್ ಸರಾಸರಿ ಆಧಾರದಲ್ಲಿ ನೀಡಲಾಗುತ್ತದೆ. ನಿಮ್ಮ 12 ತಿಂಗಳ ಸರಾಸರಿ ಬಳಕೆ 200 ಯುನಿಟ್ ಇದ್ದರೂ ಫ್ರಿ ವಿದ್ಯುತ್ ಸಿಗಲಿದೆ.
ಒಂದು ವೇಳೆ 12 ತಿಂಗಳ ಸರಾಸರಿಗಿಂತ ಹೆಚ್ಚು ಬಳಸಿದ್ರೆ ಮಾತ್ರ ಬಿಲ್ ಬರಲಿದೆ.
ನಿಮ್ಮ 12 ತಿಂಗಳ ಸರಾಸರಿಯ ಬಿಲ್ನಲ್ಲಿ ಒಂದು ವೇಳೆ 200 ಯುನಿಟ್ ಜೊತೆ 10 ಯುನಿಟ್ ಜಾಸ್ತಿಯಾದರೂ ಸಹ ಬಿಲ್ ಕಟ್ಟಬೇಕಿದೆ. ಇನ್ನು ಜೂನ್ 18 ರಿಂದ ಈ ಗೃಹಜ್ಯೋತಿ ಅರ್ಜಿ ಸಲ್ಲಿಕೆಯನ್ನ ಆರಂಭ ಮಾಡಲಾಗಿದ್ದು
ಒಟ್ಟು 2.14 ಕೋಟಿಯಷ್ಟು ಜನರು ಗೃಹಜ್ಯೋತಿಯ ಫಲಾನುಭವಿಗಳಾಗಿದ್ದಾರೆ. ಈ ಪೈಕಿ ಒಟ್ಟು ಒಟ್ಟು 8099932 ರಷ್ಟು ಜನರು 11 ದಿನಗಳಲ್ಲಿ ಅರ್ಜಿ ಹಾಕಿದ್ದಾರೆ. ಇನ್ನು ನೊಂದಾಣಿಗೆ 1,33 00068
ಕೋಟಿಯಷ್ಟು ಜನ ಅರ್ಜಿ ಹಾಕಬೇಕಿದೆ.
ಯಾವ-ಯಾವ ನಿಗಮಕ್ಕೆ ಗೃಹ ಜ್ಯೋತಿಗೆ ಎಷ್ಟು ಅರ್ಜಿ ಸಲ್ಲಿಕೆ?
ರಾಜ್ಯಾದ್ಯಂತ ಒಟ್ಟು 77 ಲಕ್ಷದ 20 ಸಾವಿರದ 207 ಮಂದಿ ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. 31 ಲಕ್ಷ 55ಸಾವಿರದ 367 ಅರ್ಜಿಗಳು ಈಗಾಗಲೇ ಬೆಸ್ಕಾಂನಲ್ಲಿ ಬಂದಿವೆ.
ಇನ್ನು ಒಟ್ಟು 12 ಲಕ್ಷದ 4 ಸಾವಿರದ 627 ಮಂದಿ ಸೆಸ್ಕಾಂನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಇನ್ನು 8 ಲಕ್ಷದ 15 ಸಾವಿರದ 968 ಮಂದಿ ಜೆಸ್ಕಾಂನಲ್ಲೂ, ಮತ್ತು ಫ್ರೀ ಕರೆಂಟ್ಗಾಗಿ ಹೆಸ್ಕಾಂನಲ್ಲಿ
15 ಲಕ್ಷದ 99 ಸಾವಿರದ 944 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಮತ್ತು ಮೆಸ್ಕಾಂನಲ್ಲಿ 9 ಲಕ್ಷದ 7 ಸಾವಿರದ 396 ಮಂದಿ ಮತ್ತು HRECS ನಲ್ಲಿ 36 ಸಾವಿರದ 906 ಮಂದಿ ಹಾಗೂ ನೋಂದಾಯಿಸಿಕೊಂಡಿದ್ದಾರೆ.

ನಾಳೆಯಿಂದಲೇ ಅನ್ನಭಾಗ್ಯದಡಿ 5ಕೆಜಿ ಅಕ್ಕಿಗೆ ಹಣ!
ಸಿಎಂ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆಯಡಿ ಜುಲೈ 1ರಿಂದ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ರು. ಆದ್ರೆ, ಅಗತ್ಯವಿರುವಷ್ಟು ಅಕ್ಕಿ ಸಿಕ್ಕಿಲ್ಲವಾದ್ದರಿಂದ ರಾಜ್ಯ ನೀಡುವ 5 ಕೆಜಿ ಅಕ್ಕಿ
ಬದಲಾಗಿ ಜನರ ಖಾತೆಗೆ ಹಣ ನೀಡಲಾಗುತ್ತದೆ ಎಂದು ಈಗಾಗಲೇ ಘೋಷಣೆ ಮಾಡಲಾಗಿದೆ. ಅನ್ನಭಾಗ್ಯ ಯೋಜನೆಯೂ ಕೂಡ ನಾಳೆಯೇ ಜಾರಿಯಾಗಬೇಕಿದೆ. ಹೆಚ್ಚುವರಿ 5 ಕೆಜಿ ಅಕ್ಕಿ ಬದಲಿಗೆ ಕೆಜಿಗೆ
34 ರೂಪಾಯಿಯಂತೆ ತಲಾ 170 ಹಣ ಬಿಪಿಎಲ್ ಕಾರ್ಡ್ದಾರರಿಗೆ ಪಾವತಿಸಬೇಕಾಗಿದೆ.
ಇದನ್ನೂ ಓದಿ : ಜುಲೈ 3 ರಿಂದ 10 ದಿನ ವಿಧಾನಸಭೆ ಅಧಿವೇಶನ : ಸಿಎಂ ಸಿದ್ದರಾಮಯ್ಯರಿಂದ ಬಜೆಟ್ ಮಂಡನೆ
340 ರೂಪಾಯಿ ಪಡಿತರ ಚೀಟಿಯಲ್ಲಿ ಇಬ್ಬರಿದ್ದರೆ ಅವರಿಗೆ ಸಿಗಲಿದೆ.ಮಾಸಿಕ 850 ರೂಪಾಯಿ ಕುಟುಂಬದಲ್ಲಿ ಐವರು ಇದ್ದರೇ ನೀಡಲಾಗುತ್ತದೆ. ಸರ್ಕಾರವು ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ
ಮಾಡಲು ವ್ಯವಸ್ಥೆ ಮಾಡಿದೆ. ಆದ್ರೆ, ಈ ಹಣವನ್ನ ಒಂದೇ ಬಾರಿಗೆ ಹಾಕುತ್ತಾರಾ? ಯಾವಾಗ ಅಕೌಂಟ್‌ಗೆ ಹಾಕುತ್ತಾರೆ? ಇಲ್ಲ ಹಂತ ಹಂತವಾಗಿ ನೀಡುಲಾಗುತ್ತಾ ಎನ್ನುವ ಪ್ರಶ್ನೆಗಳು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿವೆ.
ರಶ್ಮಿತಾ ಅನೀಶ್